ಡಿಜಿಟಲ್‌ ಆಗೋಣ ಸರಿ; ಆದರೆ ಅಗತ್ಯ ಮೂಲಸೌಕರ್ಯ ಎಲ್ಲಿ?


Team Udayavani, Jan 6, 2017, 3:45 AM IST

Digtal-india.jpg

ಜನರೆಲ್ಲ ಡಿಜಿಟಲ್‌ ಆಗಿ ಎಂದು ಹೇಳುವ ಕೇಂದ್ರ ಸರಕಾರ ಅದಕ್ಕೆ ಪೂರಕವಾದ ಜನಸ್ನೇಹಿ ವ್ಯವಸ್ಥೆಯನ್ನೂ ತರಬೇಕು. ಸೋವಿ ದರಕ್ಕೆ ಇಂಟರ್ನೆಟ್‌ ಕೊಡದೆ, ಎಲ್ಲೆಡೆ ಕನಿಷ್ಠ ಪಕ್ಷ ಬಿಎಸ್ಸೆನ್ನೆಲ್‌ನ ಇಂಟರ್ನೆಟ್ಟಾದರೂ ಸಿಗುವಂತೆ ಮಾಡದೆ ಎಲ್ಲರೂ ಆನ್‌ಲೈನಲ್ಲೇ ವ್ಯವಹರಿಸಿ ಎಂದು ಸರಕಾರ ಉಪದೇಶ ಮಾಡುವುದಕ್ಕೆ ಅರ್ಥವಿಲ್ಲ.

ಅಪನಗದೀಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಬೆನ್ನಿಗೇ ಎಲ್ಲರೂ ಮೊಬೈಲ್‌ ವ್ಯಾಲೆಟ್‌ಗಳ ಕಡೆಗೆ ಗಮನ ಹರಿಸತೊಡಗಿದ್ದಾರೆ. ಆದರೆ ಮೊಬೈಲ್‌ ಮೂಲಕ ಹಣ ಕಳುಹಿಸುವುದು ಎಷ್ಟು ಸುರಕ್ಷಿತ ಎಂದು ಚಿಂತಿಸಿ ಮುಂದಡಿಯಿಡಬೇಕಾದ ಸ್ಥಿತಿಯಿದೆ. ಇನ್ನು, ಗ್ರಾಮಾಂತರದ ಜನತೆಯ ಬವಣೆ ಕಡೆಗೆ ಸರಕಾರದ ಗಮನ ಕಡಿಮೆಯಾಗಿದೆ ಎಂಬ ಅಪವಾದವೂ ಇದೆ. 

ಪೇಟಿಎಂ, ಫ್ರೀಚಾರ್ಜ್‌, ಮೊಬಿಕ್ವಿಕ್‌ನಂತಹ ಅನೇಕ ಖಾಸಗಿ ಆ್ಯಪ್‌ಗ್ಳಿದ್ದು, ಇವುಗಳಲ್ಲಿನ ಆರ್ಥಿಕ ವ್ಯವಹಾರದ ಸುರಕ್ಷತೆ ಕುರಿತು ಸರಕಾರ ಹೇಗೆ ಭರವಸೆ ಕೊಡುತ್ತದೆ? ಈ ಮೊಬೈಲ್‌ ವ್ಯಾಲೆಟ್‌ನಲ್ಲಿ ಬ್ಯಾಂಕ್‌ನ ಎಟಿಎಂ, ಡೆಬಿಟ್‌/ ಕ್ರೆಡಿಟ್‌ ಕಾರ್ಡ್‌ ಮೂಲಕ ಹಣದ ವ್ಯವಹಾರ ಮಾಡಬಹುದು. ಇ-ಬ್ಯಾಂಕಿಂಗ್‌ ಮೂಲಕವೂ ಮಾಡಬಹುದು. ಹಣವನ್ನು ಆ್ಯಪ್‌ಗ್ಳಲ್ಲಿಯೇ ಸಂಗ್ರಹಿಸಿ ಇಡಬಹುದು. ಹೀಗೆ ಸಂಗ್ರಹಿಸಿದ ಹಣ ಪೇಟಿಎಂ, ಫ್ರೀಚಾರ್ಜ್‌, ಮೊಬಿಕ್ವಿಕ್‌ ಮುಂತಾದ ಸಂಸ್ಥೆಗಳ ಬ್ಯಾಂಕ್‌ ಖಾತೆಯಲ್ಲಿರುತ್ತದೆ. ಒಂದೊಳ್ಳೆ ದಿನ ಈ ಸಂಸ್ಥೆ ಬಾಗಿಲು ಹಾಕಿದರೆ ಲಕ್ಷಾಂತರ ಗ್ರಾಹಕರ ಹಣಕ್ಕೆ ಯಾರು ಹೊಣೆ? ತಲಾ 10 ಸಾವಿರ ರೂ.ಗಳಂತೆ ಕನಿಷ್ಠ 1 ಲಕ್ಷ ಮಂದಿ ಹಣ ಅದರಲ್ಲಿ ಕೂಡಿಟ್ಟರೂ ಒಟ್ಟಾಗುವ ಮೊತ್ತ 100 ಕೋಟಿ ರೂ.!

ಕೈತಪ್ಪಿದ 10 ಸಾವಿರ ರೂ.ಗಾಗಿ ದೂರದ ರಾಜ್ಯಗಳಲ್ಲಿರುವ ಅಥವಾ ಬೇರೆ ದೇಶದಲ್ಲಿ ಕಾರ್ಪೊರೇಟ್‌ ಕಚೇರಿಗಳನ್ನು ಹೊಂದಿರುವ ಸಂಸ್ಥೆಯನ್ನು ಹುಡುಕಲಾಗುತ್ತದೆಯೇ? ಈಗಾಗಲೇ ಬೇರೆ ಬೇರೆ ಹೆಸರಿನ ಚೈನ್‌ ಸ್ಕೀಂ ನಡೆಸಿ ಹಣ ವಸೂಲಿ ಮಾಡಿದ ಅದೆಷ್ಟೋ ಸಂಸ್ಥೆಗಳು ತಮ್ಮ ವೆಬ್‌ಸೈಟ್‌ನ ಪ್ಲಗ್‌ ತಪ್ಪಿಸಿ ಆರಾಮವಾಗಿ ಇವೆ. ಇನ್ನು ಇಂತಹ ಖಾಸಗಿ ಆ್ಯಪ್‌ನವರ ಮೇಲೆ ಹೇಗೆ ನಂಬಿಕೆ ಇರಿಸುವುದು? ಬ್ಯಾಂಕುಗಳ ಆ್ಯಪ್‌ನಲ್ಲಿದ್ದಷ್ಟು ಕಠಿಣ ಹಾಗೂ ಸುರಕ್ಷೆ ಈ ಆ್ಯಪ್‌ಗ್ಳಲ್ಲಿ ಇಲ್ಲ. ಒಂದೊಮ್ಮೆ ಮೊಬೈಲ್‌ ಕಳೆದುಹೋದರೆ ಯಾರು ಬೇಕಾದರೂ ನಿಮ್ಮ ಹಣದಲ್ಲಿ ಮಜಾ ಉಡಾಯಿಸಬಹುದು. ಇದು ಯಾವುದೋ ಒಂದು ಖಾಸಗಿ ಮೊಬೈಲ್‌ ವ್ಯಾಲೆಟ್‌ ಕಂಪನಿಯ ಮೇಲಿನ ಅಪವಾದ ಅಲ್ಲ, ಉದಾಹರಣೆಯಾಗಿ ನೀಡಿ ಸಂಶಯ ನಿವಾರಣೆಗೆ ಬೇಡಿಕೆ ಅಷ್ಟೆ. ಇದೀಗ ಹೊಸದಾಗಿ ಈ ಮೊಬೈಲ್‌ ಆ್ಯಪ್‌ಗ್ಳ ಸಿಬ್ಬಂದಿಯ ಕರಾಮತ್ತಿನಿಂದಲೇ ಹಣ ದುರ್ಬಳಕೆಯಾದ ಕುರಿತು ಪ್ರಕರಣ ದಾಖಲಾಗಿದೆ. 

ಇನ್ನು ಈ ಆ್ಯಪ್‌ಗ್ಳಲ್ಲಿ ಬಳಕೆದಾರರ ಬ್ಯಾಂಕ್‌ ಖಾತೆ ಹಾಗೂ ಡೆಬಿಟ್‌/ ಕ್ರೆಡಿಟ್‌ ಕಾರ್ಡ್‌ಗಳ ಅಷ್ಟೂ ಮಾಹಿತಿ ದಾಖಲಾಗಿರುತ್ತದೆ. ಅದನ್ನು ಈ ಆ್ಯಪ್‌ಗ್ಳನ್ನು ನೋಡಿಕೊಳ್ಳುವ ಸಿಬ್ಬಂದಿ ಅಥವಾ ಒಂದು ವೇಳೆ ಆ ಮಾಹಿತಿ ದುಷ್ಕರ್ಮಿಗಳ ಕೈಗೆ ಸಿಕ್ಕಿದರೆ ಅವರು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಆನ್‌ಲೈನ್‌ ಹಣ ವಿನಿಮಯಕ್ಕೆ ಪೇಟಿಎಂ, ಫ್ರೀಚಾರ್ಜ್‌, ಮೊಬಿಕ್ವಿಕ್‌, ಇಟ್‌ಸಕ್ಯಾಶ್‌, ಆಕ್ಸಿಜನ್‌, ಆ್ಯರ್‌ಟೆಲ್‌ ಮನಿ, ವೊಡಾಫೋನ್‌ ಎಂಪೆಸಾ, ಜಿಯೊಮನಿ, ವೊಲಾ ಮನಿ ಮೊದಲಾದ ಅನೇಕ ಖಾಸಗಿ ಮೊಬೈಲ್‌ ಆ್ಯಪ್‌ಗ್ಳಿವೆ. 

ಸರಕಾರಿ ಆ್ಯಪ್‌ಗ್ಳ ದುರವಸ್ಥೆ
ಸರಿ, ಖಾಸಗಿ ಆ್ಯಪ್‌ಗ್ಳು ಬೇಡ ಎಂದಾದರೆ ಸರಕಾರಿ ಆ್ಯಪ್‌ ಉಪಯೋಗಿಸಿ ಎನ್ನಬಹುದು. ರಿಸರ್ವ್‌ ಬ್ಯಾಂಕ್‌ ಯುಪಿಐ ಎಂಬ ಆ್ಯಪ್‌ ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ 18 ಬ್ಯಾಂಕುಗಳಷ್ಟೇ ಇವೆ. ದೇಶದಲ್ಲಿ ನೂರಾರು ಬ್ಯಾಂಕುಗಳಿರುವಾಗ ಕೇವಲ 18 ಬ್ಯಾಂಕುಗಳಷ್ಟೇ ಈ ಆ್ಯಪ್‌ನ ಅಡಿಯಲ್ಲಿದ್ದರೆ ಸರ್ವಜನತೆ ಹೇಗೆ ಡಿಜಿಟಲ್‌ ವ್ಯವಹಾರ ಮಾಡುವುದು? ಇದೇನೂ ಕಷ್ಟದ ಕೆಲಸವಲ್ಲ. ರಿಸರ್ವ್‌ ಬ್ಯಾಂಕ್‌ ಒಂದು ಸುತ್ತೋಲೆ ಹೊರಡಿಸಿದರೆ ಸಾಕು, ಎಲ್ಲ ಬ್ಯಾಂಕುಗಳ ಸರ್ವರ್‌ಗಳೂ ಇದರ ಜತೆ ಲಿಂಕ್‌ ಮಾಡಿಕೊಳ್ಳಬಹುದು. ಈ ಕಾರ್ಯ ನಡೆಯದೇ ಡಿಜಿಟಲ್‌ ವ್ಯವಹಾರ ಮಾಡಿ ಎಂದರೆ ವ್ಯಾವಹಾರಿಕ ವಿಶ್ವಾಸ ಉಳಿಯುವುದು ಹೇಗೆ? ಈಗ ಕೇಂದ್ರ ಸರ್ಕಾರವೇ ಭೀಮ್‌ ಆ್ಯಪ್‌ ಬಿಡುಗಡೆ ಮಾಡಿ, ಇದರಲ್ಲಿ ವ್ಯವಹಾರ ಮಾಡಿ ಎಂದು ಪ್ರಚಾರ ಮಾಡುತ್ತಿದೆ. ಆದರೆ, ಈ ಆ್ಯಪ್‌ ಎಲ್ಲರ ಮೊಬೈಲ್‌ನಲ್ಲೂ ಇನ್‌ಸ್ಟಾಲ್‌ ಆಗುತ್ತಿಲ್ಲ. ಇದರಲ್ಲಿರುವ ಬಗ್‌ಗಳನ್ನು ಸರಿಪಡಿಸುವ ಗೋಜಿಗೆ ಸರ್ಕಾರ ಹೋದಂತಿಲ್ಲ. 
ಇಂಟರ್ನೆಟ್‌ ಇಲ್ಲದೆ ಏನು ಸಾಧ್ಯ?

ಮೊಬೈಲ್‌ ಬ್ಯಾಂಕಿಂಗ್‌ ಅಥವಾ ಇಂಟರ್ನೆಟ್‌ ಬ್ಯಾಂಕಿಂಗ್‌ ಉಪಯೋಗಿಸಿ, ಡಿಜಿಟಲ್‌ ಹಣ ವಿನಿಯೋಗಿಸಿ ಎಂದು ಏಕಾಏಕಿ ಕಠಿಣ ನಿಯಮ ಮಾಡಿದ ಸರಕಾರ ಹಳ್ಳಿ ಹಳ್ಳಿಗೆ ಇಂಟರ್‌ನೆಟ್‌ ಕೊಡುವ ಕುರಿತು ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ? ಅಥವಾ ಈಗ ಇರುವ ಸರಕಾರಿ ಸ್ವಾಮ್ಯದ ದೂರವಾಣಿಯಲ್ಲಿ ಉತ್ತಮ ಇಂಟರ್ನೆಟ್‌ ನೀಡಲು ಯಾಕೆ ಮುತುವರ್ಜಿ ವಹಿಸಿಲ್ಲ? ಎಕ್ಸ್‌ಚೇಂಜ್‌ನ ಹತ್ತಿರವೇ ಸಮರ್ಪಕವಾಗಿ ಸೇವೆ ನೀಡಲು ಬಿಎಸ್ಸೆನ್ನೆಲ್‌ನವರಿಗೆ ಸಾಧ್ಯವಾಗುತ್ತಿಲ್ಲ. ಇನ್ನು ಬಿಎಸ್ಸೆನ್ನೆಲ್‌ನ ಕೇಂದ್ರ ಕಚೇರಿಯವರೇನೋ ಅತ್ಯಂತ ಕಡಿಮೆ ಬೆಲೆಗೆ ಲ್ಯಾಂಡ್‌ಲೈನ್‌ ಹಾಗೂ ಇಂಟರ್ನೆಟ್‌ ಸಂಪರ್ಕ ನೀಡುತ್ತೇವೆ ಎಂದು ಜಾಹೀರಾತು ಕೊಡುತ್ತಾರೆ. ಆದರೆ ಸ್ಥಳೀಯ ಏಕ್ಸ್‌ಚೇಂಜ್‌ಗೆ ಹೋಗಿ ಕೇಳಿದರೆ ನಿಮ್ಮ ಏರಿಯಾದಲ್ಲಿ ನಮ್ಮ ಲೈನ್‌ ಇಲ್ಲ, ಫೈಬರ್‌ನೆಟ್‌ ತೆಗೆದುಕೊಳ್ಳಿ ಎನ್ನುತ್ತಾರೆ. ಅದು ಬಹಳ ದುಬಾರಿ ಕನೆಕ್ಷನ್‌. ತಿಂಗಳಿಗೆ ಸಾವಿರ ರೂ.ಗಿಂತ ಹೆಚ್ಚು ಬಿಲ್‌ ಬರುತ್ತದೆ. ಹಾಗಾಗಿ ಜನರು ಖಾಸಗಿ ದೂರಸಂಪರ್ಕ ಕಂಪನಿಗಳಿಗೆ ಮೊರೆ ಹೋಗಬೇಕು. ಅವೂ ದುಬಾರಿ. ಇವೆಲ್ಲ ಶ್ರೀಸಾಮಾನ್ಯನ ಕಿಸೆಗೆ ಹೊರೆಯಾಗದೇ?

ಬ್ಯಾಂಕುಗಳಲ್ಲಿ ದುರ್ವರ್ತನೆ
ಅಪನಗದೀಕರಣದ ಪೂರ್ವಭಾವಿಯಾಗಿ ಸರ್ಕಾರ ಜನ್‌ಧನ್‌ ಖಾತೆ ಮಾಡಿಸಿದೆ. ಇನ್ನೂ ಕೂಡಾ ಅದೆಷ್ಟೋ ಮಂದಿ ಖಾತೆ ತೆರೆದಿಲ್ಲ. ಆದ್ದರಿಂದ ಮನೆ ಮನೆಗೆ ತೆರಳಿ ಕನಿಷ್ಠ ಮನೆಗೊಂದಾದರೂ ಜನ್‌ಧನ್‌ ಅಥವಾ ಬ್ಯಾಂಕ್‌ ಖಾತೆ ಇರುವಂತೆ ಮಾಡಬೇಕಿತ್ತು. ಎಟಿಎಂ ಕಾರ್ಡ್‌ ಪ್ರತೀ ಖಾತೆದಾರರಿಗೂ ನೀಡಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ. ಈ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯ ನಡೆಯಬೇಕಿದೆ. 
ಡಿಸಿಸಿ ಬ್ಯಾಂಕುಗಳಲ್ಲಿ, ಸಹಕಾರಿ ಸಂಸ್ಥೆಗಳಲ್ಲಿ ನೋಟು ಸ್ವೀಕಾರಕ್ಕೆ ಅನುಮತಿ ನೀಡಿಲ್ಲ. ಆದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉತ್ತಮ ಸೇವೆ ನೀಡಬೇಕು ಎಂಬ ನಿಯಮ ಜಾರಿಯಾಗಿಲ್ಲ ಏಕೆ? ಭಾಷೆ ಅರಿಯದ ಅಧಿಕಾರಿಗಳು, ಸಿಬ್ಬಂದಿ ಗ್ರಾಮಾಂತರದ ಜನತೆಯ ಜತೆ ತೋರಿಸುವ ಅತಿರೇಕದ ಅಹಂಕಾರದ ಪರಮಾವಧಿಯ ವರ್ತನೆಗಳು ಅದೆಷ್ಟೋ ಮಂದಿ ಮತ್ತೆ ರಾಷ್ಟ್ರೀಕೃತ ಬ್ಯಾಂಕುಗಳ ಮೆಟ್ಟಿಲು ತುಳಿಯದಂತೆ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ವ್ಯವಹಾರ ಸೀಮಿತ ಮಾಡಿದರೆ ಹಳ್ಳಿ ಹಳ್ಳಿಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಶಾಖೆ ತೆರೆಯಲೂ ಕಡ್ಡಾಯ ಮಾಡಬೇಕು. ಆಯಾ ರಾಜ್ಯದ ಸಿಬಂದಿಯೇ ಇರಬೇಕೆಂದು ತಾಕೀತು ಮಾಡಬೇಕು. ಗ್ರಾಹಕಸ್ನೇಹಿ ವರ್ತನೆ ಕಡ್ಡಾಯ, ಅನುಚಿತ ವರ್ತನೆಗೈದರೆ ಇಂತಹವರಿಗೆ ದೂರು ಕೊಡಿ ಎಂಬ ದೊಡ್ಡ ಫಲಕ ತೂಗುಹಾಕುವ ಕೆಲಸವಾದರೂ ನಡಿಯಬೇಕು. 

ನೋಟು ನಿಷೇಧದಂತಹ ದೊಡ್ಡ ಕೆಲಸದ ಮಧ್ಯೆ ಇದೆಲ್ಲ ಸಣ್ಣ ವಿಷಯಗಳು. ಆದರೆ ಇವುಗಳ ಕಡೆಗೆ ಗಮನ ಹರಿಸಿದರೆ ಜನರ ಬಾಯಲ್ಲಿ ಹರಿಯುವ ಕಟುಮಾತುಗಳಿಂದ ತಪ್ಪಿಸಿಕೊಳ್ಳಬಹುದು. ಜನ ಬ್ಯಾಂಕುಗಳ ಮುಂದೆ ಕ್ಯೂ ನಿಲ್ಲುವುದು ತಪ್ಪಬಹುದು. ಜತೆಗೆ ಡಿಜಿಟಲ್‌ ಜ್ಞಾನ ಇದ್ದವರು ಮೊಬೈಲ್‌ ಆ್ಯಪ್‌ಗ್ಳ ಕುರಿತು ಮಾಹಿತಿ ಇಲ್ಲದವರಿಗೆ, ಇಂಟರ್ನೆಟ್‌ ಮೂಲಕ ಬ್ಯಾಂಕ್‌ ವ್ಯವಹಾರ ಮಾಡಲು ಅರಿಯದವರಿಗೆ ಮಾಹಿತಿ ಕೊಡಿಸುವ ಕೆಲಸ ಆಂದೋಲನ ರೂಪದಲ್ಲಿಯೇ ನಡೆಯಬೇಕಿದೆ. ಎಟಿಎಂ ಕಾರ್ಡ್‌ ಮೂಲಕ ಹಣ ಪಾವತಿ ವ್ಯವಸ್ಥೆ (ಪಿಒಎಸ್‌: ಪಾಯಿಂಟ್‌ ಆಫ್‌ ಸೇಲ್‌ ಯಂತ್ರ) ಇನ್ನಷ್ಟು ಕಡೆ ಅನುಷ್ಠಾನಕ್ಕೆ ಬರಬೇಕು. ಹಾಗಾದಾಗ ಗ್ರಾಮೀಣ ಭಾರತ ಶ್ರೇಷ್ಠ ಭಾರತ ಎಂಬ ವಾಕ್ಯಕ್ಕೆ ಅರ್ಥ ಬರುತ್ತದೆ. 

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.