CONNECT WITH US  

ಮಹಿಳೆಯರೇ ಸ್ವಾವಲಂಬಿಗಳಾಗಿ

ಕನಕಪುರ: ಆರೋಗ್ಯ ಸಂಜೀವಿನಿ ಯೋಜನೆ ಮೂಲಕ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕೆ ಕೇಂದ್ರ ಸರಕಾರದ ಮುಂದಾಗಿದ್ದು, ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಬೇಕು. ಗ್ರಾಮೀಣ ಭಾಗದ ಮಹಿಳೆಯರು ಶ್ರಮಜೀವಿಗಳಾಗಿದ್ದು, ಕಡಿಮೆ ಅವಧಿಯಲ್ಲಿ ಸ್ವಾವಲಂಬಿಗಳಾಗಬಹುದು ಎಂದು ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ನಿರ್ದೇಶಕಿ ಮಮತ ಹೇಳಿದರು. 

ಪಟ್ಟಣದ ತಾಪಂನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ನಗರದ ಗ್ರೀನ್‌ಫೌಂಡೇಷನ್‌ಗೆ ತೆರಳಿ ನಂಗರ ಗ್ರಾಮೀಣ ಭಾಗದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರನ್ನು ಭೇಟಿ ವೇಳೆ ಮಾತನಾಡಿದ ಅವರು, ಪ್ರತಿ  ಗ್ರಾಮಪಂಚಾಯಿತಿ ಮಟ್ಟದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟಗಳನ್ನು ರಚಿಸಿ ಅವುಗಳ ಮೂಲಕ ಸಹಾಯಧನ ನೀಡುವುದರಿಂದ ಸ್ವಾವಲಂಬನೆ ಸಾಧಿಸಲು ನೆರವಾಗಲಿದೆ ಎಂದರು. 

ಹಳ್ಳಿಗಳಲ್ಲಿ ಮನೆಯ ಸುತ್ತಮುತ್ತ ಹಾಗೂ ಜಮೀನಿನ ಸುತ್ತಮುತ್ತಲಿನ ವ್ಯರ್ಥ ಜಮೀನು ಬಳಸಿಕೊಂಡು ಅಬಣೆ, ತರಕಾರಿ ಬೇಸಾಯ ಆರಂಭಿಸಲು ಸಂಸ್ಥೆಗಳಿಂದ ತರಬೇತಿ ನೀಡಲಾಗುವುದು. ಇಲ್ಲಿ ತರಬೇತಿ ಪಡೆದ ಮಹಿಳೆಯರು ಸಮಯ ವ್ಯರ್ಥ ಮಾಡದೆ ಬದುಕು ಕಟ್ಟಿಕೊಳ್ಳಲು ಕಾರ್ಯಪ್ರವೃತ್ತರಾಗಿ ಸ್ವಾವಲಂಬನೆ ಹೊಂದಬೇಕು ಎಂದು ಹೇಳಿದರು. 

ಪ್ರಸ್ತುತ ರಾಸಾಯನಿಕ ಮುಕ್ತ, ನೈಸರ್ಗಿಕ ಕೃಷಿಗೆ ಒತ್ತು ನೀಡಲಾಗಿದ್ದು, ನೈಸರ್ಗಿಕ ಕೃಷಿಯಿಂದ ಬೆಳೆದ ತರಕಾರಿಗೆ ಹೆಚ್ಚು ಬೇಡಿಕೆಯಿದ್ದು, ಈ ಬೆಳೆಗಳಿಗೆ ಮಾರುಕಟ್ಟೆ ಬೇಡವಾಗಿದ್ದು, ಅದಕ್ಕಾಗಿಯೇ ಅನೇಕ ಸಂಘ ಸಂಸ್ಥೆಗಳು ಸಂಸ್ಥೆಗಳು ಸ್ಥಾಪನೆಯಾಗಿದ್ದು, ಗುಣಮಟ್ಟದ ತರಕಾರಿ ಬೆಳೆಗಳನ್ನು ಬೆಳೆದಲ್ಲಿ ನಿಮ್ಮ ಬಳಿಗೆ ಬಂದು ಖರೀದಿಸಿ ಬೆಂಗಳೂರಿನ ಮಾರುಕಟ್ಟೆಗೆ ರವಾನೆ ಮಾಡುತ್ತಾರೆ ಎಂದು ಹೇಳಿದರು.   

ತಾಪಂ ಇಒ ಶಿವರಾಮು ಮಾತನಾಡಿ, ಪ್ರತಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಸ್ತ್ರೀಶಕ್ತಿ ಸಂಘಗಳ ಒಕ್ಕೂಟಗಳನ್ನು ರಚಿಸಿ ಅವುಗಳಿಗೆ ಕೇಂದ್ರ ಸರಕಾರದ ಸಂಜೀವಿನಿ ಯೋಜನೆಯ ಮೂಲಕ ಪ್ರತಿ ಪಂಚಾಯಿತಿ ಒಕ್ಕೂಟಕ್ಕೆ 10 ಲಕ್ಷ ರೂ. ನೀಡಲಾಗುತ್ತಿದೆ ಎಂದು ತಿಳಿಸಿದರು. 

ಇಂದು ಹೆಚ್ಚು ಓದಿದ್ದು

Trending videos

Back to Top