ಟ್ರಂಪ್‌ರನ್ನು ಬೆಂಬಲಿಸುವ ಜನರ್ಯಾರು?


Team Udayavani, Jun 6, 2017, 10:13 AM IST

trump.jpg

ಬ್ರಿಟನ್‌ನಲ್ಲೂ ಅಮೆರಿಕದಲ್ಲಿರುವಂಥ ಪರಿಸ್ಥಿತಿಯೇ ಇದೆ. ಸಂಕಷ್ಟಕ್ಕೆಲ್ಲ ಶನೇಶ್ವರನೇ ಕಾರಣ ಎನ್ನುವಂತೆ ಅಲ್ಲಿನ ವಯಸ್ಸಾದ, ಅಲ್ಪ ಶಿಕ್ಷಿತ, ನಿರುದ್ಯೋಗಿ ಮತದಾರರೆಲ್ಲ ತಮ್ಮ ಕಷ್ಟಗಳಿಗೆ ಐರೋಪ್ಯ ಒಕ್ಕೂಟದ ನಿಯಮಗಳನ್ನು, ವಲಸೆ ನೀತಿಯನ್ನು ಮತ್ತು ವಿದೇಶಿಯರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುತ್ತಾರೆ. “ಬ್ರಿಟನ್‌ ಐರೋಪ್ಯ ಒಕ್ಕೂಟದಲ್ಲಿದ್ದರೆ ನಿಮ್ಮ ದೇಶದ ಆರ್ಥಿಕತೆ ಬೆಳೆಯುತ್ತದೆ, ಪೌಂಡ್‌ ಬಲಿಷ್ಠವಾಗಿರುತ್ತದೆ ಮತ್ತು ಯುರೋಪ್‌ನಾದ್ಯಂತ ನೀವು ಎಲ್ಲಿ ಬೇಕಾದರೂ ಕೆಲಸ ಮಾಡಬಹುದು’ ಎಂದು ಈ ವರ್ಗದ ಮತದಾರರಿಗೆ ತಿಳಿಹೇಳುವುದು ಸುಲಭ ಕೆಲಸವಂತೂ ಅಲ್ಲ!

ಇಂದು ಬಹುತೇಕ ಮಕ್ಕಳಿಗೆ ಅವರ ಪೋಷಕರು “ದುಷ್ಟ ಹಿರಿಯರಿಂದ ದೂರವಿರು’ ಎಂದು ಎಚ್ಚರಿಕೆ ನೀಡುತ್ತಾರೆ. ಮಕ್ಕಳಿಗೆ ಹೀಗೆ ಎಚ್ಚರಿಕೆ ನೀಡುವುದು ಸರಿಯಾಗಿಯೇ ಇದೆ. ಆದರೆ ಈ ರೀತಿಯ “ಡರ್ಟಿ’ ಹಿರಿಯರೇ ಇಂದು ಜಗತ್ತನ್ನು ನಿಯಂತ್ರಿಸುವ ಸ್ಥಾನಗಳಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಎನ್ನುವದು ಮಾತ್ರ ಈ ಪೋಷಕರಿಗೆ ತಿಳಿಯುತ್ತಿಲ್ಲ. ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷರು ತಮ್ಮ ದೇಶವನ್ನು ಐತಿಹಾಸಿಕ ಪ್ಯಾರಿಸ್‌ ಒಪ್ಪಂದದಿಂದ ಹೊರತಂದಿದ್ದಾರೆ. ಏಕೆಂದರೆ ಟ್ರಂಪ್‌ ಅವರು ದುಡಿಯುತ್ತಿರುವುದು ಪಿಟ್ಸ್‌ಬರ್ಗ್‌ ಮತ್ತು ಅಮೆರಿಕನ್ನರಿ ಗಾಗಿಯೇ ಹೊರತು ಪ್ಯಾರಿಸ್‌ಗಾಗಿ ಅಲ್ಲವಂತೆ. ಅಲ್ಲದೇ, ಭಾರತಕ್ಕೆ ವಿದೇಶಿ ದೇಣಿಗೆಯ ರೂಪದಲ್ಲಿ “ಕೋಟಿಗಟ್ಟಲೇ’ ಹಣ ಸುರಿಯುವುದಕ್ಕೂ ತಮ್ಮ ದೇಶ ತಯ್ನಾರಿಲ್ಲ ಎಂದಿದ್ದಾರವರು. 
ಟ್ರಂಪ್‌ರಂತೆಯೇ ನಮ್ಮ ಕ್ರಿಕೆಟರ್‌ ಮತ್ತು ಟ್ವಿಟರ್‌ನ ಹೊಸ ಫೇವರೆಟ್‌ ವೀರೇಂದ್ರ ಸೆಹ್ವಾಗ್‌ ಕೂಡ ಜಾಗತಿಕ ತಾಪಮಾನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತಿಲ್ಲ. “ಜಾಗತಿಕ ತಾಪಮಾನ ಅಮೆರಿಕದಲ್ಲಿ ಏರುತ್ತಿರಬಹುದು. ಟ್ರಾಫಿಕ್‌ ಮತ್ತು ದಟ್ಟಣೆ ಯಿಂದ ಭಾರತಕ್ಕೇನು ಅಂಥಾ ವ್ಯತ್ಯಾಸವಾಗಲಿದೆ? ನಿಜವಾದ ಸಮಸ್ಯೆಗಳ ಮೇಲೆ ಗಮನಹರಿಸಿ’ ಎಂದು ಟ್ರಂಪ್‌ರ ಧಾಟಿ ಯಲ್ಲೇ ಟ್ವೀಟ್‌ ಮಾಡಿದರು ಸೆಹ್ವಾಗ್‌. ಬಹುಶಃ ಸೆಹ್ವಾಗ್‌ರ ಸಲಹೆಯನ್ನು ಟ್ರಂಪ್‌ ಪಾಲಿಸಿದರೇನೋ?! 
ತಾವು ತಮ್ಮ ಕ್ಷೇತ್ರಗಳ ಬಗ್ಗೆಯಷ್ಟೇ ಯೋಚಿಸುವುದಾಗಿ ಟ್ರಂಪ್‌ ಹೇಳಿದ್ದು ಅವರ ಮಟ್ಟಿಗೆ ಸರಿಯೇ ಇರಬಹುದು. ಏಕೆಂದರೆ ಅವರ ಬಹುದೊಡ್ಡ ಬೆಂಬಲಿಗ ವರ್ಗದ ಜನರು ಭವಿಷ್ಯದ ಪೀಳಿಗೆಗಿಂತಲೂ ತಮ್ಮ ಬಗ್ಗೆಯೇ ಯೋಚಿಸುವವರು! ಇಷ್ಟಕ್ಕೂ ಟ್ರಂಪ್‌ರ ಬೆಂಬಲಿಗರಾದರೂ ಯಾರು? ಶ್ವೇತವರ್ಣೀಯರು, ಪುರುಷರು, ಮಧ್ಯಮ ವರ್ಗದ ಜನ, 50 ದಾಟಿದ ಅವಿದ್ಯಾ ವಂತರು ಮತ್ತು ಸಂಪ್ರದಾಯವಾದಿ ಕ್ರಿಶ್ಚಿಯನ್ನರು. ಟ್ರಂಪ್‌ರನ್ನು ಅಧಿಕಾರಕ್ಕೆ ತಂದ ಈ ವರ್ಗ ಈಗ ತಮ್ಮ ಅಧ್ಯಕ್ಷನಿಗೆ ಬೆಂಬಲವಾಗಿ ನಿಂತಿದೆ. ಆದಾಗ್ಯೂ ತಮಗೆ ಪಾಪುಲರ್‌ ಓಟು ಸಿಗಲಿಲ್ಲ, ಬದಲಾಗಿ ತಾವು ಅಧ್ಯಕ್ಷರಾದದ್ದು ಎಲಕ್ಟೋರಲ್‌ ಕಾಲೇಜಿನ ಮೂಲಕ ಎನ್ನುವ ಅರಿವೂ ಟ್ರಂಪ್‌ಗಿದೆ. ಆದರೆ ಚುನಾವಣಾ ರಾಜಕೀಯದಲ್ಲಿ ಮೇಲ್ಕಂಡ ವರ್ಗಗಳು ಅಮೆರಿಕದ ಪ್ರಮುಖ ರಾಜ್ಯಗಳನ್ನು ಟ್ರಂಪ್‌ರತ್ತ ವಾಲಿಸಿದ್ದು ಸುಳ್ಳಲ್ಲ. 
ಹೀಗಾಗಿ ಅಮೆರಿಕದ ನೂತನ ಅಧ್ಯಕ್ಷರು ಅಸ್ತಿತ್ವಕ್ಕೆ ತಂದಿರುವ ನೀತಿಗಳು ಮತ್ತು ಅಸ್ತಿತ್ವಕ್ಕೆ ತರಲು ವಿಫ‌ಲವಾದ ನೀತಿಗಳೆಲ್ಲ ಒಂದಲ್ಲ ಒಂದು ರೀತಿ ಈ ಬೆಂಬಲಿಗರ ಮನವೊಲಿಸುವ ದಿಕ್ಕಿ ನಲ್ಲೇ ಇರುತ್ತವೆ. ಟ್ರಂಪ್‌ ವಲಸೆ ನಿಷೇಧ ನೀತಿಯನ್ನು ತಂದಿದ್ದು ತಮ್ಮ ದೇಶ “ವಲಸೆವಿರೋಧಿ ಲಾಬಿ’ಯನ್ನು ಖುಷಿಪಡಿಸಲು, ಪ್ಲ್ರಾನ್‌ಡ್‌ ಪೇರೆಂಟ್‌ಹುಡ್‌ ಮೇಲಿನ ಸರ್ಕಾರಿ ಅನುದಾನವನ್ನು ಕಡಿತಗೊಳಿಸಿದ್ದು ಗರ್ಭಪಾತ ವಿರೋಧಿ “ಕ್ರಿಶ್ಚಿಯನ್‌ ಲಾಬಿ’ಯನ್ನು ತಣಿಸಲು, ನ್ಯಾಟೋ ಮತ್ತು ಇತರೆ ವ್ಯಾಪಾರಿ ಪಾಲುದಾರರಿಗೆ ಬೆದರಿಕೆ ಒಡ್ಡಿದ್ದು, ಕೈಗಾರಿಕಾ ಕ್ಷೇತ್ರದಲ್ಲಿ ವಾಸಿಸುತ್ತಿರುವ “ಶ್ವೇತ ವರ್ಣೀಯ’ ಮತದಾರರನ್ನು ಮೆಚ್ಚಿಸಲು.
ಈ ವರ್ಗದ ಮತರಾರರ ಪ್ರಮುಖ ಗುಣವೆಂದರೆ, ಅವರು ಸರಳೀಕೃತ ವಾದಗಳನ್ನಷ್ಟೇ ಒಪ್ಪಿಕೊಳ್ಳುವವರು. “ಹವಾಮಾನ ಬದಲಾವಣೆಯಾಗುತ್ತಿದೆ ಎನ್ನುವುದನ್ನು ರುಜುವಾತು ಮಾಡಲು ಸಾಧ್ಯವಿಲ್ಲ’, “ಎಡಪಂಥೀಯ ಪ್ರಗತಿಪರರೆಲ್ಲ ಪ್ಯಾರಿಸೆY ಹೋಗಿ ಅಮೆರಿಕವನ್ನು ಮಾರಿ ಬಂದರು’, “ಪರಿಸರ ನಿಬಂಧನೆಗಳನ್ನು ಕಿತ್ತೆಸೆದರೆ ಆರ್ಥಿಕತೆ ಬೆಳೆಯುತ್ತದೆ’, “ಪ್ಯಾರಿಸ್‌ ಒಪ್ಪಂದದಿಂದ ಹಿಂದೆ ಸರಿದದ್ದರಿಂದ ಅಮೆರಿಕದ ಕಲ್ಲಿದ್ದಲು ಕ್ಷೇತ್ರದಲ್ಲಿ ಹೆಚ್ಚು ಕೆಲಸಗಳು ಹುಟ್ಟಿಕೊಳ್ಳಲಿವೆ ಮತ್ತು ಹೆಚ್ಚು ಕಲ್ಲಿದ್ದಲು ಪವರ್‌ ಪ್ಲಾಂಟ್‌ಗಳನ್ನು ಸ್ಥಾಪಿಸಬಹುದು(ಕಲ್ಲಿದ್ದಲು ಉದ್ಯಮಕ್ಕಿಂತಲೂ ಹೆಚ್ಚು ಉದ್ಯೋಗಗಳನ್ನು ಅಮೆರಿಕದ ಡಿಪಾರ್ಟ್‌ಮೆಂಟ್‌ ಸ್ಟೋರ್‌ಗಳು ಸೃಷ್ಟಿಸಿವೆ ಎನ್ನುವ ಸತ್ಯವನ್ನು ಟ್ರಂಪ್‌ ಕಡೆಗಣಿಸಿಬಿಡುತ್ತಾರೆ) ಇತ್ಯಾದಿ ಸರಳ ವಾದಗಳನ್ನೇ ಈ ವರ್ಗದ ಜನ ಒಪ್ಪಿಕೊಂಡುಬಿಡುತ್ತಾರೆ. ಅದರಲ್ಲೂ ಟ್ರಂಪ್‌ ತಮ್ಮನ್ನು ಬೆಂಬಲಿಸುವವರಿಗಾಗಿ ಈ ವಾದಗಳನ್ನು ಇನ್ನಷ್ಟು ಸರಳೀಕರಿಸುತ್ತಾರೆ: “ಈ ನಡೆ ಅಭಿವೃದ್ಧಿಗೆ ಒಳ್ಳೆಯದು’,”ಈ ನಡೆ ಅಮೆರಿಕಕ್ಕೆ ಕೆಟ್ಟದ್ದು’,”ನಮಗೆ ಪಿಟ್ಸ್‌ಬರ್ಗ್‌ ಬೇಕು, ಪ್ಯಾರಿಸ್‌ ಬೇಡ’,”ಮೇಕ್‌ ಅಮೆರಿಕ ಗ್ರೇಟ್‌ ಅಗೇನ್‌’! 
ಅರೆಬರೆ ಶಿಕ್ಷಣ ಪಡೆದ, ಧರ್ಮದಿಂದಾಗಿ ಪೂರ್ವಗ್ರಹ ಗಳನ್ನು ರೂಪಿಸಿಕೊಂಡ ಮತ್ತು ಹಿಂದಿನ ಅತಿದೊಡ್ಡ ಆರ್ಥಿಕ ಕುಸಿತದಿಂದ ಇನ್ನೂ ಚೇತರಿಸಿಕೊಳ್ಳದ ಈ ಮತದಾರರಲ್ಲಿ ಹೆಚ್ಚಿನವರು ಮಧ್ಯವಯಸ್ಸು ದಾಟಿದವರು ಮತ್ತು ಬಡತನದತ್ತ ಹೆಜ್ಜೆಹಾಕುತ್ತಿರುವವರು. ಈ ಜನರು ತಲೆಕೆಡಿಸಿಕೊಂಡಿರುವುದು ತಮ್ಮ ಬಗ್ಗೆಯಷ್ಟೇ ವಿನಃ ಭವಿಷ್ಯದ ಜನಾಂಗದ ಬಗ್ಗೆಯಲ್ಲ. ತಮ್ಮ ಜೀವನದ ಸಂಧ್ಯಾಕಾಲವನ್ನು ಹೇಗೆ ಕಳೆಯುತ್ತೇವೋ ಎನ್ನುವುದೇ ಇವರಿಗಿರುವ ಅತಿದೊಡ್ಡ ಚಿಂತೆ. 
ವಯಸ್ಸಾದ, ಶ್ವೇತವರ್ಣೀಯ, ಅರೆಬರೆ ಶಿಕ್ಷಿತ ಮತದಾರರು ತಮ್ಮ ರಾಷ್ಟ್ರದ ನೀತಿಯನ್ನು-ಚುನಾವಣೆಗಳನ್ನು ಬದಲಿಸಿದ ಉದಾಹರಣೆ ಕೇವಲ ಅಮೆರಿಕದಲ್ಲಷ್ಟೇ ಅಲ್ಲ, ಬ್ರಿಟನ್‌ನಲ್ಲೂ ಸಿಗುತ್ತದೆ. ಬ್ರೆಕ್ಸಿಟ್‌ನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಬ್ರಿಟನ್‌ ಅನ್ನು ಯುರೋಪಿಯನ್‌ ಒಕ್ಕೂಟದಿಂದ ಹೊರತರುವುದಕ್ಕೆ ಮತಹಾಕಿದವರಲ್ಲಿ ಹಿರಿಯ ನಾಗರಿಕರು(65 ವರ್ಷ) ಮತ್ತು ಅವಿದ್ಯಾವಂತರ ಸಂಖ್ಯೆಯೇ ಹೆಚ್ಚಿತ್ತು. ಈಗ ಇದೇ ವರ್ಗ ಮುಂಬರುವ ಚುನಾವಣೆಯಲ್ಲಿ ಮತ್ತೆ ಥೆರೇಸಾ ಮೇ ಅವರನ್ನೇ ಅಧಿಕಾರಕ್ಕೆ ತರುವ ಬೆದರಿಕೆಯೊಡ್ಡುತ್ತಿದೆ. 
ಇತ್ತೀಚಿನ ಚುನಾವಣಾ ಪೂರ್ವ ಸಮೀಕ್ಷೆಯೊಂದು(ಯೂಗೌ) “ಲೇಬರ್‌ ಪಕ್ಷಕ್ಕೆ 34 ವರ್ಷಕ್ಕಿಂತಲೂ ಕಡಿಮೆ ವಯೋಮಾನದ ಮತದಾರರ ಬೆಂಬಲ ಹೆಚ್ಚುತ್ತಿದೆ’ ಎಂದು ಹೇಳುತ್ತಿದೆ. ಆದರೆ ಯೂಗೌ ಅನ್ನು ಹೊರತುಪಡಿಸಿ ಉಳಿದೆಲ್ಲಾ ಸಮೀಕ್ಷೆಗಳು ಕನ್ಸರ್ವೇಟಿವ್‌ ಪಕ್ಷ(ಥೆರೇಸಾ ಮೇ) ಆಸಾನಾಗಿ ಗೆಲುವು ಸಾಧಿಸ ಲಿದೆ ಎನ್ನುತ್ತವೆ. ಚುನಾವಣೆಯ ದಿನದಂದು ಈ ವಯಸ್ಸಾದ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಮತದಾನಕ್ಕೆ ಬರಬಹುದು ಎನ್ನು ವುದು ಇದರ ಹಿಂದಿನ ಅಂದಾಜು.(ಬ್ರಿಟನ್‌ನಲ್ಲಿ ಮತದಾನದ ದಿನ ರಜೆಯಿರುವುದಿಲ್ಲ. ಹೀಗಾಗಿ ಕಚೇರಿಗೆ ತೆರಳಿದ ಯುವಕರು ಮತಪೆಟ್ಟಿಗೆಗಳತ್ತ ಬರುವುದು ಕಡಿಮೆ). ಬ್ರೆಕ್ಸಿಟ್‌ನ ವಿಚಾರಕ್ಕೆ ಹಿಂದಿರುಗುವುದಾದರೆ, ಯುರೋಪಿಯನ್‌ ಒಕ್ಕೂಟದಿಂದ ತಮ್ಮ ದೇಶವನ್ನು ಹೊರಕ್ಕೆ ತರಬೇಕೆಂದು ಮತ ಹಾಕಿದವರಲ್ಲಿ 
81 ಪ್ರತಿಶತ ಜನ 55 ವರ್ಷಕ್ಕೂ ಮೇಲ್ಪಟ್ಟವರು. ಬ್ರೆಕ್ಸಿಟ್‌ಗೆ ಬೆಂಬಲ ನೀಡಿದ “25ಕ್ಕಿಂತಲೂ ಕಡಿಮೆ ವಯೋಮಾನದ’ ಯುವಕರ ಪ್ರಮಾಣ 36 ಪ್ರತಿಶತ ಮಾತ್ರ! ಇಂದು ತಮ್ಮ ದೇಶದ ದಿಕ್ಕನ್ನು ನಿರ್ಧರಿಸುತ್ತಿರುವುದು “ವಯೋಮಾನ’ವೇ ಹೊರತು “ವರ್ಗ’ವಲ್ಲ ಎನ್ನುತ್ತದೆ ಯೂಗೌ ಸಂಸ್ಥೆ! 
ಬ್ರಿಟನ್‌ನಲ್ಲೂ ಕೂಡ ಅಮೆರಿಕದಲ್ಲಿರುವಂಥ ಪರಿಸ್ಥಿತಿಯೇ ಇದೆ. ಸಂಕಷ್ಟಕ್ಕೆಲ್ಲ ಶನೇಶ್ವರನೇ ಕಾರಣ ಎನ್ನುವಂತೆ ಅಲ್ಲಿನ ವಯಸ್ಸಾದ, ಅಲ್ಪ ಶಿಕ್ಷಿತ, ನಿರುದ್ಯೋಗಿ ಮತದಾರರೆಲ್ಲ ತಮ್ಮ ಕಷ್ಟಗಳಿಗೆ ಐರೋಪ್ಯ ಒಕ್ಕೂಟದ ನಿಯಮಗಳನ್ನು, ವಲಸೆ ನೀತಿಯನ್ನು ಮತ್ತು ವಿದೇಶಿಯರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುತ್ತಾರೆ. “ಬ್ರಿಟನ್‌ ಐರೋಪ್ಯ ಒಕ್ಕೂಟದಲ್ಲಿದ್ದರೆ ನಿಮ್ಮ 
ದೇಶದ ಆರ್ಥಿಕತೆ ಬೆಳೆಯುತ್ತದೆ, ಪೌಂಡ್‌ ಬಲಿಷ್ಠವಾಗಿರುತ್ತದೆ ಮತ್ತು ನಿಮಗೆ ಬ್ರಿಟನಲ್ಲಿ ಕೆಲಸ ಸಿಗದಿದ್ದರೆ ಯುರೋಪ್‌ನಾದ್ಯಂತ ನೀವು ಎಲ್ಲಿ ಬೇಕಾದರೂ ಕೆಲಸ ಮಾಡಬಹುದು’ ಎಂದು ಈ ವರ್ಗದ ಮತದಾರರಿಗೆ, ಅದರಲ್ಲೂ ಕೈಗಾರಿಕಾ ಪ್ರದೇಶಗಳಲ್ಲಿರುವ ಮಧ್ಯವಯಸ್ಕರಿಗೆ ತಿಳಿಹೇಳುವುದು ಅಷ್ಟು ಸುಲಭದ ಕೆಲಸವಂತೂ ಅಲ್ಲ!
ಅಮೆರಿಕದ ವಿಷಯಕ್ಕೆ ಬರುವುದಾದರೆ ಟ್ರಂಪ್‌ರ 
ಶ್ವೇತವರ್ಣೀಯ ಪುರುಷ ಸಲಹೆಗಾರರಾದ ಸ್ಟೀಫ‌ನ್‌ ಬೆನಾನ್‌ ಮತ್ತು ರೀನ್ಸ್‌ ಪ್ರೀಬಸ್‌ ಈ “ವಯೋ ವಿಭಜನೆ’ಗೆ ಸ್ಪಷ್ಟ ಉದಾಹರಣೆ. ಸ್ಟೀಫ‌ನ್‌ ಮತ್ತು ರೀನ್ಸ್‌ ಪ್ಯಾರಿಸ್‌ ಒಪ್ಪಂದದಿಂದ ಅಮೆರಿಕ ಹೊರಬಂದದ್ದನ್ನು ಸಮರ್ಥಿಸಿಕೊಳ್ಳುತ್ತಾರೆ ಆದರೆ ಇದೇ ವೇಳೆ ಟ್ರಂಪ್‌ರ ಮಗಳು ಇವಾಂಕಾ ಮಾತ್ರ ಪ್ಯಾರಿಸ್‌ ಒಪ್ಪಂದದ ಪರವಾಗಿ ವಾದಿಸುತ್ತಿದ್ದಾಳೆ. ಏಕೆಂದರೆ ಇವಾಂಕಾಗೆ ಪುಟ್ಟ ಮಕ್ಕಳಿದ್ದಾರೆ. ಹೀಗಾಗಿ ಆಕೆ ಅವರ ಭವಿಷ್ಯದ ಬಗ್ಗೆ ಯೋಚಿಸುತ್ತಾಳೆ. 
ಇನ್ನೊಂದು ವಿಷಯವನ್ನು ನಾವು ಗಮನಿಸಬೇಕು. ಟ್ರಂಪ್‌ ಒಬ್ಬ ಬಿಲ್ಡರ್‌. ಬಿಲ್ಡರ್‌ಗಳಿಗೆ ಪರಿಸರ ನಿಯಮಗಳನ್ನು ಕಂಡರೆ ಆಗುವುದಿಲ್ಲ. ಏಕೆಂದರೆ ಆ ನಿಯಮಗಳು ನಿರ್ಮಾಣ ಕಾರ್ಯ ಗಳಿಗೆ ತೊಂದರೆ ಒಡ್ಡುತ್ತವೆ. ಎಲ್ಲಾ ಬಿಲ್ಡರ್‌ಗಳಂತೆಯೇ ಟ್ರಂಪ್‌ಗ್ೂ ಪರಿಸರ ರಕ್ಷಣೆಗಾಗಿ ರೂಪುಗೊಂಡ ನಿಯಮಗಳ ಮೇಲೆ ಮುನಿಸಿರುವುದಕ್ಕೆ ಇದೂ ಕಾರಣವಿರಬಹುದು. ಜನಾಭಿಪ್ರಾಯದಲ್ಲಿ ಟ್ರಂಪ್‌ರ ರೇಟಿಂಗ್‌ ಕುಸಿಯುತ್ತಿದೆ. ತಮ್ಮ ರೇಟಿಂಗ್‌ ಅನ್ನು 40 ಪ್ರತಿಶತಕ್ಕಿಂತಲೂ ಹೆಚ್ಚಿಗೆ ಇರಿಸಿಕೊಳ್ಳಲು ಅಮೆರಿಕ ಅಧ್ಯಕ್ಷ ಪ್ರಯತ್ನಿಸುತ್ತಿದ್ದಾರೆ. ಒಟ್ಟಲ್ಲಿ ತಮ್ಮನ್ನು ಬೆಂಬಲಿಸುವ ವರ್ಗಗಳನ್ನು ಮೆಚ್ಚಿಸುವುದಕ್ಕಾಗಿ ಟ್ರಂಪ್‌ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ ಬಿಡಿ. 
ಕೊನೆಯದಾಗಿ ಒಂದು ವಿಷಯವನ್ನು ಗಮನಿಸಿ ನೋಡಿ. ಟ್ರಂಪ್‌ ಅವರು ಮಹಿಳೆಯರ ಬಗ್ಗೆ, ಸೆಕ್ಸ್‌ನ ಬಗ್ಗೆ ಮಾತನಾಡು ವುದನ್ನು ನೋಡಿರುತ್ತೀರಿ. ಆದರೆ ಒಂದೇ ಒಂದು ಬಾರಿಯಾದರೂ ಅವರು ತಮ್ಮ ಮೊಮ್ಮಕ್ಕಳ ಜೊತೆ ಆಟವಾಡುವ ಚಿತ್ರಗಳನ್ನು ನೋಡಿದ್ದೀರಾ? ಬೇಕಿದ್ದರೆ ಗೂಗಲ್‌ ಮಾಡಿ ನೋಡಿ, ಎಷ್ಟು ಕಡಿಮೆ ಚಿತ್ರಗಳು ಕಾಣಿಸಿಕೊಳ್ಳುತ್ತವೆಂದು.
(ಲೇಖಕರು ಹಿರಿಯ ಪತ್ರಕರ್ತರು)

n ಐಪಿ ಬಾಜಪೇಯಿ

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.