ಹೊಸ ಬೆಳಕಲ್ಲಿ ಕಂಡೀತು ನಿಜ ಮೌಲ್ಯ


Team Udayavani, Sep 25, 2018, 11:21 AM IST

education.jpg

ವಿಶ್ವವಿದ್ಯಾಲಯ ಶಿಕ್ಷಣದ ಗುಣಮಟ್ಟವನ್ನು ಜಾಗತಿಕ ಮಟ್ಟಕ್ಕೇರಿಸ‌ಲು ಏನು ಮಾಡಬೇಕು ಎನ್ನುವುದು ಹೆಚ್ಚು ಕಡಿಮೆ ನಮಗೆ ತಿಳಿದಿದೆ: ಗುಣಮಟ್ಟದ ಪ್ರಾಧ್ಯಾಪಕರುಗಳ, ಹೊರಗಿನ ವಿವಿಧ ಕ್ಷೇತ್ರಗಳ ಮಹಾನ್‌ ಸಾಧಕರ ಸೇವೆಗಳನ್ನು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗಾಗಿ ಪಡೆದುಕೊಳ್ಳಬೇಕು. ಪ್ಯಾಶನ್‌ ಹೊಂದಿರುವಂತಹ ಬೋಧಕರನ್ನು ಸೇವೆಗಳಲ್ಲಿ ಹೆಚ್ಚು ಹೆಚ್ಚು ಬಳಸಿಕೊಳ್ಳಬೇಕು. ಈಗಿರುವ ಲ್ಯಾಬ್‌ಗಳನ್ನು, ಕಂಪ್ಯೂಟರ್‌ಗಳನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ಜಾಗತಿಕ ಗುಣಮಟ್ಟದ ಪ್ಲೇ ಗ್ರೌಂಡ್‌ಗಳನ್ನು, ಪರಿಕರಗಳನ್ನು ಒದಗಿಸಬೇಕು. ಬಿಲ್ಡಿಂಗ್‌ಗಳನ್ನು ಕಲಿಕಾ ಸ್ನೇಹಿಯಾಗಿ ಪರಿವರ್ತಿಸಬೇಕು. ಹಾಸ್ಟೆಲ್‌ಗ‌ಳನ್ನು ಮೇಲ್ದರ್ಜೆಗೇರಿಸಬೇಕು.
ಲೈಬ್ರರಿಗಳನ್ನು ಆಧುನಿಕಗೊಳಿಸಬೇಕು. ಉಳಿದಂತೆ ಈಗ ಉಚ್ಚ ಶಿಕ್ಷಣದ ಹೊರಗಡೆಯೇ ಇರುವ ಶೇಕಡಾ ಎಪ್ಪತ್ತರಷ್ಟು ಯುವಕ ಯುವತಿಯರನ್ನು ಈ ವ್ಯಾಪ್ತಿಯಲ್ಲಿ ಕರೆದುಕೊಂಡು ಬರಬೇಕು. ಅಂದರೆ ಸೀಟುಗಳನ್ನು, ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಮೂರು ಪಟ್ಟು ವೃದ್ಧಿಸಿಕೊಳ್ಳಬೇಕು. 

ಮಾನವ ಸಂಪನ್ಮೂಲವೇ ನಮ್ಮ ಆಸ್ತಿ. ಮಾನವ ಸಂಪನ್ಮೂಲ ಅಭಿವೃದ್ಧಿಯ ಮೂಲಕವೇ ದೇಶದ ಅಭಿವೃದ್ಧಿಯನ್ನು ನಾವು ಶೋಧಿಸಬೇಕಾಗಿದೆ. ಒಮ್ಮೆ ಇನ್‌ಫೋಸಿಸ್‌ ಸ್ಥಾಪಕ ನಾರಾಯಣಮೂರ್ತಿ ಹೇಳಿದಂತೆ “”ನಮ್ಮ ಸಮಸ್ಯೆಯೆಂದರೆ ಪ್ರತಿಭೆಗಳನ್ನು ಕೇವಲ ಈಗ ಉಚ್ಚ ಶಿಕ್ಷಣಕ್ಕೆ ಬರುವ ಶೇಕಡಾ 30ರಷ್ಟು ವಿದ್ಯಾರ್ಥಿಗಳಲ್ಲಿಯೇ ಶೋಧಿಸಬೇಕಾಗಿರುವುದು.” ಇದು ವಿವಿಧ ಕ್ಷೇತ್ರಗಳ ಪ್ರತಿಭಾ ಲಭ್ಯತೆಗಳನ್ನು ಸೀಮಿತಗೊಳಿಸಿ ನಮ್ಮ ಜ್ಞಾನದ ಬೆಳವಣಿಗೆಯನ್ನು ಕಟ್ಟಿ ಹಾಕಿಬಿಡುತ್ತದೆ. ಇರುವಷ್ಟರೊಳಗೇ ನಾವು ಹೊಂದಿಕೊಳ್ಳಬೇಕಾಗುತ್ತದೆ. ಇದು ಪ್ರತಿಭಾನ್ವೇಷಣೆಯ ಸಂದರ್ಭದಲ್ಲಿ ನಮ ದೊಡ್ಡ ಸಮಸ್ಯೆ. 

ಅದೆಲ್ಲ ಸರಿ. ಇವೆಲ್ಲ ವಿಷಯಗಳು ನಮಗೆ ತಿಳಿದಿವೆ. ಆದರೆ ಪ್ರಶ್ನೆಯೆಂದರೆ ಇದಕ್ಕೆಲ್ಲ ದುಡ್ಡು ಎಲ್ಲಿಂದ ಒದಗಿಸುವುದು? ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಯು.ಜಿ.ಸಿ ಹಾಗೂ ಇತರ ಶೈಕ್ಷಣಿಕ ಸಂಸ್ಥೆಗಳು ಈ ಪ್ರಶ್ನೆಗೆ ಸರಿಯಾದ ರೀತಿಯ ಉತ್ತರ ಕಂಡುಕೊಳ್ಳಲಾಗದೆ ಒದ್ದಾಡುತ್ತಿವೆ. ಆದರೆ ಖಂಡಿತಕ್ಕೂ ಸರಕಾರಗಳು ಮತ್ತು ಯು.ಜಿ.ಸಿ ಈ ಕುರಿತಾಗಿ ಹೊಸ ಹೊಸ ಚಿಂತನೆಗಳಲ್ಲಿ ತೊಡಗಿವೆ. ಹೀಗೆ ವಿಶ್ವವಿದ್ಯಾಲಯ ಶಿಕ್ಷಣಕ್ಕೆ ಜಾಗತಿಕ ಸ್ವರೂಪ ನೀಡಲು ಸಶಕ್ತವಾಗುವಷ್ಟು ಹಣಕಾಸು ಹೇಗೆ ಒದಗಿಸುವುದು ಎಂಬ ಚಿಂತನಗಳನ್ನು ವಿಸ್ತರಿಸಲು ಈ ಲೇಖನ.

ಈ ಬೃಹದಾಕಾರದ ಪ್ರಶ್ನೆಗೆ ಹಲವಾರು ರೀತಿಯ ಉತ್ತರಗಳನ್ನು ಹುಡುಕಿಕೊಂಡು, ಸಮಸ್ಯೆಯನ್ನು ಎದುರಿಸಬೇಕು. ಬಹುಶಃ ಈ ಎಲ್ಲ ಪ್ರಶ್ನೆಗಳಿಗೆ ಉತ್ತರವೆೆಂದರೆ ಪದವಿ ಕೋರ್ಸ್‌ ಗಳಿರಲಿ, ಇಂಜಿನಿಯರಿಂಗ್‌ ಅಥವಾ ಬೇರಾವುದೇ ಕೋರ್ಸ್‌ ಇರಲಿ, ಅದಕ್ಕೆ ಜಾಗತಿಕ ಗುಣಮಟ್ಟ ಇದ್ದರೆ, ಬೇಡಿಕೆ ಇದ್ದರೆ ಅಲ್ಲಿ ಹಣದ ಪ್ರಶ್ನೆ ಬರುವುದೇ ಇಲ್ಲ. ಉದಾಹರಣೆಗೆ ಐಐಟಿ ಅಥವಾ ಐಐಎಂ ಸಂಸ್ಥೆಗಳಲ್ಲಿ ಸೀಟು ಸಿಗುವ ವಿದ್ಯಾರ್ಥಿ ಅಥವಾ ಪಾಲಕರು ಅದಕ್ಕೆ ತಗಲುವ ವೆಚ್ಚದ ಕುರಿತು ಹೆಚ್ಚು ವಿಚಾರ ಮಾಡುವುದೇ ಇಲ್ಲ. ಏಕೆಂದರೆ ಸಾಲ, ಸೋಲ ಮಾಡಿಯಾಗಲೀ, ಬಂಗಾರ ಅಡವಿಟ್ಟಾಗಲೀ ಅಲ್ಲಿ ಕಲಿತು ಬಿಟ್ಟರೆ ಸಾಕು! 

ಈ ಮಾತು ಯಾಕೆಂದರೆ ವಿದ್ಯಾರ್ಥಿ ಶಿಕ್ಷಣಕ್ಕೂ, ನೌಕರಿಗಳಿಗೆ ಅಥವಾ ವಾಸ್ತವ ಜಗತ್ತಿಗೂ ಕನೆಕ್ಟ್ ಆಗುವಂತಿದ್ದರೆ ಹಣ ವಿದ್ಯಾರ್ಥಿಗೆ ಎಲ್ಲಿಂದಲೋ ಬರುತ್ತದೆ. ಸಂಸ್ಥೆಗೂ ಬರುತ್ತದೆ. ಅಲ್ಲಿ ಹಣದ ಸಮಸ್ಯೆ ಬರುವುದೇ ಇಲ್ಲ. ಹಾಗಾಗಿ ಸಂಸ್ಥೆಯೊಂದರಲ್ಲಿ ಪದವಿ ಪಡೆದ ಬಹುತೇಕ ವಿದ್ಯಾರ್ಥಿಗಳು ನೌಕರಿ ಮಾಡಲು ಅಥವಾ ಸ್ವಂತ ಉದ್ಯೋಗ ಮಾಡಲು ಸಮರ್ಥರಾಗಿರಬೇಕು. ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ವಿಜ್ಞಾನ, ತಂತ್ರಜ್ಞಾನ, ಕಾನೂನು, ಕಾಮರ್ಸ್‌, ಅರ್ಥಶಾಸ್ತ್ರ ಇತ್ಯಾದಿ ವಿಷಯಗಳಲ್ಲಿ ಇದು ಸಾಧ್ಯವಿದೆ. ಹಾಗಿದ್ದರೆ ಇತಿಹಾಸ, ಮಾನವಶಾಸ್ತ್ರ, ತತ್ವಶಾಸ್ತ್ರ, ಸಾಹಿತ್ಯ ಇಂತಹ ವಿಷಯಗಳಿಗೆ ಏನು ಮಾಡುವುದು? ಇಂದಿನ ಸಮಾಜಕ್ಕೆ ಎಲ್ಲವೂ ಬೇಕು! ಇಂತಹ ವಿಷಯಗಳಿಗೂ ಸಾಕಷ್ಟು ಸಾಮಾಜಿಕ ಬೇಡಿಕೆ ಇದೆ. ಉದಾಹರಣೆಗೆ ತತ್ವಜ್ಞಾನಿಗಳು, ಇತಿಹಾಸಕಾರರು, ಮಾನವ ಶಾಸ್ತ್ರಜ್ಞರು ನಿಜಕ್ಕೂ ಚೆನ್ನಾಗಿದ್ದರೆ ಅವರಿಗೆ ಹೊಸ ಸಮಕಾಲೀನ ಆಯಾಮಗಳನ್ನು ತಮ್ಮ ಜ್ಞಾನ ಕ್ಷೇತ್ರಕ್ಕೆ ತರಲು ಸಾಧ್ಯವಾದರೆ ಅವರಿಗೂ ತುಂಬ ಬೇಡಿಕೆ ಇದೆ. ಉದಾಹರಣೆಗೆ, ಯೋಗ ಶಾಸ್ತ್ರ  ಹಾಗೂ ಬದಲಿ ಆರೋಗ್ಯ ವರ್ಧಕ ವ್ಯವಸ್ಥೆಗಳು ಮತ್ತು ಯೋಚನೆಗಳು ಇಂದು ತುಂಬ ಜನಪ್ರಿಯವಾಗುತ್ತಿವೆ. ಟೂರಿಸಂ ಉದ್ಯೋಗ ಜನಪದ ಜೀವನ ವಿಧಾನಗಳಿಗೆ ಹುಡುಕಾಡುತ್ತಿದೆ. ಒಟ್ಟಾರೆ ಇಂದಿನ ಜ್ಞಾನದ ಅಧ್ಯಯನಗಳು ಮುಖ್ಯವಾಗಿ ಬೇಡುವುದೆಂದರೆ ಸಮಕಾಲೀನತೆಗೆ ಹೊಂದಿಕೊಳ್ಳುವ ಗುಣ ಹಾಗೂ ಜ್ಞಾನವನ್ನು ಪ್ರಸ್ತುತಕ್ಕೆ ಅನ್ವಯಿಸಬಲ್ಲ ಗುಣ. 

 ನಮ್ಮ ಹಣಕಾಸಿನ ಸಮಸ್ಯೆಯ ಮೂಲವಿರುವುದು 
ಹಲವು ಕಾರಣಗಳಿಂದ ಆ ಕೋರ್ಸಿಗೇ ಬೆಲೆಯಿಲ್ಲದಿದ್ದಾಗ. ಕೋರ್ಸಿಗೆ ಮೌಲ್ಯ ಇದ್ದರೆ ಸಂಸ್ಥೆಗೆ, ಕೋರ್ಸ್‌ನ ಎಲ್ಲ ತರಹದ ಅಭಿವೃದ್ಧಿಗೆ ಹಣ ಹರಿದು ಬರುತ್ತದೆ. ಹಾಗಾಗಿ ಮೂಲದಲ್ಲಿ ನಾವು ಪುನಃ ಪರಿಶೀಲಿಸಬೇಕಿರುವುದು ಆ ಪದವಿಯ ಮೌಲ್ಯವನ್ನು. ಅದು ಸಂಗೀತವಿರಲಿ, ಜನಪದವಿರಲಿ ಆ ಪದವಿಗೆ ಹೇಗೆ ಜಾಗತಿಕ ಮೌಲ್ಯ ನೀಡುವುದು ಎಂದು ನಾವು ಆಲೋಚಿಸಬೇಕಿರುವುದು ಹಣಕಾಸು ಒದಗಿಸುವಿಕೆಯ ಮೂಲದಲ್ಲಿದೆ ಎನ್ನುವುದೇ ಭಾವನೆ.
ಎರಡನೆಯ, ದೊಡ್ಡ, ರಾಷ್ಟ್ರೀಯ ಮಟ್ಟದಲ್ಲಿ ಸಾಧ್ಯವಿರುವ ಕ್ರಮವೆಂದರೆ ಬೆಂಗಳೂರು, ದೆಹಲಿ, ಮುಂಬೈ ಅಂತಹ ಮಹಾನಗರಗಳಲ್ಲಿ ಅಥವಾ ದೊಡ್ಡ ನಗರಗಳಲ್ಲಿ ಸರಕಾರ ವಿಶ್ವವಿದ್ಯಾಲಯ ಶಿಕ್ಷಣವನ್ನು ಕೆಲವು ಕಂಡಿಶನ್‌ಗಳೊಂದಿಗೆ ಖಾಸಗಿ ಕ್ಷೇತ್ರಕ್ಕೆ ಬಿಡಬಹುದಾಗಿದೆ. ಏಕೆಂದರೆ ಅಲ್ಲಿಯ ವಾಸ್ತವಗಳು ಬೇರೆ. ಅಲ್ಲಿ ಹಣವಿರುವವರ ಸಂಖ್ಯೆ ಹೆಚ್ಚಿರುತ್ತದೆ. ಹಣವಿರುವವರು ಈಗಾಗಲೇ ನಡೆಯುತ್ತಿರುವ ಹಾಗೆ ಕಾರ್ಪೊàರೇಟ್‌ ಕಾಲೇಜುಗಳಿಗೆ ಮಕ್ಕಳನ್ನು ಕಳುಹಿಸ ಬಯಸು ತ್ತಾರೆ. ಅಲ್ಲಿ ಸರಕಾರಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳು
ವವರ ಸಂಖ್ಯೆ ಕಡಿಮೆ. ಉದಾಹರಣೆಗೆ ಬೆಂಗಳೂರಿನಲ್ಲಿ ಬೇರೆ ಹೆಸರಾಂತ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸೀಟು ಸಿಕ್ಕರೆ ಸರಕಾರಿ ಸೀಟ್‌ ಅನ್ನು ಬಿಟ್ಟು ವಿದ್ಯಾರ್ಥಿಗಳು ಅಲ್ಲಿಗೆ ಹೋಗುತ್ತಾರೆ. ಇಲ್ಲಿ ಸಾಮಾಜಿಕ ನ್ಯಾಯವನ್ನು ಕಾಯ್ದುಕೊಳ್ಳಲು ಮತ್ತು ಆರ್ಥಿವಾಗಿ ದುರ್ಬಲರಾದವರಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಇಂತಹ ಎಲ್ಲ ಕಾಲೇಜುಗಳಲ್ಲಿಯೂ ಶೇಕಡಾ 40ರಷ್ಟು ಸೀಟುಗಳನ್ನು ಅಥವಾ ನ್ಯಾಯಯುತವಾದ ಸಂಖ್ಯೆಯ ಸೀಟುಗಳನ್ನು ಬಿಟ್ಟುಕೊಡುವಂತೆ ಕಾನೂನು ಜಾರಿಗೊಳಿಸಬೇಕು. 

ಇಂತಹ ವಿದ್ಯಾರ್ಥಿಗಳಿಗೆ ಅವಶ್ಯವಿದ್ದಲ್ಲಿ ಸರಕಾರ ನಿರ್ಧರಿಸಿದ ಫೀಸ್‌ಅಷ್ಟನ್ನೇ ಆಡಳಿತ ಮಂಡಳಿ ತೆಗೆದುಕೊಳ್ಳುವಂತಿರಬೇಕು. ಸರಕಾರಿ ಫೀಸ್‌ನ ಒಂದು ಭಾಗವನ್ನು ಅಥವಾ ಪೂರ್ತಿಯನ್ನು ಸರಕಾರ ತುಂಬಿದರೂ ಕಡಿಮೆ ಮೊತ್ತದಲ್ಲಿಯೇ ಸರಕಾರದ ಜವಾಬ್ದಾರಿ ಮುಗಿದು ಹೋಗುತ್ತದೆ. ಜವಾಬ್ದಾರಿಯಿಂದ ಸರಕಾರ ನುಣುಚಿಕೊಳ್ಳಬೇಕೆಂದೇನೂ ಹೇಳುತ್ತಿಲ್ಲ.ವಿಷಯವೆಂದರೆ ಎಲ್ಲ ವರ್ಗಗಳ ಜನರಿಗೆ ಶ್ರೇಷ್ಟ ಮಟ್ಟದ ಶಿಕ್ಷಣ ಬೇಕು. ಈ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯವನ್ನು ಲಕ್ಷದಲ್ಲಿ ಇಟ್ಟುಕೊಂಡು ಅವಶ್ಯಕತೆ ಯುಳ್ಳ ವಿದ್ಯಾರ್ಥಿಗಳ ಫೀಸ್‌ನ್ನು ಸಂಪೂರ್ಣವಾಗಿ ಸರಕಾರವೇ ಭರಿಸುವ ಸಲುವಾಗಿ ಒಂದು “ಕಾರ್ಪಸ್‌ ಫ‌ಂಡ್‌’ ಅನ್ನು ಕೂಡ ಆರಂಭಿಸಬಹುದಾಗಿದೆ. ಅಂತಹ ಫ‌ಂಡಿಗೆ ಆದಾಯಕರ ವಿನಾಯಿತಿ ಕೂಡ ನೀಡಬಹುದು, ಖಾಸಗಿಯವರನ್ನೂ ಸ್ಕಾಲರ್‌ಶಿಪ್‌ ನೀಡುವಂತೆ ಆಹ್ವಾನಿಸಬಹುದು.

ಇಂತಹ ವ್ಯವಸ್ಥೆಯಲ್ಲಿ ಆಧುನಿಕವಾದ ಮೂಲಭೂತ ಸೌಕರ್ಯ ಸೃಷ್ಟಿಸುವ ಜವಾಬ್ದಾರಿ ಖಾಸಗಿಯವರ ಮೇಲಿರುತ್ತದೆ. ಸರಕಾರ ಸಾಮಾಜಿಕ ನ್ಯಾಯವನ್ನು ಕಾಯ್ದುಕೊಂಡರೆ ಸಾಕು. ಇನ್ನೂ ಒಂದು ಲಾಭವೆಂದರೆ ಆಗ ಖಾಸಗಿ ಕಾಲೇಜುಗಳ ನಡುವೆ ವಿದ್ಯಾರ್ಥಿಗಳನ್ನು ಸೆಳೆಯಲು ತೀವ್ರ ಸ್ಪರ್ಧೆ ನಡೆಯುತ್ತದೆ. ಖಾಸಗಿಯವರ ನಡುವೆ ಹೀಗೆ ಏರ್ಪಡುವ ಸ್ಪರ್ಧೆ ನಿಜಕ್ಕೂ ಪದವಿಯ ಮೌಲ್ಯದ ದೃಷ್ಟಿಯಿಂದ ಒಳ್ಳೆಯದು. ಅಲ್ಲಿ ಸ್ಪರ್ಧೆ ಏರ್ಪಡುವುದು ಜನರಿಗೆ ಒಳ್ಳೆಯದು, ಮೊಬೈಲ್‌ ಉದ್ಯಮದಲ್ಲಿ ಆದ ಹಾಗೆ ಸ್ಪರ್ಧೆಯಿಂದ ಜನತೆಗೆ ಲಾಭವಾಗುತ್ತದೆ. ಟೆಲಿಕಾಮ್‌ ಉದ್ಯಮದಲ್ಲಿ ಹೇಗೆ ಆಯಿತೋ ಹಾಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಗುಣಮಟ್ಟದ ಅಭಿವೃದ್ಧಿ ಹಾಗೂ ಫೀಸ್‌ ಎರಡೂ ಜವಾಬ್ದಾರಿಗಳನ್ನು ಸ್ಪರ್ಧೆಯ ಆಧಾರದ ಮೇಲೆ ನಿರ್ವಹಿಸುವ ಹೊಣೆ ಖಾಸಗಿ ಕ್ಷೇತ್ರಕ್ಕೆ ಬರುತ್ತದೆ. ಈ ವ್ಯವಸ್ಥೆ ಸರಕಾರದ ಹಣಕಾಸಿನ ಜವಾಬ್ದಾರಿಯ ದೊಡ್ಡ ಭಾರವನ್ನು ಕಡಿಮೆಗೊಳಿಸುತ್ತದೆ. ಅಂದರೆ ಮೂಲಭೂತ ಸೌಕರ್ಯ ಸೃಷ್ಟಿಯ ಸಂಪೂರ್ಣ ಭಾರ ಖಾಸಗಿ ಕ್ಷೇತ್ರದ ಮೇಲೆ ಇರುತ್ತದೆ. ವಿಷಯ ವೆಂದರೆ ಖಾಸಗಿಯವರು ಫೀಸ್‌ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಸುಲಿಗೆ ಮಾಡದಂತೆ ಅವರ ಮೇಲೆ ಒಂದು ಕಣ್ಣಿಟ್ಟರೆ ಆಯಿತು ಅಷ್ಟೇ. ಹಾಗೆಂದು ನ್ಯಾಯಯುತವಾದ, ಮೂಲಭೂತ ಸೌಕರ್ಯಕ್ಕನುಗುಣವಾದ ಫೀಸ್‌ ಪಡೆದುಕೊಳ್ಳಲು ಅವರಿಗೂ ಅವಕಾಶವಿರಬೇಕು.

ಚಿಕ್ಕ ಪಟ್ಟಣಗಳಲ್ಲಿ ಅಥವಾ ತಾಲೂಕಾ ಕೇಂದ್ರಗಳಲ್ಲಿ ಇನ್ನೂ ಕೆಲವು ಬೇರೆ ಮಾದರಿಗಳನ್ನು ಯೋಚಿಸಬಹುದು. ತಾಲೂಕು ಕೇಂದ್ರಗಳಲ್ಲಿ ಹಿಂದಿನ ಸರಕಾರಗಳು ನಿರ್ಣಯಿಸಿದ್ದ ರೀತಿಯಲ್ಲಿ ಖಾಸಗಿ-ಸರಕಾರಿ ಜಂಟಿ ಸಹಭಾಗಿತ್ವದ ಅಗತ್ಯತೆ ಇದೆ. ಅಲ್ಲೂ ಕೂಡ ಸರಳ ಮಾದರಿ ಅನುಸರಿಸಬಹುದು. ಈಗಾಗಲೇ ಇರುವ ಹಳೆಯ ಸಂಸ್ಥೆಗಳಿಗೆ ಸಂಬಳ ಅನುದಾನವನ್ನು ಸರಕಾರ  ಮುಂದುವರಿಸಬಹುದು. ಆದರೆ ಮೂಲಭೂತ ಸೌಲಭ್ಯದ ಸೃಷ್ಟಿಯ ಹಾಗೂ ನಿರ್ವಹಣೆಯ ಹೊಣೆಯನ್ನು ಇಲ್ಲಿಯೂ ಖಾಸಗಿಯವರ ಮೇಲೆಯೇ ಇರಬಹುದಾಗಿದೆ. ಸಿಬ್ಬಂದಿ ಸಂಬಳವನ್ನು ಸರಕಾರ ನೀಡಬಹುದಾಗಿದೆ. ದೊಡ್ಡ ನಗರಗಳಲ್ಲಿ ಕೂಡ ಸಂಬಳವನ್ನು ಸರಕಾರವೇ ನೀಡಬಹುದಾಗಿದೆ. ಆದರೆ ಪ್ರಾಧ್ಯಾಪಕರುಗಳು ಆಲಸಿಯಾಗಿ ಅಥವಾ ಬೇಜವಾಬ್ದಾರಿಯಾಗಿ ಹೋಗದಂತೆ ಮಾಡಲು ಅವರಿಗೆ ಖಂಡಿತವಾಗಿಯೂ ಫೀಡ್‌ಬ್ಯಾಕ್‌ ಆಧಾರಿತ ಸಂಬಳ ವ್ಯವಸ್ಥೆ ಕಲ್ಪಿಸಬಹುದು. ಒಳ್ಳೆಯ ಸಂಬಳದ ಜತೆಗೇ ವರ್ಗಾವರ್ಗಿ ಹಾಗೂ ಬೇರೆ ಸಂಸ್ಥೆಗಳಿಗೆ ಸೇರುವ ಸುಲಭ ಅವಕಾಶಗಳನ್ನೂ ಕಲ್ಪಿಸಬೇಕು. ಎರಡೂ ವ್ಯವಸ್ಥೆಯಲ್ಲಿ ಮೂಲಭೂತ ಸೌಲಭ್ಯ ಸೃಷ್ಟಿಯ ಮತ್ತು ಮೇಲ್ವಿಚಾರಣೆಯ ಹೊಣೆ ಸರಕಾರಕ್ಕೆ ತಪ್ಪುತ್ತದೆ. ಖಾಸಗಿ ಸ್ಪರ್ಧೆ ಏರ್ಪಡುತ್ತದೆ. ಕೇವಲ ಅನಿವಾರ್ಯದಲ್ಲಿ ಮಾತ್ರ ಸರಕಾರ ತನ್ನದೇ ಆದ ಮೂಲಭೂತ ಸೌಲಭ್ಯ ಹೊರಬಹುದು. ಇದರಿಂದಾಗಿ ಸರಕಾರಗಳ ಮೇಲಿನ ಬಹಳ ದೊಡ್ಡ ಹಣಕಾಸಿನ ಭಾರ ಇಳಿಯಬಹುದು. 
ಹಾಗೆಯೇ ವಿಶ್ವವಿದ್ಯಾಲಯಗಳ ಸ್ವರೂಪಗಳನ್ನು ಕೂಡ ಮಾರ್ಪಡಿಸುವ ಅಗತ್ಯತೆ ಇದೆ. ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ವಾಣಿಜ್ಯ ಮಾಧ್ಯಮ ಇತ್ಯಾದಿ ಕ್ಷೇತ್ರಗಳು ತುಂಬ ಬೆಳೆದಿವೆ. ಅವು ರಿಸರ್ಚ್‌ ಮತ್ತು ಡೆವಲಪ್‌ಮೆಂಟ್‌ಗಾಗಿ ಸಲಹೆಗಾರರನ್ನು ಭಾರೀ ಮೊತ್ತ ನೀಡಿ ಸಾಕುತ್ತವೆ. ಬದಲಿಗೆ ಯುನಿವರ್ಸಿಟಿಯ ವಿಭಾಗಗಳು ಕಾರ್ಪೊರೇಟ್‌ ಹಾಗೂ ಸಾಮಾಜಿಕ ಕ್ಷೇತ್ರದ ಅವಶ್ಯಕತೆಗಳನ್ನು ಪೂರೈಸಬಲ್ಲ ರಿಸರ್ಚ್‌ಗಳನ್ನು ಹಮ್ಮಿಕೊಳ್ಳಲು ಸಾಧ್ಯವಾದರೆ ಅದು ಇಬ್ಬರಿಗೂ ವಿನ್‌ವಿನ್‌ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಗುಣಮಟ್ಟದ ಖಾಸಗಿ ವಿಶ್ವವಿದ್ಯಾಲಯಗಳಿಗೂ ಸ್ಪಷ್ಟ ಮಾನದಂಡಗಳನ್ನು ಕೊಟ್ಟುಕೊಂಡು ಸರಕಾರ ಪರವಾನಿಗೆ ನೀಡುವ ಅಗತ್ಯ ಇದೆ. ಏಕೆಂದರೆ ಇವು ಸರಕಾರೀ ವಿಶ್ವ ವಿದ್ಯಾಲಯಗಳೊಂದಿಗೆ ಸ್ಪರ್ಧೆಗಿಳಿದರೆ ಎರಡೂ ವ್ಯವಸ್ಥೆಗಳು ಬದಲಾವಣೆಯ ಬೆಳಕು ಕಾಣಬಹುದು. ಶಕ್ತಿ ಇರುವವರು ಗುಣಮಟ್ಟ ಪಡೆಯಲು ಹಣ ನೀಡಲೇಬೇಕೆಂಬ ತತ್ವ ಅನುಸರಿಸುವುದರಿಂದ ಸರಕಾರ ತನ್ನ ಸಾಮರ್ಥ್ಯವನ್ನು ಸಾಮಾಜಿಕವಾಗಿ ಹಿಂದುಳಿದವರ ಕಲ್ಯಾಣಕ್ಕಾಗಿ ಬಳಸಲು ಸಾಧ್ಯವಾಗುತ್ತದೆ. ಹೀಗೆ ಹೆಚ್ಚು ಹೆಚ್ಚು ದೊಡ್ಡ ಪ್ರಮಾಣದ ಖಾಸಗಿ ಸಹಭಾಗಿತ್ವದಿಂದ ಮಾತ್ರ ಶಿಕ್ಷಣಕ್ಕೆ ಹಣಕಾಸು ಪೂರೈಸಲು ಸಾಧ್ಯವಾಗುತ್ತದೆ.

ಇನ್ನೂ ಒಂದು ವಿಷಯ. ದೇಶದಲ್ಲಿ ಸಾವಿರಾರು ಕೋಟಿ ವ್ಯವಹಾರ ನಡೆಸುವ ವಿವಿಧ ಕ್ಷೇತ್ರಗಳ ಬೇಡಿಕೆಗಳನ್ನು ಪೂರೈಸುವ ಉದ್ದಿಮೆಗಳಿವೆ. ಅವಕ್ಕೆ ತಮ್ಮ ಅವಶ್ಯಕತೆಗಳನ್ನು ಪೂರೈಸಬಲ್ಲ ತಾಂತ್ರಿಕ ಮ್ಯಾನ್‌ಪವರ್‌ನ ಅಗತ್ಯ ಇದ್ದೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇಂತಹ ಎಲ್ಲ ದೊಡ್ಡ ಕೈಗಾರಿಕೆಗಳಿಗೆ ತಮ್ಮದೇ ವಿಷಯಕ್ಕೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಪ್ರೋತ್ಸಾಹ ನೀಡುವುದು. ಒಮ್ಮೆ ಈ ರೀತಿಯ ಕ್ರಮ ಸಾಧ್ಯವಾದಲ್ಲಿ ಜಾಗತಿಕ ಗುಣಮಟ್ಟದ ತಾಂತ್ರಿಕ, ವೈಜ್ಞಾನಿಕ ಅಥವಾ ಮಾನವಿಕ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ.

ಒಟ್ಟಾರೆ ಹೇಳಬೇಕೆಂದ‌ರೆ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿರುವ ಖಾಸಗಿ ಸಂಪನ್ಮೂಲ ಹಾಗೂ ಆಡಳಿತ ತಜ್ಞತೆ ಶಿಕ್ಷಣದ ಶ್ರೇಷ್ಟತೆಗಾಗಿ ಖಂಡಿತಕ್ಕೂ ನಮಗೆ ಬೇಕಿದೆ. ಸರಕಾರಗಳು ಸಾಮಾಜಿಕ ನ್ಯಾಯ ಮತ್ತು ಹಿತಾಸಕ್ತಿಗಳನ್ನು ಲಕ್ಷದಲ್ಲಿಟ್ಟುಕೊಂಡು ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು, ಕಾನೂನುಗಳನ್ನು ರಚಿಸಿದರೆ ಸಾಕು. ಇಂತಹ ಹೆಚ್ಚಿನ ಖಾಸಗಿಕರಣದಿಂದ ಸಂಸ್ಕೃತದಂತಹ, ಕನ್ನಡ ಭಾಷೆಯಂತಹ, ಜನಪದದಂತಹ ವಿಷಯಗಳು ಅಳಿಸಿ ಹೋಗಬಹುದು ಎನ್ನುವುದು ತಪ್ಪು ಕಲ್ಪನೆ. ಏಕೆಂದರೆ ಇಂತಹ ವಿಷಯಗಳ ನಿಜವಾದ ಒಳ ಮೌಲ್ಯವನ್ನು ಹೊರತರಲು ಅವನ್ನು ಬೇರೆ ರೀತಿಯ ಬೆಳಕಿನಲ್ಲಿ ನೋಡಬೇಕಿದೆ. ಅದು ಸಾಧ್ಯವಿರುವುದು ಅಂತಹ ವಿಷಯಗಳಲ್ಲಿಯೂ ಸಂಶೋಧನೆಗೆ ಹೂಡಿಕೆಯಾದಾಗ ಮಾತ್ರ. ಹಾಗಾಗಿ ಖಾಸಗಿ ಕ್ಷೇತ್ರವೆಂದರೆ ಮೂಗು ಮುರಿಯುವುದನ್ನು ಬಿಟ್ಟು ಶಿಕ್ಷಣದಲ್ಲಿ ಜಾಗತಿಕ ಮಟ್ಟದ ಬಂಡವಾಳ ತೊಡಗಿಸಲು ಖಾಸಗಿ ಕ್ಷೇತ್ರಕ್ಕೆ ನಾವು ಅನುವು ಮಾಡಿಕೊಡಬೇಕಿದೆ. ಅಂದರೆ ಮಾತ್ರ ವಿಶ್ವವಿದ್ಯಾಲಯ ಶಿಕ್ಷಣಕ್ಕೆ ಅಗತ್ಯವಿರುವ ಸಂಪನ್ಮೂಲ ಕ್ರೋಡೀಕರಿಸಲು, ಹಣತೊಡಗಿಸಲು ನಮಗೆ ಸಾಧ್ಯವಾಗುತ್ತದೆ.

* ಡಾ. ಆರ್‌.ಜಿ. ಹೆಗಡೆ ದಾಂಡೇಲಿ

ಟಾಪ್ ನ್ಯೂಸ್

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.