CONNECT WITH US  

ನಿತ್ಯಾನಂದ ಸ್ವಾಮೀಜಿ ವಿಚಾರಣೆ ಸೆ.6ಕ್ಕೆ ಮುಂದೂಡಿಕೆ

ರಾಮನಗರ: ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಗಣೆಗೆ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಹಾಜರಾಗಿರಲಿಲ್ಲ. 6 ಆರೋಪಿಗಳ ಪೈಕಿ ಇಬ್ಬರು ಮಾತ್ರ ಹಾಜರಾಗಿದ್ದರು. ನಿತ್ಯಾನಂದ ಸ್ವಾಮೀಜಿ ಸೇರಿದಂತೆ ಗೈರಾದ ಆರೋಪಿಗಳ ಗೈರಿಗೆ ಅವರ ಪರ ವಕೀಲರು ಕಾರಣವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಸಿಐಡಿ ಪೊಲೀಸರ ಪರ ವಕೀಲ ವಡವಡಗಿ ವಾದ ಮಂಡಿಸಿದರು. ದೂರುದಾರ ಲೆನಿನ್‌ ಹಾಜರಿದ್ದರು. ಅವರ ಪರ ವಕೀಲರು ಸಹ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು. ಫೋರೆನ್ಸಿಕ್‌ ಇಲಾಖೆ  ನೀಡಿದ ಕೆಲವು ಸಿಡಿಗಳು ಇತ್ಯಾದಿಗಳನ್ನು ನ್ಯಾಯಾಲಯ ತನ್ನ ಸುಪರ್ದಿಗೆ ಪಡೆದುಕೊಂಡಿತು. ತದನಂತರ ನ್ಯಾಯಾಲಯ ವಿಚಾರಣೆಯನ್ನು ಸೆ.6ಕ್ಕೆ ಮುಂದೂಡಿದೆ


Trending videos

Back to Top