ಸಾರ್ವಜನಿಕ ಆಡಳಿತದ ಶ್ರೇಷ್ಠತೆಯ ಪ್ರಶ್ನೆ


Team Udayavani, Jun 27, 2018, 11:15 AM IST

shrestate.jpg

ಹೆಚ್ಚು ಕಡಿಮೆ ಸಾಧನೆಗಳೆಲ್ಲವೂ ಇಂಪ್ರಶನ್‌ನಿಸ್ಟಿಕ್‌ ಆದವುಗಳು. ಅಂದರೆ ಅಂದಾಜಿನವುಗಳು ಅಥವಾ ಗಾಳಿಸುದ್ದಿಗಳು. ಉದಾಹರಣೆಗೆ ನೆಹರೂ ಅವರ ಪಂಚಶೀಲ ತತ್ವ ವಿದೇಶಾಂಗ ನೀತಿ ವಿಫ‌ಲವಾಗಿ ಹೋಯಿತು ಎನ್ನುವುದೇ ಹಲವರ ಭಾವನೆ. ಆದರೆ ನಿಜಕ್ಕೂ ಅದು ಹಾಗೆ ಆಗಿದ್ದು ಹೌದೇ ಎನ್ನುವುದರ ಕುರಿತು ನಿಖರ ಉತ್ತರಗಳಿಲ್ಲ. ಕಾಶ್ಮೀರದ ರಾಜನೀತಿಯ ಕುರಿತಂತೂ ಸ್ಪಷ್ಟತೆ ಇಲ್ಲ. ಯಾರು ಕಾಶ್ಮೀರವನ್ನು ಕೆಡಿಸಿದರು ಎನ್ನುವ ಬಗ್ಗೆ ಹಲವು ಚರ್ಚೆಗಳಿವೆ.

ಕೆಲವು ಸಮಯದ ಹಿಂದೆ ಕೇಂದ್ರ ಸರಕಾರ ತನ್ನ ಅಸ್ತಿತ್ವದ ನಾಲ್ಕು ವರ್ಷಗಳ ಪೂರೈಕೆಯ ಸಂದರ್ಭದಲ್ಲಿ ಸಾಧನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದೇ ಸಂದರ್ಭದಲ್ಲಿ ಪ್ರಮುಖ ವಿರೋಧ ಪಕ್ಷ ಸರಕಾರದ ನ್ಯೂನತೆಗಳ ಪಟ್ಟಿ ಬಿಡುಗಡೆ ಮಾಡಿತು. ಹೀಗೆ ಪಕ್ಷಗಳು, ಸರಕಾರಗಳು, ವ್ಯಕ್ತಿಗಳು ಸತತವಾಗಿ ತಮ್ಮ ಸಾಧನೆಗಳನ್ನು ಬೇರೆಯವರ ವೈಫ‌ಲ್ಯಗಳನ್ನು ಜನರಿಗೆ ವಿವರಿಸುವುದರಲ್ಲಿ ತೊಡಗಿವೆ. ಕರ್ನಾಟಕದ ಚುನಾವಣೆಗಳು ಘೋಷಣೆಯಾಗುವ‌ ಮೊದಲೂ ಹೀಗೆ ಆಗಿತ್ತು. ವ್ಯಕ್ತಿಗಳು ಮತ್ತು ಸರಕಾರ ತಮ್ಮ ಸಾಧನೆಗಳ ಕುರಿತು ವಿವರಣೆಯಲ್ಲಿ ತೊಡಗಿದ್ದವು. ರಸ್ತೆ ಬದಿಯ ಹೋರ್ಡಿಂಗ್‌ಗಳು, ಬಸ್ಸುಗಳ ಹಿಂಭಾಗಗಳಲ್ಲಿಯ ಜಾಹೀರಾತುಗಳು ಎಲ್ಲವೂ ಸರಕಾರದ/ಪಕ್ಷಗಳ/ಶಾಸಕರ/ಸಚಿವರ ಸಾಧನೆಗಳ ವಿವರಣೆಗಳಿಂದ ತುಂಬಿ ತುಳುಕುತ್ತಿದ್ದವು.

ಪ್ರಭುತ್ವಗಳು ಜನರಿಗೆ ತಮ್ಮ ಸಾಧನೆಗಳನ್ನು ಪ್ರಸ್ತುತಪಡಿಸುವುದು, ಜನತೆ ಅವುಗಳನ್ನು ಪರಿಶೀಲಿಸುವುದು, ಬೇರೆ ಬೇಡಿಕೆಗಳನ್ನು ಮುಂದಿಡುವುದು, ವಿರೋಧ ಪಕ್ಷಗಳು ಸಾಧನೆಗಳೆಂದು ಹೇಳಿ ಕೊಳ್ಳಲಾಗುತ್ತಿರುವ ವಿಷಯಗಳ ಕುರಿತು ಎಚ್ಚರದಿಂದಿರುವುದು ಇವೆಲ್ಲವೂ ಪ್ರಜಾಪ್ರಭುತ್ವಕ್ಕೆ ಒಳ್ಳೆಯದು.

ಆದರೆ ಇಲ್ಲಿ ಕೆಲವು ಮಾತುಗಳನ್ನು ಗಮನಿಸಬೇಕು. ಈ ಬಹುತೇಕ ಜಾಹೀರಾತುಗಳನ್ನು ಗಮನಿಸಿದಾಗ ಅರ್ಥವಾಗುವು ದೆಂದರೆ ಅವುಗಳಲ್ಲಿ ಸತ್ಯಾಂಶಗಳು ಇಲ್ಲದೆಯೂ ಇರಬಹುದು. ಉದಾಹರಣೆಗೆ, ರಾಜಕೀಯ ವ್ಯಕ್ತಿಗಳ ಹುಟ್ಟುಹಬ್ಬದ ದಿನಗಳಲ್ಲಿ ಹೊರಬರುವ ವಿಶೇಷ ಪುರವಣಿಗಳು ಹಲವೊಮ್ಮೆ ಉಪೇಕ್ಷೆಗಳಿಂದ ತುಂಬಿರುತ್ತವೆ. ಹಾಗೆಯೇ ಹೇಳಿಕೊಳ್ಳಲಾದ ಸಾಧನೆಗಳನ್ನು ಸಂಪೂರ್ಣವಾಗಿ ಅನುಮಾನಿಸುವುದೂ ತಪ್ಪಾಗುತ್ತದೆ. ಏಕೆಂದರೆ ದೇಶವನ್ನು ಆಳಿದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಧನೆಯ ಹಾದಿಯಲ್ಲಿ ಪಯಣಿಸಿದ್ದಿದ್ದರೆ ಕೆಲವೇ ವರ್ಷಗಳಲ್ಲಿ ಸುಮಾರು ಎರಡು ನೂರು ಕೋಟಿ ರೂಪಾಯಿಗಳ ವಾರ್ಷಿಕ ಬಜೆಟ್‌ನಿಂದ ಆರಂಭಿಸಿದ ದೇಶ ಇಂದು ಕೋಟಿ ಕೋಟಿ ರೂಪಾಯಿಗಳ ವಾರ್ಷಿಕ ಬಜೆಟ್‌ನ ದೇಶವಾಗಿ ಪರಿವರ್ತನೆ ಗೊಂಡಿದ್ದಾದರೂ ಹೇಗೆ? ದೇಶ ತಂತ್ರಜ್ಞಾನ, ವಾಣಿಜ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ಭಾರೀ ಪ್ರಗತಿ ಸಾಧಿಸಿದ್ದನ್ನು ಯಾರೂ ಅಲ್ಲಗಳೆಯಲಾಗುವುದಿಲ್ಲ. ಕೇಂದ್ರ-ರಾಜ್ಯ ಸರಕಾರಗಳು, ವಿರೋಧ ಪಕ್ಷಗಳು, ದೇಶ ಮಟ್ಟದಲ್ಲಿಂದ ಹಿಡಿದು ಗ್ರಾಮಗಳ ತನಕದ ನಾಯಕರು ದೇಶದ ಬೆಳವಣಿಗೆಗೆ ದೊಡ್ಡ ಪ್ರಮಾಣದ ಕೊಡುಗೆ ನೀಡಿದ್ದು ಖಂಡಿತಕ್ಕೂ ಸತ್ಯ. ಹಾಗೆಯೇ ಸರಕಾರಗಳು ಜನತೆಯ ನಿರೀಕ್ಷೆಯ ಮಟ್ಟಕ್ಕೆ ಕೆಲಸ ಮಾಡಲು ವಿಫ‌ಲವಾಗಿವೆ ಎನ್ನುವುದೂ ಸ್ಪಷ್ಟ, ನಿದ್ರಿಸಿದ ಸರಕಾರಗಳ ಉದಾಹರಣೆಗಳೂ ಇವೆ ಅಥವಾ ಶ್ರೇಣಿಗಳಲ್ಲಿ ಸಾಧನೆಗೈದ ಉದಾಹರಣೆಗಳೂ ಇವೆ. ಸರಕಾರಗಳು ವಿಫ‌ಲಗೊಂಡರೂ ವೈಯಕ್ತಿಕವಾಗಿ ಕೆಲವು ನಾಯಕರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದನ್ನು ನಾವು ನೋಡಿದ್ದೇವೆ. ಹಾಗೆಯೇ ಸಚಿವರುಗಳು ಕೇವಲ ಬೇರೆಯವರ ಸಾಧನೆಯಿಂದ ಸರಕಾರಕ್ಕೆ ಬಂದ ಒಳ್ಳೆಯ ಹೆಸರನ್ನು ಹಂಚಿ ಕೊಳ್ಳಲು ಪ್ರಯತ್ನಿಸಿದ ಉದಾಹರಣೆಗಳೂ ಇವೆ.

ಅದೆಲ್ಲ ಸರಿ. ವಿಷಯವೇನೆಂದರೆ ಸಾಧನೆಗಳಾಗಿವೆ, ವೈಫ‌ಲ್ಯಗಳೂ ಆಗಿವೆ. ಆದರೆ ನಿಜಕ್ಕೂ ಯಾವ ಸಾಧನೆಗಳು, ಯಾವ ರೀತಿಯ ಸಾಧನೆಗಳು ನಿಖರವಾಗಿ, ಸ್ಪಷ್ಟವಾಗಿ, ಯಾವ ಸರಕಾರದಿಂದ, ವ್ಯಕ್ತಿಗಳಿಂದ ಬಂದಿದ್ದು ಎನ್ನುವುದರ ಕುರಿತು ನಿರ್ವಿವಾದವಾಗಿ, ಅಥೆಂಟಿಕ್‌ ಆಗಿ ದಾಖಲಿಸಲು ನಮ್ಮ ದೇಶದಲ್ಲಿ ಸಾಧ್ಯವಾಗಿಲ್ಲ ಎನ್ನುವುದೇ ನನ್ನ ಭಾವನೆ. ಹೆಚ್ಚು ಕಡಿಮೆ ಸಾಧನೆಗಳೆಲ್ಲವೂ ಇಂಪ್ರಶನ್‌ನಿಸ್ಟಿಕ್‌ ಆದವುಗಳು. ಅಂದರೆ ಅಂದಾಜಿನವುಗಳು ಅಥವಾ ಗಾಳಿಸುದ್ದಿಗಳು. ಉದಾಹರಣೆಗೆ ನೆಹರೂ ಅವರ ಪಂಚಶೀಲ ತತ್ವ ವಿದೇಶಾಂಗ ನೀತಿ ವಿಫ‌ಲವಾಗಿ ಹೋಯಿತು ಎನ್ನುವುದೇ ಹಲವರ ಭಾವನೆ. ಆದರೆ ನಿಜಕ್ಕೂ ಅದು ಹಾಗೆ ಆಗಿದ್ದು ಹೌದೇ ಎನ್ನುವುದರ ಕುರಿತು ನಿಖರ ಉತ್ತರಗಳಿಲ್ಲ. ಕಾಶ್ಮೀರದ ರಾಜನೀತಿಯ ಕುರಿತಂತೂ ಸ್ಪಷ್ಟತೆ ಇಲ್ಲ. ಯಾರು ಕಾಶ್ಮೀರವನ್ನು ಕೆಡಿಸಿದರು ಎನ್ನುವ ಬಗ್ಗೆ ಹಲವು ಚರ್ಚೆಗಳಿವೆ, ಅಭಿಪ್ರಾಯಗಳಿವೆ. ಆದರೆ ವಾಸ್ತವಗಳು ಅಂದರೆ ನಿಷ್ಪಕ್ಷವಾದ, ನಿರ್ದಿಷ್ಟವಾದ ಉತ್ತರಗಳು ಲಭ್ಯವಿಲ್ಲ. ನನಗೆ ಹೇಳಬೇಕಾಗಿರುವುದೆಂದರೆ ದೇಶದ ಭಾರೀ ಬೆಳವಣಿಗೆಯ ಈ ಹಂತದಲ್ಲಿ ನಮಗೆ ಸರಕಾರಗಳ, ರಾಜಕಾರಣಿಗಳ ಸಾಧನೆಗಳನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ನಿಖರವಾದ ಮಾಹಿತಿಯ ಅಗತ್ಯವಿದೆ. ಇಂತಹ ಮಾಹಿತಿ ಲಭ್ಯವಾದರೆ ನಮ್ಮ ಸರಕಾರಗಳನ್ನು ಮತ್ತು ರಾಜಕೀಯ ವ್ಯಕ್ತಿಗಳನ್ನು ಇಂಪ್ರಶನ್‌ನಿಸ್ಟಿಕ್‌ ಆದ ಮಾನದಂಡಗಳನ್ನು ಮೀರಿದ ಸ್ಪಷ್ಟವಾದ ಮಾನದಂಡಗಳಿಂದ ಅಳೆಯಬಲ್ಲ ಬೇರೋ ಮಿಟರ್‌ಗಳ ಅಗತ್ಯತೆ ಇದೆ.

ಇಂತಹ ಮಾನ ದಂಡಗಳ ಅಗತ್ಯ ಏಕೆ ಇದೆ? ಏಕೆಂದರೆ ಮೌಲ್ಯ ಮಾಪನ ವ್ಯವಸ್ಥೆಗಳು ಸರಕಾರಗಳಲ್ಲಿ ಪರಸ್ಪರ ಸ್ಪರ್ಧೆಗಳನ್ನು ಉಂಟು ಮಾಡಿ ಒಳ್ಳೆಯ ಕಾರ್ಯ ಆಗುವಂತೆ ಪ್ರೇರೇಪಿಸ ಬಹುದು. ಅಲ್ಲದೆ ಇಂತಹ ವ್ಯವಸ್ಥೆಯ ಲಭ್ಯತೆ ಇದ್ದರೆ ಒಳ್ಳೆಯ ಅಭಿವೃದ್ಧಿ ಕಾರ್ಯ ಸಾಧಿಸಿದ ರಾಜಕಾರಣಿಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ.

ಈ ರೀತಿಯ ಮೌಲ್ಯಮಾಪನಕ್ಕೆ ಜಗತ್ತಿನಾದ್ಯಂತ ಮಾನದಂಡಗಳು ಇಂದು ಲಭ್ಯವಿವೆ. ತಮ್ಮನ್ನು ತಾವು ಪರೀಕ್ಷೆಗೊಳಪಡಿಸಿ ಕೊಳ್ಳಲು, ಸತತವಾಗಿ ತಮ್ಮ ಕಾರ್ಯ ಶೈಲಿಯನ್ನು ಸುಧಾರಿಸಿಕೊಳ್ಳಲು ಹಾಗೂ ಎಲ್ಲ ಸಾಧನೆಗಳನ್ನೂ ಐತಿಹಾಸಿಕ ಆಸಕ್ತಿಯಿಂದ ಸಂರಕ್ಷಿಸಲು ಇಂದು ಜಗತ್ತಿನಾದ್ಯಂತ ದೊಡ್ಡ-ದೊಡ್ಡ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮುನ್ನಡೆಯುತ್ತಿವೆ. ತಮ್ಮ ಕಾರ್ಯಾಚರಣೆಗಳಲ್ಲಿ ಜೀರೋ ಎರರ್‌ ಸ್ಟೇಟಸ್‌ ಸಾಧಿಸಲು ಅವು ಪ್ರಯತ್ನಿಸುತ್ತಿವೆ. ಈ ರೀತಿಯ ತಪ್ಪಿಲ್ಲದ ಕೆಲಸ ಎಷ್ಟೇ ಸಂಕೀರ್ಣವಾಗಿದ್ದರೂ ಸಾಧ್ಯವಿದೆ ಎಂಬುದನ್ನು ನಮಗೆ ಮುಂಬೈನ ಸಂಘಟನೆ ದ ಗ್ರೇಟ್‌ ಬಾಂಬೆ ಡಬ್ಟಾ ವಾಲಾ ತೋರಿಸಿಕೊಟ್ಟಿದೆ. ಸಾರ್ವಜನಿಕ ಆಡಳಿತದಲ್ಲಿ ಕೂಡಾ ಆ ರೀತಿಯ ವ್ಯವಸ್ಥೆ¿åನ್ನು ಜಾರಿಗೊಳಿಸಲು ಸಾಧ್ಯವಿದೆ ಎನ್ನುವುದೇ ನನ್ನ ಭಾವನೆ. ಇಂದು ವಿವಿಧ ಕ್ಷೇತ್ರಗಳಲ್ಲಿ ಈ ರೀತಿಯ ಸೂತ್ರಗ‌ಳು ಅಭಿವೃದ್ಧಿಗೊಂಡಿವೆ. ಜಾಗತಿಕ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಗೆ ಅಕಾಡೆಮಿಕ್‌ ಆಡಿಟ್‌ ಇದೆ. ನ್ಯಾಕ್‌ ಇದೆ. ಕಾರ್ಪೊರೇಟ್‌ ಸಂಸ್ಥೆಗಳಿಗೆ ಹಲವು ರೀತಿಯ ಆಡಿಟ್‌ಗಳು, ಗ್ರೀನ್‌ ಆಡಿಟ್‌ಗಳು ಇವೆ. ಇಂತಹ ಆಡಿಟ್‌ ವ್ಯವಸ್ಥೆಯನ್ನು ಹಂತ ಹಂತವಾಗಿ ಸರಕಾರಗಳಿಗೆ ಮತ್ತು ಜನಪ್ರತಿ ನಿಧಿಗಳಿಗೂ ಅಳವಡಿಸಬಹುದಾಗಿದೆ. ಇದರಿಂದ ಜನತೆಗೆ ಅಷ್ಟೇ ಅಲ್ಲ. ಸರಕಾರಗಳಿಗೂ ಮತ್ತು ಜನಪ್ರತಿನಿಧಿಗಳಿಗೂ ಲಾಭವಿದೆ. ಸರಕಾರಗಳು, ಜನಪ್ರತಿನಿಧಿಗಳು ತಮ್ಮ ಸಾಧನೆಗಳನ್ನು ನೇರವಾಗಿ, ದಿಟ್ಟವಾಗಿ, ಆಧಾರಗಳ ಹಿನ್ನೆಲೆಯಲ್ಲಿ ಪ್ರಸ್ತುತ ಪಡಿಸಿದರೆ ಅವರಿಗೆ ಚುನಾವಣೆಗಳನ್ನು ಎದುರಿಸಲು ಬಲವಾದ ಅಸ್ತ್ರಗಳು ಪ್ರಾಪ್ತವಾಗುತ್ತವೆ. ಅಷ್ಟೇ ಅಲ್ಲ, ಅವರಿಗೆ ಇತಿಹಾಸದ ಪುಟಗಳಲ್ಲಿ ಶಾಶ್ವತ ಸ್ಥಾನ ದೊರೆಯುತ್ತದೆ. ಇಂತಹ ವ್ಯವಸ್ಥೆಯಿಂದಾಗಿ 
ಒಳ್ಳೆಯ ಕೆಲಸ ಮಾಡಿದ ಜನಪ್ರತಿನಿಧಿಗಳಿಗೆ ಅಪಾರ ಗೌರವ ಜನ ಮನ್ನಣೆ ದೊರೆಯಬಹುದು. ಜನತೆಗೆ ಕೂಡಾ ಒಳ್ಳೆಯ ಕೆಲಸ ಮಾಡಿದವರನ್ನು, ಹಾಗೆಯೇ ಹಿಂದೆ ಬಿದ್ದವರನ್ನು ಸ್ಪಷ್ಟವಾಗಿ ಗುರುತಿಸಲು ಅವಕಾಶ ಸಿಗುತ್ತದೆ. 

ಇನ್ನೊಂದು ಮಾತು. ಇದು ನಮ್ಮ ಸಂವಿಧಾನದ ಸೂಚ್ಯ ಆಶಯ ಕೂಡ ಹೌದು. ನಮ್ಮ ಸಂವಿಧಾನ ಸರಕಾರಗಳ ಆರ್ಥಿಕ ಶಿಸ್ತನ್ನು ಕಾಯ್ದುಕೊಳ್ಳಲು ಕಾಂಪೊóàಲರ್‌ ಎಂಡ್‌ ಆಡಿಟರ್‌ ಜನರಲ್‌ ಆಫ್ ಇಂಡಿಯಾ(ಮಹಾಲೇಖಪಾಲ) ಎಂಬ ಶಾಸನ ಬದ್ಧ ಸಂಸ್ಥೆಯನ್ನು ರೂಪಿಸಿದೆ. ಇದು ಚುನಾವಣಾ ಆಯೋಗದ ಹಾಗೆಯೇ ಸಂವಿಧಾನದಡಿಯಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಒಂದು ಸಂಸ್ಥೆ. ಈ ಸಂಸ್ಥೆ ಸರಕಾರಗಳ ವಿತ್ತೀಯ ಶಿಸ್ತನ್ನು ಗಮನಿಸಲು ಹುಟ್ಟಿಕೊಂಡ ಸಂಸ್ಥೆ. ಅದು ಸಾರ್ವಜನಿಕ ಆಡಳಿತದ ಕ್ವಾಲಿಟಿ ಕಂಟ್ರೋಲ್‌ನ ಅವಶ್ಯಕತೆಗಳ ಒಂದು ಭಾಗವನ್ನು ಪೂರೈಸುತ್ತದೆ. ನಮಗೆ ಈಗ ಇರುವ ಅಗತ್ಯ ಸಂಪೂರ್ಣವಾಗಿ  ಸಾರ್ವಜನಿಕ ಆಡಳಿತವನ್ನು ಮೌಲ್ಯಮಾಪನ ಕ್ಕೊಳಪಡಿಸಬಲ್ಲ ಒಂದು ಆಡಳಿತದ ಗುಣಮಟ್ಟದ ಮಾನಿಟರಿಂಗ್‌ ಸಂಸ್ಥೆ. ಸರಕಾರ ಈ ದಿಶೆಯಲ್ಲಿ ಆಲೋಚಿಸಿ ಕಾಂಪೊóàಲರ್‌ ಎಂಡ್‌ ಆಡಿಟರ್‌ ಜನರಲ್‌ ರೀತಿಯಲ್ಲಿಯೇ ಒಂದು ಸಾಂವಿಧಾನಿಕವಾದ ಕ್ವಾಲಿಟಿ ಕಂಟ್ರೋಲ್‌ ಸಂಸ್ಥೆಯನ್ನು ಹುಟ್ಟು ಹಾಕಬಹುದಾಗಿದೆ. ಇದರ ಉದ್ದೇಶ ಜನ ಪ್ರತಿನಿಧಿಗಳ ಹಾಗೂ ಸರಕಾರಗಳ ಮೌಲ್ಯಮಾಪನ.ಲೋಕಪಾಲ ಸಂಸ್ಥೆಗೆ ಮತ್ತು ಈ ಸಂಸ್ಥೆಗೆ ವ್ಯತ್ಯಾಸವಿದೆ. ಏನೆಂದರೆ ಇದು ಕೇವಲ ಕಂಪ್ಲೇಂಟ್‌ ಕೇಳುವ ಸಂಸ್ಥೆಯಲ್ಲ. ಕಂಪ್ಲೇಂಟ್‌ಗಳನ್ನು ಹ್ಯಾಂಡಲ್‌ ಮಾಡುವ ಸಂಸ್ಥೆಯೂ ಅಲ್ಲ. ಈ ಸಂಸ್ಥೆಯ ಕೆಲಸವೆಂದರೆ ವಾಸ್ತವಿಕ ಆಧಾರಗಳ ಮೇಲೆ ಮೌಲ್ಯಮಾಪನ ನಡೆಸಿ ಶ್ರೇಣಿಗಳನ್ನು, ಗ್ರೇಡಿಂಗ್‌ಗಳನ್ನು ಜನ ಪ್ರತಿನಿಧಿಗಳಿಗೆ ಹಾಗೂ ಸರಕಾರಗಳಿಗೆ ನೀಡುವುದು. ಹಾಗೆಯೇ ಈ ಸಂಸ್ಥೆ ಒಳ್ಳೆಯ ಆಡಳಿತದ ಮಾನದಂಡಗಳು ಏನು ಎನ್ನುವುದನ್ನು ಸೂಕ್ಷ್ಮವಾಗಿ ಚಲನಶೀಲವಾಗಿ, ಗುರುತಿಸಿಕೊಳ್ಳುತ್ತಾ ಹೋಗಬಹುದಾಗಿದೆ.

ಬಹುಶಃ ಸರಕಾರಗಳನ್ನು ಇಂತಹದೊಂದು ಸಂಸ್ಥೆ ಅಳೆಯಬಹುದಾದ ಮಾನದಂಡಗಳೆಂದರೆ: (ಅ) ಆ ಸರಕಾರ ಆಡಳಿತಕ್ಕೆ ಬಂದ ನಂತರ ನೀತಿ ನಿರೂಪಣೆಯ ದಾರಿ ಸಂವಿಧಾನದ ಆಶಯಗಳಂತೆ ಇದೆಯೇ ಎನ್ನುವುದರ ಪರಿಶೀಲನೆ (ಬ) ನೀತಿ ನಿರೂಪಣೆಯ ವೇಗ ಮತ್ತು ಶ್ರೇಷ್ಠತೆ (ಕ) ನೀತಿಗಳನ್ನು ಕ್ರಿಯಾತ್ಮಕವಾಗಿ ಆಚರಣೆಗೆ ತರುವಿಕೆಯ ವೇಗ ಮತ್ತು ಶ್ರೇಷ್ಠತೆ ಹಾಗೂ ಪಾರದರ್ಶಕತೆ. 
ಅಂತೆಯೇ ಮಾನದಂಡಗಳು ಕಾರ್ಯ ನಿರ್ವಹಣೆಯಲ್ಲಿನ ಪ್ರಾಮಾಣಿಕತೆ, ವೇಗ, ಪಾರದರ್ಶಕತೆ, ಆರ್ಥಿಕ ಶಿಸ್ತು ಮತ್ತು ಸಾಮಾಜಿಕ ನ್ಯಾಯ ಪಾಲನೆಗಳನ್ನು ಹೊಂದಿರಬಹುದಾಗಿದೆ. ಅಂತೆಯೇ ಜನಪ್ರತಿನಿಧಿಗಳನ್ನು ನೀತಿ ನಿರೂಪಣೆಗೆ ಕೊಡುಗೆ, ಶಾಸನ ಸಭೆಗಳ ಭಾಗವಹಿಸುವಿಕೆಯ ಗುಣಮಟ್ಟ ಮತ್ತು ಜನ ಸ್ನೇಹಿ ಗುಣ ಮಟ್ಟ ಆಧಾರಗಳ ಮೇಲೆ ಕಾಲಕಾಲಕ್ಕೆ ಜನರ ಫೀಡ್‌ಬ್ಯಾಕ್‌ ಮೂಲಕ ಅಳೆಯಬಹುದಾಗಿದೆ.

ಈ ರೀತಿಯಲ್ಲಿ ಸರಕಾರಗಳ ಜನಪ್ರತಿನಿಧಿಗಳ ಮೌಲ್ಯಮಾಪನೆ ಗಾಗಿ ಶಾಸನಬದ್ಧ ಸಂಸ್ಥೆಯೊಂದನ್ನು ಜಾರಿಗೆ ತಂದರೆ ಅದು ಜಾಗತಿಕ ಇತಿಹಾಸದಲ್ಲಿಯೇ ಒಂದು ಮಹತ್ವದ ಹೆಜ್ಜೆಯಾಗಲಿದೆ. ಇಂತಹ ಸಂಸ್ಥೆಯೊಂದರ ಕನಸು ಕಾಣುವುದರಲ್ಲಿ ತಪ್ಪೇನೂ ಇಲ್ಲ. ಸಂವಿಧಾನ ತಿದ್ದುಪಡಿಯ ಮೂಲಕ ಇದನ್ನು ಸಾಧಿಸಬಹುದಾಗಿದೆ. ಕನ್‌ಫ್ಯೂಶಿಯಸ್‌ ಹೇಳುವಂತೆ ಸಾವಿರಾರು ಮೈಲಿಗಳ ಪಯಣ ಆರಂಭವಾಗುವುದು ಒಂದು ಚಿಕ್ಕ ಹೆಜ್ಜೆಯನ್ನು ಮುಂದಿಟ್ಟಾಗ ಮಾತ್ರ.

– ಡಾ. ಆರ್‌.ಜಿ. ಹೆಗಡೆ

ಟಾಪ್ ನ್ಯೂಸ್

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.