CONNECT WITH US  

ಭಾರತದಲ್ಲಿ ಸಕ್ಕರೆ ಕಾಯಿಲೆಯಿಂದಾಗಿ ಶೇ.50ರಷ್ಟು ಸಾವು ಹೆಚ್ಚಳ

ಸಕ್ಕರೆ ಕಾಯಿಲೆ ಸಾವು ತರುವಂತಹ ಕಾಯಿಲೆ ಏನಲ್ಲ. ಆದರೆ ಬದಲಾದ ಜೀವನ ಕ್ರಮದಿಂದಾಗಿ ಸಾವಿನ ಸಂಖ್ಯೆ ಏರಲು ಇದೂ ಪರೋಕ್ಷ ಕಾರಣವಾಗಿದ್ದು, ಕಳೆದ 10 ವರ್ಷಗಳಲ್ಲಿ ಶೇ.50ರಷ್ಟು ಸಾವು ಏರಿಕೆಯಾಗಲು ಕಾರಣವಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ. 2005 ರಿಂದ 2015ರ ಅವಧಿಯಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಅದರಲ್ಲಿ 2015ರಲ್ಲಿ 3.46 ಲಕ್ಷ ಮಂದಿ ಸಕ್ಕರೆ  ಕಾಯಿಲೆಯಿಂದಾಗಿಯೇ ಮೃತಪಟ್ಟಿರುವುದು ಗೊತ್ತಾಗಿದೆ. ಮರಣದ ಇತರ ಕಾರಣಗಳಿಗೆ ಹೋಲಿಸಿದರೆ ಈ ಪ್ರಮಾಣ ಶೇ.3.3ರಷ್ಟಿದೆ. 1990ರ ಅವಧಿಯಲ್ಲಿ ಸಕ್ಕರೆ ಕಾಯಿಲೆಯಿಂದಾಗಿ ದೇಶದಲ್ಲಿ ಸತ್ತವರ ಸಂಖ್ಯೆ ಶೇ.2.7ರಷ್ಟಿತ್ತು ಎಂದು ಸಮೀಕ್ಷೆ ಹೇಳಿದೆ. ಗ್ಲೋಬಲ್‌ ಬರ್ಡನ್‌ ಆಫ್ ಡಿಸೀಸ್‌ ಹೆಸರಿನ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು, ದೇಶದಲ್ಲಿ 1 ಲಕ್ಷ ಮಂದಿಯಲ್ಲಿ 26 ಮಂದಿ ಸಕ್ಕರೆ ಕಾಯಿಲೆಯಿಂದಾಗಿ ಸಾಯುತ್ತಾರೆ ಎಂದು ಹೇಳಿದೆ.
ಸಕ್ಕರೆ ಕಾಯಿಲೆ ಇದ್ದರೂ, ಜೀವನ ಕ್ರಮ ಬದಲು ಮಾಡಿಕೊಳ್ಳದವರು ಹೆಚ್ಚಾಗಿ ಮೃತಪಟ್ಟಿರುವುದು ದರಲ್ಲಿ ಗೊತ್ತಾಗಿದೆ. ಸದ್ಯದ ಮಟ್ಟಿಗೆ ಭಾರತದಲ್ಲಿ 6.91 ಕೋಟಿ ಮಂದಿ ಸಕ್ಕರೆ ಕಾಯಿಲೆಯವರಿದ್ದಾರೆ ಎಂದು
ಅಂದಾಜಿಸಲಾಗಿದೆ. ಸಮೀಕ್ಷೆ ಪ್ರಕಾರ, ಸಕ್ಕರೆ ಕಾಯಿಲೆ ಇದ್ದವರು ಕೂಡಲೇ ತಮ್ಮ ಜೀವನ ಕ್ರಮ ಬದಲು ಮಾಡಿಕೊಂಡರೆ, ಸಮಸ್ಯೆಯಿಂದ ಪಾರಾಗಬಹುದು ಎಂದು ಹೇಳಿದೆ. 

ಫ‌ಲಿತಗಳು...
*2015ರಲ್ಲಿ 3.46 ಲಕ್ಷ ಮಂದಿ ಸಕ್ಕರೆ ಕಾಯಿಲೆಯಿಂದಾಗಿಯೇ ಸಾವು

*ಸಕ್ಕರೆ ಕಾಯಿಲೆಯಿಂದಾಗಿ ಸಾಯೋದಿಲ್ಲ, ಆದರೆ ಜೀವನ ಕ್ರಮ ಬದಲು ಮಾಡಿಕೊಳ್ಳದೇ ಇರುವುದೇ ಸಮಸ್ಯೆ!

*1990ರ ಅವಧಿಯಲ್ಲಿ ಸಕ್ಕರೆ ಕಾಯಿಲೆಯಿಂದಾಗಿ ದೇಶದಲ್ಲಿ ಸತ್ತವರ ಸಂಖ್ಯೆ ಶೇ.2.7ರಷ್ಟು

*ಸದ್ಯ ದೇಶದಲ್ಲಿ 1 ಲಕ್ಷ ಮಂದಿಯಲ್ಲಿ 26 ಮಂದಿ ಸಕ್ಕರೆ ಕಾಯಿಲೆಯಿಂದಾಗಿ ಸಾಯುತ್ತಾರೆ: ಸಮೀಕ್ಷೆ


Trending videos

Back to Top