ಅಮೆರಿಕದ ಲೋಭದ ಪಟ್ಟು, ಭಾರತಕ್ಕೆ ಬಿಕ್ಕಟ್ಟು


Team Udayavani, Aug 19, 2018, 12:42 PM IST

bottom.jpg

ಅಮೆರಿಕ ಕಚ್ಚಾ ತೈಲದಿಂದ ಹಿಡಿದು ಶಸ್ತ್ರಾಸ್ತ್ರ ಖರೀದಿಯ ವಿಷಯದವರೆಗೂ ಯಾವ ರೀತಿಯ ರಣನೀತಿ ರೂಪಿಸುತ್ತಿದೆಯೆಂದರೆ, ಅದು ಭಾರತ ಸಹಿತ ಇತರೆ ದೇಶಗಳಿಗೂ ತನ್ನ ಸ್ವಹಿತಾಸಕ್ತಿಗೆ ಪೂರಕವಾಗುವಂತೆ ನಡೆದುಕೊಳ್ಳಲು ಒತ್ತಡಹಾಕುತ್ತಿದೆ. ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಮತ್ತು ಗ್ಯಾಸ್‌ ಮಾರುವುದನ್ನಷ್ಟೇ ಅಮೆರಿಕ ಬಯಸುತ್ತಿಲ್ಲ, ಬದಲಾಗಿ ನಮ್ಮ ದೇಶವು ಇರಾನ್‌ನ ಸಂಗ ತೊರೆದು ಸೌದಿ ಅರೇಬಿಯಾ ಮತ್ತು ಅದರ ಮಿತ್ರರಾಷ್ಟ್ರಗಳೊಂದಿಗೆ ಜಾಸ್ತಿ ವಹಿವಾಟು ನಡೆಸಬೇಕು ಎಂದು ಬಯಸುತ್ತಿದೆ ಅಮೆರಿಕ. ಇದರಿಂದಾಗಿ ಭಾರತದ ವಿದೇಶಾಂಗ ನೀತಿಗಳಿಗೆ ಸವಾಲುಗಳು ಹೆಚ್ಚಾಗಲಾರಂಭಿಸಿವೆ. 

ಇರಾನ್‌ನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಪ್ರತಿಬಂಧದ ಮೊದಲ ಹಂತ ಈ ವಾರದಲ್ಲಿ ಜಾರಿಗೆ ಬಂದಿದೆ. ಇದರಲ್ಲಿ ಭಾರತದ ಆತಂಕವನ್ನು ಕಡಿಮೆ ಮಾಡುವಂಥ ಯಾವ ಸಂಕೇತಗಳೂ ಸಿಗುತ್ತಿಲ್ಲ. ಅಮೆರಿಕದ ಕಾಂಗ್ರೆಸ್‌ ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಒಪ್ಪಂದದ ವಿಷಯಗಳಲ್ಲಿ ವಿನಾಯಿತಿ ಕೊಟ್ಟಿದೆಯಾದರೂ ಈ ವಿನಾಯಿತಿಗೂ ಹಲವು ನಿರ್ಬಂಧಗಳಿವೆ, ನಿರ್ದಿಷ್ಟ ಗಡುವು ವಿಧಿಸಲಾಗಿದೆ ಎನ್ನುವುದು ಗಮನಿಸಬೇಕಾದ ಅಂಶ. 
ಭಾರತ ಬಹಳ ವರ್ಷಗಳಿಂದಲೂ ರಾಷ್ಯಾದ ಅತಿದೊಡ್ಡ ಶಸ್ತ್ರಾಸ್ತ್ರ ಖರೀದಿದಾರ ದೇಶವಾಗಿದೆ. ಚೀನಾದ ನಂತರ ಭಾರತವೇ ಇರಾನ್‌ನ ಎರಡನೇ ಅತಿದೊಡ್ಡ ತೈಲ ಆಮದು ರಾಷ್ಟ್ರ.

ಇಂಥದ್ದರಲ್ಲಿ ಅಮೆರಿಕದ ಪ್ರತಿಬಂಧಗಳಿಂದ ಭಾರತದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಯಿದೆ. ಇಂಧನ ಮತ್ತು ರಕ್ಷಣೆಯಂಥ ಕ್ಷೇತ್ರಗಳ ವಿಚಾರದಲ್ಲಿ ನವದೆಹಲಿಯ ಮೇಲೆ ಒತ್ತಡ ಹೇರುವ ಮೂಲಕ ಅಮೆರಿಕ ದ್ವಿಪಕ್ಷೀಯ ಸಂಬಂಧಕ್ಕೆ ಪೆಟ್ಟು ಕೊಡುವ ಕೆಲಸ ಮಾಡಿದೆ. ಅಮೆರಿಕದ ಅಹಂಕಾರವನ್ನು ಈ ಪ್ರತಿಬಂಧಗಳು ಪ್ರತಿಬಿಂಬಿಸುತ್ತಿವೆ. ತನಗೆ ಒಂದು ದೇಶದ ನಡೆ ಹಿಡಿಸಲಿಲ್ಲ ಎಂದಾಕ್ಷಣ ಆ ದೇಶದ ಜೊತೆಗೆ ನೀವೂ ಕೂಡ ವ್ಯಾಪಾರ ಸಂಬಂಧ ಕಡಿದುಕೊಳ್ಳಬೇಕು ಎಂದು “ಸ್ವತಂತ್ರ ರಾಷ್ಟ್ರಗಳಿಗೆ’ ಪ್ರತ್ಯಕ್ಷ ವಾಗಿ ಅಥವಾ ಪರೋಕ್ಷವಾಗಿ ಒತ್ತಡ ಹೇರುವುದು ಅಹಂಕಾರವಲ್ಲದೇ ಮತ್ತೇನು? ಈ ರೀತಿಯ ಪ್ರತಿ ಬಂಧಗಳು ಸ್ಪಷ್ಟವಾಗಿ ಅಂತಾರಾಷ್ಟ್ರೀಯ ಕಾನೂನನ್ನು ಅಪಹಾಸ್ಯ ಮಾಡುತ್ತಿವೆ. ಅದರೂ ಅಮೆರಿಕ ಯಾವ ರೀತಿಯಲ್ಲಿ ತನ್ನ ತಾಕತ್ತು ಬಳಸಿಕೊಳ್ಳುತ್ತದೆ ಎಂದರೆ ಅದರ ಮನೆಯ ಸಮಸ್ಯೆಗಳೆಲ್ಲ ಜಾಗತಿಕ ಸಮಸ್ಯೆಯ ರೂಪ ಪಡೆದುಬಿಡುತ್ತವೆ. 

ಅಮೆರಿಕದ ಡಾಲರ್‌ ಮುದ್ರಾ ರೂಪದಲ್ಲಿ ಎಂಥ ಇಂಧನವೆಂದರೆ ಇಂದು ವಿಶ್ವದ ಅರ್ಥವ್ಯವಸ್ಥೆಯ ಗಾಡಿ ಅದರಿಂದಲೇ ನಡೆಯುತ್ತಿದೆ. ಇದರಿಂದಾಗಿಯೇ ಅಮೆ ರಿಕದ ಪ್ರತಿಬಂಧ ಹೆಚ್ಚು ಪ್ರಭಾವಶಾಲಿಯಾಗಿಬಿಡುತ್ತದೆ. ಪ್ರಪಂಚದಲ್ಲಿ ಬ್ಯಾಂಕಿಂಗ್‌ನಿಂದ ಹಿಡಿದು ತೈಲದ ವಿಷಯದಲ್ಲಿ ನಡೆಯುವ ಬೃಹತ್‌ ಕೊಡುಕೊಳ್ಳು ವಿಕೆಗಳೆಲ್ಲ ಅಮೆರಿಕನ್‌ ಡಾಲರ್‌ನಲ್ಲಿಯೇ ಆಗುತ್ತಿವೆ. ಇರಾನ್‌ನ ಮೇಲಿನ ನಿರ್ಬಂಧಗಳನ್ನು ಪ್ರಭಾವ ಪೂರ್ಣವಾಗಿ ಲಾಗೂ ಮಾಡುವ ಸವಾಲೂ ಈಗ ಅಮೆರಿಕದ ಮುಂದಿದೆ. ರಷ್ಯಾದ ವಿಷಯಕ್ಕೆ ಬರುವು ದಾದರೆ, ಈಗಲೂ ಆ ದೇಶದ ಬಗ್ಗೆ ಅಮೆರಿಕದಲ್ಲಿ ಸೈದ್ಧಾಂತಿಕ ತಿಕ್ಕಾಟಗಳು ಇದ್ದೇ ಇವೆ.( ಆದಾಗ್ಯೂ ರಷ್ಯಾದ ಅರ್ಥವ್ಯವಸ್ಥೆಯು ಕುಸಿಯುತ್ತಾ ಚೀನಾಕ್ಕಿಂತ ಹತ್ತುಪಟ್ಟು ಕಡಿಮೆಯಾಗಿಬಿಟ್ಟಿದೆ ಎನ್ನುವುದು ಬೇರೆ ವಿಷಯ.). ಟ್ರಂಪ್‌ರ ಪ್ರತಿಬಂಧಗಳ ಉದ್ದೇಶ ಇರಾನ್‌ ಮತ್ತು ತಮಗಗಾಗದ ದೇಶಗಳ ಅರ್ಥವ್ಯವಸ್ಥೆಯ ಉಸಿರುಗಟ್ಟಿಸುವುದು ಎನ್ನುವುದು ಸ್ಪಷ್ಟ. 
ಇನ್ನು “ಕೌಂಟರಿಂಗ್‌ ಅಮೆರಿಕಾಸ್‌ ಅಡ್ವರ್ಸರೀಸ್‌ ಥ್ರೂ ಸ್ಯಾಂಕ್ಷನ್‌'(ಕಾಟ್ಸಾ) ಹೆಸರಿನ ಹೊಸ ಕಾನೂನು ಹೇಗಿದೆಯೆಂದರೆ ರಷ್ಯಾದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ದೇಶಗಳಿಗೆ ಬೆದರಿಕೆಯೊಡ್ಡುವುದಕ್ಕಾಗಿಯೇ ರೂಪಪಡೆದಿದೆ ಎನ್ನುವುದು ಸ್ಪಷ್ಟ. ಒಟ್ಟಲ್ಲಿ ಇಡೀ ಜಗತ್ತು ತನ್ನಿಂದಲೇ ಶಸ್ತ್ರಾಸ್ತ್ರ ಖರೀದಿ ಮಾಡಬೇಕು ಎನ್ನುವ ಮೂಲ ಉದ್ದೇಶ ಕಾಟ್ಸಾ ಕಾನೂನಿನ ಹಿಂದಿದೆ. 

ಅಮೆರಿಕ ಮೊದಲಿನಿಂದಲೂ ಪ್ರಪಂಚದ ಅತಿದೊಡ್ಡ ಶಸ್ತ್ರಾಸ್ತ್ರ ಮಾರಾಟಗಾರ ರಾಷ್ಟ್ರವಾಗಿದೆ. ಇನ್ನೊಂದು ವಿರೋಧಾಭಾಸದ ಸಂಗತಿಯೆಂದರೆ ಭಾರತದೊಂದಿಗೆ ಶಸ್ತ್ರಾಸ್ತ್ರ ಮಾರಾಟದ ವಿಷಯದಲ್ಲಿ ಅಮೆರಿಕ ಅದೆಂದೋ ರಷ್ಯಾವನ್ನು ಹಿಂದೆಹಾಕಿಬಿಟ್ಟಿದೆ. ಆದರೆ ರಷ್ಯಾವು ಭಾರತಕ್ಕೆ ಐಎನ್‌ಎಸ್‌ ಚಕ್ರದಂಥ ಪರಮಾಣು ಜಲಾಂತರ್ಗಾಮಿಯನ್ನು ಮತ್ತು ಐಎನ್‌ಎಸ್‌ ವಿಕ್ರಮಾದಿತ್ಯಗಳಂಥ ವಿಮಾನವಾಹಕ ನೌಕೆಯನ್ನು ಒದಗಿಸುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ ರಷ್ಯಾ ನಿರ್ಮಿತ ರಕ್ಷಣಾ ಪರಿಕರಗಳು ಅದಾಗಲೇ ಭಾರತೀಯ ಸೇನೆಯಲ್ಲಿ ವರ್ಷಗಳಿಂದ ಕಾರ್ಯನಿರ್ವ ಹಿಸುತ್ತಿದ್ದು ಅವುಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ರಷ್ಯಾದ ಮೇಲೆಯೇ ನಾವು ಅವಲಂಬಿತರಾಗಿದ್ದೇವೆ. ಇವುಗಳಲ್ಲಿ ಕೆಲವು ಸೋವಿಯತ್‌ ಒಕ್ಕೂಟದ ಕಾಲದ ರಕ್ಷಣಾ ಉಪಕರಣಗಳು ಎನ್ನುವುದನ್ನೂ ಗಮನಿಸಬೇಕು.  ಹೀಗಾಗಿ ಭಾರತಕ್ಕೆ ರಷ್ಯಾದ ಅವಶ್ಯಕತೆ ಇದ್ದೇ ಇದೆ. ಈ ವಿಷಯದಲ್ಲಿ ಬೇರಾವ ದೇಶವೂ ಭಾರತಕ್ಕೆ ಸೇವೆಯನ್ನು ಒದಗಿಸಲು ಸಾಧ್ಯವೇ ಇಲ್ಲ. 
ಅಮೆರಿಕವು ಭಾರತ ಜೊತೆಗೆ ಇಂಡೋನೇಷ್ಯಾ, ವಿಯೆಟ್ನಾಂಗೂ ಕೂಡ ವಿನಾಯಿತಿ ನೀಡುವುದಕ್ಕೆ ಕಾರಣವೇನೆಂದರೆ ಈ ದೇಶಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಅದು ಬಯಸುತ್ತಿದೆ ಎನ್ನುವುದೇ ಆಗಿದೆ. ಅತ್ತ ಟರ್ಕಿ ಕೂಡ ರಷ್ಯಾದಿಂದ ಎಸ್‌-400 ಖರೀದಿ ಮಾಡುತ್ತಿದೆ, ಆದರೆ ಇನ್ಯಾವ ಕಾರಣಕ್ಕೋ ಏನೋ ಅಮೆರಿಕದ ಸಂಸತ್ತು ಈ ನ್ಯಾಟೋ ದೇಶದ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿಬಿಟ್ಟಿದೆ.  ಹಾಗೆಂದರೆ ಭಾರತ, ಇಂಡೋನೇಷ್ಯಾ ಮತ್ತು ವಿಟೆಯ್ನಾಂ ಮೇಲಿನ ಅಮೆರಿಕದ ಪರೋಕ್ಷ ಒತ್ತಡದ ಕಾರ್ಮೋಡಗಳು ಪೂರ್ಣವಾಗಿ ಸರಿದುಹೋಗಿಲ್ಲ ಎಂದಾಯಿತು. ಏಕೆಂದರೆ ಈ ಮೂರೂ ದೇಶಕ್ಕೂ ಪೂರ್ಣ ವಿನಾಯಿತಿ ದೊರೆತಿಲ್ಲ. ಅಮೆರಿಕವು ಇರಾನ್‌ ಮೇಲಿನ ಇಂಧನ ಸಂಬಂಧಿ ಪ್ರತಿಬಂಧಗಳ ಮೂಲಕ ಭಾರತದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಭಾರತವೀಗ ತನ್ನ ಒಟ್ಟೂ ತೈಲ ಆಮದಿನಲ್ಲಿ ಬಹುತೇಕ ಕಚ್ಚಾತೈಲವನ್ನು ಇರಾನ್‌ನಿಂದಲೇ ಪಡೆಯುತ್ತದೆ. ಅಂತಾರಾಷ್ಟ್ರಿಯ ಇಂಧನ ಮಾರುಕಟ್ಟೆಯ ಪ್ರಕಾರ 2040ರ ವೇಳೆಗೆ ಭಾರತವು ಪ್ರಪಂಚದ ಅತಿದೊಡ್ಡ ಕಚ್ಚಾ ತೈಲ ಗ್ರಾಹಕ ರಾಷ್ಟ್ರವಾಗಲಿದೆ. ಇರಾನ್‌ನೊಂದಿಗೆ ಭಾರತದ ನಿಕಟ ಸಂಪರ್ಕ ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ. ನಮ್ಮ ದೇಶವೇನಾದರೂ ಅಮೆರಿಕದ ಪರೋಕ್ಷ ಒತ್ತಡಕ್ಕೆ ಮಣಿದು ಇರಾನ್‌ನಿಂದ ವ್ಯಾಪಾರದಲ್ಲಿ ಬದಲಾವಣೆ ಮಾಡಿಕೊಂಡಿತೆಂದರೆ ಅದು ಎರಡೂ ರಾಷ್ಟ್ರಗಳ ನಡುವಿನ ರಾಜಕೀಯ ಸಹಯೋಗಕ್ಕೂ ಹಾನಿ ಮಾಡಲಿದೆ. ಅಲ್ಲದೇ ಇರಾನ್‌ನಲ್ಲಿನ ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಬಹಾರ್‌ ಬಂದರಿನ ಮೇಲೆಯೂ ಯಾವ ರೀತಿಯ ಪರಿಣಾಮ ಉಂಟಾ ಗಲಿದೆ ಎನ್ನುವುದನ್ನು ನಾವು ಗಮನಿಸಬೇಕಾಗುತ್ತದೆ. ಈ ಬಂದರು ಇರಾನ್‌ ಮತ್ತು ಭಾರತವಷ್ಟೇ ಅಲ್ಲದೆ ಅಫ್ಘಾನಿಸ್ತಾನದ ವ್ಯಾಪಾರ ಶಕ್ತಿಯನ್ನೂ ಇಮ್ಮಡಿಸಲಿದೆ. ಇರಾನ್‌-ಭಾರತ-ಅಘಾನಿಸ್ಥಾನದ ಸಹಯೋಗದ ರೂಪಕವಾಗಿರುವ ಈ ಬಂದರು ಯೋಜನೆಯು ಆಫ್ಘಾನಿಸ್ತಾನಕ್ಕೆ ಆರ್ಥಿಕ ಅವಕಾಶಗಳ ಹೊಸ ದ್ವಾರವನ್ನೇ ತೆರೆಯಲಿದೆ ಎಂದು ಕಳೆದ ವರ್ಷ ಆಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನಾ ಜನರಲ್‌ ಒಬ್ಬರು ಹೇಳಿದ್ದರು. 
ರಷ್ಯಾ ಮತ್ತು ಇರಾನ್‌ನ ಮೇಲೆ ಪ್ರತಿಬಂಧ ಹೇರಿ ಭಾರತವನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿರುವ ಅಮೆರಿಕವು ಇನ್ನೊಂದೆಡೆ ಹಿಂದೂ ಮಹಾಸಾಗರದಲ್ಲಿನ ತನ್ನ ಸ್ವಹಿತಾಸಕ್ತಿಯನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನುವುದು ನಿರ್ವಿವಾದ. ಅಮೆರಿಕದ ಪ್ರತ್ಯಕ್ಷ ಮತ್ತು ಪರೋಕ್ಷ ನಡೆಗಳು ಭಾರತದ ವಿದೇ
ಶಾಂಗ ನೀತಿಗಳಿಗೆ ಸವಾಲು ಒಡ್ಡುತ್ತಿವೆ. ಇದನ್ನೆಲ್ಲ ಗಮನಿಸಿ ಕೇಂದ್ರ ಸರ್ಕಾರವು ಹೆಚ್ಚು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ.

* ಬ್ರಹ್ಮ ಚೇಲಾನಿ

ಟಾಪ್ ನ್ಯೂಸ್

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.