CONNECT WITH US  

ಹತ್ತೇ ನಿಮಿಷ ವ್ಯಾಯಾಮ ಮಾಡಿ,ಹೃದಯಾಘಾತ ಹೊಡೆದೋಡಿಸಿ!

ರಾತ್ರಿ ತಡವಾಗಿ ಮಲಗಿ, ಬೆಳಗ್ಗೆ ಹೊತ್ತು ಮೂಡಿದ ಮೇಲೆ ಅದೆಷ್ಟೋ ಹೊತ್ತಿಗೆ ಎದ್ದು, ತಿಂದು ಮತ್ತೆ ಕೆಲಸಕ್ಕೆ. ಮನೆಗೆ ಬಂದ ಮೇಲೂ ಗಂಟೆಗಟ್ಟಲೆ ಟೀವಿ ನೋಡಿ ಕೊನೆಗೆ ಹಾಸಿಗೆಗೆ! ಇದು ಈಗಿನ ಸಾಮಾನ್ಯ ಜೀವನ. ಜೊತೆಗೆ ಕಾಯಿಲೆಗಳೂ ಹಿಂಬಾಲಿಸುತ್ತಿರುತ್ತವೆ. ವ್ಯಾಯಾಮದ ಮಾತೇ ಇಲ್ಲ. ಆದರೆ ದಿನಕ್ಕೆ ಕೇವಲ ಹತ್ತೇ ಹತ್ತು ನಿಮಿಷವಾದರೂ ವ್ಯಾಯಾಮ ಮಾಡುವುದರಿಂದ ಹೃದಯಾಘಾತದಂದತಹ ಸಮಸ್ಯೆಗಳಿಗೆ ಒಳ್ಳೆಯದು ಎಂದು ಸಮೀಕ್ಷೆಯೊಂದು ಹೇಳಿದೆ. ದಿನಕ್ಕೆ ಹತ್ತು ನಿಮಿಷ ವ್ಯಾಯಾಮದಿಂದ ರಕ್ತಪರಿಚಲನೆ ಸಸೂತ್ರವಾಗಿ ನಡೆದು ಮೆದುಳು, ಹೃದಯ ಆರೋಗ್ಯವಾಗಿರಲು ನೆರವು ನೀಡುತ್ತದೆ.

ಸಮೀಕ್ಷೆ ನಡೆಸಿದ ಬ್ರಿಟಿಷ್‌ ಹಾರ್ಟ್‌ ಫೌಂಡೇಶನ್‌ ಪ್ರಕಾರ, ಅರ್ಧಕ್ಕೂ ಹೆಚ್ಚು ಮಂದಿ ಯುವ ಜನತೆ ಯಾವುದೇ ದೈಹಿಕ ವ್ಯಾಯಾಮವನ್ನೇ ಮಾಡುವುದಿಲ್ಲವಂತೆ. ಆದರೆ ಇದರಲ್ಲಿ ಶೇ.41ರಷ್ಟು ಮಂದಿಗೆ ನಮಗೆ ಏನಾದರೂ ಕಾಯಿಲೆ ಬಂದೀತಾ..? ಎನ್ನುವ ಅಳುಕು ಕೂಡ ಇದೆಯಂತೆ. ಆದ್ದರಿಂದ ದಿನಕ್ಕೆ ಹತ್ತು ನಿಮಿಷ, ವಾರದಲ್ಲಿ ಒಂದು ದಿನ ಅರ್ಧಗಂಟೆ ಉತ್ತಮ ವ್ಯಾಯಾಮ ಮಾಡಬೇಕು. ಇದರಿಂದ ಶರೀರ ಉಲ್ಲಸಿತವಾಗಿರುತ್ತದೆ. ಸಮಸ್ಯೆಗಳೂ ಕಡಿಮೆ ಎಂದು ಸಮೀಕ್ಷೆ ಕಿವಿಮಾತು ಹೇಳಿದೆ.

ಫ‌ಲಿತಗಳು...
ದಿನಕ್ಕೆ ಹತ್ತು ನಿಮಿಷ, ವಾರದಲ್ಲೊಂದು ದಿನ ಅರ್ಧಗಂಟೆ ವ್ಯಾಯಾಮ ಶರೀರಕ್ಕೆ ಉತ್ತಮ

ದಿನಕ್ಕೆ ಹತ್ತು ನಿಮಿಷ ವ್ಯಾಯಾಮ ಮಾಡುವುದರಿಂದ ಹೃದಯಾಘಾತ, ಪಾರ್ಶ್ವವಾಯು ತೊಂದರೆಗಳು ದೂರ

 ಈಗಿನ ಯುವ ಜನತೆಯಲ್ಲಿ ಶೇ.50ಕ್ಕೂ ಹೆಚ್ಚು ಮಂದಿ ವ್ಯಾಯಾಮವೇ ಮಾಡಲ್ಲ!

Trending videos

Back to Top