CONNECT WITH US  

ಚಿಂತೆ ಮಾಡಿಯೇ ಬದುಕಿನ 5 ವರ್ಷ ಹಾಳು ಮಾಡ್ತಾರೆ!

ಮನೇಲಿದ್ರೆ ಒಂದು ರೀತಿ ಕಿರಿಕಿರಿ, ಆಫೀಸ್ ಗೆ ಹೋದ್ರೆ ಮತ್ತೂಂದು ರೀತಿ ಕಿರಿಕಿರಿ.. ಬದುಕೇ ಸಾಕಾಗಿ ಹೋಗಿದೆ. ಏನ್ಮಾಡೋದು.. ಅಂತ ಹೇಳ್ಕೊಂಡು ಗಂಟೆ ಗಂಟ್ಟಲೆ ಚಿಂತೆ ಮಾಡೋರು ಇದ್ದಾರೆ. ಹೀಗೆ ಚಿಂತೆ ಮಾಡೋದ್ರಲ್ಲಿ ಬ್ರಿಟಿಷರು ಇನ್ನೂ ಒಂದು ಹೆಜ್ಜೆ ಮುಂದಂತೆ. ಚಿಂತೆ ಮಾಡಿಯೇ ಅವರು ಬದುಕಿನ ಅಮೂಲ್ಯ 5 ವರ್ಷಗಳನ್ನು ಹಾಳು ಮಾಡ್ತಾರೆ ಅಂತ ಸಮೀಕ್ಷೆ ಹೇಳಿದೆ. ಬ್ರಿಟಿಷರು ದಿನಕ್ಕೆ ಸರಾಸರಿ 50 ನಿಮಿಷ ಅವರು ಚಿಂತೆ ಮಾಡ್ತಾರಂತೆ! ಸಮೀಕ್ಷೆಗೊಳಪಟ್ಟವರಲ್ಲಿ ಶೇ.86 ರಷ್ಟು ಮಂದಿ ನಮಗೆ ಭಾರೀ ಚಿಂತೆಯಾಗುತ್ತೆ ಇದ್ರಿಂದ ನಿದ್ದೆ ಬಾರದಾಗಿದೆ ಅಂತ ಹೇಳಿದ್ದಾರೆ. 2 ಸಾವಿರ ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 10ರಲ್ಲಿ 6 ಮಂದಿ ಸಂಗಾತಿಯೊಂದಿಗೆ ಜಗಳವಾಡಿ ಚಿಂತೆಯಾಗುತ್ತೆ ಅಂದಿದ್ದರೆ ಮತ್ತೆ ಕೆಲವರು ತಮ್ಮ ಕೆಲಸ ಹೋಗುತ್ತೆ ಎಂಬ ಚಿಂತೆ, ಮತ್ತೆ ಕೆಲವರು ನಮ್ಮ ಪ್ರೇಮ/ವಿವಾಹ ಸಂಬಂಧ ಮುರಿದು ಹೋಗುತ್ತೆ ಎಂಬ ಚಿಂತೆ ನಮಗೆ ತೀವ್ರವಾಗಿದೆ ಎಂದು ಹೇಳಿದ್ದಾರೆ. ಹೀಗೆ ಚಿಂತೆಗೊಳಗಾಗುವವರಲ್ಲಿ ಶೇ.34ರಷ್ಟು ಮಂದಿ ಮಾತ್ರ ತಮ್ಮ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರಂತೆ. ಉಳಿದವರು ಮಾನಸಿಕವಾಗಿಯೇ ಕೊರಗುತ್ತಿರುತ್ತಾರಂತೆ. ಹೀಗೆ ಮಾಡೋದ್ರಿಂದ
ಆರೋಗ್ಯ ಸಮಸ್ಯೆಗಳು ಹೆಚ್ಚು ಕಾಡುತ್ತವೆ ಎಂದು ಸಮೀಕ್ಷೆ ಎಚ್ಚರಿಸಿದೆ. 

ಫ‌ಲಿತಗಳು...
*ಬ್ರಿಟಿಷರಲ್ಲಿ ಶೇ.84ರಷ್ಟು ಮಂದಿಗೆ ಚಿಂತೆಯಿಂದ ನಿದ್ದೆ ಬರದು!

*10ರಲ್ಲಿ 6 ಮಂದಿಗೆ ಸಂಗಾತಿಯೊಂದಿಗೆ ಜಗಳವಾಡಿ ಚಿಂತೆ ಶುರುವಾಗುತ್ತೆ!

*ಶೇ.34ರಷ್ಟು ಮಂದಿ ಮಾತ್ರ ತಮ್ಮ ಚಿಂತೆಯ ಕಾರಣ ಹಂಚಿಕೊಳ್ತಾರೆ, ಮನಸ್ಸು ಹಗುರ ಮಾಡ್ಕೊಳ್ತಾರೆ.

Trending videos

Back to Top