CONNECT WITH US  

ದಂಪತಿ ಯಾವತ್ತೂ ಒಟ್ಟಾಗಿ ಮಲಗಿದ್ರೆ ಆರೋಗ್ಯವೃದ್ಧಿ

ಸಂಗಾತಿಗಳು/ದಂಪತಿ ಅಂದ್ರೆ ಒಟ್ಟಾಗಿ ಮಲಗ್ತಾರೆ. ಅದ್ರಲ್ಲೇನೂ ವಿಶೇಷವಿಲ್ಲ. ಆದ್ರೆ ಹೀಗೆ ಮಲಗೋದ್ರಿಂದ ಆರೋಗ್ಯದ ಮೇಲೆ ಹೆಚ್ಚಿನ ಲಾಭವಿದೆ ಅಂತ ಸಮೀಕ್ಷೆಯೊಂದು ಹೇಳಿದೆ.ಅಮೆರಿಕದ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದು, ದಂಪತಿ ಒಟ್ಟಾಗಿ ಮಲಗೋದ್ರಿಂದ ದೇಹದಲ್ಲಿ ಕೊಲೆಸ್ಟ್ರಾಲ್‌ ಅಂಶ ಕಡಿಮೆಯಾಗುತ್ತೆ, ಪರಸ್ಪರ ಭದ್ರತೆ, ಭಾವನಾತ್ಮಕ ಸಂಬಂಧ ವೃದ್ಧಿಯಾಗುತ್ತದೆ ಎಂದು ಹೇಳಿದ್ದಾರೆ. ಇದು ಪರೋಕ್ಷವಾಗಿ ಉತ್ತಮ ಆರೋಗ್ಯ, ದೀರ್ಘಾಯುಷ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.ಒಂದಾಗಿ ಮಲಗೋದ್ರಿಂದ ಪ್ರೀತಿ ಉಕ್ಕಿಸುವ ಹಾರ್ಮೋನ್‌ ಪ್ರಮಾಣ ಕೂಡ ಹೆಚ್ಚಾಗುತ್ತದಂತೆ. ಸೆಕ್ಸ್‌ ವೇಳೆ ಇದು ಅಗತ್ಯವಾಗಿದ್ದು, ಉತ್ತಮ ಸೆಕ್ಸ್‌ ಜೀವನಕ್ಕೂ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗಿದೆ.

ಸಮೀಕ್ಷೆಗಾಗಿ 18 ವಯಸ್ಸು ಮೇಲ್ಪಟ್ಟ 1ಸಾವಿರ ಮಂದಿಯನ್ನು ಸಂದರ್ಶಿಸಲಾಗಿದ್ದು, ಶೇ.39ರಷ್ಟು ದಂಪತಿ ಒಟ್ಟಾಗಿ ಮಲಗೋದ್ರಿಂದ ಆಗುವ ಲಾಭಗಳ ಬಗ್ಗೆ ಹೇಳಿದ್ದಾರೆ. ಶೇ.59ರಷ್ಟು ಮಂದಿ ಮಹಿಳೆಯರು ತಮ್ಮ ಗಂಡನ ಬಗ್ಗೆ ತಮಗಿರುವ ಒಳ್ಳೆಯ ಭಾವನೆ ಇದರಿಂದ ವೃದ್ಧಿಯಾಗಿದೆ ಎಂದೂ ಹೇಳಿದ್ದಾರಂತೆ. ಶೇ.44ರಷ್ಟು ಮಂದಿ ಪುರುಷರು, ನಾವು ಪರಸ್ಪರ ಭಿನ್ನ ಅಭಿರುಚಿ, ಹವ್ಯಾಸಗಳನ್ನು ಹೊಂದಿದ್ದರೂ ಅರಿತು ಬಾಳುವಂತಾಗಿದೆ ಎಂದು ಹೇಳಿದ್ದಾರಂತೆ. 

ಫ‌ಲಿತಗಳು...
ಸಂಗಾತಿ/ದಂಪತಿ ಒಟ್ಟಾಗಿ ಮಲಗಿದರೆ,ದೀರ್ಘಾಯುಷ್ಯ, ಉತ್ತಮ ಆರೋಗ್ಯ

 ದೇಹದಲ್ಲಿ ಕೊಲೆಸ್ಟ್ರಾಲ್‌ ಅಂಶ ವ್ಯಾಪಕವಾಗಿ ಕಡಿಮೆಯಾಗುತ್ತೆ.

ಒಂದಾಗಿ ಮಲಗೋದ್ರಿಂದ ಪರಸ್ಪರ ಭಾವನಾತ್ಮಕ ಸಂಬಂಧ ವೃದ್ಧಿ, ಮಾನಸಿಕವಾಗಿಯೂ ಪರಿಣಾಮ

Trending videos

Back to Top