ಸೇನಾ ಮುಖ್ಯಸ್ಥ: ಮಾನದಂಡ ಜ್ಯೇಷ್ಠತೆಯೋ, ಅರ್ಹತೆಯೋ?    


Team Udayavani, Jan 1, 2017, 3:45 AM IST

31-ANAKAN-1.jpg

ರಾಜಕೀಯದಿಂದ ದೂರ ಉಳಿದ ಸ್ವತ್ಛ ವರ್ಚಸ್ಸಿನ ನಮ್ಮ ಸೈನ್ಯದ ಸ್ವರೂಪಕ್ಕೆ ಧಕ್ಕೆ ತರುವುದರ ಪರಿಣಾಮ ಘಾತಕವಾದದ್ದು. ರಾಜಕೀಯ ನಾಯಕರ ಒಲವು ಗಳಿಸಲು ಸೇನಾ ನಾಯಕರು ಯತ್ನಿಸುವ ವಾತಾವರಣ ಸೃಷ್ಟಿ ಮಾಡುವುದು ಸರಿಯಲ್ಲ. ರಾಜಕೀಯ ಪ್ರಭಾವದ ಮೇರೆಗೆ ಈಗಿನ ಮುಖ್ಯಸ್ಥರು ನೇಮಕವಾಗಿದ್ದರೆ ಅದು ಖಂಡಿತ ಸಮರ್ಥನೀಯವಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಅಧಿಕಾರಿಗಳ ರಾಜಕೀಯ ಒಲವು ಅಥವಾ ಸಂಬಂಧಗಳು ನೇಮಕಾತಿಯಲ್ಲಿ ಕೆಲಸ ಮಾಡಿದಂತಹ ಸುಳಿವು ಮೇಲ್ನೋಟಕ್ಕೆ ಕೂಡ ಕಾಣುತ್ತಿಲ್ಲ. ಹಾಗೆಂದ ಮೇಲೆ ಸರ್ಕಾರಕ್ಕೆ ದೇಶ ಹಿತದಲ್ಲಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲವೇ?

ರವಮಯ ಇತಿಹಾಸ ಹೊಂದಿದ, ಜಗತ್ತಿನ ದೊಡ್ಡ ಹಾಗೂ ಬಲಿಷ್ಠ ಸೇನೆಗಳÇÉೊಂದೆನಿಸಿದ ಭಾರತೀಯ ಸೇನೆಯ ಮುಂದಿನ ಮುಖ್ಯಸ್ಥರನ್ನಾಗಿ ಬಿಪಿನ್‌ ರಾವತ್‌ ಅವರನ್ನು ನೇಮಿಸಿರುವುದನ್ನು ಪ್ರತಿಪಕ್ಷಗಳು ವಿವಾದವಾಗಿಸಿವೆ. ಜ್ಯೇಷ್ಠತೆಯ ಪಟ್ಟಿಯಲ್ಲಿ ಅಗ್ರರಾಗಿದ್ದ ಮೂವರು ಅಧಿಕಾರಿಗಳನ್ನು ಕಡೆಗಣಿಸಿ ಬಿಪಿನ್‌ ರಾವತ್‌ ಅವರನ್ನು ಏಕೆ ನೇಮಿಸಲಾಯಿತೆನ್ನುವುದೇ ವಿವಾದಕ್ಕೆ ಕಾರಣ. ಸಮಾಧಾನಕರ ವಿಷಯವೇನೆಂದರೆ ಈ ಹಿಂದೆ 1983ರಲ್ಲಿ ಎಸ್‌.ಕೆ.ಸಿನ್ಹಾರನ್ನು ಕಡೆಗಣಿಸಿ ಎ.ಎಸ್‌.ವೈದ್ಯಾರನ್ನು ಸೇನಾಧ್ಯಕ್ಷ ಹು¨ªೆಗೆ ಇಂದಿರಾ ಗಾಂಧಿ ಅವರ ಸರ್ಕಾರ ನೇಮಿಸಿದಾಗ ಸಿನ್ಹಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಂತಹ ವಿರೋಧವೇನೂ ಈಗ ವ್ಯಕ್ತವಾಗಿಲ್ಲ. ಜ್ಯೇಷ್ಠತೆ ಮತ್ತು ದಕ್ಷತೆಗಳಲ್ಲಿ ಯಾವುದನ್ನು ಅರ್ಹತೆಯ ಮುಖ್ಯ ಮಾನದಂಡವಾಗಿಸಬೇಕು? ಇದು ಸರ್ಕಾರದ ಎಲ್ಲ ಅಧಿಕಾರಿಗಳ ನೇಮಕಾತಿಯಲ್ಲೂ ಕಾಡುವ ಸಮಸ್ಯೆಯೇ. ದೇಶದ ರಕ್ಷಣೆಯ ಗುರುತರ ಜವಾಬ್ದಾರಿ ಹೊತ್ತ ಸೇನಾ ಮುಖ್ಯಸ್ಥರ ಹು¨ªೆಯ ನೇಮಕಾತಿಯ ವಿಷಯದಲ್ಲಿ ಈ ಪ್ರಶ್ನೆ ಇನ್ನಷ್ಟು ಸಂವೇದನಾಶೀಲವಾಗಿಬಿಡುತ್ತದೆ.

ಸೀನಿಯಾರಿಟಿಗಿದೆ ವಿಶೇಷ ಮಹತ್ವ
ಜ್ಯೇಷ್ಠತೆಯ ಮಹತ್ವ ಸರ್ಕಾರದ ಎಲ್ಲ ವಿಭಾಗಗಳಲ್ಲಿ ಇರುತ್ತದಾದರೂ, “ಸೀನಿಯರ್‌ ಈಸ್‌ ಆಲ್ವೇಸ್‌ ಕರೆಕr…’ ಎನ್ನುವ ಶಿಸ್ತಿನ ಬುನಾದಿಯ ಮೇಲೆ ನಿಂತಿರುವ ಮಿಲಿಟರಿಯ ದಿನಚರಿಯಲ್ಲಿ ಜ್ಯೇಷ್ಠತೆಗೆ ಎಲ್ಲಿಲ್ಲದ ಮಹತ್ವವಿದೆ ನಿಜ. ಸೇನೆಯ ತರಬೇತಿಯÇÉೇ ಜ್ಯೇಷ್ಠತೆಯ ಮಾನಸಿಕತೆಯನ್ನು ರಕ್ತಗುಣವನ್ನಾಗಿಸಲಾಗುತ್ತದೆ. ಸೇನೆಯಲ್ಲಿ ಕಾಲಿಡುವ ಸೈನಿಕರಿಗೆ ಮೊದಲ ದಿನದ ಮೊದಲ ಪಾಠವೇ ಜ್ಯೇಷ್ಠತೆಯನ್ನು ಗೌರವಿಸುವ, ವರಿಷ್ಟರನ್ನು ಪ್ರಶ್ನೆ ಮಾಡದಿರುವ ಪಾಠವಾಗಿರುತ್ತದೆ. ಕೇವಲ ಒಂದಂಕಿ ಸೀನಿಯರ್‌ ಆದರೂ ಆತನ ಎಲ್ಲ ಆದೇಶಗಳನ್ನು ಚಾಚೂ ತಪ್ಪದೇ ಪಾಲಿಸುವ ಕಠಿಣ ಶಿಸ್ತು ಭಾರತೀಯ ಸೇನೆಯಲ್ಲಿದೆ. ಸೀನಿಯಾರಿಟಿಯನ್ನು ಕಡೆಗಣಿಸುವುದು ಸಹಿಸಲಾಗದ ಅಶಿಸ್ತು ಎಂದು ಪರಿಗಣಿಸಲಾಗುತ್ತದೆ. ಈ ನಿಯಮ ಕುಳಿತಲ್ಲಿ, ನಿಂತಲ್ಲಿ, ಮನೋರಂಜನಾ ಕಕ್ಷೆಯಲ್ಲಿ, ಭೋಜನ ಗೃಹದಲ್ಲಿ, ಸೇನಾ ಸಮಾರಂಭಗಳಲ್ಲಿ – ಹೀಗೆ ಎÇÉೆಡೆ ಪಾಲಿಸಲಾಗುತ್ತದೆ. ಅಷ್ಟೇಕೆ ಸೇನೆಯಲ್ಲಿ ವರಿಷ್ಟರೊಂದಿಗೆ ಅವರ ಬಲಕ್ಕೆ ನಿಲ್ಲುವುದು, ಚಲಿಸುವುದು ಹಾಗೂ ಕುಳಿತುಕೊಳ್ಳುವುದು ಕೂಡಾ ಜ್ಯೇಷ್ಠತೆಗೆ ಮಾಡಿದ ಅಗೌರವದ ಸಂಕೇತವಾಗುತ್ತದೆ. ಹೀಗಿರುವಾಗ ಸ್ವಾಭಾವಿಕವಾಗಿಯೇ ತಮ್ಮ ಸೀನಿಯಾರಿಟಿಯ ನಿರ್ಲಕ್ಷ್ಯ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಸೇನೆಯ ಎಲ್ಲ ಹಂತಗಳಲ್ಲೂ ಕೇವಲ ಸೀನಿಯಾರಿಟಿಯ ಮೇಲೆಯೇ ಪ್ರಮೋಷನ್‌ ನೀಡಲಾಗುತ್ತದೆಯೇ? ಖಂಡಿತ ಇಲ್ಲ. 

ಕೆಳಹಂತದಲ್ಲೂ ಬಡ್ತಿಗೆ ಸೀನಿಯಾರಿಟಿಯೊಂದೇ ಅರ್ಹತೆಯಲ್ಲ
ಶತ್ರುವನ್ನು ಬಗ್ಗು ಬಡಿಯಲೆಂದೇ ಇರುವ ಸೇನೆಯಲ್ಲಿ ಕಠಿಣ ನಿಯಮವಿಲ್ಲದಿದ್ದರೆ ಅರಾಜಕತೆ, ಅಸ್ಪಷ್ಟತೆ ತಲೆದೋರಬಹುದಾದ ಸಾಧ್ಯತೆ ಇದೆ. ಮೊದಲು ಸರಿ- ತಪ್ಪು ಚಿಂತಿಸದೇ ವರಿಷ್ಟರ ಆದೇಶದ ಪಾಲನೆ, ಅನಂತರ ತಪ್ಪು ಆದೇಶದ ಕುರಿತು ಅಸಮಾಧಾನ ವ್ಯಕ್ತಪಡಿಸುವ ಭವ್ಯ ಪರಂಪರೆಯಿಂದಾಗಿ ನಮ್ಮ ಸೇನೆಯಲ್ಲಿ ಅರಾಜಕತೆಗೆ ಆಸ್ಪದವಿಲ್ಲ. ಸೇನೆಯ ರ್‍ಯಾಂಕ್‌ ಸ್ಟ್ರಕ್ಚರ್‌ ಪಿರಮಡ್ಡಿನ ಆಕಾರದಲ್ಲಿರುತ್ತದೆ. ಕೆಳಗಿನಿಂದ ಮೇಲಕ್ಕೆ ಹೋಗುತ್ತಿದ್ದಂತೆ ಪ್ರಮೋಷನ್‌ ಅವಕಾಶಗಳು ಕಡಿಮೆಯಾಗುತ್ತವೆ. ಸೇನೆಯಲ್ಲಿ ಕಮಿಷನ್‌x ಅಧಿಕಾರಿಯಾಗಿ ಸೇರ್ಪಡೆಯಾದ ಎಲ್ಲರೂ ಬ್ರಿಗೆಡಿಯರ್‌, ಮೇಜರ್‌ ಜನರಲ…, ಲೆಫ್ಟಿನೆಂಟ್‌ ಜನರಲ್‌ ಮತ್ತು ಏಕಮಾತ್ರ ಹು¨ªೆಯಾದ ಜನರಲ್‌ ಆಗಲು ಸಾಧ್ಯವಿಲ್ಲ. ಈ ಎಲ್ಲ ಹಂತಗಳಲ್ಲೂ ಕೇವಲ ಸೀನಿಯಾರಿಟಿ ಒಂದನ್ನೇ ಪ್ರಮೋಷನ್ನಿಗೆ ಆಧಾರವಾಗಿ ಪರಿಗಣಿಸಲಾಗುವುದಿಲ್ಲ ಎನ್ನುವುದು ಅನೇಕರಿಗೆ ಗೊತ್ತಿಲ್ಲದಿರಬಹುದು. ವಾರ್ಷಿಕ ಗೌಪ್ಯ ವರದಿಗಳು, ಯುದ್ಧ ಸಾಧನೆಗಳು, ವಿವಿಧ ಕೋರ್ಸ್‌ಗಳಲ್ಲಿ ಮಾಡಿದ ಸಾಧನೆಗಳು, ಎÇÉೆಲ್ಲಿ ಕಾರ್ಯನಿರ್ವಹಿಸಲಾಗಿದೆ ಇತ್ಯಾದಿ ಹಲವು ವಿಷಯಗಳ ಆಧಾರದ ಮೇಲೆ ಬಡ್ತಿ ನೀಡಲಾಗುತ್ತದೆ.

ಆಂತರಿಕ ಪ್ರಮೋಷನ್‌ಗಳಲ್ಲಿ ಅನುಸರಿಸಿದ ವಿಧಿ-ವಿಧಾನಗಳ ಕುರಿತು ಆಗಾಗ್ಗೆ ಅಸಮಾಧಾನ, ಕೋರ್ಟ್‌-ಆರ್ಮ್ಡ್‌ ಫೋರ್ಸಸ್‌ ಟ್ರಿಬುನಲ್‌ಗ‌ಳವರೆಗೆ ತಲುಪುತ್ತವೆ. ಸೇನೆಯ ಒಟ್ಟು ಸಂಖ್ಯೆಯ ಹೆಚ್ಚು ಕಡಿಮೆ ಅರ್ಧದಷ್ಟಿರುವ ಇನೆ#ಂಟ್ರಿಯ ಅಧಿಕಾರಿಗಳು ಪ್ರಮೋಷನ್‌ಗಳಲ್ಲಿ ಮೇಲುಗೈ ಸಾಧಿಸುತ್ತಿರುವುದು ಅನೇಕ ಬಾರಿ ಆರ್ಟಿಲರಿ, ಆರ್ಮ್ಡ್‌ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗುತ್ತದೆ. ಈಗ ಸೇನಾ ಪ್ರಮುಖರಾಗಿ ಆಯ್ಕೆಯಾದ ಬಿಪಿನ್‌ ರಾವತ್‌ ಅವರೂ ಇನೆ#ಂಟ್ರಿಗೆ ಸೇರಿದವರಾದ್ದರಿಂದ ಅವರನ್ನು ಇನೆ#ಂಟ್ರಿಯವರೇ ಆದ ಹಾಲಿ ಮುಖ್ಯಸ್ಥರು ಶಿಫಾರಸು ಮಾಡಿ¨ªಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸೀನಿಯಾರಿಟಿ ಸೇನೆಯ ದಿನನಿತ್ಯದ ಕಾರ್ಯಕಲಾಪಗಳಲ್ಲಿ ಪ್ರಮುಖ ವಿಷಯವಾದರೂ ಪ್ರಮೋಷನ್‌ ವಿಷಯದಲ್ಲಿ ಅನೇಕ ಬಾರಿ ಅದು ಹಿನ್ನಡೆ ಕಾಣುತ್ತದೆ ಎನ್ನುವುದು ಮಾತ್ರ ಸತ್ಯ! ವಾಸ್ತವ ಹೀಗಿರುವಾಗ ಸೇನಾಮುಖ್ಯಸ್ಥರ ನೇಮಕಾತಿ ವಿಷಯದಲ್ಲಿ ವರಿಷ್ಠತೆಯನ್ನು ಬದಿಗೊತ್ತಲಾಗಿದೆ ಎಂದು ಟೀಕಿಸುವುದರಲ್ಲಿ ಅರ್ಥವಿಲ್ಲ.

ರಾಜಕೀಕರಣ ತಡೆಗಟ್ಟಲು ಹೆಣೆದ ಸೀನಿಯಾರಿಟಿಯ ಸೂತ್ರ
ವಿವಾದಗಳನ್ನು ತಪ್ಪಿಸುವುದಕ್ಕಾಗಿ, ಸೇನೆಯಲ್ಲಿ ರಾಜಕೀಕರಣ ನಡೆಯಬಾರದೆನ್ನುವ ಉದ್ದೇಶದಿಂದ ಸೀನಿಯಾರಿಟಿಯ ಆಧಾರದ ಮೇಲೆ ನೇಮಕ ಮಾಡುವ ಪರಂಪರೆ ಇದೆ. ಸಾಮಾನ್ಯವಾಗಿ ಸಾಮರಿಕ ದೃಷ್ಟಿಯಿಂದ ಮಹತ್ವಪೂರ್ಣವೆನಿಸಿದ ಕಮಾಂಡ್‌ಗಳೆನಿಸಿದ ಪಶ್ಚಿಮ, ಉತ್ತರ ಮತ್ತು ಪೂರ್ವ ಕಮಾಂಡರುಗಳನ್ನು ಮಾತ್ರ ಸೇನಾಧ್ಯಕ್ಷರ ಹು¨ªೆಗೆ ಪರಿಗಣಿಸಲಾಗುತ್ತಿ¨ªಾದರೂ ನರಸಿಂಹ ರಾವ್‌ ಅವರ ನೇತೃತ್ವದ ಸರ್ಕಾರ ಕೇವಲ ಸೀನಿಯಾರಿಟಿ ಒಂದನ್ನೇ ಪರಿಗಣಿಸಿ, ಸ್ಥಾಪಿತ ಪರಂಪರೆಯಿಂದ ದೂರಸರಿದು ತರಬೇತಿ (ಟ್ರೈನಿಂಗ್‌) ಕಮಾಂಡಿನ ಕಮಾಂಡರ್‌ ಶಂಕರ್‌ ರಾಯ್‌ ಚೌಧುರಿಯವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿತ್ತು. ಕೇವಲ ಸೀನಿಯಾರಿಟಿ ಒಂದನ್ನೇ ಪರಿಗಣಿಸಿ ಪ್ರತಿಭೆ ಮತ್ತು ದಕ್ಷತೆಯನ್ನು ಕಡೆಗಣಿಸುವುದು ಸರಿಯಲ್ಲ ಎನ್ನುವ ವಾದವೂ ಇದೆ. 

ಅನಗತ್ಯ ವಿವಾದ ಸರಿಯಲ್ಲ
ರಾಜಕೀಯದಿಂದ ದೂರ ಉಳಿದ ಸ್ವತ್ಛ ವರ್ಚಸ್ಸಿನ ನಮ್ಮ ಸೈನ್ಯದ ಸ್ವರೂಪಕ್ಕೆ ಧಕ್ಕೆ ತರುವುದರ ಪರಿಣಾಮ ಘಾತಕವಾದದ್ದು. ರಾಜಕೀಯ ನಾಯಕರ ಒಲವು ಗಳಿಸಲು ಸೇನಾ ನಾಯಕರು ಯತ್ನಿಸುವ ವಾತಾವರಣ ಸೃಷ್ಟಿ ಮಾಡುವುದು ಸರಿಯಲ್ಲ. ರಾಜಕೀಯ ಪ್ರಭಾವದ ಮೇರೆಗೆ ಈಗಿನ ಮುಖ್ಯಸ್ಥರು ನೇಮಕವಾಗಿದ್ದರೆ ಅದು ಖಂಡಿತ ಸಮರ್ಥನೀಯವಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಅಧಿಕಾರಿಗಳ ರಾಜಕೀಯ ಒಲವು ಅಥವಾ ಸಂಬಂಧಗಳು ನೇಮಕಾತಿಯಲ್ಲಿ ಕೆಲಸ ಮಾಡಿದಂತಹ ಸುಳಿವು ಮೇಲ್ನೋಟಕ್ಕೆ ಕೂಡ ಕಾಣುತ್ತಿಲ್ಲ. ರಕ್ಷಣಾ ಮಂತ್ರಿಯಾಗಲೀ ಅಥವ ಕೇಂದ್ರ ಸರ್ಕಾರದ ಇತರ ಯಾವುದೇ 
ಮಂತ್ರಿಗಳಾಗಲೀ ಈ ವಿಷಯದಲ್ಲಿ ಪ್ರಭಾವ ಬೀರಿದ ಲಕ್ಷಣಗಳೂ ಇಲ್ಲ. ಹಾಗೆಂದ ಮೇಲೆ ಸರ್ಕಾರಕ್ಕೆ ದೇಶ ಹಿತದಲ್ಲಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲವೇ? ಸೇನಾ ಅಧಿಕಾರಿಗಳದೇ ಪರಮಾಧಿಕಾರ ಇರುವ ಆಂತರಿಕ ಪ್ರಮೋಷನ್‌ಗಳಲ್ಲೂ ಸೀನಿಯಾರಿಟಿ ಒಂದೇ ನಿರ್ಣಾಯಕವಲ್ಲದಿರುವಾಗ ಸೇನಾ ಮುಖ್ಯಸ್ಥರ ನೇಮಕಾತಿಯಲ್ಲಿ ದಕ್ಷತೆ ಮತ್ತು ಪ್ರತಿಭೆ ಏಕೆ ನಿರ್ಣಾಯಕವಾಗಬಾರದು? ಜ್ಯೇಷ್ಠತೆಯೋ, ದಕ್ಷತೆಯೋ ರಾಜಕೀಕರಣವಂತೂ ಬೇಡ. 

ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.