ರಕ್ಷಣೆ, ವಿದೇಶ ನೀತಿಯ ಕುರಿತು ವಸ್ತುನಿಷ್ಠ ಚರ್ಚೆ ನಡೆಯಲಿ


Team Udayavani, Jun 22, 2018, 12:10 PM IST

china.jpg

2019ರ ಲೋಕಸಭಾ ಚುನಾವಣೆ ಇನ್ನೂ ಒಂದು ವರ್ಷ ಇದೆಯಾದರೂ ವಿರೋಧಿ ದಳಗಳು ದಿಲ್ಲಿ ಗದ್ದುಗೆ ಗೆದ್ದುಕೊಳ್ಳಲು ಈಗಾಗಲೇ ಒಗ್ಗಟ್ಟಿನ ಪ್ರದರ್ಶನ ಮಾಡಲು ಪ್ರಾರಂಭ ಮಾಡಿವೆ. ಕರ್ನಾಟಕದಲ್ಲಿ ಕುಮಾರ ಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರಕಾರದ ಪದಗ್ರಹಣದ ವೇದಿಕೆ ವಿಪಕ್ಷ ಏಕತೆಯ ಅಪರೂಪದ ದೃಶ್ಯಾವಳಿಗೆ ಸಾಕ್ಷಿಯಾಯಿತು. ಕಾಳಧನ ವಾಪಾಸು ತರುವಲ್ಲಿ ವಿಫ‌ಲತೆ, ಜಿಎಸ್‌ಟಿ ಜಾರಿಯಲ್ಲಿನ ಪ್ರಾರಂಭಿಕ ಸಮಸ್ಯೆಗಳು, ಬ್ಯಾಂಕ್‌ ವಂಚನೆ ಮತ್ತು ಋಣ ಭಾರ ಸಮಸ್ಯೆ , ರೈತರ ಅಸಮಾಧಾನ, ಉದ್ಯೋಗ ಸೃಷ್ಟಿಸುವಲ್ಲಿ ನಿರೀಕ್ಷಿತ ಸಾಧನೆಯಾಗಿಲ್ಲವೆನ್ನುವಂತಹ ಅಸ್ತ್ರಗಳನ್ನು ಇನ್ನಷ್ಟು ಹರಿತಗೊಳಿಸಿ ಒಟ್ಟಾಗಿ ಚುನಾವಣಾ ಕಣಕ್ಕಿಳಿದರೆ ಜಯ ತಮಗೆ ಕಟ್ಟಿಟ್ಟ ಬುತ್ತಿ ಎನ್ನುವುದು ಒಡೆದ ಮನೆಯಂತಿರುವ ವಿರೋಧಿ ದಳಗಳ ಆಲೋಚನೆಯಾಗಿದೆ. 

ಇದರೊಂದಿಗೆ ಹಳ್ಳಕ್ಕೆ ಬಿದ್ದವನ ಮೇಲೆ ಆಳಿಗೊಂದು ಕಲ್ಲು ಎನ್ನುವ ಮಾತಿನಂತೆ ಮೋದಿಯವರ ಜನಪ್ರಿಯತೆ ಕುಗ್ಗುತ್ತಿದೆ ಎಂದು ಶಿವಸೇನೆ, ಜೆಡಿಯು ಮೊದಲಾದ ಚಿಕ್ಕ ಪಕ್ಷಗಳು ಆಗಾಗ ನಡೆಸುವ ಭಿನ್ನ ರಾಗ ಆಲಾಪನೆ ಮಾಧ್ಯಮಗಳಿಗೆ ಮಸಾಲೆ ಒದಗಿಸಿದೆ. ವಿಪಕ್ಷಗಳು ಎತ್ತಿಕೊಂಡಿರುವ ವಿಷಯವನ್ನು ಜನ ಪುರಸ್ಕರಿಸುತ್ತಾರೋ ಇಲ್ಲವೋ ಎನ್ನುವುದರ ಕುರಿತು ಹೇಳುವುದು ಕಷ್ಟ, ಆದರೆ ಲೋಕಸಭಾ ಚುನಾವಣೆಯ ಚರ್ಚೆಯಲ್ಲಿ ಪ್ರಮುಖವಾಗಬಹುದಾದ ಇನ್ನೂ ಅನೇಕ ನಿರ್ಣಾಯಕ ಅಂಶಗಳನ್ನು ಕಡೆಗಣಿಸುವಂತಿಲ್ಲ.

ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ನಡೆಸುತ್ತಿರುವ ಚರ್ಚೆಯಲ್ಲಿ ರಕ್ಷಣೆ, ಅಂತಾರಾಷ್ಟ್ರೀಯ ವ್ಯವಹಾರ ಮತ್ತು ವಿದೇಶ ನೀತಿಯ ಪ್ರಸ್ತಾಪ ಇಲ್ಲದಿರುವುದು ಬಹಳ ಸೋಜಿಗದ ಸಂಗತಿ. ನಿಜ, ನಮ್ಮ ಚುನಾವಣೆಗಳಲ್ಲಿ ವಿದೇಶ ನೀತಿಯ ಕುರಿತು ಗಂಭೀರ ಚರ್ಚೆ ನಡೆಯುವುದಿಲ್ಲ. 1971ರ ಬಾಂಗ್ಲಾ ಯುದ್ಧ, ಕಾರ್ಗಿಲ್‌ ಯುದ್ಧೋತ್ತರದಲ್ಲಿ ನಡೆದ ಚುನಾವಣೆಗಳಲ್ಲಿ ಮಾತ್ರ ರಕ್ಷಣೆಯ ವಿಷಯ ಮುನ್ನೆಲೆಗೆ ಬಂದಿತ್ತು. ಆರ್ಥಿಕ ಶಕ್ತಿಯಾಗಿಯೂ, ಸೈನ್ಯ ಶಕ್ತಿಯಾಗಿಯೂ ಹೊರ ಹೊಮ್ಮುತ್ತಿರುವ ಹಾಗೂ ಜಾಗತಿಕ ವ್ಯವಹಾರಗಳಲ್ಲಿ ಹೆಚ್ಚಿನ ಸ್ಥಾನಮಾನ ಅಪೇಕ್ಷಿಸುವ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಆಂತರಿಕ ವಿಷಯದ ಜತೆಯಲ್ಲಿ ಅಂತಾರಾಷ್ಟ್ರೀಯ ಸಂಬಂಧದ ಕುರಿತಾದ ವಿಷಯಗಳು ಚರ್ಚೆ ಯಾಗಬೇಕಿರುವುದು ಖಂಡಿತಾ ಅಪೇಕ್ಷಣೀಯ. ತಾನು ದೆಹಲಿಯ ರಾಜಕಾರಣಕ್ಕೆ ಹೊಸಬ ಎಂದು ಅಧಿಕಾರದ ಪ್ರಾರಂಭದಲ್ಲಿ ಹೇಳಿದ ನರೇಂದ್ರ ಮೋದಿಯವರು ಪಳಗಿದ ಮುತ್ಸದ್ದಿಯಂತೆ ಭಾರತದ ಅಂತಾರಾಷ್ಟ್ರೀಯ ವರ್ಚಸ್ಸನ್ನು ಹೆಚ್ಚಿಸಲು ಅವಿರತವಾಗಿ ಪ್ರಯತ್ನಿಸಿದರು ಎನ್ನುವುದನ್ನು ಅವರ ವಿರೋಧಿಗಳೂ ಒಪ್ಪಿಕೊಳ್ಳಬೇಕಾಗಿದೆ.

ಪ್ರಭಾವಿ ಸಂವಹನಕ್ಕೆ ಹೆಸರಾದ ಮೋದಿಯವರು ತಮಗೆ ಇನ್ನೊಂದು ಅವಧಿಗೆ ಅಧಿಕಾರ ಕೊಡಬೇಕೇ ಬೇಡವೇ ಎಂಬ ನಿರ್ಣಯಿಸುವ ಮತ ದಾರನಿಗೆ ಅಂತಾರಾಷ್ಟ್ರೀಯವಾಗಿ ದೇಶದ ಹಿತ ಕಾಯುವಲ್ಲಿ ತಾವು ಕೈಗೊಂಡ ಕ್ರಮಗಳನ್ನು ಮನದಟ್ಟು ಮಾಡುವಲ್ಲಿ ಎಷ್ಟರ ಮಟ್ಟಿಗೆ ಸಫ‌ಲತೆ ಕಾಣುವರು ಎನ್ನುವುದನ್ನು ಈಗಲೇ ಹೇಳಲಾಗದು. 

ಅಸ್ಥಿರ ಸರಕಾರದ ಅಪಾಯ 
ಆರ್ಥಿಕವಾಗಿ ಬಲಗುಂದುತ್ತಿರುವುದರೊಂದಿಗೆ, ಸಂರಕ್ಷಣಾವಾದಿ ನೀತಿ ಅನುಸರಿಸುತ್ತಿರುವ, ವಿಶ್ವಾಸಾರ್ಹವಲ್ಲದ ಟ್ರಂಪ್‌ ನೇತೃತ್ವದ ಅಮೆರಿಕ, ದೈತ್ಯ ಆರ್ಥಿಕ ಮತ್ತು ಮಿಲಿಟರಿ ಶಕ್ತಿ ಯೊಂದಿಗೆ ಜೀವಿತಾವಧಿಗೆ ಅಧ್ಯಕ್ಷ ಪದವಿ ಭದ್ರ ಮಾಡಿಕೊಂಡಿರುವ ಕ್ಸಿ ಜಿನ್‌ಪಿಂಗ್‌ ನೇತೃತ್ವದ ಚೀನ, ಸ್ವಾರ್ಥಕ್ಕಾಗಿ ಹಳೆಯ ಸ್ನೇಹಿತನನ್ನು ಬಿಟ್ಟು ಚೀನಾ-ಪಾಕಿಸ್ಥಾನದೊಂದಿಗೆ ನಿಕಟ ಸಂಬಂಧ ಹೆಣೆದುಕೊಂಡು ತನ್ನ ವ್ಯಾಪಾರದ ಹಿತ ಕಾಪಾಡಿಕೊಳ್ಳಲು ಹವಣಿಸುತ್ತಿರುವ ರಷ್ಯಾದೊಂದಿಗಿನ ಸೂಕ್ಷ್ಮ ಸಂಬಂಧವನ್ನು ನಿಭಾಯಿಸುವಲ್ಲಿ ಈ ನಾಲ್ಕು ವರ್ಷಗಳಲ್ಲಿ ನರೇಂದ್ರ ಮೋದಿ 
ಯವರು ಎಷ್ಟರ ಮಟ್ಟಿಗೆ ಸಫ‌ಲರಾಗಿದ್ದಾರೆ ಎನ್ನುವುದು ಮುಂದಿನ ಚುನಾವಣೆಯಲ್ಲಿ ನಿಶ್ಚಿತವಾಗಿಯೂ ಚರ್ಚಾ ವಿಷಯವಾಗಲಿದೆ.

ದಿಲ್ಲಿಯಲ್ಲಿ ಬಲಹೀನ ಮತ್ತು ಅನಿಶ್ಚಿತ ನಾಯಕತ್ವಕದ ಆಗಮನಕ್ಕಾಗಿ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಚೀನ ಡೋಕ್ಲಾಮ್‌ನಂತಹ ಬಿಕ್ಕಟ್ಟನ್ನು ಮುಂದಿನ ವರ್ಷಗಳಲ್ಲಿ ಸೃಷ್ಟಿಸದಿರದು ಎನ್ನುವ ಯಾವ ಗ್ಯಾರಂಟಿಯೂ ಇಲ್ಲ. ತನ್ನ ಕುರ್ಚಿ ಭದ್ರ ಪಡಿಸಿಕೊಳ್ಳುವಲ್ಲಿ ಹೆಚ್ಚು ಶ್ರಮ ವ್ಯಯಿಸಬೇಕಾದ, ಸೈದ್ಧಾಂತಿಕ ವಿಚಾರಧಾರೆಯ ಹಾಗೂ ಸಮನ್ವಯದ ಕೊರತೆಯ ವಿಭಿನ್ನ ಪಕ್ಷಗಳ ಕಿಚಡಿ ಸರಕಾರದ ಮುಖ್ಯಸ್ಥರೋರ್ವರು ದೇಶ ಹಿತ ಕಾಯುವಲ್ಲಿ ಸಫ‌ಲರಾದಾರೇ? ಯುವ ದೇಶವೆಂದು  ಗುರುತಿಸಲ್ಪಟ್ಟಿರುವ ದೊಡ್ಡ ಸಂಖ್ಯೆಯ ಯುವ ಮತದಾರರು ಈ ಕುರಿತು ತಳೆಯುವ ನಿಲುವು ನಿರ್ಣಾಯಕವಾಗಬಲ್ಲದು.

ಭಾರತವನ್ನು ವ್ಯೂಹಾತ್ಮಕವಾಗಿ ಸುತ್ತುವರಿಯುವ ಚೀನದ “ಸ್ಟ್ರಿಂಗ್‌ ಆಫ್ ಪರ್ಲ್ಸ್‌’ ನೀತಿಗೆ ಇರಾನಿನ ಚಬಹಾರ್‌, ಇಂಡೋ ನೇಶ್ಯಾದ ಸಬಂಗ್‌ ಬಂದರನ್ನು ಅಭಿವೃದ್ಧಿ ಮಾಡುವ ಮತ್ತು ಬಳಸಿಕೊಳ್ಳುವ ಸೌಲಭ್ಯ, ಆಸಿಯಾನ್‌ ದೇಶಗಳೊಂದಿಗೆ ವಿಶೇಷ ಬಾಂಧವ್ಯ ವೃದ್ಧಿಯ ಮೂಲಕ ಪ್ರತಿತಂತ್ರ ರಚಿಸಿ ಚೀನವನ್ನು ವ್ಯೂಹಾತ್ಮಕವಾಗಿ ಸಮರ್ಥವಾಗಿ ಎದುರಿಸಿದ ರೀತಿ, ಭಾರತದ ಪಾರಮ್ಯವಿರುವ ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನೀ ಚಟುವಟಿಕೆಗಳನ್ನು ನಿಯಂತ್ರಿಸಲು ಅಮೆರಿಕ, ಜಪಾನ್‌, ಆಸ್ಟ್ರೇಲಿಯಾ ಜತೆ ಸೇರಿ ಕ್ವಾಡ್‌ ಒಕ್ಕೂಟ ರಚನೆ, ಸಾಮರಿಕ ಆಯಕಟ್ಟಿನ ಅಂಡಮಾನ್‌ ದ್ವೀಪದಲ್ಲಿ ಸುರಕ್ಷಾ ತಂತ್ರ ಬಲಪಡಿಸುವಿಕೆ, ಸರ್ಜಿಕಲ್‌ ಸ್ಟ್ರೈಕ್‌ನಂತಹ ದಿಟ್ಟ ಕ್ರಮಗಳಿಂದ ಪಾಕಿಸ್ಥಾನವನ್ನು ವಿಶ್ವ ವೇದಿಕೆಗಳಲ್ಲಿ ಎದುರಿಸಲು ಅನುಸರಿಸಿದ ತಂತ್ರ, ದಶಕಗಳಿಂದ ಕಡೆಗಣಿಸಲ್ಪಟ್ಟಿರುವ ಇಸ್ರೇಲ್‌ನೊಂದಿಗಿನ ಸಂಬಂಧ ವೃದ್ಧಿ ಮತ್ತು ಆ ಮೂಲಕ ಕೃಷಿ ಹಾಗೂ ರಕ್ಷಣಾ ಸಹಯೋಗದಲ್ಲಿ ಸಿಕ್ಕಿದ ಅಪಾರ ಯಶಸ್ಸುಗಳ ಕುರಿತು ದೇಶದ ಮತದಾರರು ಮಂಥನ ನಡೆಸದೇ ಇರಲು ಸಾಧ್ಯವಿಲ್ಲ.

ನೆರೆಹೊರೆಯ ಮತ್ತು ಮಿತ್ರ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಗಾಢಗೊಳಿಸುವಿಕೆ, ಯೋಗಕ್ಕೆ ಅಂತರಾಷ್ಟ್ರೀಯ ಮನ್ನಣೆ, MCR (missile controle regime)ಸದಸ್ಯತ್ವ, ಶಾಂಘೈ ಸಂಘಟನೆಯ ಪೂರ್ಣ ಸದಸ್ಯತ್ವ, NSGಯಲ್ಲಿ ಸ್ಥಾನಕ್ಕಾಗಿ ಕ್ರಮ, ಹಾಗ್‌ನ  ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ನ್ಯಾಯಾ ಧೀಶರ ನೇಮಕದಲ್ಲಿ ಜಗತ್ತೇ ಬೆರಗುಗೊಳಿಸುವಂತೆ ಬ್ರಿಟನನ್ನು ಮಣಿಸಿದ್ದು, ಸೆಕ್ಯುರಿಟಿ ಕೌನ್ಸಿಲ್‌ನಂತಹ ಪ್ರತಿಷ್ಠಿತ ಸಂಘಟನೆಗಳ ಸದಸ್ಯತ್ವಕ್ಕಾಗಿ ನಿರಂತರ ಪ್ರಯತ್ನದ ಮೂಲಕ ಭಾರತದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ಮತದಾರರು ಯಾವ ರೀತಿ ಯೋಚಿಸುತ್ತಾರೆ ಎನ್ನುವುದು ಚರ್ಚಾರ್ಹ ವಿಷಯಗಳೇ.

ವಿಪಕ್ಷಗಳ ನಾಯಕತ್ವ ಸಮಸ್ಯೆ
ಪರಂಪರಾಗತವಾಗಿ ಭಾರತಕ್ಕೆ ಯುದ್ಧೋಪಕರಣ ಪೂರೈಸುವ ರಷ್ಯಾದಿಂದ ಎಸ್‌-400 ಕ್ಷಿಪಣಿ ವಾಯು ರಕ್ಷಣಾ ಕವಚವನ್ನು ಖರೀದಿಸಲಿಚ್ಚಿಸುವ ಭಾರತಕ್ಕೆ ಆರ್ಥಿಕ ದಿಗ್ಬಂಧನ ವಿಧಿಸುವ ಅಮೆರಿಕದ ನಿರ್ಣಯದ ಕುರಿತು ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್‌ ಅವರ ಭಾರತ-ರಷ್ಯಾ ಸಂಬಂಧವನ್ನು ಅಮೆರಿಕ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ನುಡಿದರು. ಅವರ ಕಟು ಶಬ್ದದ ದಿಟ್ಟ ಹೇಳಿಕೆ ದೇಶದ ಹೆಚ್ಚುತ್ತಿರುವ ಆತ್ಮವಿಶ್ವಾಸವನ್ನು ಧ್ವನಿಸುವಂತಿಲ್ಲವೇ? ಚೀನದ ಅಧ್ಯಕ್ಷರೊಂದಿಗೆ ವೂಹಾನ್‌ ಶೃಂಗ ಸಭೆ ಮತ್ತು NSG ಶೃಂಗದ ಮೂಲಕ ಆ ದೇಶದೊಂದಿಗೆ ವಾತಾವರಣ ತಿಳಿಗೊಳಿಸುವ ಮೂಲಕ ಪಾಕಿಸ್ಥಾನವನ್ನು ರಾಜತಾಂತ್ರಿಕವಾಗಿ ಏಕಾಂಗಿಯಾಗಿಸುವ ದೂರಗಾಮಿ ತಂತ್ರಗಳನ್ನು ಅನುಸರಿಸುವ ಮಹತ್ವದ ರಾಜತಾಂತ್ರಿಕ ಕ್ರಮಗಳನ್ನು ಅಸ್ಥಿರ ಸರ್ಕಾರದ ಪ್ರಭಾವ ರಹಿತ ನೇತೃತ್ವದಿಂದ ನಿರೀಕ್ಷಿಸಲು ಸಾಧ್ಯವೇ? ತಾತ್ವಿಕ ಭಿನ್ನಾಭಿಪ್ರಾಯ ಮತ್ತು ವೈಯಕ್ತಿಕ ಮಹತ್ವಾಕಾಂಕ್ಷೆಗಳ ಸಹಿತ ಅಂತರ್ವಿರೋಧಗಳ ನಡುವೆ ಗದ್ದುಗೆ ಹಿಡಿಯುವ ವಿಪಕ್ಷಗಳ ಸಮ್ಮಿಶ್ರ ಸರಕಾರದ ಮುಖ್ಯಸ್ಥರು ಮುಂದಿನ ವರ್ಷಗಳಲ್ಲಿ ಭಾರತದ ಹಿತವನ್ನು ಕಾಯುವಲ್ಲಿ ಸಮರ್ಥರಾದಾರೇ ಎನ್ನುವುದು
ಮತದಾರರನ್ನು ಕಾಡದಿರದು. 

ಕೋಣ ನೀರಿಗೆಳೆದರೆ ಎತ್ತು ಏರಿಗೆಳೆಯಿತು ಎನ್ನುವ ಮಾತಿನಂತೆ ಅಧಿಕಾರ ಪಡೆಯುವ ಏಕೈಕ ಉದ್ದೇಶದಿಂದ ಕೈ ಕೈ ಹಿಡಿದು ಏಕತೆ ಪ್ರದರ್ಶಿಸುತ್ತಿರುವವರು ಚುನಾವಣೆಗಿಂತ ಮೊದಲೇ ಸೀಟು ಹೊಂದಾಣಿಕೆಯಲ್ಲೇ ಮುನಿಸಿಕೊಳ್ಳದಿರುವ ಖಾತರಿಯೂ ಇಲ್ಲ. ಸಮ್ಮಿಶ್ರ ಸರಕಾರದಲ್ಲಿ ರಕ್ಷಣೆ, ವಿದೇಶ ನೀತಿಯಂತಹ ಪ್ರಮುಖ ವಿಷಯಗಳು ನೀತಿ ವಿಳಂಬದಿಂದ ನನೆಗುದಿಗೆ ಬೀಳುವ ಸಂಭವ ಹೆಚ್ಚು. ಮಿತ್ರ ಪಕ್ಷಗಳ ಸಂಖ್ಯಾಬಲವನ್ನು ನೆಚ್ಚಿಕೊಂಡ ಪ್ರಧಾನ ಮಂತ್ರಿ ಕ್ಯಾಬಿನೆಟ್‌ ಸದಸ್ಯರ ಮೇಲೆ ನಿಯಂತ್ರಣ ಹೊಂದಿರದೆ ನಿರಂಕುಶ ಮಂತ್ರಿಗಳಿಂದ ಆಡಳಿತ ಯಂತ್ರ ಚೌಪಟ್ಟಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. 

“ಅಮೆರಿಕ ಮೊದಲು’ ಎನ್ನುವ ಘೋಷಣೆಯೊಂದಿಗೆ ಅಧಿಕಾರ ಹಿಡಿದು, ಇತರ ರಾಷ್ಟ್ರಗಳೊಂದಿಗೆ ವ್ಯಾಪಾರ ಯುದ್ಧವನ್ನೇ ನಡೆಸಿಕೊಂಡು ಬಂದಿರುವ ಅಧ್ಯಕ್ಷ ಟ್ರಂಪ್‌ ನೇತೃತ್ವದ ಸ್ವಹಿತವನ್ನೆ ಪರಮಾದರ್ಶವಾಗಿಟ್ಟುಕೊಂಡು ಮಿತ್ರರ ನೆರವಿಗೆ ಬಾರದ ಅಮೆರಿಕದ ವಿಶ್ವಾಸಾರ್ಹತೆ ಇಂದು ವಿಶ್ವದಾದ್ಯಂತ ಕುಗ್ಗುತ್ತಿದೆ. ಇಷ್ಟ ಬಂದಂತೆ ಅಧಿಕಾರಿಗಳನ್ನು ಬದಲಿಸುವ, ಮನಸೋ ಇಚ್ಚೆ ರಾಷ್ಟ್ರಗಳ ಮೇಲೆ ನಿರ್ಬಂಧ ಹೇರುವ ಟ್ರಂಪ್‌ ನೀತಿಯಿಂದಾಗಿ ಅದು ದಿನೇದಿನೇ ಕುಸಿತ ಕಾಣುತ್ತಿದೆ. ಚೀನದ ಶಕ್ತಿ ಪ್ರದರ್ಶನದಿಂದ ಕಂಗೆಟ್ಟಿರುವ ಹಿಂದೂ ಮಹಾಸಾಗರದ ಇಂಡೋನೇಶ್ಯಾ, ಫಿಲಿಪೈನ್ಸ್‌ನಂತಹ ಆಸಿಯಾನ್‌ ದೇಶಗಳು ಭಾರತದತ್ತ ಸ್ನೇಹ ಹಸ್ತಕ್ಕಾಗಿ ಕಾತರಿಸುತ್ತಿವೆ.

ತನ್ನ ರಾಜಕೀಯ ಭವಿಷ್ಯವೆ ಅನಿಶ್ಚಿತವಾಗಿರುವ ಅತಂತ್ರ ಸರಕಾರದ ಪ್ರಧಾನಿಯೋರ್ವರು ಈ ದೇಶಗಳಿಗೆ ಯೋಗ್ಯ ನಾಯಕತ್ವ ಮತ್ತು ಮಾರ್ಗದರ್ಶನ ನೀಡಲು ಸಾಧ್ಯವೇ? ಮೋದಿ ಓರ್ವ ಸ್ವಚ್ಚ ವರ್ಚಸ್ಸಿನ, ರಾಷ್ಟ್ರದ ಹಿತಕ್ಕಾಗಿ ಕಠಿಣ ದುಡಿಮೆ ಮಾಡುವ ಪ್ರಾಮಾಣಿಕ ವ್ಯಕ್ತಿ ಎನ್ನುವ ಮಾತು ಕೋಟ್ಯಂತರ ದೇಶವಾಸಿಗಳ ಮನದಲ್ಲಿ ಬೇರೂರಿದೆ ಎನ್ನುವುದನ್ನು ಯಾರು ಒಪ್ಪಲಿ ಒಪ್ಪದಿರಲಿ ಸತ್ಯ. ವಿಪಕ್ಷಗಳು ಆ ವ್ಯಕ್ತಿಯ ಉಡುಗೆ-ತೊಡುಗೆ, ಆಹಾರ-ವಿಹಾರಗಳ ಮೇಲೆ ಕುಹಕವಾಡಿ ಜನರ ಮನಸ್ಸಿನಲ್ಲಿ ಭದ್ರವಾಗಿ ಕುಳಿತ ಅನಿಸಿಕೆಯನ್ನು ಸುಲಭವಾಗಿ ದೂರ ಮಾಡಲಾಗದು. 

ಅವರಿಗೆ ಸರಿಗಟ್ಟುವ ವರ್ಚಸ್ವಿ ಪರ್ಯಾಯ ನಾಯಕನನ್ನು ಮುಂದಿಟ್ಟುಕೊಂಡು ಚುನಾವಣಾ ಕಣಕ್ಕಿಳಿದರೆ ಮಾತ್ರ ಜನ ಆ ಕುರಿತು ಚಿಂತಿಸಿಯಾರು. ರಾಜ್ಯಗಳ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ವ್ಯತ್ಯಾಸ ಅರಿಯದಷ್ಟು ಅಪ್ರಬುದ್ಧರಲ್ಲ ಭಾರತದ ಮತದಾರರು. ವಿಶ್ವಶಕ್ತಿಯಾಗಲು ಅಣಿಯಾಗುತ್ತಿರುವ ದೇಶದ ನೇತೃತ್ವ ವಹಿಸಲು ನರೇಂದ್ರ ಮೋದಿಯವರಿಗೆ ಪರ್ಯಾಯವಾಗಿ ಓರ್ವ ವರ್ಚಸ್ವಿ ನಾಯಕ ವಿಪಕ್ಷಗಳಿಗೆ ಸಿಗಬಹುದೇ ಎನ್ನುವುದರ ಮೇಲೆ 2019ರ ಚುನಾವಣೆಯ ಪರಿಣಾಮ ನಿಂತಿದೆ.
 

*ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

8-wenlock

Wenlockನಲ್ಲಿ ಮೂಲಸೌಕರ್ಯ ಕೊರತೆ; ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪೊಲೀಸ್‌ಗೆ ದೂರು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

7-mng

ಚೆಂಡೆ ಬಡಿಯುತ್ತ ಬಂದು ತಂಡದಿಂದ ಪ್ರಶ್ನೆ: ಚಕಮಕಿ, ದೂರು ದಾಖಲು

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

6-mng

Nandini Brand: 50 ಐಸ್‌ ಕ್ರೀಂ ಮಾರುಕಟ್ಟೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.