CONNECT WITH US  

ಸದಾ ನಗುತ್ತಿರುವ ಸಂಗಾತಿ ಇದ್ದರೆ ಆರೋಗ್ಯ, ಆಯುಷ್ಯ ಗಟ್ಟಿ!

ಸುಖಮಯ ದಾಂಪತ್ಯದ ಗುಟ್ಟೇನು? ಪರಸ್ಪರ ಚೆನ್ನಾಗಿ ಇರೋಕೆ ಏನು ಮಾಡಬೇಕು ಅನ್ನೋದರ ಬಗ್ಗೆ ಲೆಕ್ಕವಿಲ್ಲದಷ್ಟು ಸಲಹೆಗಳು ಸಿಗಬಹುದು. ಆದರೆ ದಂಪತಿ ಪರಸ್ಪರ ಚೆನ್ನಾಗಿ ಜೀವನ ನಡೆಸಬೇಕಾದರೆ ಸದಾ ನಗುತ್ತಿರುವ ಖುಷಿ, ಖುಷಿಯಾಗಿರುವ ಸಂಗಾತಿ ಇದ್ದರೆ ಸಾಕು ಅವರ ಆರೋಗ್ಯ, ಆಯುಷ್ಯ ಗಟ್ಟಿಯಾಗಿರುತ್ತೆ ಅಂತ ಸಮೀಕ್ಷೆಯೊಂದು ಹೇಳಿದೆ.

 ದಾಂಪತ್ಯ ಅಂದರೆ ಸುದೀರ್ಘ‌ ಅವಧಿಯದ್ದು, ಅರಿತುಕೊಳ್ಳುವ ಸಂಗಾತಿ, ನಗು, ಹರಟೆ, ನಿರ್ಧಾರ ತೆಗೆದುಕೊಳ್ಳುವ ಬುದ್ಧಿವಂತಿಕೆ ಇರುವ ಸಂಗಾತಿ ಇದ್ದರೆ ಇದು ಗಂಡ-ಹೆಂಡತಿ ಮೇಲೆ ಪರಸ್ಪರ ಪರಿಣಾಮ ಬೀರುತ್ತದೆ.ಮಧ್ಯವಯಸ್ಸಿನಲ್ಲಿ ಇದು ಹೆಚ್ಚು ಅಗತ್ಯವಿದ್ದು, ಆಯುಷ್ಯ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆಯನ್ನು ಮಿಶಿಗನ್‌ ವಿಶ್ವವಿದ್ಯಾಲಯ ನಡೆಸಿದ್ದು, 1981 ಮಂದಿ ಮಧ್ಯವಯಸ್ಕ ದಂಪತಿಯನ್ನು ಸಂದರ್ಶಿಸಿದೆ. ಈ ವೇಳೆ ಸಂಗಾತಿ ಖುಷಿಯಾಗಿದ್ದರೆ ನಮಗೆ ಹೆಚ್ಚು ಸಾಮಾಜಿಕ ಬೆಂಬಲ ಸಿಗುತ್ತೆ, ಮನೆಯಲ್ಲಿ ಟೆನ್ಶನ್‌ ಫ್ರೀಯಾಗಿ ಇರ್ತೀವಿ, ನಮ್ಮ ದೈಹಿಕ ಚಟುವಟಿಕೆಯೂ ಹೆಚ್ಚಿರುತ್ತೆ ಎಂದು ಹೇಳಿದ್ದಾರೆ. ಒಟ್ಟು ಆರು ವರ್ಷಗಳ ಕಾಲ ಈ ಸಮೀಕ್ಷೆ  ನಡೆಸಿದ್ದು, ಹೆಚ್ಚು ಖುಷಿಯಾಗಿರುವ ಸಂಗಾತಿ ಹೊಂದಿದವರಲ್ಲಿ ವಿವಿಧ ಚಟಗಳು ಕಡಿಮೆ, ಅನಾರೋಗ್ಯಕ್ಕೀಡಾಗುವುದು ಕಡಿಮೆ, ಮಾನಸಿಕ ಆರೋಗ್ಯವೂ ಚೆನ್ನಾಗಿರುವುದು ಪತ್ತೆಯಾಗಿದೆ. 

ಫ‌ಲಿತಗಳು...
ಅರಿತು ಬಾಳುವ ಸಂಗಾತಿಯಿಂದ ಮಾನಸಿಕ ನೆಮ್ಮದಿ

ಸಂಗಾತಿ ಖುಷಿಯಾಗಿದ್ದರೆ, ಟೆನ್ಶನ್‌ ಫ್ರೀ, ದೈಹಿಕ ಚಟುವಟಿಕೆ ಹೆಚ್ಚು

ಹೆಚ್ಚು ಖುಷಿಯಾಗಿರುವ ಸಂಗಾತಿ ಹೊಂದಿದ್ದರೆ ಚಟಕ್ಕೆ ದಾಸರಾಗುವುದು,ಮಾನಸಿಕ ಆರೋಗ್ಯ ಚೆನ್ನಾಗಿರುತ್ತೆ

ಆಯುಷ್ಯ, ಆರೋಗ್ಯ ವೃದ್ಧಿಗೆ ನೇರ ಕಾರಣ ಖುಷಿಯಾಗಿರುವ ಸಂಗಾತಿ!

Trending videos

Back to Top