ಅನಿಯಮಿತ ಅಂತರ್ಜಾಲವೆಂಬ ಮಾಯಾಜಾಲ


Team Udayavani, Jun 23, 2018, 6:00 AM IST

b-16.jpg

ಯುವಕರನ್ನು ನಾಚಿಸುವಂತೆ ಕೆಲ ಮಧ್ಯವಯಸ್ಕರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದು ಅಚ್ಚರಿಯಲ್ಲವೇ? ಕೆಲವರಿಗಂತೂ ಅದೇ ಒಂದು ವ್ಯಸನವಾಗಿದೆಯೇ ಎಂಬ ಅನುಮಾನ ದೃಢವಾಗುವಷ್ಟು ನಿರರ್ಥಕ ಸಂದೇಶ ಮತ್ತು ಚಿತ್ರಗಳನ್ನು ಹಾಕುತ್ತಿದ್ದಾರೆ. ಮಧ್ಯವಯಸ್ಕರ ಮಾತಂತಿರಲಿ ಯುವ ಸಮುದಾಯದ ವ್ಯಸನ ಕಳವಳಕಾರಿಯಾಗಿಯೇ ಗೋಚರಿಸುತ್ತಿದೆ. ಅಧ್ಯಯನಕ್ಕೆ ಮೀಸಲಾಗಿರಬೇಕಾಗಿದ್ದ ಸಮಯವನ್ನು ಅಂತರ್ಜಾಲ ಕಬಳಿಸುತ್ತಿದೆ.

ಕೆಲವೇ ರೂಪಾಯಿಗಳನ್ನು ಪಾವತಿಸಿ ಅನಿಯಮಿತ ಕರೆಗಳು ಹಾಗೂ ಅನಿಯಮಿತ ಅಂತರ್ಜಾಲ ಸಂಪರ್ಕ ಪಡೆಯುವುದು ಈಗ ಹೊಸ ಸುದ್ದಿಯೇನಲ್ಲ. ಸುಮಾರು ಒಂದೂವರೆ ವರ್ಷದ ಹಿಂದೆ, ಅಂದರೆ ಜಿಯೋ ಮಾರುಕಟ್ಟೆ ಪ್ರವೇಶಿಸುವ ಮುನ್ನ ನಮಗೆ ಇಂಥದ್ದೊಂದು ಕನಸೂ ಬಿದ್ದಿರಲಿಲ್ಲ. ಒಂದು ಜಿಬಿ ಡೇಟಾ ಪಡೆಯಬೇಕಾದರೆ ಸುಮಾರು 250 ರೂ.ಗಳಷ್ಟು ವ್ಯಯಿಸುತ್ತಿದ್ದೆವು. ತುಂಬ ಎಚ್ಚರಿಕೆಯಿಂದಲೇ ಕರೆಯನ್ನೂ ಮಾಡುತ್ತಿದ್ದೆವು. ಆಗಾಗ ಹತ್ತೋ ಇಪ್ಪತ್ತೋ ರೀಚಾರ್ಜ್‌ ಮಾಡಿ ಕರೆ ಮಾಡುವಾಗ ಈ ಎಚ್ಚರ ಬಹುತೇಕರಿಗೆ ಅನಿವಾರ್ಯವಾಗಿತ್ತು. ಅಗತ್ಯವಿದ್ದರೆ ಮಾತ್ರ ಕರೆ ಮಾಡುವ, ಸಂದೇಶ ಕಳುಹಿಸುವ ಸಾಧನವಾಗಿ ಉಳಿದಿತ್ತು ಮೊಬೈಲ್ ಪ್ರೇಮಿಗಳು ಗಂಟೆಗಟ್ಟಲೆ ಮೊಬೈಲ್‌ ಹರಟೆಯಲ್ಲಿ ಮುಳುಗಿರುವುದನ್ನು ಕಂಡಾಗ ಅಚ್ಚರಿ ಪಡುತ್ತಿದ್ದೆವು. ಹೊರ ರಾಜ್ಯ ಪ್ರಯಾಣದಲ್ಲಿರುವಾಗಲಂತೂ ಕರೆ ಸ್ವೀಕರಿಸಲೂ ಹಿಂದೆ ಮುಂದೆ ನೋಡುತ್ತಿದ್ದೆವು. ರೋಮಿಂಗ್‌ನಲ್ಲಿದ್ದೇನೆ, ಮನೆ ತಲುಪಿದ ಮೇಲೆ ಕರೆ ಮಾಡುತ್ತೇನೆ ಎಂಬ ಉತ್ತರ ಆಗಾಗ ಕೇಳಿ ಬರುತ್ತಿತ್ತು. ದೂರಸಂಪರ್ಕ ಸೇವಾದಾತ ಕಂಪೆನಿಗಳು ಉಚಿತ ಸಂದೇಶಗಳ ಕೊಡುಗೆ ನೀಡಲಾರಂಭಿಸಿ ದಾಗ ಸಂಭ್ರಮಿಸಿದವರು ಕಡಿಮೆಯಲ್ಲ. ಅಂತರ್ಜಾಲ ಬಳಕೆಯೂ ಮಿತಿಯಲ್ಲೇ ಇತ್ತೆಂದು ಪ್ರತ್ಯೇಕ ಹೇಳಬೇಕಾಗಿಲ್ಲ.

ಇಂಥ ಹಿನ್ನೆಲೆಯಲ್ಲಿ ದೂರಸಂಪರ್ಕ ಕಂಪೆನಿಗಳಿಗೆ ಬರಸಿಡಿಲಿ ನಂತೆ ಬಂದೆರಗಿದ್ದು ಜಿಯೋ ಕಂಪೆನಿಯ ಅನಿಯಮಿತ ಹಾಗೂ ಉಚಿತ ಕರೆ ಹಾಗೂ ಅಂತರ್ಜಾಲದ ಕೊಡುಗೆ, ಅದೂ ಬೇಷರತ್ತಾಗಿ. ಮೊದಮೊದಲು ಜನ ನಂಬಲೇ ಇಲ್ಲ. ಆ ಮಟ್ಟದ ಉಚಿತ ಕೊಡುಗೆಯನ್ನು ಪಡೆದ ಅನುಭವವೇ ಇರಲಿಲ್ಲ ನಮಗೆ. ಈಗ ಉಚಿತವಾದರೂ ಮುಂದೆ ಏಕಗಂಟಿನಲ್ಲಿ ವಸೂಲು ಮಾಡದಿರ ಲಿಕ್ಕಿಲ್ಲ ಎಂಬ ಗುಮಾನಿ. ಸಾಲದ್ದಕ್ಕೆ ಆಧಾರ್‌ ಕಾರ್ಡ್‌ ಬಗ್ಗೆಯೂ ಸಾಧಾರವಾಗಿಯೋ ನಿರಾಧಾರವಾಗಿಯೋ ಭಯ ಆತಂಕ ಅನಿಶ್ಚಿತತೆಗಳು ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ ಆಧಾರ್‌ ಸಂಖ್ಯೆ ಮತ್ತು ಬಯೋಮೆಟ್ರಿಕ್‌ ಪಡೆದೇ ಸಿಮ್‌ ವಿತರಿಸುತ್ತಿದ್ದ ರೀತಿ ತೀರ ಹೊಸ ಅನುಭವವೇ ಆಗಿತ್ತು. ಪ್ರಧಾನಿ ಮೋದಿಯನ್ನು ನಂಬಿದ ಯುವಕರು ಅಂಬಾನಿಯನ್ನೂ ನಂಬಿದರು, ಕೊಡುಗೆ ಯನ್ನು ಸ್ವೀಕರಿಸಿದರು. ಆ ಯುವಕರ ಕೈಯಲ್ಲಿದ್ದ ಮೊಬೈಲು ಗಳಲ್ಲಿ ಅಂತರ್ಜಾಲ ಆವಿರ್ಭವಿಸುವ ವೇಗ ನೋಡಿ ಮಂತ್ರಮುಗ್ಧರಾಗಿ ಉಳಿದವರೂ ಭಯವನ್ನು ಬದಿಗೆ ಸರಿಸಿ ಜಿಯೋ ಇಲ್ಲದ ಜೀವನ ನೀರಸ ಎಂಬ ಅಭಿಪ್ರಾಯವನ್ನು ಒಪ್ಪಿಕೊಂಡು ಏನಾದರಾಗಲಿ ಒಂದು ಕೈ ನೋಡಿಯೇ ಬಿಡೋಣ ಎಂದು ಮುನ್ನುಗ್ಗಿದ್ದು ಈಗ ಇತಿಹಾಸ.

ಒಂದಂತೂ ನಮಗೆ ಈಗಲೂ ಮುಂದೆಯೂ ಅರಗಿಸಿಕೊಳ್ಳ ಲಾಗದಂಥ ಇತಿಹಾಸ. ಖಾಸಗಿ ಕಂಪೆನಿಗಳು ಲಾಭಕ್ಕಾಗಿಯೇ ಹುಟ್ಟಿಕೊಳ್ಳುವುದು ಹೊರತು ದೇಶೋದ್ಧಾರಕ್ಕಲ್ಲ. ಅವುಗಳನ್ನು ಬಿಡಿ ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ ಕೂಡ ಜನರನ್ನು ವಂಚಿಸುತ್ತಿತ್ತೆ ಎಂಬುದು ಈಗ ಕಾಡುವ ಪ್ರಶ್ನೆ. ಅತ್ಯಂತ ನಿರುತ್ಸಾಹದಾಯಕ 2ಜಿ ಅಂತರ್ಜಾಲ ಬಳಕೆಗೂ ಎಷ್ಟೊಂದು ದೊಡ್ಡ ಮೊತ್ತ ಪಾವತಿಸುತ್ತಿದ್ದೆವು. ಕರೆಗಳೂ ದುಬಾರಿಯೇ ಆಗಿತ್ತು. ಒಂದು ನಿಮಿಷ ಕಳೆದು 61ನೇ ಸೆಕೆಂಡಿಗೇ ಕರೆ ತುಂಡರಿಸಿದರೂ 2 

ನಿಮಿಷ ಮಾತನಾಡಿದ ಪುಣ್ಯ ನಮಗೆ ಲಭಿಸುತ್ತಿತ್ತು. ಸೆಕೆಂಡ್‌ ಆಧಾರಿತ ಕರೆ ದರಗಳು ಜಾರಿಗೆ ಬಂದಾಗ ಸಂತಸಪಟ್ಟವರು ಹಲವರಿರಬಹುದು. ಮೊಬೈಲ್‌ ಪ್ಲ್ರಾನುಗಳಿಗೆ ಹೆಚ್ಚು ವಿನಿಯೋ ಗಿಸುವುದು ವ್ಯರ್ಥ ಎನ್ನುವ ಭಾವನೆ ಇತ್ತು. ಹಾಗೆ ವಿರಳವಾಗಿ ಮೊಬೈಲು ಬಳಸುತ್ತಿದ್ದವರಿಂದ ಹಲೋ ಟ್ಯೂನ್‌ ಕಾಲರ್‌ ಟ್ಯೂನ್‌ ಇತ್ಯಾದಿಗಳ ಹೆಸರಿನಲ್ಲಿ ಬಳಕೆದಾರರ ಅನುಮತಿಯಿಲ್ಲದೆಯೂ ಹಣ ಲಪಟಾಯಿಸುತ್ತಿದ್ದವು ಕೆಲವು ಸೇವಾದಾತ ಕಂಪೆನಿಗಳು.

ರೋಮಿಂಗ್‌ ಎಂಬುದು ಒಂದು ದುಃಸ್ವಪ್ನವೇ ಆಗಿತ್ತು. ತಾವು ಕರೆ ಸ್ವೀಕರಿಸದೇ ಇದ್ದಾಗ ಮತ್ತೆ ಪದೇ ಪದೇ ಕರೆ ಮಾಡಿ ಹಿಂಸಿಸುವವರಿಗೆ ಉತ್ತರ ಕೊಡಲಾರದೆ ಮೊಬೈಲ್‌ ಸ್ವಿಚ್ಚಾಫ್ ಮಾಡುವವರೂ ಇಲ್ಲದಿರಲಿಲ್ಲ. ಸರಕಾರಿ ಕಂಪೆನಿಯ ರೋಮಿಂಗ್‌ನಲ್ಲೂ ಒಳಬರುವ ಕರೆಗಳು ಉಚಿತ ಎಂಬ ಕೊಡುಗೆ ಕ್ರಾಂತಿಕಾರಿ ಹೆಜ್ಜೆಯಂತೆ ಕಂಡದ್ದು ಸತ್ಯ. ಹೊರಹೋಗುವ ಕರೆಗಳು ಮಾತ್ರ ದುಬಾರಿಯಾಗಿಯೇ ಮುಂದುವರಿದವು. 

ಈಗ ಕರೆ ದರಗಳ ವಿಮರ್ಶೆಯೂ ಇಲ್ಲ, ರೋಮಿಂಗ್‌ ಪ್ರಶ್ನೆಯೇ ಅಲ್ಲ. ಸಾಮಾಜಿಕ ತಾಣಗಳಲ್ಲಿ ಸಂದೇಶಗಳಿಗೆ ಪ್ರತಿಕ್ರಿ ಯಿಸದ, ಹೆಚ್ಚು ಸಂದೇಶಗಳನ್ನು ರವಾನಿಸದವರಿಗೆ ಜಿಪುಣ ಎಂಬ ಬಿರುದೂ ಲಭಿಸುವ ಪ್ರಮೇಯವಿಲ್ಲ. ಅಂತರ್ಜಾಲ ಬಳಕೆಯಲ್ಲಿ ಜಿಪುಣತನವೆ ಬೇಕಾಗಿಲ್ಲ. ದಿನಂಪ್ರತಿ ಒಂದು ಒಂದೂವರೆ ಅಥವಾ ಎರಡು ಜಿಬಿಗಳಷ್ಟು ಬಳಕೆ ಶ್ರೀಮಂತರಿಗೆ ಮಾತ್ರ ಎಟಕುವ ಸಂಗತಿಯಾಗಿ ಉಳಿದಿಲ್ಲ. ಹತ್ತೋ ಇಪ್ಪತ್ತೋ ರೂಪಾಯಿಗಳ ರೀಚಾರ್ಜ್‌ ಮಾಡುವವರ ಸಂಖ್ಯೆ ಕಡಿಮೆ ಯಾಗಿರ ಲೇಬೇಕು. ಕೇವಲ ಕರೆಗಳನ್ನು ಮಾತ್ರ ಪೂರೈಸುವ ಪ್ಲ್ರಾನುಗಳು ಜನಪ್ರಿಯತೆ ಗಳಿಸುತ್ತಿವೆ. ಒಂದು ಸಂದೇಶವನ್ನು ಕಳಿಸುವಷ್ಟು ಹಣವಿಲ್ಲದಿದ್ದರೂ ತಿಂಗಳವರೆಗೆ ಕರೆ ಸೌಲಭ್ಯ ಬಳಸ ಬಹುದಾದ ಪ್ಲ್ರಾನುಗಳು ಗ್ರಾಮೀಣರಿಗೆ ವರದಾನದಂತಿವೆ. ಇಷ್ಟೆಲ್ಲಾ ಪರಿವರ್ತನೆಗಳಿಗೆ ನಾಂದಿ ಹಾಡಿದ್ದು ರಿಲಯನ್ಸ್‌ ಜಿಯೋದ ರಂಗಪ್ರವೇಶ ಎಂಬುದು ನಿರ್ವಿವಾದ ತಾನೇ?

ಇದೀಗ ಮುಖ್ಯ ಪ್ರಶ್ನೆಯನ್ನೆತ್ತಿಕೊಳ್ಳೋಣ. ಪ್ರಶ್ನೆ ಅನಿಯಮಿತ ಅಂತರ್ಜಾಲದ ಕೊಡುಗೆಯ ಬಗ್ಗೆಯೇ ಹೊರತು ಯಾವುದೇ ದೂರಸಂಪರ್ಕ ಕಂಪೆನಿಯ ಸೇವೆಯ ಕುರಿತಾದುದಲ್ಲ. ನಾವು ಈ ಬೆಳವಣಿಗೆಯನ್ನು ಹೇಗೆ ಸ್ವೀಕರಿಸಿದ್ದೇವೆ? ಸಂಭ್ರಮದಿಂದಲೇ ಎಂದರೆ ತಪ್ಪಲ್ಲ. ಹೇಗೆ ಬಳಸುತ್ತಿದ್ದೇವೆ ಎಂಬುದು ವಿವೇಚಿಸಬೇ ಕಾದ ವಿಚಾರ. ವಿವಿಧ ಸಾಮಾಜಿಕ ತಾಣಗಳ ಬಳಕೆ ಇತ್ತೀಚೆಗೆ ಹೆಚ್ಚಾಗಿದೆ. 270 ಮಿಲಿಯ ಭಾರತೀಯರು ಫೇಸ್‌ಬುಕ್‌ ಅಕೌಂಟ್‌ ಹೊಂದಿದ್ದಾರೆ. 200 ಮಿಲಿಯ ಭಾರತೀಯರು ಫೇಸ್‌ಬುಕ್‌, ವಾಟ್ಸಪ್‌ ಇತ್ಯಾದಿಗಳಲ್ಲಿ ನಿತ್ಯ ಸಂಚಾರಿಗಳಾಗಿದ್ದಾರೆ ಎಂಬ ವರದಿಗಳು ಕಾಣಸಿಗುತ್ತವೆ. 

ಯುವ ಸಮುದಾಯ ಅಂತರ್ಜಾಲ ವ್ಯಸನವನ್ನು ಮೈಗೂಡಿ ಸಿಕೊಂಡಿದೆಯೇ? ಹೌದಾದರೆ ಇದು ದುರದೃಷ್ಟಕರವೇ ಸರಿ. ಅಧ್ಯಯನ ನಿರತರಾಗಿರಬೇಕಾಗಿದ್ದ ಯುವಕ ಯುವತಿಯರು, ಹದಿಹರೆಯದವರು ನಿರಂತರವಾಗಿ ಸಂದೇಶ, ಚಿತ್ರ ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಸಮಯ ಕಳೆಯುತ್ತಿದ್ದಾರೆ. ವಾಟ್ಸಪ್‌, ಟೆಲಿಗ್ರಾಮ್‌ ಮೆಸೆಂಜರ್‌ ಮುಂತಾದುವುಗಳಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಯಾರೂ ಗಂಭೀರವಾಗಿ ಪರಿಗಣಿಸದ ಗುಡಾರ್ನಿಂಗ್‌ ಗುಡ್‌ನೈಟ್‌ ಚಿತ್ರಗ ಳನ್ನು ಗುಂಪುಗಳಿಗೆ ರವಾನಿಸಿ ಇವರು ಸಾಧಿಸುವುದಾದರೂ ಏನನ್ನು? ಹಾಸ್ಯಭರಿತ ವಿಡಿಯೋಗಳನ್ನು ನಿರಂತರ ವೀಕ್ಷಿಸುವು ದರಿಂದ ಆಗುವ ಪ್ರಯೋಜನವಾದರೂ ಏನು? ಹಳೆಯ ಜೋಕುಗಳನ್ನು ಅದೆಷ್ಟು ಬಾರಿ ಓದಿದರೇನು? ಈ ಸಂದೇಶವನ್ನು ಐದು ಗುಂಪುಗಳಿಗೆ ಕಳಿಸಿ ಚಿತ್ರದಲ್ಲಿರುವ ಕುದುರೆ ಸವಾರ ಮುಂದೆ ಚಲಿಸುವ ಮ್ಯಾಜಿಕ್‌ ನೋಡಿ ಅಂತ ಸಲಹೆ ಕೊಡುವು ದರಲ್ಲಿ ಏನು ಸಾರ್ಥಕತೆಯಿದೆಯೋ. ಸೆಲ್ಫಿ ತೆಗೆದುಕೊಳ್ಳುವ ಧಾವಂತದಲ್ಲಿ ಪ್ರಾಣ ಕಳೆದುಕೊಂಡವರ ಲೆಕ್ಕವಿಟ್ಟವರಾರು? ಸಾಮಾಜಿಕ ಜಾಲತಾಣಗಳನ್ನು ಹೊರತುಪಡಿಸಿದರೆ ಸೆಲ್ಫಿಗಳಿ ಗೆಲ್ಲಿದೆ ಬೇಡಿಕೆ? ತಮ್ಮ ಸೆಲ್ಫಿಗಳನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ ಎಂಬುದು ಭ್ರಮೆಯಲ್ಲವೇ? ಯುವಕರನ್ನು ನಾಚಿಸುವಂತೆ ಕೆಲ ಮಧ್ಯವಯಸ್ಕರೂ ಸಾಮಾ ಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದು ಅಚ್ಚರಿಯಲ್ಲವೇ? ಕೆಲವರಿಗಂತೂ ಅದೇ ಒಂದು ವ್ಯಸನವಾಗಿದೆಯೇ ಎಂಬ ಅನುಮಾನ ದೃಢವಾಗುವಷ್ಟು ನಿರರ್ಥಕ ಸಂದೇಶ ಮತ್ತು ಚಿತ್ರಗಳನ್ನು ಹಾಕುತ್ತಿದ್ದಾರೆ.

ಮಧ್ಯವಯಸ್ಕರ ಮಾತಂತಿರಲಿ ಯುವ ಸಮುದಾಯದ ವ್ಯಸನ ಕಳವಳಕಾರಿಯಾಗಿಯೇ ಗೋಚರಿಸುತ್ತಿದೆ. ಅಧ್ಯಯನಕ್ಕೆ ಮೀಸಲಾಗಿರಬೇಕಾಗಿದ್ದ ಸಮಯವನ್ನು ಅಂತರ್ಜಾಲ ಕಬಳಿ ಸುತ್ತಿದೆ. ಜೀವನದ ಅತ್ಯಂತ ಅಮೂಲ್ಯ, ಫ‌ಲಪ್ರದ ಕಾಲಘಟ್ಟ ನಿಷ್ಪ್ರಯೋಜಕವಾಗುತ್ತಿದೆ. ಕೆಲವೇ ಕೆಲವರು ಅಂತರ್ಜಾಲದ ಆಕರ್ಷಣೆಯನ್ನು ಮೆಟ್ಟಿ ನಿಲ್ಲಬಲ್ಲ ಮನೋದಾಡ್ಯìವನ್ನು ಹೊಂದಿದ್ದಾರೆ. ತಮ್ಮ ಉದ್ದೇಶಿತ ಗುರಿಯನ್ನು ತಲುಪುತ್ತಿದ್ದಾರೆ. ಅಂಥವರು ಇಂಜಿನಿಯರಿಂಗ್‌ ಅಥವಾ ವೈದ್ಯಕೀಯ ಶಿಕ್ಷಣಕ್ಕೆ ಸೀಮಿತರಾಗುತ್ತಿರುವುದು ಬೇರೆಯೇ ಪ್ರಶ್ನೆ. 

 ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ತಮ್ಮ ಮನಸ್ಸನ್ನು ಕೇಂದ್ರೀಕರಿಸುವಲ್ಲಿ ವಿಫ‌ಲರಾಗುತ್ತಿದ್ದಾರೆ. ಅವರ ಶ್ರೇಷ್ಠತೆಯ ಕನಸು ನನಸಾಗುವುದೇ ಇಲ್ಲ. ಅನೇಕ ತಲೆಮಾರುಗಳು ಅಂತರ್ಜಾಲದ ಸಂಸರ್ಗವೇ ಇಲ್ಲದೆಯೂ ತಮ್ಮ ಕ್ಷೇತ್ರಗಳಲ್ಲಿ ಶ್ರೇಷ್ಠತೆ ಗಳಿಸಿದ ಇತಿಹಾಸ ಒಂದೆಡೆ ಮಾಹಿತಿಯ ಮಹಾ ಸಾಗರವೇ ಬೆರಳತುದಿಯಲ್ಲಿ ಲಭ್ಯವಿರುವ ಕಾಲದಲ್ಲಿ ಗುರಿ ತಲುಪುವಲ್ಲಿ ವಿಫ‌ಲರಾಗುವ, ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆಗೆ ಶರಣಾಗುವ ಯುವಕ-ಯುವತಿಯರ ವರ್ತಮಾನ ಇನ್ನೊಂದೆಡೆ. ಇದು ವಿಪರ್ಯಾಸವಲ್ಲವೇ?

ಸುಮಾರು ತಿಂಗಳುಗಳಷ್ಟು ಕಾಲ ಉಚಿತ ಅಂತರ್ಜಾಲ ಕೊಡುಗೆ ನೀಡಲು ತಗುಲಿದ ವೆಚ್ಚವೆಷ್ಟೆಂದು ನಾವ್ಯಾರೂ ವಿಚಾರಿಸಲಿಲ್ಲ. ಅದಕ್ಕಾಗಿ ಯಾವುದಾದರೂ ನೆರೆರಾಷ್ಟ್ರ ಬಂಡವಾಳ ಹೂಡಿದೆಯೇ? ಈ ಅನಿಯಮಿತ ಅಂತರ್ಜಾಲದ ಕೊಡುಗೆಯ ಹಿಂದೆ ಅಂತಾರಾಷ್ಟ್ರೀಯ ಹುನ್ನಾರವೇನಾದರೂ ಅಡಗಿದೆಯೇ? ನಮ್ಮ ದೇಶದ ಯುವಶಕ್ತಿಯ ಪ್ರಗತಿಯನ್ನು ತಡೆಹಿಡಿಯುವ ಉದ್ದೇಶವಿರಬಹುದೇ? ವಿವಿಧ ದೇಶಗಳಲ್ಲಿ ವಿವಿಧ ಹುದ್ದೆಗಳನ್ನು ಭಾರತೀಯರು ಅಲಂಕರಿಸುತ್ತಿರುವುದರ ಕುರಿತು ಅಸಹನೆ ಇರಬಹುದೇ? ಯುವಕರನ್ನೇ ದಿಕ್ಕು ತಪ್ಪಿಸಿ ಭಾರತವನ್ನು ಸತ್ವಹೀನವಾಗಿಸುವ ತಂತ್ರ ಹೆಣೆಯಲಾಗಿದೆಯೇ? ಈ ಎಲ್ಲ ಸಂದೇಹಗಳು ನಿರಾಧಾರವೆಂದೇ ಅನಿಸಬಹುದು. ಆದರೆ ಯುವಕ-ಯುವತಿಯರು, ಹದಿಹರೆಯದವರು ಅಂತರ್ಜಾಲದ ಮಹಾಸಾಗರದಲ್ಲಿ ಕಳೆದುಹೋಗುತ್ತಿರುವುದನ್ನು ಮಾತ್ರ ಅಲ್ಲಗಳೆಯಲಾಗದು! ಕಾಲಾಯ ತಸ್ಮೆ„ ನಮಃ ಎನ್ನುವುದನ್ನು ಹೊರತು ಬೇರೆ ದಾರಿ ಗೋಚರಿಸುತ್ತಿದೆಯೇ?

ಸಂಪಿಗೆ ರಾಜಗೋಪಾಲ ಜೋಶಿ

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.