CONNECT WITH US  

ಹಾಲಿಗೆ 1 ರೂ.ಪ್ರೋತ್ಸಾಹ ಧನ

ರಾಮನಗರ: ಶನಿವಾರದಿಂದ ಸದಸ್ಯರು ಪೂರೈಸುವ ಹಾಲು ಲೀಟರ್‌ವೊಂದಕ್ಕೆ ಬೆಂಗಳೂರು ಹಾಲು ಒಕ್ಕೂಟದ (ಬಮೂಲ್‌) ವತಿಯಿಂದ 1 ರೂ. ಪ್ರೋತ್ಸಾಹ ಧನ ಸಿಗಲಿದೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜು ತಿಳಿಸಿದರು.

ತಾಲೂಕಿನ ಕೆ.ಕರೇನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ಕರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೈನೋದ್ಯಮಿಗಳಿಗೆ ಉಪಯುಕ್ತ: ಹಾಲಿನ ಖರೀದಿ ದರ ಸದ್ಯ ಲೀಟರ್‌ಗೆ 22 ರೂ. ಇದೆ. ಸೆ.1ರಿಂದ ಇದು23 ರೂ. ಆಗಲಿದೆ. ಸರ್ಕಾರದ ಪ್ರೋತ್ಸಾಹ ಧನ 5 ರೂ. ಸೇರಿದರೆ ಲೀಟರ್‌ಗೆ ತಲಾ 28 ರೂ. ಸಿಗಲಿದೆ. 

ಬಮೂಲ್‌ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆ ತೃಪ್ತಿಕರವಾಗಿದ್ದು, ಹೈನೋದ್ಯ ಮಿಗಳಿಗೆ ಬಮೂಲ್‌ನ ಈ ನಿರ್ಧಾರ ಉಪಯುಕ್ತವಾಗಿದೆ. ಕೆ.ಎಂ.ಎಫ್ ಅಧ್ಯಕ್ಷರಾಗಿ ಪಿ.ನಾಗರಾಜ್‌ ತೆಗೆದುಕೊಂಡ ಹಲವಾರು ನಿರ್ಧಾರಗಳು ಹೈನೋದ್ಯಮದ ಪ್ರಗತಿ ಮತ್ತು ಸ್ಥಿರವಾಗಿಸಲು ಸಹಕಾರಿಯಾಗಿದೆ ಎಂದು ಶ್ಲಾಘಿಸಿದರು.

ವಾಣಿಜ್ಯ ಬೆಲೆ, ತೋಟಗಾರಿಕೆ ಬೆಳೆ, ಕೃಷಿ ಬೆಳೆಗೆ ಹೋಲಿಸಿದರೆ ಇಂದು ಹೈನೋದ್ಯಮದ ವಹಿವಾಟು ಹೆಚ್ಚಾಗಿದೆ. ಮೇಲಾಗಿ ಈ ಬೆಳೆಗಳಿಗೆ ಕನಿಷ್ಠ ಬೆಲೆ, ವೈಜ್ಞಾನಿಕ ಬೆಲೆಯೂ ಇಲ್ಲ. ಇಂದು ರೈತರಿಗೆ ಹೈನೋದ್ಯಮದಿಂದ
ನಿಶ್ಚಿತ ಆದಾಯವಿದೆ. 

ಈ ಉದ್ಯಮ ರೈತರ ಕೈ ಹಿಡಿಯುತ್ತಿದೆ. ಹಾಲಿನ ಖರೀದಿ ವಹಿವಾಟು ಕೂಡ ಪಾರದರ್ಶಕವಾಗಿದೆ. ಹಣ ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತಿದೆ ಎಂದರು.

ಡೇರಿ ಕಟ್ಟಡ ನಿರ್ಮಾಣಕ್ಕೆ ನೆರವು: ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜ್‌ ಮಾತನಾಡಿ, ಸಹಕಾರಿ ಸಂಘಗಳ ನಡುವೆ ಸಹಕಾರ ಇದ್ದರೆ ಮಾತ್ರ ಸಂಘಗಳು ಫ‌ಲಪ್ರದವಾಗುತ್ತದೆ. ಬದುಕು ಹಸುನುಗೊಳಿಸುವ ಹೈನೋ ದ್ಯಮದಲ್ಲಿ ರಾಜಕಾರಣ ಬೆರೆಸಬೇಡಿ ಎಂದು ಹೇಳಿದರು. ಡೇರಿಗಳಿಗೆ ಸ್ವಂತ ಕಟ್ಟಡಗಳಿದ್ದರೆ ಚಟುವಟಿ ಕೆಗಳು ಸುಸೂತ್ರವಾಗಿ
ನಡೆಯುತ್ತವೆ. ಹೀಗಾಗಿ ಡೇರಿಗಳು ಸ್ವಂತ ಕಟ್ಟಡಗಳ ನಿರ್ಮಿಸಿಕೊಳ್ಳಲು ಕೆಎಂಎಫ್ ನಿಂದ ತಲಾ 6 ಲಕ್ಷ ರೂ., ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ 1 ಲಕ್ಷ ರೂ. ಸಹಾಯಧನ ಸಿಗುತ್ತಿದೆ. ಕೆ. ಕರೇನಹಳ್ಳಿ ಸದಸ್ಯರು ತಮ್ಮ ದುಡಿಮೆಯ ಹಣವನ್ನು ಸೇರಿಸಿ ಒಟ್ಟು 13 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 ಗುಣಮಟ್ಟ ಕಾಪಾಡಿಕೊಳ್ಳಿ: ರೈತರು ತಾವು ಪೂರೈಸುವ ಹಾಲಿನ ಗುಣಮಟ್ಟ ಕಾಪಾಡಿ ಕೊಳ್ಳಬೇಕು. ಚರೋಗಪೀಡಿತ ಹಸುಗಳ ಹಾಲನ್ನು ಸಂಘಕ್ಕೆ ಕೊಡಬೇಡಿ, ಗುಣಮಟ್ಟದ ಹಾಲು ಪೂರೈಸಿ ಸಂಘವನ್ನು ಸುಭದ್ರವಾಗಿರಿಸಿ ಎಂದರು. ರೈತ ಮೃತಪಟ್ಟರೆ ಒಕ್ಕೂಟ ತಲಾ 2 ಲಕ್ಷ ರೂ. ನೆರವು ನೀಡುತ್ತದೆ ಎಂದು ತಿಳಿಸಿದರು.

ಜಿಪಂ ಸದ್ಯ ಎಂ.ಎನ್‌.ಮಂಜುನಾಥ್‌, ಸಂಘದ ಅಧ್ಯಕ್ಷ ಆರ್‌.ನಾರಾಯಣ್‌, ತಾಪಂ ಸದಸ್ಯೆ ನೀಲಾ, ಬೈರಮಂಗಲ ಗ್ರಾಪಂ ಸದಸ್ಯರುಗಳಾದ ಡಿ.ಗೋಪಾಲ್‌, ಮುನಿರತ್ನಮ್ಮ, ಮಂಚನಾಯ್ಕನಹಳ್ಳಿ ಗ್ರಾಪಂ ಸದಸ್ಯ ಯೋಗಾನಂದ್‌, ಬೈರಮಂಗಲ ವಿಎಸ್‌ಎಸ್‌ಎನ್‌ ಅಧ್ಯಕ್ಷ ಸಿದ್ದರಾಜು, ನಿವೃತ್ತ ಪೊಲೀಸ್‌ ಅಧಿಕಾರಿ ಗೋವಿಂದಯ್ಯ, ಸ್ಥಳೀಯ ಪ್ರಮುಖರಾದ ಪ್ರಕಾಶ್‌, ಸತೀಶ್‌, ಕೆ.ಕರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು, ಮುಖ್ಯ ಕಾರ್ಯ ನಿರ್ವಾಹಕ ನಾಗರಾಜು, ಹಾಲು ಪರಿವೀಕ್ಷಕ ಕೃಷ್ಣಮೂರ್ತಿ ಇದ್ದರು.  

ಈ ಭಾಗದಲ್ಲಿ ಗೋಮಾಳ ಸರ್ವೆ ಸಂಖ್ಯೆಯಲ್ಲಿ ಬಗರ್‌ಹುಕುಂ ಸಾಗುವಳಿ ನಡೆಸುತ್ತಿರುವ 53 ಅರ್ಜಿ ದಾರರ ವಿಚಾರವನ್ನು ತಾವು ಈಗಾಗಲೇ ಮುಖ್ಯಮಂತ್ರಿ ಎಚ್‌. ಡಿ.ಕುಮಾರ ಸ್ವಾಮಿ ಮತ್ತು ಕಂದಾಯ ಸಚಿವ ‌ ಗಮನ ಸೆಳೆದಿರುವೆ. ಕುಮಾರಸ್ವಾಮಿ ಅವರು ಈ ಹಿಂದೆ ಸಿಎಂ ಆಗಿದ್ದ ಸಂದರ್ಭದಲ್ಲಿ ಬಿಡದಿ ಬಳಿ ಟೌನ್‌ ಶಿಪ್‌ ನಿರ್ಮಿಸುವ ಉದ್ದೇಶ ಇರಿಸಿಕೊಂಡಿದ್ದರು. ಇದೀಗ ಟೌನ್‌ಶಿಪ್‌ ವಿಚಾರವನ್ನು ಅವರ ಬಳಿ ಪ್ರಸ್ತಾಪಿಸುತ್ತೇನೆ.
  ಎ.ಮಂಜುನಾಥ್‌, ಶಾಸಕ 


Trending videos

Back to Top