CONNECT WITH US  

ಭಾರತದಲ್ಲಿ ಹುಡುಗೀರು ಹುಡುಗ್ರಿಗಿಂತ ಉದ್ದವಾಗ್ತಿದ್ದಾರೆ!

ಹುಡುಗರು ಹುಡುಗೀರಿಗಿಂತ ಉದ್ದ ಇರೋದು ಸಾಮಾನ್ಯ. ಅಲ್ಲೊಂದಿಲ್ಲಿ ಹುಡುಗೀರು ಉದ್ದವಾಗಿರುವ ಉದಾಹರಣೆ ಇದೆ. ಆದರೆ ಭಾರತದಲ್ಲಿ ಈ ವಿಚಾರ ನಿಧಾನಕ್ಕೆ ಉಲ್ಟಾ ಆಗ್ತಿದೆ ಅಂತ ಸಮೀಕ್ಷೆಯೊಂದು ಹೇಳಿದೆ. ಕಳೆದ ಒಂದು ಶತಮಾನದಲ್ಲಿ ಹುಡುಗಿಯರ ಎತ್ತರದಲ್ಲಿ 5 ಸೆ.ಮೀ. ನಷ್ಟು ಏರಿಕೆ ಆಗಿದೆಯಂತೆ. ಅದೇ, ಹುಡುಗರ ಎತ್ತರದಲ್ಲಿ ಕೇವಲ 3 ಸೆಂಟಿ ಮೀಟರ್‌ ಏರಿಕೆ ಆಗಿದೆ.

1994ರಿಂದ 2014ರ ಅವಧಿಯಲ್ಲಿ ಭಾರತದಲ್ಲಿ ಹುಡುಗರ ಸರಾಸರಿ ಉದ್ದ 3 ಸೆ.ಮೀ. ಏರಿಕೆಯೊಂದಿಗೆ 165 ಸೆ.ಮೀ. (5.5 ಅಡಿ) ಆಗಿದೆ. ಅದೇ, ಹುಡುಗಿಯರ ಉದ್ದದಲ್ಲಿ 5 ಸೆ.ಮೀ. ನಷ್ಟು ಏರಿಕೆಯಾಗಿದ್ದು ಅವರ ಸರಾಸರಿ ಎತ್ತರ 153 ಸೆ.ಮೀ. (5.1 ಅಡಿ) ನಷ್ಟಾಗಿದೆ. ಲಂಡನ್‌ನ ಇಂಪೀರಿಯಲ್‌ ಕಾಲೇಜು, ಲಂಡನ್‌ನ ವಿಜ್ಞಾನಿಗಳು ಸಮೀಕ್ಷೆಯ ನೇತೃತ್ವವಹಿಸಿಕೊಂಡಿದ್ದರು. ಸಮೀಕ್ಷೆಗಾಗಿ 200 ದೇಶಗಳ 1.86 ಕೋಟಿ ಮಂದಿಯನ್ನು ಪರೀಕ್ಷಿಸಲಾಗಿದೆ.

ಸಮೀಕ್ಷಕರ ಪ್ರಕಾರ ಸರಾಸರಿ ಎತ್ತರ ನಿರ್ಧರಿಸಲು ಪರಿಸರದ ಕೊಡುಗೆ ಇದೆ. ಗರ್ಭಧಾರಣೆ ಸಮಯದಲ್ಲಿ ತಾಯಿ ಆರೋಗ್ಯ, ಪೌಷ್ಠಿಕ ಆಹಾರ, ಶುದ್ಧ ನೀರು ಇತ್ಯಾದಿ ಮಗುವಿನ ಎತ್ತರ ನಿರ್ಧರಿಸುತ್ತದೆ ಎಂದು ಸಮೀಕ್ಷಕರು ಹೇಳಿದ್ದಾರೆ. 

ಕಳೆದೊಂದು ಶತಮಾನದಲ್ಲಿ ಹುಡುಗಿಯರ ಎತ್ತರ 5 ಸೆ.ಮೀ. ನಷ್ಟು ಏರಿಕೆ!
ಅದೇ ಹುಡುಗರ ಎತ್ತರ 3 ಸೆ.ಮೀ. ನಷ್ಟು ಏರಿಕೆ ಮಾತ್ರ

ಮಗುವಿನ ಎತ್ತರಕ್ಕೆ ಪರಿಸರದ ಕೊಡುಗೆ, ಗರ್ಭಧಾರಣೆ ವೇಳೆ ತಾಯಿಯ ಆರೋಗ್ಯ, ಆಹಾರ ಕ್ರಮ ಕಾರಣವಾಗಿರುತ್ತದೆ.

200 ದೇಶಗಳ 1.86 ಕೋಟಿ ಮಂದಿ ಸಮೀಕ್ಷೆಯಲ್ಲಿ ಭಾಗಿ

Trending videos

Back to Top