ನೈತಿಕ ಪತನದ ಸ್ಲೋ ಪಾಯ್ಸನ್‌ ಮೊಬೈಲ್‌ 


Team Udayavani, Jul 21, 2018, 6:06 PM IST

2.jpg

ನೆಟ್‌ವರ್ಕ್‌ ಸಹಿತ ಮೊಬೈಲ್‌ ಮಕ್ಕಳಿಗೆ ನೀಡಬೇಕು. ಎಲ್ಲವನ್ನೂ ನೋಡಿ ಬೇಕಾದ್ದನ್ನು ಅರಿಸುವ ಮನಸ್ಥಿತಿ ಅವರಿಗೆ ಬರಬೇಕು. ಮಕ್ಕಳನ್ನು ಅವರ ಹಕ್ಕಿನಿಂದ ವಂಚಿಸಬಾರದು. ಇದು ಬುದ್ಧಿಜೀವಿಗಳು ಎನಿಸಿಕೊಂಡವರ ಅಭಿಪ್ರಾಯದ ಸಾರ. ಅವರು ತಮ್ಮ ಮಕ್ಕಳಿಗೆ ಪಿ.ಯು.ಸಿ ಹಂತದಲ್ಲಿ  ಸರ್ವ ಸ್ವಾತಂತ್ರ್ಯ ಮತ್ತು ಮೊಬೈಲ್‌ ನೆಟ್‌ವರ್ಕ್‌ ಸಹಿತ ನೀಡಿ ಅವರು ಉತ್ತಮ ಅಂಕ ಗಳಿಸಿ ಇಚ್ಚಿಸಿದ ಉದ್ಯೋಗಕ್ಕೆ ಹೋಗಲು ಸಾಧ್ಯವೇ ಎಂದು ಪ್ರಯತ್ನಿಸಿ ನೋಡಲಿ. 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಒಂದು ಶಿಕ್ಷಣ ಸಂಸ್ಥೆಯಲ್ಲಿ ಪಿ.ಯು.ಸಿಯ 400 ಮಕ್ಕಳು ಸ್ವಯಂ ಪ್ರೇರಿತರಾಗಿ ತಂದೆ ತಾಯಿ ಹೆಸರಿನಲ್ಲಿ ಪಿ.ಯು.ಸಿ ಶಿಕ್ಷಣ ಮುಗಿಯುವ ತನಕ ಸೋಶಿಯಲ್‌ ಮೀಡಿಯಾ ಬಳಕೆ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಅಂದರೆ ಮುಖ್ಯವಾಗಿ ಮೊಬೈಲ್‌ ನೆಟ್‌ ವೀಕ್ಷಣೆ ಮಾಡುವುದಿಲ್ಲ ಎಂಬ ಶಪಥ. ಈ ನಿರ್ಧಾರ ನನ್ನಂತಹ ನೂರಾರು ಶಿಕ್ಷಕರಿಗೆ, ಹೆತ್ತವರಿಗೆ ಸಂತಸ ತಂದಿದೆ. ಆದರೆ ಬುದ್ಧಿಜೀವಿಗಳು ಅಪಸ್ವರ ಎತ್ತಿದ್ದಾರೆ. ಮಕ್ಕಳ ಹಕ್ಕಿನ ಹರಣವಾಯಿತು ಎಂದು ಗೋಳಿಡು ತ್ತಿದ್ದಾರೆ. ಪಾಪ ಎಷ್ಟೋ ತಂದೆ ತಾಯಂದಿರು ತಮ್ಮ ಮಕ್ಕಳ ಮೊಬೈಲ್‌ ಹುಚ್ಚು ಹತ್ತಿಕ್ಕಲಾರದೆ, ವಿದ್ಯಾರ್ಜನೆಯಲ್ಲಿ ಹಿಂದೆ ಬಿದ್ದಿರುವುದಕ್ಕೆ ಕಣ್ಣೀರಿಡುತ್ತಿರುವುದು ಇವರಿಗೆ ಅರಿವೇ ಇಲ್ಲ. 

ನೆಟ್‌ವರ್ಕ್‌ ಸಹಿತ ಮೊಬೈಲ್‌ ಮಕ್ಕಳಿಗೆ ನೀಡಬೇಕು. ಎಲ್ಲವನ್ನೂ ನೋಡಿ ಬೇಕಾದ್ದನ್ನು ಅರಿಸುವ ಮನಸ್ಥಿತಿ ಅವರಿಗೆ ಬರಬೇಕು. ಮಕ್ಕಳನ್ನು ಅವರ ಹಕ್ಕಿನಿಂದ ವಂಚಿಸಬಾರದು. ಇದು ಬುದ್ಧಿಜೀವಿಗಳು ಎನಿಸಿಕೊಂಡವರ ಅಭಿಪ್ರಾಯದ ಸಾರ. ಅವರು ತಮ್ಮ ಮಕ್ಕಳಿಗೆ ನಿರ್ಧಾರಾತ್ಮಕ ಪಿ.ಯು.ಸಿ ಹಂತದಲ್ಲಿ ಮಕ್ಕಳ ಹಕ್ಕಿನಡಿಯಲ್ಲಿ ಬರುವ ಸರ್ವ ಸ್ವಾತಂತ್ರ್ಯ ಮತ್ತು ನೆಟ್‌ವರ್ಕ್‌ ಸಹಿತ ನೀಡಿ ಅವರು ಉತ್ತಮ ಅಂಕ ಗಳಿಸಿ ಇಚ್ಚಿಸಿದ ಉದ್ಯೋಗಕ್ಕೆ ಹೋಗಲು ಸಾಧ್ಯವೇ ಎಂದು ಪ್ರಯತ್ನಿಸಲಿ.

ಹದಿಹರೆಯದ ಅಂದರೆ 13 ರಿಂದ 18 ಚಂಚಲ ಚಿತ್ತದ ವಯಸ್ಸು. ಈ ಚಂಚಲ ಚಿತ್ತದ ಸಮಯದಲ್ಲಿ ಹೆತ್ತವರ, ಶಿಕ್ಷಕರ ಹಿಡಿತ ಮಕ್ಕಳ ಮೇಲೆ ಬೇಕಾಗುತ್ತದೆ. ಶೇಕಡಾ 10 ಮಕ್ಕಳು ಇದಕ್ಕೆ ಅಪವಾದವಿರಬಹುದು. 1973ರಲ್ಲಿ ಅಮೆರಿಕನ್‌ ಎಂಜಿನಿಯರ್‌ ಮಾರ್ಟಿನ್‌ ಕೂಪರ್‌ ಸೆಲ್‌ ಫೋನ್‌ (ಮೊಬೈಲ್‌) ಕಂಡು ಹಿಡಿದರು. ಇಂದಿನ ಸೋಶಿಯಲ್‌ ಮೀಡಿಯಾಕ್ಕೆ ಇದು ನೋಬೆಲ್‌ನ ಡೈನಮೈಟ್‌ನಷ್ಟೇ ಪ್ರಭಾವ ಆಗಿದೆ ಎಂದರೆ ಅತಿಶಯೋಕ್ತಿ ಎನಿಸಿದು. ಅಂದಿನ ಬಟನ್‌ ರೂಪದ ಮೊಬೈಲ್‌ ಇಂದು ಅಂಗೈಯಲ್ಲಿ ವಿಶ್ವ ದರ್ಶನದ ಕಂಪ್ಯೂಟರೈಸ್ಡ್ ಏಂಡ್ರಾಯ್ಡ ಮೊಬೈಲ್‌ ಆಗಿದೆ. ಮೊಬೈಲ್‌ ಅನ್ವೇಷಣೆ, ಅದರ ಮೋಡಿಫಿಕೇಶನ್‌, ಇಂದು ಸಮಾಜ ಅದರಿಂದ ಪಡೆಯುತ್ತಿರುವ ಲಾಭ(?), ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತ ಕೊಂಡೊಯ್ಯುತ್ತಿದೆ ಎಂದು ಊಹಿಸಲಸಾಧ್ಯದ ಸ್ಥಿತಿಗೆ ತಲಪಿದೆ. ಕಂಪೆನಿಯೊಂದರ ಉಚಿತ ಎನ್ನುವಷ್ಟು ಕಡಿಮೆಯ ಡೇಟಾ ಉಪಯೋಗದ ಬೆಲೆ, ಹಲವರ ಮೊಬೈಲ್‌ 24 ಗಂಟೆ ನೆಟ್‌ ಜಾಲಾಡುತ್ತಿರುವಂತೆ ಮಾಡಿದೆ. ಇಂದು ಮೊಬೈಲ್‌ ನಮ್ಮ ಸಮಾಜದಲ್ಲಿ ಆಲಸಿ, ನಿಷ್ಪ್ರಯೋಜಕ, ಬೇಜಾಬ್ದಾರಿ ಜನತೆೆಯನ್ನು ಸೃಷ್ಟಿಸುತ್ತಿದೆಯೇ? ಭ್ರಷ್ಟಾಚಾರಕ್ಕೆ, ಅನೈತಿಕ ವ್ಯವಹಾರಕ್ಕೆ, ಅತ್ಯಾಚಾರಿಗಳಿಗೆ ಪ್ರೇರಣೆ ಒದಗಿಸುತ್ತಿದೆಯೇ ಎಂಬ ಜಿಜ್ಞಾಸೆ ಪ್ರಜ್ಞಾವಂತರನ್ನು ಕಾಡುತ್ತಿದೆ. ಮೊಬೈಲ್‌ ಮಾನವೀಯ ಮೌಲ್ಯಕ್ಕೆ, ನೈತಿಕತೆಗೆ ಸದ್ದು ಗದ್ದಲವಿಲ್ಲದೆ ಇಟ್ಟ ಡೈನಮೈಟೇ? ಮಾರ್ಟಿನ್‌ ಕೂಪರ್‌ ತನ್ನ ಆವಿಷ್ಕಾರ ಈ ಹಂತ ತಲಪಬಹುದೆಂದು ಎಣಿಸಿರಲಾರರು. ಹದಿಹರೆಯದವರ ಪ್ರೇಮ ಪ್ರಕರಣ, ಲವ್‌ ಜೆಹಾದ್‌, ಗೃಹಸ್ಥರ ಅನೈತಿಕ ಪ್ರೇಮ ಪ್ರಹಸನ ಇತ್ಯಾದಿಗಳ ಮೂಲ ಕಾರಣ ಮೊಬೈಲ್‌ ಚಾಟಿಂಗ್‌.

ವೃತ್ತಿಯಿಂದ ಶಿಕ್ಷಕನಾಗಿದ್ದ ನಾನು 34 ವರ್ಷದ ವೃತ್ತಿ ಜೀವನದಲ್ಲಿ ಮೊಬೈಲ್‌ ಇಲ್ಲದ ಮತ್ತು ಇದ್ದ ಅವಧಿಯನ್ನು ಕಂಡಿದ್ದೇನೆ. ಮಕ್ಕಳಿಗಾಗಿ ಶಾಲಾವಧಿಯ ನಂತರ ನೂರಾರು ಕಾರ್ಯ ಕ್ರಮಗಳನ್ನು ಮಾಡಿದ್ದೇನೆ. ಈಗ ಶಾಲಾ ಸಮಯದ ನಂತರ ಮಕ್ಕಳಿಗೆ ಯಾವುದೇ ಕಾರ್ಯಕ್ರಮಗಳು ಬೇಡ. ಸಂಜೆ ಮಕ್ಕಳಿಗೆ‌ ಆಟ ಬೇಡ. ಎಷ್ಟು ಹೊತ್ತಿಗೆ ಮನೆ ಸೇರಿ ಅಮ್ಮನ ಅಪ್ಪನ ಮೊಬೈಲ್‌ ವೀಕ್ಷಿಸುತ್ತೇನೆ ಎಂಬುದರತ್ತ ಮಾತ್ರ ಲಕ್ಷ್ಯ. ಸಂಗೀತ, ನೃತ್ಯದಲ್ಲಿ ಇತರ ಹವ್ಯಾಸದಲ್ಲಿ ತೊಡಗಿಸಿಕೊಳ್ಳುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದೆ. ಅನ್ಯ ಪುಸ್ತಕ ಓದು ಮಕ್ಕಳಿಗೆ ಮರೆತೇ ಹೋಗಿದೆ. ಹೆತ್ತವರ ಅಳಲೊಂದೇ, ನನ್ನ ಮಗುವನ್ನು ಮೊಬೈಲ್‌ ಪಿಡುಗಿನಿಂದ, ಗೀಳಿನಿಂದ ರಕ್ಷಿಸಿ ಎಂದು. ಕೆಲವು ಹೈಸ್ಕೂಲ್‌ ಮಕ್ಕಳ ಮೊಬೈಲ್‌ಗ‌ಳನ್ನು ಶಿಕ್ಷಕರು ಹಿಡಿದು ತಂದಾಗ ಅದರಲ್ಲಿರುವುದನ್ನು ವೀಕ್ಷಿಸಿ ನಾನು ದಂಗಾಗಿ ಹೋಗಿದ್ದೇನೆ. ಅವರು ನೋಡುತ್ತಿರುವುದು ಪೋರ್ನ್ ವಿಡಿಯೋಸ್‌, ಫೋಸ್ಡ್ì  ಸೆಕ್ಸ್‌. ಇದನ್ನು ವೀಕ್ಷಿಸುತ್ತಿರುವ ಇವರು ಯುವಕರಾದಾಗ ಇವರ ಎದುರಿನಲ್ಲಿ ಹೆಣ್ಣೊಬ್ಬಳು ಏಕಾಂಗಿಯಾಗಿ ಸಿಕ್ಕರೆ ಏನಾಗಬಹದೆಂದು ಯೋಚಿಸಿ. 

ಇಂತಹ ಹುಡುಗನ ತಂದೆಯನ್ನು ಬರ ಹೇಳಿದೆೆªನು. ತನ್ನ ಮಗ ಅಧ್ಯಯನಕ್ಕೆ ತೊಂದರೆಯಾಗದಂತೆ ಕೋಣೆಯ ಬಾಗಿಲನ್ನು ಹಾಕಿ ರಾತ್ರಿ 1-2 ಗಂಟೆಯ ತನಕ ಓದುತ್ತಿರುತ್ತಾನೆ. ಸಂಶಯಗಳನ್ನು ಮೊಬೈಲ್‌ ನೆಟ್‌ ಮೂಲಕ ನೋಡಿ ಪರಿಹರಿಸಿಕೊಳ್ಳುತ್ತಿದ್ದೇನೆ ಎನ್ನುತ್ತಿದ್ದಾನೆ, ಆದರೆ ಪರೀಕ್ಷೆಯಲ್ಲಿ ಅಂಕಗಳು ಏಕೆ ಕಡಿಮೆಯಾದವು ಎಂದು ಅರ್ಥವಾಗುತ್ತಿಲ್ಲ ಎಂದರು ಮುಗ್ಧರಾಗಿ. ಆತನ ಕೈಯಲ್ಲಿದ್ದ ಮೊಬೈಲಿನಲ್ಲಿ ಏನುಂಟು ಎಂಬುದನ್ನು ತುಸು ತೋರಿಸಿದೆನು. ಪಾಪ ತಲೆತಿರುಗಿ ಬಿದ್ದು ಬಿಟ್ಟರು ಈ ಹೆತ್ತವರು. ಒಂದು ದಿನ ವಾರದ ಸಂತೆಯಲ್ಲೊಮ್ಮೆ ಸುತ್ತು ಬರುತ್ತಿದ್ದೆನು. ಗೋಡೆಯ ಮರೆಯೊಂದರಲ್ಲಿ ಸುಮಾರು 10 ವಯಸ್ಸಿನ ಮೂವರು ಮಕ್ಕಳು  ಲೋಕವನ್ನೇ ಮರೆತು ಮೊಬೈಲ್‌ ವೀಕ್ಷಿಸುತ್ತಿದ್ದರು. ಹಿಂದಿನಿಂದ ಹೋಗಿ ಇಣುಕಿದೆ. ನೀಲಿ ಚಿತ್ರ ವೀಕ್ಷಿಸುತ್ತಿದ್ದರು. 2 ವರ್ಷದ ಮಗುವೊಂದಕ್ಕೆ ಅಮ್ಮ ನೆಟ್‌ ಮೂಲಕ ಕಾಟೂìನ್‌ ವಿಡಿಯೋ ವೀಕ್ಷಣೆ ಕಲಿಸಿದ್ದರು. ಈಗ ಮಗು ಅದೇ ಬೇಕು ಎಂದು ಹಠ ಹಿಡಿಯುತ್ತಿದೆ. ನೆಟ್‌ವರ್ಕ್‌ ಬಂದ್‌ ಮಾಡಿ ಮೊಬೈಲ್‌ ನೀಡಿದಲ್ಲಿ ಎತ್ತಿ ಬಿಸಾಡುತ್ತಿದೆ. ನೆಲಕ್ಕೊಗೆದು ಹುಡಿಮಾಡಿ, ನೆಟ್‌ ವರ್ಕ್‌ ಕಾಟೂìನ್‌ ಬೇಕು ಎಂದು ಊಟ ತಿಂಡಿ ಮಾಡದೆ ಹಠ ಹಿಡಿದು ಕುಳಿತುಕೊಳ್ಳುತ್ತದೆಯಂತೆ. 

ಸುಳ್ಳು ಸುದ್ದಿ, ಸತ್ಯ ಸುದ್ದಿಗಿಂತ ಹೆಚ್ಚು ಪ್ರಚಾರ ಪಡೆಯುತ್ತದೆ. ಹೆಚ್ಚು ಅಪ್ಯಾಯಮಾನವಾಗಿರುತ್ತದೆ. ಮೊಬೈಲ್‌ ಕೇವಲ ಮಾತಿನ ಸಂವಹನ ಮಾಧ್ಯಮವಾಗಿರುತ್ತಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ಸಮಾಜಕ್ಕೆ ತಡೆಯಲಸಾಧ್ಯವಾದ ವೇಗದಲ್ಲಿ ಮೊಬೈಲ್‌ ಕ್ರಾಂತಿ ಮುಂದುವರಿಯುತ್ತಿದೆ. ಈ ವೇಗದೆತ್ತರ ಆಚೆ ಬದಿಯ ಪ್ರಪಾದತ್ತ ನಮ್ಮ ಸಮಾಜವನ್ನು ತಳ್ಳುತ್ತಿದೆ ಎನ್ನದೆ ವಿಧಿಯಿಲ್ಲ. ಸೋಶಿಯಲ್‌ ಮೀಡಿಯಾ ಮೂಲಕ ಮಾಡುವ ಅಪರಾಧ‌ಗಳು ಸೈಬರ್‌ ಕ್ರೆçಮ್‌ ಎನಿಸುತ್ತವೆ. ಇದರ ಅರಿವಿಲ್ಲದೆ ಅನೇಕ ಮಕ್ಕಳು ಈಗ ಕಠಿನ ಶಿಕ್ಷಾರ್ಹ ಅಪರಾಧ‌ಗಳನ್ನು ಮಾಡುತ್ತಿದ್ದಾರೆ. 

ಹಲವು ಮನೆಯಲ್ಲಿ ಮಕ್ಕಳು ಮೊಬೈಲ್‌ ದಾಸರು. ರಜಾ ದಿನಗಳಲ್ಲಿ ಎಲ್ಲರೆದುರು ಒಂದಾದ ನಂತರ ಒಂದು ಸಿನೇಮಾ ವೀಕ್ಷಣೆ . ರಾತ್ರಿ ಹೆತ್ತವರು ಮಲಗಿದ ನಂತರವೂ ಇದು ರಾತ್ರೆ 1-2 ಗಂಟೆಯ ತನಕ ಮುಂದುವರಿಯುತ್ತದೆ. ಏನು ವೀಕ್ಷಿಸಿದರು ಎಂದು ನೋಡುವವರಿಲ್ಲ. ಬೆಳಗ್ಗೆ 9 ಗಂಟೆಗೆ‌ ಎದ್ದರೆ ಪುಣ್ಯ. ಹಲವು ಮಂದಿ ಇದಕ್ಕಾಗಿ ತಮ್ಮ ಮಕ್ಕಳನ್ನು ಹಾಸ್ಟೆಲ್‌ಗೆ ಹಾಕಲು ಬಯಸುತ್ತಾರೆ. ಅಲ್ಲಿ ಹಾಟ್‌ ಕುಕ್ಕರ್‌ ವಾತಾವರಣದಲ್ಲಿ, ಸಿಸಿಟಿವಿ ಕಣ್ಗಾವಲಿನಲ್ಲಿ ಕಲಿಯಬೇಕಾಗುತ್ತದೆ. ಹೆತ್ತವರು ತಮಗೆ ಜೈಲುವಾಸ ವಿಧಿಸಿದರು ಎಂದು ಹಲಬುವ ಹಲವು ಮಕ್ಕಳನ್ನು ಕಂಡಿದ್ದೇನೆ. ಇಂದು ಮುಖ್ಯವಾಗಿ ಗಂಡು ಮಕ್ಕಳಿಗೆ ವಿದ್ಯಾಭ್ಯಾಸ ಅನಿವಾರ್ಯವಾಗಿದೆ. ಪೇಟೆಯಲ್ಲಿ ಉದ್ಯೋಗ ಖಾತ್ರಿಯಿದ್ದರೆ ಮಾತ್ರ ಹೆಣ್ಣು ಸಮ್ಮತಿಸಿ ಮದುವೆಯಾಗಿ ಗೃಹಸ್ಥಾಶ್ರಮ ಸಿದ್ಧಿಸಬಹುದಷ್ಟೇ. ವಿದ್ಯಾಭ್ಯಾಸದಿಂದ ವಿಮುಖರಾಗಿ ಕೃಷಿ, ಹಳ್ಳಿ ಬದುಕನ್ನು ನೆಚ್ಚಿದ, ನೂರಾರು ಮದುವೆಯ ವಯಸ್ಸು ಮೀರಿದ ಯುವಕರು ಇದಕ್ಕೆ ಸಾಕ್ಷಿ. ಅಂದು ಮೊಬೈಲ್‌ನ ಸ್ಥಾನವನ್ನು ಟಿವಿ ಮತ್ತು ಕಂಪ್ಯೂಟರ್‌ಗಳು ತುಂಬಿದ್ದವು. ಈಗ ಅದು ಅಂಗೈಯಲ್ಲಿ ಅಂಟಿ ಕುಳಿತಿದೆ. ಈ ಕಾರಣದಿಂದಲೇ ಗಂಡು ಮಕ್ಕಳ ಹೆತ್ತವರು ಹೆಚ್ಚು ಆತಂಕಿತರಾಗಿದ್ದಾರೆ. 

ಮೊಬೈಲ್‌ ಇಂದು ಸಮಾಜದಲ್ಲಿ ಜನರ ಕ್ರಿಯಾತ್ಮಕ ಚಟುವಟಿಕೆಗಳನ್ನು, ಧನಾತ್ಮಕ ಚಿಂತನೆಗಳನ್ನು ಕುಂಠಿತ ಗೊಳಿಸುವ ಖಳನಾಯಕನಂತೆ ಕಂಗೊಳಿಸುತ್ತಿದೆ. ಖಳನಾಯಕನಲ್ಲಿಯೂ ಒಳ್ಳೆ ಗುಣಗಳಿರುತ್ತವೆ. ಅಮೂಲ್ಯ ಸಮಯವನ್ನು ಮಕ್ಕಳು ಮೊಬೈಲ್‌ ಚಾಟಿಂಗ್‌, ವಾಟ್ಸಪ್‌, ಫೇಸ್‌ಬುಕ್‌ ವೀಕ್ಷಣೆಯತ್ತ ಉಪಯೋಗಿ ಸಿದರೆ ಈ ಸಮಯ ಮರಳಿ ಬಂದೀತೆ? ಅನೇಕ ಉತ್ತಮ ವಿದ್ಯಾಭ್ಯಾಸ ಹೊಂದಿದ ಹಿರಿಯರು ಕೂಡಾ ತಮ್ಮ ಇತರ ಓದು, ಕೆಲಸ ಕಾರ್ಯಗಳನ್ನು ಬಿಟ್ಟು ಮೊಬೈಲ್‌ಗೆ ಎಡಿಕ್ಟ್ ಆಗಿದ್ದಾರೆ. 

ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಗೂಗಲ್‌ನಲ್ಲಿ ಇತರ ವೆಬ್‌ಸೈಟ್‌ಗಳಲ್ಲಿ ಅಪಾರ ಮಾಹಿತಿ ಇದೆ. ಆದರೆ ಮಕ್ಕಳ ಚಿತ್ತ, ಮನಸ್ಸನ್ನು ಕೆರಳಿಸುವ ಪುಟಗಳೂ ಪಕ್ಕದಲ್ಲಿಯೇ ಇವೆ. ಚೀನಾದಲ್ಲಿ ಅಶ್ಲೀಲ ಎನಿಸಿದ ಎಲ್ಲಾ ಮಾಹಿತಿಗಳ ಪ್ರಸಾರವನ್ನು ತಡೆ ಹಿಡಿಯಲಾಗಿ ದೆಯಂತೆ. ನಮ್ಮಲ್ಲಿ ಅಂತಾರಾಷ್ಟ್ರೀಯ ಕಂಪೆನಿಗಳಿಗೆ ಸಡ್ಡು ಹೊಡೆದು ಅವರ ಬಿಗಿ ಹಿಡಿತದಿಂದ ಮೊಬೈಲ್‌ನಲ್ಲಿ ಸಿಗುವ ಅಶ್ಲೀಲತೆಯನ್ನು ಸಿಗದಂತೆ ಮಾಡಲು, ಫೇಸ್‌ಬುಕ್‌, ವಾಟ್ಸಪ್‌ನಲ್ಲಿ ಹರಿದಾಡುವ ವಿಚಾರಗಳನ್ನು ಸೆನ್ಸಾರ್‌ ಮಾಡಿ ನೀಡಲು ಸಾಧ್ಯವೇ? 

ಮೊಬೈಲ್‌ ಇಂದು ಸಮಾಜದ ಪಾಲಿಗೆ ಭಸ್ಮಾಸುರನಿಗೆ ಸಿಕ್ಕಿದ ವರದಂತಾಗಿದೆ. ಹದಿಯರೆಯದವರು ಕೀಳು ಕಾಮನೆಗೆ ಬಲಿಬೀಳಲು ತೆರೆದಿಟ್ಟ ಮಾಧ್ಯಮವಾಗಿದೆ. ವಿದ್ಯಾರ್ಜನೆಗೈ ಯುತ್ತಿರುವ ಮಕ್ಕಳನ್ನು ನಿರ್ಣಾಯಕ ಹಂತದಲ್ಲಿ ಸೋಶಿಯಲ್‌ ಮೀಡಿಯಾ ಬಳಕೆಯಿಂದ ದೂರವಿಟ್ಟರೆ ಆ ಮಕ್ಕಳಿಗೆ ಏಕ ಚಿತ್ತದಿಂದ ಅಧ್ಯಯನ ಮಾಡಲು ಖಂಡಿತ ಸಾಧ್ಯ. ಸಮಾಜದ ಒಳಿತಿಗೆ ಬುದ್ಧಿಜೀವಿಗಳು ವಿರೋಧ ಪಕ್ಷದಂತೆ ವರ್ತಿಸದೆ ಉತ್ತಮ ನಿರ್ಧಾರಗಳನ್ನು ಸ್ವಾಗತಿಸಲಿ.

ಶಂಕರ್‌ ಸಾರಡ್ಕ 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.