CONNECT WITH US  

30ರಿಂದ 50 ವರ್ಷ ವಯಸ್ಸಿನವರಿಗೆ ಸರಿಯಾಗಿ ನಿದ್ದೆ ಬರಲ್ಲ!

ರಾತ್ರಿ ಇಡೀ ಉರುಳಾಟ. ಏನೇ ಮಾಡಿದ್ರೂ ನಿದ್ದೆ ಬರಲ್ಲ. ಆಫೀಸು  ಮನೆ ಟೆನ್ಷನ್‌ ಮುಗಿಯೋದೇ ಇಲ್ಲ! ಇದು ಮಧ್ಯವಯಸ್ಕರ ಸಾಮಾನ್ಯ ಪ್ರಾಬ್ಲಿಂ. ಸಮೀಕ್ಷೆಯೊಂದರ ಪ್ರಕಾರ, ಮಧ್ಯವಯಸ್ಕರಿಗೆ ಸರಿಯಾಗಿ ನಿದ್ದೆ ಬರಲ್ಲ. ಇಡೀ ರಾತ್ರಿ ಅವರು 5 ಗಂಟೆ ನಿದ್ದೆ ಮಾಡಿದ್ರೆ ಹೆಚ್ಚು. ನಿತ್ಯವೂ ನಿದ್ದೆ ಕಳೆಯುತ್ತಲೇ ಹೋಗುತ್ತಾರೆ. ಇದರ ಪರಿಣಾಮ ಸರಿ ಸುಮಾರು ಒಂದು ವರ್ಷದ ಅವಧಿಯಲ್ಲಿ ಸುಮಾರು 15 ದಿನಗಳಷ್ಟನ್ನು ನಿದ್ದೆ ಇಲ್ಲದೇ ಕಳೆಯುತ್ತಾರೆ ಎಂದು ಹೇಳಲಾಗಿದೆ.

ಈ ಸಮೀಕ್ಷೆಯನ್ನು ಬ್ರಿಟನ್‌ನಲ್ಲಿ ಲೀಡ್ಸ್‌ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ್ದಾರೆ. ಆಧುನಿಕ ಯುಗದ ಪರಿಣಾಮ, ಅತಿ ಹೆಚ್ಚು ಸಾಮಾಜಿಕ ಜಾಲತಾಣಗಳ ಚಟ ಹತ್ತಿಸಿಕೊಂಡವರು ಇವರಿಗೆಲ್ಲ ನಿದ್ದೆ ಕಡಿಮೆ ಸಾಮಾನ್ಯ. ಇದು ಭವಿಷ್ಯದಲ್ಲಿ ಆರೋಗ್ಯಕ್ಕೆ ಮಾರಕವಾಗುತ್ತದೆ ಎಂದು ಎಂದು ಹೇಳಲಾಗಿದೆ. ಕೆಲವರಿಗೆ ಕೆಲಸದ ಮತ್ತು ಮನೆ ಒತ್ತಡವೂ ಸಮೀಕ್ಷೆಯಲ್ಲಿ ಕಂಡುಬಂದಿದೆ. ಸಮೀಕ್ಷೆಗಾಗಿ 18ರಿಂದ 80 ವರ್ಷ ವಯಸ್ಸಿನ ವ್ಯಕ್ತಿಗಳನ್ನು ಸಂದರ್ಶಿಸಲಾಗಿದ್ದು, ಅದರಲ್ಲಿ ಮಧ್ಯವಯಸ್ಕರಿಗೆ ನಿದ್ದೆ ಹೆಚ್ಚು ನಿದ್ದೆ ಕಡಿಮೆ ಎಂಬುದು ಪತ್ತೆಯಾಗಿದೆ. 

ಫ‌ಲಿತಗಳು...

ಮಧ್ಯವಯಸ್ಕರಿಗೆ ನಿದ್ದೆ ಪ್ರಾಬ್ಲಿಂ 30ರಿಂದ 50 ವರ್ಷ ವಯಸ್ಸನಿವರಿಗೆ 5 ಗಂಟೆಗಿಂತ ಹೆಚ್ಚು ನಿದ್ದೆ ಬರಲ್ಲ!

ಕೆಲಸದ ಒತ್ತಡ, ಮನೆ ಸಮಸ್ಯೆ, ಆಧುನಿಕ ಯುಗದ ಜಂಜಡ, ಸಾಮಾಜಿಕ ಜಾಲತಾಣಗಳ ಅತಿ ಹೆಚ್ಚು ಬಳಕೆಯಿಂದ ನಿದ್ದೆ ಕಡಿಮೆ

Trending videos

Back to Top