ಪಂಚಕ್ಷೇತ್ರಗಳ‌ಲ್ಲಿ ಪಂಚತಂತ್ರದ ಪಾಠ 


Team Udayavani, Nov 9, 2018, 9:03 AM IST

1.jpg

ಕರ್ನಾಟಕದಲ್ಲಿ ನಡೆದ ಉಪ ಚುನಾವಣೆಯ ಫ‌ಲಿತಾಂಶ ಸಾಕಷ್ಟು ವಿಶ್ಲೇಷಣೆಗೆ ಮತ್ತು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಬಹುಮುಖ್ಯ ಕಾರಣ ಸಮ್ಮಿಶ್ರ ಸರಕಾರದ ಮೈತ್ರಿಯ ಪವಿತ್ರತೆ ಅಥವಾ ಅಪವಿತ್ರತೆಯ ಮಾನದಂಡವಾಗಿತ್ತು. ಮಾತ್ರವಲ್ಲ 2019ರ ಮಹಾ ಚುನಾವಣೆಯ ಪೂರ್ವಭಾವಿಯಾಗಿ ಕರ್ನಾಟಕದಲ್ಲಿ ನಡೆದ ಸೆಮಿಫೈನಲ್‌ ಚುನಾವಣೆ ಎಂದೇ ಪರಿಗಣಿಸಲ್ಪಟ್ಟ ಕಾರಣ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಿಗೆ ಮುಂದಿನ ಮಹಾ ಚುನಾವಣೆ ಎದುರಿಸಲು ತಂತ್ರಗಾರಿಕೆ ರೂಪಿಸುವ ಪ್ರಯೋಗಾತ್ಮಕ ಚುನಾವಣೆ ಎಂಬುದಾಗಿ ಪರಿಗಣಿಸಲಾಗಿತ್ತು.

ಈ ಮೂರು ಪಕ್ಷಗಳಿಗೆ ಫ‌ಲಿತಾಂಶ ತಮ್ಮ ಕಡೆಗೆ ಪೂರಕವಾಗಿ ಬರುತ್ತದೆ ಎಂಬ ನಿರೀಕ್ಷೆಯೂ ಇತ್ತು. ಆದರೆ ಚುನಾವಣೆಯ ಫ‌ಲಿತಾಂಶ ಹೊರಬಿದ್ದಾಗ ಕಾಂಗ್ರೆಸ್‌, ಜೆಡಿಎಸ್‌ಗೆ ಅತ್ಯಂತ ತೃಪ್ತಿಯಾಗಿದೆ. ಅದೇ ಬಿಜೆಪಿಯ ಪಾಲಿಗೆ ಹೆಚ್ಚಿನ ಆಘಾತ ತಂದ ಫ‌ಲಿತಾಂಶವಾಗಿತ್ತು ಅನ್ನುವುದರಲ್ಲಿ ಸಂಶಯವಿಲ್ಲ. ಕೊನೆಗೂ ಬಿಜೆಪಿಯವರ ಅರ್ಥಾತ್‌ ಯಡಿಯೂರಪ್ಪನವರ ಗೌರವ ಉಳಿಸಿದ ಕ್ಷೇತ್ರ ಶಿವಮೊಗ್ಗ ಅನ್ನುವುದನ್ನು ಒಪ್ಪಿಕೊಳ್ಳಲೇಬೇಕು.
ಐದು ಕ್ಷೇತ್ರಗಳ, ಅಂದರೆ ಮೂರು ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಫ‌ಲಿತಾಂಶವನ್ನು ವಿಶ್ಲೇಷಿಸುವಾಗ ಕಂಡು ಬರುವ ಪ್ರಧಾನ ಅಂಶಗಳೆಂದರೆ; ಬಿಜೆಪಿಯ ಹಿನ್ನಡೆಗೆ ಕಾರಣಗಳೇನು? ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿನ ಗುಟ್ಟೇನು? ಮಾತ್ರವಲ್ಲ ಈ ಉಪ ಚುನಾವಣಾ ಫ‌ಲಿತಾಂಶ 2019ರ ಮಹಾ ಚುನಾವಣೆಯ ಮೇಲೆ ಪ್ರಭಾವ ಬೀರಬಹುದೇ?

ಬಿಜೆಪಿಯ ಫ‌ಲಿತಾಂಶವನ್ನು ವಿಶ್ಲೇಷಿಸುವಾಗ ಕಂಡು ಬರುವ ಪ್ರಧಾನ ಸೋಲುಗಳೆಂದರೆ, ಮೊದಲು ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವಿದ್ದು; ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ರಾಮನಗರದಲ್ಲಿ ಬಿಜೆಪಿ ಆಯ್ಕೆ ಮಾಡಿದ ಅಭ್ಯರ್ಥಿ ಪ್ರಥಮ ಚುಂಬನದಲ್ಲಿಯೇ ದಂತಭಗ್ನ ಎಂಬ ರೀತಿಯಲ್ಲಿ ಚುನಾವಣೆ ನಡೆಯುವ ಮೊದಲೇ ಸೋಲನ್ನು ಸ್ವೀಕರಿಸಬೇಕಾದ ಪರಿಸ್ಥಿತಿ. ಈ ಕ್ಷೇತ್ರದಲ್ಲಿ ಪರಿಸ್ಥಿತಿ ಹೇಗಿತ್ತು ಅಂದರೆ ಬಿಜೆಪಿಯಿಂದ ಯಾರು ಚುನಾವಣೆಗೆ ಸ್ಪರ್ಧಿಸಿದರೂ ಸೋಲುವುದು ಶತಃಸಿದ್ಧ. ಇಂತಹ ಸ್ಥಿತಿಯಲ್ಲಿ ಬಿಜೆಪಿ ಓರ್ವ ಅಭ್ಯರ್ಥಿಯನ್ನು ಕಾಂಗ್ರೆಸ್ಸಿನಿಂದ ತಂದು ನಿಲ್ಲಿಸಿದ್ದು; ಬಿಜೆಪಿಗೆ ಎಂದೂ ಮರೆಯದ ಪಾಠವಾಗಿ ಪರಿಣಮಿಸಿದೆ.

ಬಿಜೆಪಿಯಲ್ಲಿ ಈ ಪಂಚ ಕ್ಷೇತ್ರಗಳನ್ನು ಸಮರ್ಥವಾಗಿ ಸಂಘಟಿಸಿ, ತಂತ್ರಗಾರಿಕೆ ರೂಪಿಸುವ ಏಕೈಕ ಅಥವಾ ಸಮಗ್ರ ನಾಯಕತ್ವದ ಕೊರತೆ ಎದ್ದು ಕಾಣುತ್ತಿತ್ತು. ಮಾತ್ರವಲ್ಲ, ರಾಜ್ಯಮಟ್ಟದ ನಾಯಕರು ಕೂಡಾ ಸಂಘಟನಾತ್ಮಕವಾದ ಛಲದ ಹೋರಾಟ ಮಾಡಲೇ ಇಲ್ಲ. ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಪೂರ್ಣ ವಿಶ್ವಾಸವಿಲ್ಲದೆ ಅಪರೂಪಕ್ಕೆ ಕ್ಷೇತ್ರ ಸಂದರ್ಶಿಸಿ ಬರುವ ಕೆಲಸವನ್ನೇ ಮಾಡಿದರೇ ಹೊರತು, ಅಲ್ಲಿಯ ಮತದಾರರನ್ನು ಎಬ್ಬಿಸುವ, ಕಾರ್ಯಕರ್ತರನ್ನು ಹುರಿದುಂಬಿಸುವ ತಂತ್ರಗಾರಿಕೆ ನಡೆಯಲೇ ಇಲ್ಲ. ಮಂಡ್ಯ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಕೂಡಾ ಸಾಕಷ್ಟು ಸಮರ್ಥ ಜಾತಿ ಪ್ರಭಾವ ಬೀರುವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನ ಮಾಡದಿರುವುದು ಈ ಫ‌ಲಿತಾಂಶದಿಂದ ವೇದ್ಯವಾಗುತ್ತದೆ. ಸುಮಾರು ಎರಡು ಲಕ್ಷಕ್ಕಿಂತ ಹೆಚ್ಚು ಮತಗಳಿಕೆಯೇ ತಮ್ಮ ಸಾಧನೆ ಎಂದು ಹಿಗ್ಗಬೇಕಾದ ಪರಿಸ್ಥಿತಿ ಬಿಜೆಪಿ ಪಾಲಿನದ್ದು.

ಅದೇ ಬಳ್ಳಾರಿ ಕ್ಷೇತ್ರದ ಕಡೆಗೆ ಬಂದಾಗ ಶ್ರೀರಾಮುಲುರವರ ದ್ದು ಏಕಮೇವ ಹೋರಾಟ. ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಚುನಾವಣಾ ಪ್ರಚಾರದವರೆಗೆ ಇವರದ್ದೇ ಗುದ್ದಾಟ. ಬಳ್ಳಾರಿಯ 6 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರೇ ಗೆದ್ದಿರುವಾಗ ಬಳ್ಳಾರಿಯ ಲೋಕಸಭಾ ಕ್ಷೇತ್ರವನ್ನು ವಶಪಡಿಸಿಕೊಳ್ಳುವುದು ಅಷ್ಟೇನು ಸುಲಭದ ಮಾತಲ್ಲ ಎಂಬುದು 2018ರ ವಿಧಾನಸಭಾ ಫ‌ಲಿತಾಂಶವನ್ನು ನೋಡಿದ ತಕ್ಷಣ ಅರ್ಥವಾಗಬೇಕಿತ್ತು. ಈ ಪರಿಸ್ಥಿತಿಯನ್ನು ಮತ್ತು ಎದುರಾಳಿಗಳ ಅಧಿಕಾರ ಬಲ, ಧನ ಬಲ, ಸಂಘಟನಾ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲಾರದೆ ಹಿಂದೆ ಗಳಿಸಿದ್ದ ಸ್ಥಾನವನ್ನು ಸುಲಭದಲ್ಲಿ ಮಾತ್ರವಲ್ಲ ಹೆಚ್ಚಿನ ಮತಗಳ ಅಂತರದಲ್ಲಿ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಿಜೆಪಿ ಪಾಲಿಗೆ ಇನ್ನಷ್ಟು ಸವಾಲು ತಂದ ಫ‌ಲಿತಾಂಶವೆಂದೇ ವಿಶ್ಲೇಷಿಸಲಾಗುತ್ತಿದೆ. 
ಅದೇ ರೀತಿ ಜಮಖಂಡಿ ಕ್ಷೇತ್ರದಲ್ಲಿ ಸುಲಭದ ವಿಜಯ ತಮ್ಮದೇ ಎಂಬ ವಿಶೇಷ ವಿಶ್ವಾಸವೇ ಬಿಜೆಪಿಯ ಸೋಲಿಗೆ ಕಾರಣವಾಗಿದೆ. ಎದುರಾಳಿ ಕಾಂಗ್ರೆಸ್‌ ಅಭ್ಯರ್ಥಿಗೆ ಅನುಕಂಪದ ಅಲೆ, ಜಾತಿ ಲೆಕ್ಕಾಚಾರದ ಬಲ ಬಿಜೆಪಿಗೆ ವರದಾನವಾಗಲೇ ಇಲ್ಲ. ಬಿಜೆಪಿ ಬರೀ ಕೂಡಿಸು, ಭಾಗಿಸು, ಗುಣಾಕಾರ ಲೆಕ್ಕಚಾರದಲ್ಲಿಯೇ ಮುಳುಗಿದ್ದ ಕಾರಣ ಸೋಲಿನ ಉತ್ತರವೇ ಪ್ರಾಪ್ತವಾಯಿತು.

ಬಿಜೆಪಿಯ ಮೂಲಸ್ಥಾನವೆಂದೇ ಕರೆಯಲ್ಪಡುವ ಶಿವಮೊಗ್ಗ ಕ್ಷೇತ್ರದ ಗೆಲುವು ಕರ್ನಾಟಕದಲ್ಲಿ ಬಿಜೆಪಿಯ ಮುಖವನ್ನು ಉಳಿಸಿದೆ, ಮಾತ್ರವಲ್ಲ ನಾಯಕ ಯಡಿಯೂರಪ್ಪನವರ ರಾಜಕೀಯ ಉಸಿರನ್ನು ಉಳಿಸಿದ ಕ್ಷೇತ್ರವಾಗಿ ಮೂಡಿ ಬಂದಿದೆ. ಆದರೂ ಗೆದ್ದ ಅಭ್ಯರ್ಥಿ ಬಿ.ಎಸ್‌. ರಾಘವೇಂದ್ರರ ಗೆಲುವಿನ ಅಂತರ ಅಸುಪಾಸು 60 ಸಾವಿರವಾದ ಕಾರಣ ಬಿಜೆಪಿಯ ಪಾಲಿಗೆ ಎಚ್ಚರಿಕೆಯ ಗಂಟೆಯೂ ಹೌದು. ಏಳು ಕ್ಷೇತ್ರಗಳಲ್ಲಿ ತಮ್ಮದೇ ಪಕ್ಷದ ಶಾಸಕರುಗಳು ಇದ್ದರೂ ಕೇವಲ ಐದು ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ ಬಂದಿದೆ; ಅಂದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಇದೆ.

ಇನ್ನು ಮುಂದೆ ಕಾಣುವುದು ಕಾಂಗ್ರೆಸ್‌ ಪಕ್ಷದ ಸುಖಾಂತ್ಯದ ಕಥೆ. ಕಾಂಗ್ರೆಸ್‌ನ ಗೆಲುವಿಗೆ ಪ್ರಮುಖ ಕಾರಣವೆಂದರೆ ಮೈತ್ರಿ ಸರಕಾರದ ಸಾಧನೆಯ ಫ‌ಲವಲ್ಲ. ಬದಲಾಗಿ ಕಾಂಗ್ರೆಸ್‌ ನಾಯಕರುಗಳ ಸಂಘಟನಾತ್ಮಕ ಹೋರಾಟ. ಅದರಲ್ಲಿ ಮುಖ್ಯವಾಗಿ ಡಿ.ಕೆ. ಶಿವಕುಮಾರ್‌ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಳಿವು ಉಳಿವಿನ ಅಹೋರಾತ್ರಿ ಹೋರಾಟ. ಇದರ ಜೊತೆಗೆ ಜಾತಿ ಬಲ, ಪ್ರಾದೇಶಿಕ ಬಲ, ಧನ ಬಲ, ಅಧಿಕಾರ ಬಲ ಎಲ್ಲವೂ ಏಕಕಾಲದಲ್ಲಿ ಮೇಳೈಸಿ ಬಂದ ಕಾರಣ ಬಳ್ಳಾರಿ ಮತ್ತು ಜಮಖಂಡಿಯಲ್ಲಿ ಅಭೂತಪೂರ್ವವಾದ ವಿಜಯ ಪ್ರಾಪ್ತವಾಯಿತು. ಕಾಂಗ್ರೆಸ್‌ನ ಈ ನಾಯಕರು ಎಷ್ಟರ ಮಟ್ಟಿಗೆ ತಮ್ಮ ಬುದ್ಧಿವಂತಿಕೆ ಪ್ರಯೋಗಿಸಿದ್ದಾರೆ ಅಂದರೆ ಚುನಾವಣೆಗೆ ಹತ್ತು ದಿನಗಳ ಮೊದಲು ಗುಪ್ತದಳದ ವರದಿಯಲ್ಲಿ ಕಾಂಗ್ರೆಸ್‌ಗೆ ಸೋಲಾಗುವ ಸ್ಥಿತಿ ಇದೆ ಎಂಬ ವರದಿ ತಲುಪಿದ ತಕ್ಷಣ ಅತ್ಯಂತ ಜಾಗ್ರತೆಯಿಂದ ಸಂಪೂರ್ಣ ಶಕ್ತಿಯನ್ನು ಬಳ್ಳಾರಿಯಲ್ಲಿಯೇ ಸಂಚಲನಗೊಳಿಸಿ, ಹೊರಗಿನ ಅಭ್ಯರ್ಥಿ ಎಂದೇ ಬಿಂಬಿತವಾದ ಉಗ್ರಪ್ಪನವರನ್ನು ಹೊಸ ದಾಖಲೆಯ ಮತಗಳ ಅಂತರದಲ್ಲಿ ಜಯದ ಹೊಸ್ತಿಲಿಗೆ ತಲುಪಿಸಿದ ಕೀರ್ತಿ ಡಿ.ಕೆ.ಶಿವಕುಮಾರ್‌ ಅವರಿಗೆ ಸಲ್ಲುತ್ತದೆ. ಜಮಖಂಡಿಯ ಗೆಲುವು ಸಿದ್ದರಾಮಯ್ಯನವರ ಕೈಚಳಕ, ಬಾಯಿ ಚಳಕದ ವಿಜಯವೆಂದೇ ಬಿಂಬಿತವಾಗಿದೆ. ಅನುಕಂಪದ ಅಲೆಯ ಜೊತೆಗೆ ಜಾತಿ ಪ್ರೀತಿಯ ಲೆಕ್ಕಾಚಾರವೂ ಅಷ್ಟೇ ಮಹತ್ವದ ಪಾತ್ರವಹಿಸಿದೆ. 

ಜೆಡಿಎಸ್‌ ಪಾಲಿಗೆ ರಾಮನಗರ ಮತ್ತು ಮಂಡ್ಯ ಕ್ಷೇತ್ರದ ಪೂರ್ವ ನಿರೀಕ್ಷಿತ ವಿಜಯವೆಂದೇ ಪರಿಗಣಿಸಲಾಗಿತ್ತು. ಹಾಗಾಗಿ ಇದರಲ್ಲಿ ವಿಶೇಷತೆ ಏನೂ ಉಳಿದಿಲ್ಲ. ಒಂದಂತೂ ಸತ್ಯ, ಮುಂದಿನ ಅವಧಿಯಲ್ಲಿ ರಾಮನಗರ ಹಾಗೂ ಮಂಡ್ಯ ಕ್ಷೇತ್ರಕ್ಕೆ ಜೆಡಿಎಸ್‌ ಏಕಮೇವ ಪಕ್ಷ ಅನ್ನುವುದಕ್ಕೆ ಕಾಂಗ್ರೆಸ್‌ ಮುಚ್ಚಳಿಕೆ ಬರೆದು ಕೊಟ್ಟಿದೆ. 
ಈ ಪಂಚಕ್ಷೇತ್ರಗಳ ಉಪಚುನಾವಣೆಯ ಫ‌ಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ಮುನ್ನುಡಿ ಬರೆಯಬಹುದೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸ್ವಾಭಾವಿಕ. ಆದರೆ ಇಂದಿನ ಚುನಾವಣಾ ಫ‌ಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ಸಂಪೂರ್ಣವಾದ ದಿಕ್ಸೂಚಿಯಾಗಲಾರದು. ಆದರೆ ಇದರ ಛಾಯೆ ಖಂಡಿತಾ ಅಲ್ಲಲ್ಲಿ ಕಂಡು ಬರುವ ಸಾಧ್ಯತೆ ಇದೆ. 2019ರ ಮಹಾ ಚುನಾವಣೆ ರಾಷ್ಟ್ರವ್ಯಾಪಿಯಾಗಿ ನಡೆಯಬೇಕಾದ ಚುನಾವಣೆ. ಕೇಂದ್ರದಲ್ಲಿ ಸಮರ್ಥ ಸರಕಾರವನ್ನು ರೂಪಿಸಬೇಕಾದ, ಸಮರ್ಥ ನಾಯಕರನ್ನು ಸೃಷ್ಟಿಸಬೇಕಾದ ಚುನಾವಣೆ. ರಾಷ್ಟ್ರೀಯ ಅಂತರಾಷ್ಟ್ರೀಯ ವಿಚಾರಗಳೇ ಹೆಚ್ಚು ಚರ್ಚೆಗೆ ಬರುವ ಸಾಧ್ಯತೆ ಇರುವ ಕಾರಣ, ಪ್ರಾದೇಶಿಕತೆಯನ್ನು ಮೀರಿ ರಾಷ್ಟ್ರಮಟ್ಟದ ನಾಯಕರುಗಳ ಸಮಾಗಮವಾಗುವ ಚುನಾವಣೆಯಾಗಿದೆ. ಹೀಗಾಗಿ ಹೊಸ ಸ್ಪೂರ್ತಿ, ಹೊಸ ಹುಮ್ಮಸ್ಸು ಎಲ್ಲ ಪಕ್ಷಗಳಲ್ಲಿ ಮೂಡಿ ಬರಬೇಕಿದೆ. ಕೇವಲ ಮೂರು ಲೋಕಸಭಾ ಉಪ ಚುನಾವಣಾ ಕ್ಷೇತ್ರವನ್ನೇ ಪ್ರಧಾನವಾಗಿಟ್ಟುಕೊಂಡು ಮುಂದಿನ ಮಹಾ ಚುನಾವಣೆಯನ್ನು ವಿಶ್ಲೇಷಿಸುವುದು ಸಮಂಜಸವಲ್ಲ ಅನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯವೂ ಹೌದು. ಕರ್ನಾಟಕದಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಮಟ್ಟಿಗೆ ಕರ್ನಾಟಕದ ನಾಯಕರುಗಳೇ ಸಾಕು. ಆದರೆ ಬಿಜೆಪಿಯ ಮಟ್ಟಿಗೆ ರಾಷ್ಟ್ರಮಟ್ಟದ ನಾಯಕರುಗಳ ತಂತ್ರಗಾರಿಕೆಯ ಅನುವಾರ್ಯತೆಯೂ ಇದೆ ಎನ್ನುವುದು ಇಂದಿನ ಉಪ ಚುನಾವಣೆಯ ಫ‌ಲಿತಾಂಶದಿಂದ ಹೊರ ಬಂದ ಸಂಗತಿ.

 ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.