CONNECT WITH US  

ನೇತ್ರ ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ 

ಮಾಗಡಿ: ಪ್ರತಿಯೊಬ್ಬರು ತಾವು ಮರಣ ನಂತರ ಕಣ್ಣನ್ನು ಮಣ್ಣಲ್ಲಿ ಮಣ್ಣಾಗಿಸದೇ ನೇತ್ರ ದಾನಕ್ಕೆ ಮುಂದಾಗಬೇಕು. ಇದರಿಂದ ಅಂಧರ ಬಾಳನ್ನು ಬೆಳಕಾಗಿಸಬಹುದು. ಜಿಲ್ಲಾ ಅಂಧತ್ವ ಸಂಸ್ಥೆ, ಶಂಕರ ಕಣ್ಣಿನ ಆಸ್ಪತ್ರೆ ನಿರಂತರವಾಗಿ ಉಚಿತ ಸೇವೆ ಸಲ್ಲಿಸಿಕೊಂಡು ಬರುತ್ತಿರುವುದು ಪ್ರಶಂಸನೀಯ ಎಂದು ಪುರಸಭಾ ಸದಸ್ಯ ಕೆ.ವಿ.ಬಾಲು ಹೇಳಿದರು. 

ಪಟ್ಟಣದ ಜಿಕೆಬಿಎಂಎಸ್‌ ಶಾಲಾ ಆವರಣದಲ್ಲಿ ಎ.ಮಂಜು ಚಾರಿಟಬಲ್‌ ಟ್ರಸ್ಟ್‌  ವತಿಯಿಂದ ಜಿಲ್ಲಾ ಅಂಧತ್ವ ಸಂಸ್ಥೆ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಎ.ಮಂಜು ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಅನೇಕ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿದ್ದೇವೆ. ಈಗಾಗಲೇ ಪ್ರತಿ ತಿಂಗಳು ಮೂರನೇ ಮಂಗಳವಾರ ಮಾಗಡಿ ತಾಲೂಕಿನ ಕುದೂರು, ಮಾಗಡಿ, ಬಿಡದಿ ಇತರೆಡೆ ದೃಷ್ಠಿದೋಷವುಳ್ಳವರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಹಾಗೂ ಉಚಿತ ಶಸ್ತ ಚಿಕಿತ್ಸೆ ಮಾಡಿಸಿ ಮನೆಗೆ ಕರೆತಂದು ಬಿಡುವ ಕೆಲಸ ಮಾಡಲಾಗುತ್ತಿದೆ. ಇದು ಹೀಗೆ ನಿರಂತರವಾಗಿ ಮಾಡಲಾಗುವುದು ಎಂದರು. 

ರೂಪೇಶ್‌ಕುಮಾರ್‌ ಮಾತನಾಡಿ, ಸಮಾದಲ್ಲಿ ಸಾಮಾಜಿಕ ಕಳಕಳಿಯುಳ್ಳವರಿಂದ ಮಾತ್ರ ಜನೋಪಯೋಗಿ ಸೇವೆ ಸಾಧ್ಯ. ಎ.ಮಂಜು ಚಾರಿಟಬಲ್‌ ಟ್ರಸ್ಟ್‌ವತಿಯಿಂದ ಸೇವೆ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯಬೇಕೆಂಬ ಮಹತ್ವಕಾಂಕ್ಷೆ ಹೊಂದಲಾಗಿದೆ ಎಂದರು. ಸಮಾಜ ಸೇವಕ ಹೊಸಹಳ್ಳಿ ಮುನಿರಾಜು, ತಗ್ಗೀಕುಪ್ಪೆ ರಾಮಣ್ಣ, ಕಾರ್ಯದರ್ಶಿ ಮಂಜುನಾಥ್‌, ಡಾ.ವಿ.ಕೆ.ಹರ್ಷವರ್ಧನ, ನವೀನ್‌, ಟ್ರಸ್ಟ್‌ ಅಧ್ಯಕ್ಷ ಸವೇಶ್‌ ಇದ್ದರು.

Trending videos

Back to Top