CONNECT WITH US  

ವಿಜೃಂಭಣೆಯರ ರಾಯರ ರಥೋತ್ಸವ 

ಮಾಗಡಿ: ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ಯಾರಾಧನೆ ಪ್ರಯುಕ್ತ ಪಟ್ಟಣದಲ್ಲಿ ರಾಯರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.    
ರಾಘವೇಂದ್ರಸ್ವಾಮಿಗಳ 347ನೇ ಆರಾಧನಾ ಮಹೋತ್ಸವದ ಪ್ರಯುಕ್ತ ರಾಯರ ಬೃಂದಾವನಕ್ಕೆ ಶಾಸ್ತ್ರೋಕ್ತವಾಗಿ ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಭಕ್ತರು ಸಮರ್ಪಿಸಿದರು. 

ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಯರ ರಥೋತ್ಸವ ಮಂಗಳ ವಾಧ್ಯದೊಂದಿಗೆ ನೆರವೇರಿತು. ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ರಥ ಎಳೆಯುವ ಮೂಲಕ ಭಕ್ತಿ ಭಾವ ಮೆರೆದರು. ರಾಯರ ಆರಾಧನೆ ಪ್ರಯುಕ್ತ ತಿರುಮಲೆ ರಸ್ತೆಯಲ್ಲಿರುವ ರಾಯರ ಮಠಕ್ಕೆ 3 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿ ರಾಯರ ದರ್ಶನ ಪಡೆದರು. ಆರಾಧನೆ ಪ್ರಯುಕ್ತ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. 
ತಹಸೀಲ್ದಾರ್‌ ಎನ್‌.ಶಿವಕುಮಾರ್‌ ರಾಯರ ಮಠಕ್ಕೆ ತೆರಳಿ ಗುರು ರಾಯರ ದರ್ಶನ ಪಡೆದರು. 

ಗುರುರಾಜ ಸೇವಾ ಸಮಿತಿಯ ಅಧ್ಯಕ್ಷರಾದ ಹಿರಿಯಣ್ಣ (ಬೋಯಿ) ಗೋಪಾಲ ದೀಕ್ಷಿತ್‌, ತಿರುಮಲೆ ನಾಗರಾಜರಾವ್‌, ರಾಘವೇಂದ್ರ ರಾವ್‌ (ಪಾಪಣ್ಣಿ), ಕೃಷ್ಣಮೂರ್ತಿ (ಅಣ್ಣಿ), ನರಹರಿರಾವ್‌, ಕಲ್ಯಾ ಗೋಪಾಲರಾವ್‌, ಪ್ರಹ್ಲಾದ್‌ರಾವ್‌, ರಾಮರಾವ್‌, ಎಸ್‌.ನಾಗರಾಜ ಶೆಟ್ಟಿ, ಸುಂದರರಾವ್‌, ಟಿ.ಎಸ್‌.ಪ್ರಭು, ವಕೀಲ ಪ್ರಸಾದ್‌, ಮೋಹನ್‌ಕುಮಾರ್‌, ಪಾನ್ಯಂ ನಟರಾಜ್‌, ಜಗದೀಶ್‌, ಶ್ರೀಧರ್‌, ತಿರುಮಲೆ ಕನ್ನಡ ಕೂಟದ ಟಿ.ಎಂ.ಶ್ರೀನಿವಾಸ್‌, ದೇವರಾಜ್‌, ಎಂ.ಎನ್‌.ಗಂಗಾಧರ್‌, ನಿಸರ್ಗ ನಟರಾಜ್‌, ಕೌಶಲ್ಯ ನಟರಾಜ್‌, ಪದ್ಮ, ಗಾಯಿತ್ರಿ, ಕೃಷ್ಣವೇಣಿ, ಸಹನ, ಜಯಲಕ್ಷಿ¾ ದೀಕ್ಷಿತ್‌, ಜಯಲಕ್ಷಿ¾ದೇವಿ, ಲಕ್ಷ್ಮೀ, ನಳಿನಾ, ಗೀತಾ ಇದ್ದರು.


Trending videos

Back to Top