ಶಿಕ್ಷಣ ಮಾಧ್ಯಮ, ಉದ್ಯೋಗಗಳ ನಡುವಿನ ತಾಳ ಮೇಳ


Team Udayavani, Nov 17, 2018, 8:12 AM IST

19.jpg

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಭಾಷೆ ಮತ್ತು ಶಿಕ್ಷಣದ ಇಂದಿನ ಸ್ಥಿತಿಗತಿ ಕುರಿತು ಶೈಕ್ಷಣಿಕ ಸಂವಾದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಸಂವಾದಕ್ಕೊಂದು ಚೌಕಟ್ಟನ್ನು ಹಾಕಿಕೊಂಡಿದ್ದರೂ ಪೂರ್ವನಿರ್ಧರಿತ ಸೀಮಿತ ಅವಧಿಯಲ್ಲಿ ಸಮಗ್ರ ಚರ್ಚೆ ನಡೆಯುವುದು ಸಾಧ್ಯವಿರಲಿಲ್ಲ. ಶಿಕ್ಷಕರು ಮಾತನಾಡಬೇಕು ಎಂದು ಉಳಿದ ಶಿಕ್ಷಣಾಸಕ್ತರು ಆಗ್ರಹಿಸಿದಾಗ ಚರ್ಚೆ ದಾರಿ ತಪ್ಪುವ ಭೀತಿ ಕಾಡಿದ್ದು ಸತ್ಯ. ಆದರೆ ಅದು ಸಹಜ ಎಂದೂ ಭಾವಿಸಿದ್ದೇನೆ. ಹಸಿದು ಕಂಗಾಲಾಗಿರುವ ವ್ಯಕ್ತಿಯೋರ್ವನ ಬಳಿ ಶಾಸ್ತ್ರೀಯ ಸಂಗೀತದ ಶ್ರೇಷ್ಠತೆಯ ಕುರಿತು ಮಾತನಾಡುವುದು ನಿರರ್ಥಕ. ಶಿಕ್ಷಕವೃಂದ ಎದುರಿಸುತ್ತಿರುವ ಸಮಸ್ಯೆಗಳು ಬೇರೆಯೇ ಸ್ತರದವು. ಅವುಗಳನ್ನು ಶಿಕ್ಷಕರು ಮಾತನಾಡಿ ಪರಿಹರಿಸಿ ಕೊಳ್ಳಲಾರರು. ಆದರೆ ಆ ಸಮಸ್ಯೆಗಳಿಗೂ ಶಿಕ್ಷಣ ಮಾಧ್ಯಮದ ಆಯ್ಕೆಯಲ್ಲಿ ಮಕ್ಕಳಿಗೋ ಹೆತ್ತವರಿಗೋ ಇರುವ ಸ್ವಾತಂತ್ರ್ಯಕ್ಕೂ ಸಂಬಂಧವಿರುವುದನ್ನು ಅಲ್ಲಗಳೆಯಲಾಗದು. 

ಜನ ಆಂಗ್ಲ ಮಾಧ್ಯಮದ ಕಡೆಗೆ ಹೆಚ್ಚು ಆಕರ್ಷಿತರಾಗತೊಡಗಿದ ಬಳಿಕವೆ ಸರಕಾರಿ ಶಾಲೆಗಳ ಪರಿಸ್ಥಿತಿ ಕೆಡಲಾರಂಭಿಸಿದ್ದು ಮತ್ತು ಸುಧಾರಣೆಯ ಹೆಸರಲ್ಲಿ ವಿವಿಧ ಪ್ರಯೋಗಗಳನ್ನು ಇಲಾಖೆ ಆರಂಭಿಸಿದ್ದು. ಪ್ರಯೋಗಗಳಿಗೆ ಬಲಿಯಾಗುವವರು ಶಿಕ್ಷಕರು ಮಾತ್ರವಲ್ಲ ಆ ಕಾಲಘಟ್ಟದ ವಿದ್ಯಾರ್ಥಿಗಳು ಎನ್ನುವುದು ಖೇದಕರ. ಶಿಕ್ಷಕರು ನಿವೃತ್ತರಾಗುವವರೆಗೆ ಮಾತ್ರ ಬಳಲಿದರೆ ವಿದ್ಯಾರ್ಥಿಗಳು ಜೀವನ ಪೂರ್ತಿ ಬಳಲುತ್ತಾರೆ.

ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳು ನಮ್ಮ ರಾಜ್ಯದಲ್ಲಿ ಪದಾರ್ಪಣ ಮಾಡಿದ ಆರಂಭಿಕ ವರ್ಷಗಳಲ್ಲಿ ಕನ್ನಡ ಮಾಧ್ಯಮದ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಗುಣಮಟ್ಟದ ಬಗ್ಗೆ ತಕರಾರುಗಳೇ ಇರಲಿಲ್ಲ ಎನ್ನುವುದನ್ನು ನೆನಪಿಸಿಕೊಳ್ಳಬೇಕು. ಆ ಕಾಲದಲ್ಲಿ ವಿದ್ಯಾರ್ಥಿಗಳಾಗಿದ್ದವರಲ್ಲಿ ಅನೇಕರು ಉತ್ತಮ ಶಿಕ್ಷಣ ಪಡೆದು ಉದ್ಯಮ, ಉದ್ಯೋಗಗಳಲ್ಲಿ ಯಶಸ್ಸು ಗಳಿಸಿದ್ದು ಸರ್ವವೇದ್ಯ. ಅಂಥವರು ಈಗಲೂ ತಾವು ಕಲಿತ ಶಾಲೆಗಳನ್ನು ಗೌರವಪೂರ್ವಕವಾಗಿಯೇ ನೆನಪಿಸಿಕೊ ಳ್ಳುತ್ತಿರುವುದೂ ಸತ್ಯ. ಉದ್ಯೋಗ ನಿಮಿತ್ತ ವಿದೇಶಗಳಿಗೆ ತೆರಳಿದ್ದವರೂ ಇಂಗ್ಲಿಷ್‌ ಮಾತನಾಡಲು ಬಾರದ ಕಾರಣಕ್ಕೆ ಹಿಂದೆ ಬಂದ ನಿದರ್ಶನ ನನಗೆ ತಿಳಿದಿಲ್ಲ. ಮಾತ್ರವಲ್ಲ ಕೊಲ್ಲಿ ರಾಷ್ಟ್ರಗಳಿಗೆ ತೆರಳಿ ಆಯಾ ದೇಶದ ಭಾಷೆಗಳನ್ನು ಕಲಿತು ಅಲ್ಲಿ ಸರಾಗವಾಗಿ ವ್ಯವಹರಿಸುತ್ತಿರುವವರೆಲ್ಲ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದವರೇ? ಹೋಗಲಿ, ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಭರಾಟೆಯ ಈ ದಿನಗಳಲ್ಲೂ ಕನ್ನಡ ಮಾಧ್ಯಮವನ್ನು ಅನಿವಾರ್ಯವಾಗಿಯೋ, ಅಸಹಾಯಕತೆಯಿಂದಲೋ ಆಯ್ದುಕೊಂಡವರೆಲ್ಲರೂ ಜೀವನದಲ್ಲಿ ವಿಫ‌ಲರಾಗಿದ್ದಾರೆಯೇ? ಆಂಗ್ಲ ಮಾಧ್ಯಮವನ್ನು ಆಯ್ದುಕೊಂಡವರೆಲ್ಲರೂ ಜೀವನದಲ್ಲಿ ಅದ್ಭುತ ಯಶಸ್ಸು ಗಳಿಸಿದ್ದಾರೆಯೇ ಎಂಬ ಪ್ರಶ್ನೆ ಅಸಂಬದ್ಧವೆನಿಸದು. ಆಂಗ್ಲ ಮಾಧ್ಯಮ ಆಯ್ದುಕೊಂಡವರಲ್ಲಿ ಕೆಲವರು ಅಲ್ಲಿ ಅನುತ್ತೀರ್ಣರಾಗಿ ಕನ್ನಡ ಶಾಲೆಗಳ ಮೊರೆ ಹೊಕ್ಕು ಉತ್ತಮ ಭವಿಷ್ಯ ರೂಪಿಸಿಕೊಂಡವರೂ ಇಲ್ಲದಿಲ್ಲ.

ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಹೆತ್ತವರೇಕೆ ಹಾತೊರೆಯುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರಗಳು ಹಲವು. ಅಲ್ಲಿ ಕಲಿತವರೆಲ್ಲರೂ ಮೇಧಾವಿಗಳಾಗುತ್ತಾರೆ ಎಂಬ ನಂಬಿಕೆ ಪ್ರಚಲಿತವಾಗಿದೆ. ಅಲ್ಲಿ ಶಿಕ್ಷಣ ಪಡೆದರೆ ಉನ್ನತ ಶಿಕ್ಷಣಕ್ಕೆ ಅನುಕೂಲವೆಂಬ ಭಾವನೆ ಪ್ರಬಲವಾಗಿದೆ. ಅದರಲ್ಲೂ ತಾಂತ್ರಿಕ, ವೈದ್ಯಕೀಯ ಶಿಕ್ಷಣ ಪಡೆಯುವುದೇ ಜೀವನದ ಪರಮ ಧ್ಯೇಯವೆಂದು ಭಾವಿಸುವವರು ತಮ್ಮ ಮಕ್ಕಳನ್ನು ಪ್ರಾಥಮಿಕ ಹಂತದಲ್ಲೇ ಆಂಗ್ಲ ಮಾಧ್ಯಮ ಶಾಲೆಗೆ ದಾಖಲಿಸುವುದು ಆದ್ಯ ಕರ್ತವ್ಯವೆಂದು ತಿಳಿದಿದ್ದಾರೆ. ಕೆಲವರಿಗಂತೂ ಪ್ರತಿಷ್ಠಿತ ಶಾಲೆಗಳ ವಸ್ತ್ರ ಸಂಹಿತೆಯೇ ಶಿಸ್ತಿನ ದ್ಯೋತಕವಾಗಿ ಗೋಚರಿಸುತ್ತದೆ. ಅಲ್ಲಿನ ಕಟ್ಟುನಿಟ್ಟು ವಿದ್ಯಾರ್ಥಿಯನ್ನು ಸತøಜೆಯನ್ನಾಗಿ ರೂಪಿಸುವುದರಲ್ಲಿ ಅವರಿಗೆ ಭರವಸೆ ಇರುತ್ತದೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ಫ‌ಲಿತಾಂಶ ಅವರ ನಂಬಿಕೆಗೆ ಆಧಾರ. ತಮ್ಮ ಮಕ್ಕಳೂ ನೂರು ಶೇಕಡಾ ಅಂಕ ಗಳಿಸುತ್ತಾರೆ ಎಂಬ ನಿರೀಕ್ಷೆಯಿಂದಲೇ ಅಂಥ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಹರಸಾಹಸ ಪಡುತ್ತಾರೆ. ಅಂಥ ಹೆತ್ತವರಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕ-ಶಿಕ್ಷಕಿಯರೂ ಇದ್ದಾರೆನ್ನುವುದು ರಹಸ್ಯವೇನಲ್ಲ.

ಕಾರ್ಯಕ್ರಮದಲ್ಲಿ ಮಹನೀಯರೊಬ್ಬರು,  ಮಹಾ ನಗರಗಳಲ್ಲಿ ನೆಲೆಸಿರುವವರಿಗೆ ಇಂಗ್ಲೀಶ್‌ನಲ್ಲಿ ನಿರರ್ಗಳ ಸಂಭಾಷಣಾ ಸಾಮರ್ಥ್ಯ ಯಾವುದೇ ಉದ್ಯೋಗಕ್ಕೆ ಒಂದು ಪ್ರಮುಖ ಅರ್ಹತೆಯಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾ ಚರಿಸುವ ಕಾಲ್‌ ಸೆಂಟರುಗಳಿಗೆ ಅದು ಅನಿವಾರ್ಯ. ಹಾಗೆ ಮಾತನಾಡಬೇಕಾದರೆ ಆಂಗ್ಲ ಮಾಧ್ಯಮದಲ್ಲಿಯೇ ಶಿಕ್ಷಣ ಪಡೆಯಬೇಕಾಗುತ್ತದೆ ಎಂದರೆ ತಪ್ಪಲ್ಲ. 

ಮಾಧ್ಯಮದ ಆಯ್ಕೆಯ ವಿಚಾರವೇ ಕನ್ನಡ ಶಾಲೆಗಳ ದುಸ್ಥಿತಿಗೆ ಕಾರಣವೇ? ಅಥವಾ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿದಿದೆಯೇ? ಹೌದಾದರೆ ಗುಣಮಟ್ಟದ ತಥಾಕಥಿತ ಇಳಿಕೆ ಯಾವಾಗ ಮತ್ತು ಹೇಗೆ ಆರಂಭವಾಯಿತು ಎಂಬ ವಿಷಯ ವಿವೇಚನಾರ್ಹ. ಮೇಲೆ ಹೇಳಿದ ವಿವಿಧ ಕಾರಣಗಳಿಗಾಗಿ ಕೆಳ ಮಧ್ಯಮ, ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಜನ ಆಂಗ್ಲ ಮಾಧ್ಯಮದ ಕಡೆಗೆ ಆಕರ್ಷಿತರಾದ ದಿನದಿಂದಲೇ ಕನ್ನಡ ಶಾಲೆಗಳ ಅವನತಿ ಆರಂಭವಾಯಿತು. ಕಲಿಕೆಯಲ್ಲಿ ಸ್ವಲ್ಪ ಮುಂದಿರಬಹುದಾದ ವಿದ್ಯಾರ್ಥಿಗಳು ಈ ವರ್ಗಗಳಿಂದ ಬರುತ್ತಾರೆ. ಏಕೆಂದರೆ ಆ ವರ್ಗಗಳ ಜನ ವಿದ್ಯಾವಂತರಾಗಿರುತ್ತಾರೆ. ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಅವಲೋಕಿಸುವ ಆಸಕ್ತಿಯನ್ನು° ಹೊಂದಿರುತ್ತಾರೆ. ಮಕ್ಕಳಿಗೆ ಸೂಕ್ತ ಕಲಿಯುವ ವಾತಾವರಣ ಒದಗಿಸುತ್ತಾರೆ. ಮಕ್ಕಳು ಕಲಿಕೆಯಲ್ಲಿ ಹಿಂದುಳಿದರೆ ಆತಂಕಿತರಾಗುತ್ತಾರೆ. ಮಾತ್ರವಲ್ಲ ಮಕ್ಕಳಿಗೆ ಅನುಸರಿಸಲು ಅಣ್ಣಂದಿರು, ಅಕ್ಕಂದಿರು ಅಥವಾ ಸಂಬಂಧಿಕರ ಮೇಲ್ಪಂಕ್ತಿಗಳು ಲಭ್ಯವಿರುತ್ತವೆ. ಈ ವರ್ಗಗಳ ಮಕ್ಕಳೆಲ್ಲ ಆಂಗ್ಲ ಮಾಧ್ಯಮಕ್ಕೆ ದಾಖಲಾದರೆ, ಬಡವರ ಮಕ್ಕಳು ಮಾತ್ರ ಕನ್ನಡ ಶಾಲೆಗಳಲ್ಲಿ ಕಂಡುಬರುತ್ತಾರೆ. ಇವರಲ್ಲಿ ಬುದ್ಧಿವಂತ, ತೀಕ್ಷ್ಣಮತಿಗಳಾಗಿರುವವರು ಇಲ್ಲವೇ ಇಲ್ಲ ವೆಂದೇನಲ್ಲ. ಅಂಥವರು ತೀರ ವಿರಳವಾಗಿರುತ್ತಾರಷ್ಟೆ. ಮಾತ್ರವಲ್ಲ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗಿರುವ ಮೇಲೆ ಹೇಳಿದ ಅನುಕೂಲಗಳು ಈ ಮಕ್ಕಳಿಗಿರುವುದಿಲ್ಲ! ಶಾಲೆಯಲ್ಲಿಯೂ ಅವರಿಗೆ ಸೂಕ್ತ ಸ್ಪರ್ಧಾತ್ಮಕ ವಾತಾವರಣವಿಲ್ಲದೆ ತಮ್ಮ ಸಾಧನೆಯೇ ಅತ್ಯುತ್ತಮವೆಂಬ ತೀರ್ಮಾನಕ್ಕೆ ಬಂದುಬಿಡುವ ಸಾಧ್ಯತೆಯೂ ಇದೆ. ವಿಪರ್ಯಾಸ ವೆಂದರೆ ಕಲಿಕೆಯಲ್ಲಿ ಹಿಂದುಳಿಯುವ ಮಕ್ಕಳ ಕಡೆಗೆ ಹೆಚ್ಚು ಗಮನ ಹರಿಸಬೇಕಾದ ಅನಿವಾರ್ಯತೆಯಲ್ಲಿ ಶಿಕ್ಷಕರು ಪ್ರತಿಭಾವಂತರ ಉತ್ಕೃಷ್ಟ ಸಾಧನೆಗೆ ನೆರವಾಗುವುದಿಲ್ಲ. 

ಇನ್ನೊಂದು ವಿಷಯ, ಪ್ರತಿ ಸಲ ಪಠ್ಯ ಪರಿಷ್ಕರಣೆ ಸಂದರ್ಭದಲ್ಲಿ ಮೊದಲಿದ್ದ ಪಠ್ಯವಸ್ತುವಿಗಿಂತ ಕಠಿಣವಾದದ್ದನೇ ಸೇರಿಸಲಾಗುತ್ತದೆ. ತಜ್ಞರನ್ನು ಈ ಕುರಿತು ಮಾತಿಗೆಳೆದಾಗ ಈಗೀಗ ಮಕ್ಕಳು ಹೆಚ್ಚೆಚ್ಚು ಮೇಧಾವಿಗಳಾಗುತ್ತಿದ್ದಾರೆ ಎನ್ನುತ್ತಾರೆ. ಪ್ರತಿಷ್ಠಿತ ಶಾಲೆಗಳ ಮಟ್ಟಿಗೆ ಇದು ಸತ್ಯವಿರಲೂಬಹುದು.  ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಸಬೇಕು ಎಂಬ ಆದೇಶ ಕಾರ್ಯರೂಪಕ್ಕೆ ಬಂದ ಬಳಿಕವಾದರೂ ಕನ್ನಡ ಶಾಲೆಗಳ ಕಡೆಗೆ ಜನ ಆಕರ್ಷಿತರಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಅದೂ ಆಗಿಲ್ಲ. ವಿದ್ಯಾರ್ಥಿಗಳಿಗೆ ಪಠ್ಯದ ಹೊರೆ ಅಧಿಕವಾಯಿತು. ಶಿಕ್ಷಕರ ಕಾರ್ಯಭಾರ ಹೆಚ್ಚಾಯಿತು. ಮೊದಲೇ ಇದ್ದ ಪಠ್ಯ ವಿಷಯಗಳಲ್ಲಿ ವಿದ್ಯಾರ್ಥಿಗಳ ಸಾಧನೆಗೆ ತೊಡಕಾಯಿತು. ಇಂಗ್ಲಿಷ್‌ ಸಂಭಾಷಣಾ ಸಾಮರ್ಥ್ಯ ಬೆಳೆಯಲೇ ಇಲ್ಲ. ಯಾವುದೇ ಭಾಷೆಯ ಕಲಿಕೆಗೆ ಮಗುವಿನ ಪರಿಸರದಲ್ಲಿಯೇ ಸಂವಹನದ ಮಾಧ್ಯಮವಾಗಿ ಆ ಭಾಷೆ ಇರಬೇಕು ಎನ್ನುವುದು ನಿರ್ವಿವಾದ. ಅಂಥ ಪರಿಸರವನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒದಗಿಸುವುದೇ ಒಂದು ಸವಾಲು. ಆದುದರಿಂದ ಇಂಗ್ಲಿಷ್‌ ಸಂಭಾಷಣಾ ಸಾಮರ್ಥ್ಯ ಕಲಿಸಲೇಬೇಕೆಂದಿದ್ದರೆ ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಪಕ್ಕಕ್ಕೆ ಸರಿಸಿ ಎಲ್ಲ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿ ಸುವುದೇ ಏಕೈಕ ಪರಿಹಾರ. ಆದರೆ, ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಣದ ಮಾಧ್ಯಮವೂ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಲಾಗದು. ಮಗುವಿನ ಮಾನಸಿಕ ಬೆಳವಣಿಗೆಗೆ ಪರಿಸರದಲ್ಲೇ ಇರುವ ನಿದರ್ಶನಗಳು ಬೀರುವಷ್ಟು ಪರಿಣಾಮ ವಿದೇಶಿ ನಿದರ್ಶನಗಳಿಂದ, ಕತೆಗಳಿಂದಾಗದು. ಅಷ್ಟು ಮಾತ್ರವಲ್ಲ, ಶಿಕ್ಷಣದ ಮಾಧ್ಯಮವೇ ಪರಕೀಯವೆನಿಸಿ, ಹೊರೆಯಾಗಿ ಮಗುವಿನ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಬಲ್ಲದು. ಹೆತ್ತವರ ನಿರೀಕ್ಷೆಗಳು ಮಕ್ಕಳಿಗೆ ಭಾರವಾಗಬಾರದಲ್ಲವೇ?

ನೈಜ ಸಮಸ್ಯೆ ಯಾವುದು? 
ಉದ್ಯೋಗ ಲಭಿಸಬೇಕಿದ್ದರೆ ಇಂಗ್ಲಿಷ್‌ ಕಲಿಯಲೇಬೇಕು ಎಂಬ ಭಾವನೆ ಜನಮಾನಸದಲ್ಲಿ ಆಳವಾಗಿ ಬೇರೂರುತ್ತಿದೆ. ಈ ವಾದದ ಸತ್ಯಾಸತ್ಯತೆಯ ಬಗ್ಗೆ ಚಿಂತನೆ ಇಂದಿನ ತುರ್ತು. ಶಿಕ್ಷಣ ಮಾಧ್ಯಮ ಮತ್ತು ಕನ್ನಡ ಭಾಷೆಯ ಮೇಲಿನ ಅಭಿಮಾನ ಇವೆರಡು ಒಂದೇ ವೇದಿಕೆಯಲ್ಲಿ ಚರ್ಚಿಸುವ ವಿಷಯವೇ ಅಲ್ಲ. ನಿರಂತರ ಉತ್ತಮ ಆದಾಯ ತರುವ ಉದ್ಯೋಗವೇ ಬಹುತೇಕರ ಆದ್ಯತೆ ಹೊರತು ಭಾಷಾಭಿಮಾನವಲ್ಲ. ಹಾಗೆಂದು ಅವರೇನೂ ಕನ್ನಡ ವಿರೋಧಿಗಳಲ್ಲ. ತಮ್ಮ ನಾಡಿನ, ನುಡಿಯ ಅಭಿಮಾನಿಗಳೇ ಆಗಿರುತ್ತಾರೆ. ಅವರ ಹೃದಯದ ಭಾಷೆ ಕನ್ನಡವೋ ತುಳುವೋ ಕೊಂಕಣಿಯೋ ಆಗಿರುತ್ತದೆ. ಹಾಗೆಂದು ಅದಕ್ಕಾಗಿ ಉತ್ತಮ ಔದ್ಯೋಗಿಕ ಅವಕಾಶವನ್ನು ನಿರಾಕರಿಸಲಾರರು. ಅನಿವಾಸಿ ಭಾರತೀಯರೆಲ್ಲ ಭಾರತ ವಿರೋಧಿಗಳೇ? ಅವರೆಲ್ಲ ತಾವು ನೆಲೆಸಿದ ನಾಡುಗಳಲ್ಲೇ ತಾಯ್ನುಡಿಯ ಏಳಿಗೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದನ್ನು ನಾವು ಗಮನಿಸಬೇಕು. 

ಸಂವಾದದಲ್ಲಿ ಒಬ್ಬರು ಶಿಕ್ಷಣದ ಯಾವ ಹಂತದಲ್ಲೂ ಯಾವ ಕ್ಷೇತ್ರಕ್ಕೆ ತಾನು ಅರ್ಹನಿದ್ದೇನೆ ಎಂಬ ಕುರಿತು ಮಾರ್ಗದರ್ಶನ ಸಿಗಲಿಲ್ಲವೆಂದು ದೂರಿದರು. ಅಂಥ ಮಾರ್ಗದರ್ಶನ ಶಿಕ್ಷಕರು ನೀಡಬೇಕೆಂದು ನಿರೀಕ್ಷೆ ತಾನೆ? ಅದು ಸಾಧ್ಯವೇ? ವರ್ಷದಿಂದ ವರ್ಷಕ್ಕೆ ಉದ್ಯೋಗ ಮಾರುಕಟ್ಟೆಯಲ್ಲಾಗುತ್ತಿರುವ ಬದಲಾವಣೆ ಅನಿರೀಕ್ಷಿತ, ಅನೂಹ್ಯ. ಹೀಗಿರುವಾಗ ವಿದ್ಯಾರ್ಥಿಗಳಿಗೆ ಅಂಥ ಮಾರ್ಗದರ್ಶನ ಮಾಡಲು ಶಿಕ್ಷಕರಿಗೆ ಧೈರ್ಯವಾದರೂ ಎಲ್ಲಿಂದ ಬರಬೇಕು? ಸ್ವತಃ ಶಿಕ್ಷಕರ ಮಕ್ಕಳೆಲ್ಲರೂ ಜೀವನದಲ್ಲಿ ಅದ್ಭುತ ಯಶಸ್ಸು ಗಳಿಸಿದ್ದಾರೆಯೇ?

ಹೀಗೊಂದು ಅಸಂಗತ ಪರಿಹಾರ 
ಇಂಥ ಯೋಚನೆಗಳ ಸರಣಿಯ ಕೊನೆಯಲ್ಲಿ ಮೇಲ್ಕಾಣಿಸಿದ ಪ್ರಶ್ನೆಗೆ ಉತ್ತರವಾಗಿ ಹೊಳೆದದ್ದು ಇಷ್ಟು: ಸರಕಾರದ ವಿವಿಧ ಇಲಾಖೆಗಳು ಸಂಘಟಿತ ಕ್ಷೇತ್ರದಲ್ಲಿನ ಉದ್ಯಮಗಳು ತಮ್ಮಲ್ಲಿ ಐದು ವರ್ಷಗಳ ಬಳಿಕ ತೆರವಾಗುವ ಹುದ್ದೆಗಳ ಕುರಿತು ಅಂಕಿ ಅಂಶಗಳನ್ನು ಪ್ರತಿವರ್ಷ ಪ್ರಕಟಿಸಬೇಕು. ಮಾತ್ರವಲ್ಲ ಆ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ಕೌಶಲಗಳು,ತರಬೇತಿ ಇತ್ಯಾದಿಗಳ ಬಗ್ಗೆ ವಿವರಗಳನ್ನೂ ಪ್ರಕಟಿಸಬೇಕು. ಇದನ್ನಾಧರಿಸಿ ವಿದ್ಯಾರ್ಥಿಗಳು ಹೆತ್ತವರು ತಮ್ಮ ಗುರಿಗಳನ್ನು ನಿರ್ಧರಿಸಿ ಕೊಳ್ಳಬಹುದು. ಯಾವ ಕ್ಷೇತ್ರ ತಮಗೆ ಸೂಕ್ತವೆಂದು ಭಾವಿಸು ವರೋ ಅದಕ್ಕೆ ತಕ್ಕುದಾದ ಶಿಕ್ಷಣವನ್ನೂ ತರಬೇತಿಯನ್ನೂ ಪಡೆಯಬಹುದು. ನಿರುದ್ಯೋಗ ಸಮಸ್ಯೆಯೂ ಕಿಂಚಿತ್‌ ಪರಿಹಾರ ಆದೀತು. ಉದ್ಯೋಗಗಳಿಗೆ ಸಮರ್ಥ ಅಭ್ಯರ್ಥಿಗಳೂ ಲಭಿಸಿಯಾರು. ಮಾತ್ರವಲ್ಲ ಶಿಕ್ಷಣ ಮಾಧ್ಯಮದ ಆಯ್ಕೆಯ ಸ್ವಾತಂತ್ರ್ಯ ಇರುತ್ತಲೇ ಕನ್ನಡ ಶಾಲೆಗಳಿಗೂ ವಿದ್ಯಾರ್ಥಿಗಳು ಬಂದಾರು. ಎಲ್ಲ ಉದೋಗಗಳಿಗೂ ಇಂಗ್ಲಿಷ್‌ ಭಾಷೆಯಲ್ಲಿ ವಾಕ³ಟುತ್ವ ಅಗತ್ಯವಿಲ್ಲವಲ್ಲಾ. 

ಸಂಪಿಗೆ ರಾಜಗೋಪಾಲ ಜೋಶಿ

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.