CONNECT WITH US  

ಬೆಟ್ಟದಿಂದ ಕಾಲು ಜಾರಿ ಬಿದ್ದು ಯುವಕ ಸಾವು 

ರಾಮನಗರ: ಪವಿತ್ರ ಕ್ಷೇತ್ರ ಮತ್ತು ಪ್ರಸಿದ್ಧ ಪ್ರವಾಸಿ ತಾಣ ತಾಲೂಕಿನ ಶ್ರೀ ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗ ಕಾಲು ಜಾರಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಶಿವಮೊಗ್ಗ ಮೂಲದ ಬೆಂಗಳೂರು ನಿವಾಸಿ ಎಸ್‌.ಭರತ್‌ (28) ಎಂದು ಗೊತ್ತಾಗಿದೆ.

ಮೂವರು ಸ್ನೇಹಿತರೊಡಗೂಡಿ ಗುರುವಾರ ಬೆಳಗ್ಗೆ ಎಸ್‌ಆರ್‌ಎಸ್‌ ಬೆಟ್ಟಕ್ಕೆ ಬಂದಿದ್ದರು. ಬೆಟ್ಟದ ಮೇಲೇರುವಾಗ ಭರತ್‌ ಕಾಲು ಜಾರಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆಗೆ ಗಂಭೀರ ಪೆಟ್ಟುಗಳಾಗಿದ್ದು, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಆವರನ್ನು ಸ್ನೇಹಿತರು 108 ಆ್ಯಂಬುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆದಲ್ಲೇ ಕೊನೆ ಉಸಿರೆಳೆದಿದ್ದಾರೆ.

ಮೃತ ಭರತ್‌ ಬೆಂಗಳೂರಿನಲ್ಲಿ ಟೀಮ್‌ ಲೀಸ್‌ ಕಂಪನಿಯ ಮೂಲಕ ಎಲ್‌ ಜಿ ಎಲೆಕ್ಟ್ರಾನಿಕ್ಸ್‌ನ ಸೇಲ್ಸ್‌ ಮಾರ್ಕೆಟಿಂಗ್‌ ಎಕ್ಸಿಕ್ಯುಟಿವ್‌ ಕೆಲಸ ಮಾಡುತ್ತಿದ್ದರು. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೆಲ ವಾರಗಳ ಹಿಂದಷ್ಟೆ  ಯುವತಿಯೊಬ್ಬಳು ಸಹ ಹೀಗೆ ಕಾಲು ಜಾರಿ ಗಂಭೀರವಾಗಿ ಗಾಯಗೊಂಡಿದ್ದಳು. 

Trending videos

Back to Top