ಕೃಷಿಗೆ ಬೇಕು ಹೆಚ್ಚಿನ ಬೆಂಬಲ


Team Udayavani, Feb 6, 2018, 12:15 PM IST

agriculture.jpg

ಆಹಾರ ಸಂಸ್ಕರಣಾ ವಲಯದಲ್ಲಿನ ಆಹಾರ ಸುರಕ್ಷತಾ ಪದ್ಧತಿಯತ್ತಲೂ ಗಮನಹರಿಸಬೇಕು. ಕಳಪೆ ಆಹಾರ ಸುರಕ್ಷತಾ ಪದ್ಧತಿಯು ಆಹಾರ ಸಂಸ್ಕರಣಾ ವಲಯದ ಬೆಳವಣಿಗೆಗೆ ಅಡ್ಡಿಯೊಡ್ಡುತ್ತಿದೆ. ಹೀಗಾಗಿ ವ್ಯಾಲ್ಯೂ ಚೈನ್‌ಗಳು ಸರಿಯಾದ ಆಹಾರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಗ್ರಾಹಕರಿಗೆ ಸುರಕ್ಷಿತ ಆಹಾರ ಸಿಗುವುದನ್ನು ಖಾತ್ರಿಪಡಿಸಬೇಕು. ಇನ್ನು ಬಜೆಟ್‌ನಲ್ಲಿ ಮೀನುಗಾರಿಕೆಗೆ ಬೃಹತ್‌ ಅನುದಾನ ಮೀಸಲಿಟ್ಟಿರುವುದು ಸ್ವಾಗತಾರ್ಹ ಕ್ರಮ. ಇಲ್ಲೂ ಕೂಡ ಗಮನಹರಿಸಬೇಕಿರುವುದು ವ್ಯಾಲ್ಯೂಚೈನ್‌ಗಳ ಅಭಿವೃದ್ಧಿ ಮತ್ತು ಆಹಾರ ಸುರಕ್ಷತಾ ಪದ್ಧತಿಯತ್ತ.

ಈ ಬಾರಿಯ ಕೇಂದ್ರ ಬಜೆಟ್‌ ಮಾರುಕಟ್ಟೆ ಸ್ಥಿತಿಗಳನ್ನು ಸುಧಾರಿಸಲು ಮತ್ತು ತುಸು ಮಟ್ಟಿಗೆ ಬೆಲೆ ಅಪಾಯವನ್ನು ಪರಿಹರಿಸುವ ನಿಟ್ಟಿನಲ್ಲಿ ಗಮನ ಹರಿಸಿದೆ ಎನ್ನಬಹುದು. ರೈತರು ಬೆಳೆದ ಎಲ್ಲಾ ಬೆಳೆಗಳ ಉತ್ಪಾದನೆ ವೆಚ್ಚದ ಮೇಲೆ 1.5 ಪಟ್ಟು ಹೆಚ್ಚು ಬೆಂಬಲ ಬೆಲೆಯನ್ನು ನಿಗದಿಪಡಿಸಲು ಯೋಚಿಸಿರುವುದು ಒಳ್ಳೆಯ ನಡೆ. ಆದರೆ ಅನುಷ್ಠಾನದ ವಿಚಾರಕ್ಕೆ ಬಂದರೆ, ಅಲ್ಲಿ ಅನೇಕ ಸವಾಲುಗಳಿರುವುದರಿಂದ ಪರಿಣಾಮಕಾರಿ ಫ‌ಲಿತಾಂಶ ಪಡೆಯುವುದಕ್ಕೆ ನವೀನ ವಿಧಾನಗಳ ಅಗತ್ಯವಿರುತ್ತದೆ. 

ದೇಶದಲ್ಲಿನ ವಿಶಾಲವಾದ ಭೌಗೋಳಿಕ ಪ್ರದೇಶ, ವಿಭಿನ್ನ ತಳಿಗಳು ಮತ್ತು ವಿಭಿನ್ನ ಉತ್ಪಾದನಾ ಸ್ಥಿತಿಗಳನ್ನೆಲ್ಲ ಪರಿಗಣಿಸಿದಾಗ ಒಟ್ಟಾರೆ ಉತ್ಪಾದನಾ ವೆಚ್ಚವನ್ನು ಲೆಕ್ಕಹಾಕುವುದು ಅಷ್ಟು ಸುಲಭ ಸಾಧ್ಯವೇನೂ ಇಲ್ಲ. ಅಷ್ಟೇ ಅಲ್ಲ, ಉತ್ಪಾದನೆಯ ಸರಿಯಾದ ವೆಚ್ಚವನ್ನು ಲೆಕ್ಕಹಾಕುವ ವಿಷಯದಲ್ಲೂ ಕೆಲವು ಸಮಸ್ಯೆಗಳಿವೆ. ಇಂಥಲ್ಲೆಲ್ಲ ಸರಿಯಾದ ಗುಣಮಟ್ಟದ ನಿರ್ಧಾರಣೆ ಕೂಡ ಮುಖ್ಯವಾಗಿರುತ್ತದೆ. ಈ ಯೋಜನೆಯಿಂದ ಕೇವಲ ರೈತರು ಮಾತ್ರವೇ ಲಾಭಪಡೆಯುವುದನ್ನು ಖಾತ್ರಿಪಡಿಸಲು ವಿಸ್ತಾರವಾದ ವ್ಯವಸ್ಥೆಗಳನ್ನು ಸ್ಥಾಪಿಸುವುದು ಅಗತ್ಯ. ರೈತರು ನಿಜಕ್ಕೂ ಈ ಯೋಜನೆಯಿಂದ ಪ್ರಯೋಜನ ಪಡೆಯುವಂತಾಗಬೇಕೆಂದರೆ ಹಣ ಪಾವತಿ ಪ್ರಕ್ರಿಯೆಯೂ ಸದೃಢವಾಗಿರಬೇಕು. 

470 ಎಪಿಎಂಸಿಗಳನ್ನು ಸಂಪರ್ಕಿಸಿರುವ ಅಗತ್ಯ ಬಹಳ ಇತ್ತು. ಆದರೆ ಕೇವಲ ಮಾರುಕಟ್ಟೆಗಳ ನಡುವೆ ಸಂಪರ್ಕ ಕಲ್ಪಿಸಿದಾಕ್ಷಣ, ಉದ್ದೇಶ ಈಡೇರಿದಂತಾಗುವುದಿಲ್ಲ. ಖರೀದಿದಾರರು ಮತ್ತು ಮಾರಾಟಗಾರರು ಪರಸ್ಪರ ದೂರದಲ್ಲಿದ್ದೂ ವ್ಯವಹಾರ ನಡೆಸುವುದನ್ನು ಖಚಿತಡಿಸಲು, ಶ್ರೇಣಿ-ಮಾನದಂಡ ಮತ್ತು ವೇಗದ ಮೌಲ್ಯಮಾಪನ ವ್ಯವಸ್ಥೆಗಳ ಅಗತ್ಯವಿರುತ್ತದೆ. ಆದರೆ ಸ್ವೀಕಾರಾರ್ಹ ಮಾನದಂಡಗಳನ್ನು ಮುಟ್ಟುವ ಮತ್ತು ಅಗತ್ಯತೆಗೆ ತಕ್ಕಂಥ ಗುಣಮಟ್ಟದ ಮೌಲ್ಯಮಾಪನ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಕೆಲಸ ಸಂಕೀರ್ಣವಾಗಿರುವುದರಿಂದ ಅತ್ತಕಡೆ ಬಹಳ ಗಮನವನ್ನು ನೀಡಬೇಕಾಗುತ್ತದೆ. 

ನಮ್ಮಲ್ಲಿರುವ ವೈವಿಧ್ಯತೆಯನ್ನು ಪರಿಗಣಿಸಿದಾಗ ವ್ಯಾಪಾರವು ಸರಿಯಾದ ಮಾನದಂಡಗಳೊಡನೆ ಹೆಜ್ಜೆಹಾಕಬೇಕೆಂದರೆ ಕ್ರಮಬದ್ಧ ಪ್ರಕ್ರಿಯೆಗಳನ್ನು ಅನುಸರಿಸಬೇಕು. ತ್ವರಿತ, ವಿಶ್ವಾಸಾರ್ಹ ಮತ್ತು ಕಡಿಮೆ ವೆಚ್ಚದಲ್ಲಿ ಗುಣಮಟ್ಟ ಮೌಲ್ಯಮಾಪನ ವ್ಯವಸ್ಥೆಯನ್ನು ಸಾಧಿಸುವ ಕೆಲಸ ಸವಾಲುಭರಿತವಾಗಿದ್ದು, ಈಗಲೇ ಆ ಹಾದಿಯಲ್ಲಿ ಪ್ರಯತ್ನಗಳನ್ನು ಆರಂಭಿಸಬೇಕು.

ಇದಷ್ಟೇ ಅಲ್ಲ, ಸಾಧಾರಣವಾಗಿ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹತೆಯ ಕೊರತೆಯಿದ್ದು, ಇಂಥ ಪ್ರಾಮಾಣಿಕ ವ್ಯವಸ್ಥೆಯನ್ನು ನಿರ್ಮಿಸಿದರೆ ಮಾತ್ರ ಅದು ಏಕೀಕೃತ ಕೃಷಿ ಮಾರುಕಟ್ಟೆಯ ಯಶಸ್ಸಿನ ತಳಹದಿಯಾಗುತ್ತದೆ.  

ಗೋದಾಮುಗಳ ವಿಷಯಕ್ಕೆ ಬರುವುದಾದರೆ, ಅವು ಈಗಲೂ ರಸೀದಿ ವ್ಯವಸ್ಥೆಯನ್ನು ಬಳಸುತ್ತಿವೆ, ಅವು ಸಕ್ರಿಯವಾಗಬೇಕಾದರೆ ಮತ್ತು ನೇರವಾಗಿ ಇ-ಟ್ರೇಡಿಂಗ್‌ ವೇದಿಕೆಯಲ್ಲಿ ಪಾಲ್ಗೊಳ್ಳು ವಂತಾಗಬೇಕಾದರೆ ಎಪಿಎಂಸಿ ನಿಯಂತ್ರಣದಿಂದ ಇ-ನ್ಯಾಮ್‌ಗೆ ವಿನಾಯಿತಿ ನೀಡುವುದು ಒಳ್ಳೆಯದು. ಇದರಿಂದಾಗಿ ಗ್ರೇಡ್‌ ಆಧಾರಿತ ವ್ಯವಹಾರದತ್ತ ಸಾಗಲು ಸಹಾಯವಾಗುತ್ತದೆ ಮತ್ತು ಪರಸ್ಪರ ದೂರದಲ್ಲಿರುವ ಖರೀದಿದಾರರು-ಮಾರಾಟಗಾರರ ನಡುವೆ ವ್ಯವಹಾರ ನಡೆಯಲು ಸಾಧ್ಯವಾಗುತ್ತದೆ. ಆದಾಗ್ಯೂ, ಇದಕ್ಕೆ ಸರಿಯಾದ ಲಾಜಿಸ್ಟಿಕ್‌ ವ್ಯವಸ್ಥೆಯ ಬೆಂಬಲವೂ ಅಗತ್ಯ. ಆಗ ದೂರದಲ್ಲಿರುವ ಖರೀದಿದಾರರಿಗೆ ಗುಣಮಟ್ಟದಲ್ಲಿ ಅಥವಾ ಪ್ರಮಾಣದಲ್ಲಿ ನಷ್ಟವಾಗದ ಉತ್ಪನ್ನವು ಕೈಗೆಟಕುತ್ತದೆ.   

ಬಜೆಟ್‌ನಲ್ಲಿ ಘೋಷಣೆಯಾದ ಮತ್ತೂಂದು ಪ್ರಮುಖ ಸಂಗತಿಯೆಂದರೆ ಆಹಾರ ಸಂಸ್ಕರಣಾ ಸಚಿವಾಲಯಕ್ಕೆ ಮೀಸಲಿರಿಸಿದ ಅನುದಾನವನ್ನು ದುಪ್ಪಟ್ಟು ಮಾಡಲಾಗಿರುವುದು. ಉತ್ಪನ್ನದ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಆಗುವ ಬೃಹತ್‌ ನಷ್ಟವನ್ನು ತಡೆಯುವುದಕ್ಕೆ ಈ ಹೆಜ್ಜೆ ಇರಿಸಲಾಗಿದೆ. ಆದಾಗ್ಯೂ, ಹಲವು ಬೃಹತ್‌ ಮೌಲ್ಯ ಸರಪರಳಿಗಳನ್ನು(ವ್ಯಾಲ್ಯೂ ಚೈನ್‌ಗಳು) ಸರಳಗೊಳಿಸುವತ್ತ ಮತ್ತು ಮೂಲಸೌಕರ್ಯಗಳನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು. ಈ ಸರಪಳಿಗಳ ನಡುವಿನ ಉತ್ಪಾದನಾ ಹರಿವು ಪರಿಣಾಮಕಾರಿಯಾಗಿ, ಸುಲಲಿತವಾಗಿ ಇರುವುದನ್ನು ಖಾತ್ರಿಪಡಿಸುವುದಕ್ಕೆ ಇದು ಅವಶ್ಯಕ. ಇನ್ನು ಈ ಬಜೆಟ್‌ ಆಹಾರ ಸಂಸ್ಕರಣಾ ವಲಯದಲ್ಲಿನ ಆಹಾರ ಸುರಕ್ಷತಾ ಪದ್ಧತಿಯತ್ತಲೂ ಗಮನಹರಿಸಬೇಕು. ಕಳಪೆ ಆಹಾರ ಸುರಕ್ಷತಾ ಪದ್ಧತಿಯು ಆಹಾರ ಸಂಸ್ಕರಣಾ ವಲಯದ ಬೆಳವಣಿಗೆಗೆ ಅಡ್ಡಿಯೊಡ್ಡುತ್ತಿದೆ. ಹೀಗಾಗಿ ವ್ಯಾಲ್ಯೂ ಚೈನ್‌ಗಳು ಸರಿಯಾದ ಆಹಾರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಗ್ರಾಹಕರಿಗೆ ಸುರಕ್ಷಿತ ಆಹಾರ ಸಿಗುವುದನ್ನು ಖಾತ್ರಿಪಡಿಸಬೇಕು. 

ಇನ್ನು ಬಜೆಟ್‌ನಲ್ಲಿ ಮೀನುಗಾರಿಕೆಗೆ ಬೃಹತ್‌ ಅನುದಾನ ಮೀಸಲಿಟ್ಟಿರುವುದು ಸ್ವಾಗತಾರ್ಹ ಕ್ರಮ. ಇಲ್ಲೂ ಕೂಡ ಗಮನ ಹರಿಸಬೇಕಿರುವುದು ವ್ಯಾಲ್ಯೂಚೈನ್‌ಗಳ ಅಭಿವೃದ್ಧಿ ಮತ್ತು ಆಹಾರ ಸುರಕ್ಷತಾ ಪದ್ಧತಿಯತ್ತ. ಪೂರೈಕೆಯನ್ನು ಸರಳಗೊಳಿಸಲು ಮತ್ತು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಟಿಸಲು ಇದು ಅಗತ್ಯ. ದೇಶದಲ್ಲಿನ ಬೃಹತ್‌ ಕರಾವಳಿ ಸಾಲುಗಳು ಮತ್ತು ಒಳನಾಡಿನ ಮೀನುಗಾರಿಕೆಯ ಪ್ರಮಾಣವನ್ನು ಪರಿಗಣಿ ಸಿದರೆ ಮೀನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಸಾಧ್ಯತೆ-ಸಾಮರ್ಥಯ ದಂಡಿಯಾಗಿದೆ. ಸರಿಯಾದ ಮೂಲ ಸೌಕರ್ಯ ಮತ್ತು ಮಾರು ಕಟ್ಟೆ ಸೃಷ್ಟಿಯಿಂದ ಈ ಸಾಮರ್ಥಯದ ಸದ್ಬಳಕೆ ಸಾಧ್ಯವಿದೆ. ಮೀನು ಗಾರಿಕೆ ವಲಯದ ಲಾಭವು, ಸಮಾಜದ ದುರ್ಬಲ ವರ್ಗದತ್ತ ಹೆಚ್ಚಾಗಿ ಹರಿದು ಅವರಿಗೆ ಅನುಕೂಲ ಮಾಡಿಕೊಡಲಿದೆ.  

ರಾಷ್ಟ್ರೀಯ ಬಿದಿರು ಮಿಷನ್‌ಗೆ ಬೆಂಬಲ ನೀಡುವುದರಿಂದ, ಬಿದಿರಿನ ಉಪಯೋಗ ಉತ್ಪನ್ನಗಳನ್ನು ಸೃಷ್ಟಿಸಲು ಸಾಧ್ಯವಾ
ಗುತ್ತದೆ. ಈ ಬಿದಿರು ಉತ್ಪನ್ನಗಳು ಪ್ಲಾಸ್ಟಿಕ್‌ ಮತ್ತು ಕಟ್ಟಿಗೆಗೆ ಪರ್ಯಾಯವಾಗಬಲ್ಲವಾದ್ದರಿಂದ ಒಟ್ಟಾರೆಯಾಗಿ ಸಮಾಜದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ಇದಷ್ಟೇ ಅಲ್ಲದೆ ಬುಡಕಟ್ಟು ಪ್ರದೇಶಗಳ ಜನರ ಜೀವನೋಪಾಯಕ್ಕೆ ಸಹಾಯ ಮಾಡುತ್ತದೆ.  

ಆದಾಗ್ಯೂ ಬಜೆಟ್‌ನಲ್ಲಿನ ಉಪಕ್ರಮಗಳು ಮತ್ತು ಅಧಿಕ ಅನುದಾನಗಳು ಮೇಲ್ನೋಟಕ್ಕೆ ಸ್ವಾಗತಾರ್ಹವೆನಿಸಿದರೂ, ಕೃಷಿ ಕ್ಷೇತ್ರ ಎದುರಿಸುತ್ತಿರುವ ವ್ಯಾಪಕ ಸಮಸ್ಯೆಯನ್ನು ಪರಿಗಣಿಸಿದಾಗ ಇಷ್ಟು ಹಂಚಿಕೆ ಸಾಕಾಗುತ್ತದಾ ಎನ್ನುವ ಪ್ರಶ್ನೆಗಳೂ ಉದ್ಭವವಾಗುತ್ತವೆ. 

ಶಿಕ್ಷಣಕ್ಕೆ ಬೇಕು ಇನ್ನಷ್ಟು ಶ್ರೀರಕ್ಷೆ
ನಾಲ್ಕು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಘೋಷಣೆ, 1000 ಪ್ರತಿಭಾವಂತ ಬಿ.ಟೆತ್‌ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ರಿಸರ್ಚ್‌ ಫೆಲೋಷಿಪ್‌ ಮೂಲಕ ಐಐಟಿ ಮತ್ತು ಐಐಎಸ್‌ಸಿಗಳಲ್ಲಿ ಪಿ.ಎಚ್‌ಡಿ ಮಾಡುವ ಅವಕಾಶ, ಐಐಟಿ ಮತ್ತು ಎನ್‌ಐಟಿಗಳಲ್ಲಿ ಸ್ಕೂಲ್‌ ಆಫ್ ಪ್ಲಾನಿಂಗ್‌ ಮತ್ತು ಆರ್ಕಿಟೆಕ್ಟರ್‌ ವಿಭಾಗಗಳ(ಸ್ವಾಯತ್ತ ಸಂಸ್ಥೆಗಳಾಗಿ) ಸ್ಥಾಪನೆ ಹಾಗೂ ಪ್ರಮುಖ ವಿದ್ಯಾ ಸಂಸ್ಥೆಗಳಲ್ಲಿ ಸಂಶೋಧನೆ- ಮೂಲಸೌಕರ್ಯಾಭಿವೃದ್ಧಿಗಾಗಿ ಹೊಸ ಯೋಜನೆ ಘೋಷಿಸುರುವುದು ಸ್ವಾಗತಾರ್ಹ ಕ್ರಮಗಳು. ಇವೆಲ್ಲದರ ಅಗತ್ಯವಿತ್ತು. ಆದಾಗ್ಯೂ, ಬಲಿಷ್ಠ ಮತ್ತು ವೈಬ್ರಂಟ್‌ ಭಾರತವನ್ನು ನಿರ್ಮಿಸಬೇಕೆಂದರೆ ಪ್ರಾಥಮಿಕ ಹಂತದಿಂದ- ಉನ್ನತ ಹಂತದವರೆಗಿನ ಶಿಕ್ಷಣದ ಗುಣಮಟ್ಟವು ಮುಖ್ಯವಾಗಿರು ವುದರಿಂದ, ಈ ಎಲ್ಲಾ ಅನುದಾನಗಳೂ ನಿರೀಕ್ಷೆಯನ್ನು ತಲುಪಲು ವಿಫ‌ಲವಾಗಿವೆ. ಯಾವುದೇ ಸಂಸ್ಥೆಯ ಅಭಿವೃದ್ಧಿಯು ಆ ದೇಶದ ಮಾನವ ಸಂಪನ್ಮೂಲಾಭಿವೃದ್ಧಿಯ ಮೇಲೆ ಅವಲಂಬಿತವಾಗಿದೆ ಎನ್ನುವುದು ಈಗ ಸಾಬೀತಾಗಿದೆ. ಮಾನವ ಸಂಪನ್ಮೂಲದ ಸರಿಯಾದ ಬೆಳವಣಿಗೆಗೆ, ಪ್ರಿ-ನರ್ಸರಿ ಹಂತದಿಂದಲೇ ಶಿಕ್ಷಣವನ್ನು ಗಟ್ಟಿಗೊಳಿಸಬೇಕಾದ ಜರೂರತ್ತಿರುತ್ತದೆ. ನಾವು ಅಜಮಾಸು ಎಲ್ಲಾ ಶೈಕ್ಷಣಿಕ ಅನುಭವದ ಹಂತಗಳಲ್ಲೂ ಹಿಂದುಳಿದಿದ್ದೇ ವಾದ್ದರಿಂದ, ಈ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಹೆಜ್ಜೆ ಹಾಕಲು ಮುಂದಿನ ತಲೆಮಾರನ್ನು ಸಜ್ಜುಗೊಳಿಸಬೇಕೆಂದರೆ ಅತ್ಯುನ್ನತ “ಸಮಗ್ರ ವಿಧಾನ’ವೊಂದರ ಅಗತ್ಯವಿದೆ. ಈ ಅರ್ಥದಲ್ಲಿ ಬಜೆಟ್‌ ಹಂಚಿಕೆಯು ಭಾಗಶಃ ಕ್ರಮವಾಗಿ ಕಾಣಿಸುತ್ತಿದೆಯಷೆc. ಇದರಲ್ಲಿ ಸಮಗ್ರ ಬದಲಾವಣೆಯ ಅಗತ್ಯವಿದೆ.

– ಪ್ರೊ. ಗೋಪಾಲ್‌ ನಾಯಕ್‌ ಐಐಎಂಬಿ 

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.