CONNECT WITH US  

ತಬ್ಬಿಕೊಳ್ಳುವುದರಲ್ಲೇ ಇದೆ ನಿಜವಾದ ಸಂತೋಷ

ಗೆಳೆಯರು, ಪ್ರೇಮಿಗಳು, ಸಂಗಾತಿಗಳು ಪರಸ್ಪರ ತಬ್ಬಿಕೊಳ್ಳೋದು ಇದ್ದಿದ್ದೇ. ಆದರೆ ಹೀಗೆ ತಬ್ಬಿಕೊಳ್ಳೋದ್ರಲ್ಲಿ ಏನಿದೆ? ಹಾಟ್‌ ಹಾಟ್‌ ಅನಿಸುತ್ತಾ ಅಲ್ಲಾ, ಬೇರೇನಾದ್ರೂ ಇದೆಯೇ ಎಂಬುದು ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಹೋದ ಸಮೀಕ್ಷೆಗೆ ಕೊನೆಗೂ ಉತ್ತರ ಸಿಕ್ಕಿದೆ. ನಿಜವಾದ ಸಂತೋಷ ಅನ್ನೋದು ಗಂಡು-ಹೆಣ್ಣು ಪರಸ್ಪರ ತಬ್ಬಿಕೊಳ್ಳೋದ್ರಲ್ಲೇ ಇದೆ ಎಂದು ಅದು ಹೇಳಿದೆ. ಸಮೀಕ್ಷೆ ಪ್ರಕಾರ, ಹಣದಲ್ಲಿ, ಕಾರಿನಲ್ಲಿ, ಬಂಗಲೆಗಳಲ್ಲಿ ಸಂತೋಷ ಇಲ್ಲವೇ ಇಲ್ಲ ಬದಲಿಗೆ ಒಂದು ನಗುವಿನಲ್ಲಿ, ತಬ್ಬಿಕೊಳ್ಳುವುದರಲ್ಲಿ ಇದೆ. ಈ ಸಮೀಕ್ಷೆಯಲ್ಲಿ ಶೇ.70ರಷ್ಟು ಮಂದಿ ತಬ್ಬಿಕೊಂಡಾಗ ನಮ್ಮ ಮನಸ್ಸು ಹೆಚ್ಚು ಖುಷಿ ಅನುಭವಿಸಿದೆ, ಒಂದು ರೀತಿಯ ವಿಶ್ವಾಸ, ಆನಂದವನ್ನು ಅನುಭವಿಸಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಶೇ.22ರಷ್ಟು ಮಂದಿ ನಮಗೆ ನಗುವುದರಲ್ಲಿ ಖುಷಿಯಾಗುತ್ತದೆ ಎಂದಿದ್ದಾರೆ. ಗೆಳೆಯರ ಜೊತೆಗೆ ಊಟ ಮಾಡುವುದರಲ್ಲಿ ತುಂಬಾ ಖುಷಿ ಎಂದವರು ಶೇ.21ರಷ್ಟು ಮಂದಿ. ಸಂತೋಷಕ್ಕೆ ಇನ್ನೂ ಬೇರೆ ಬೇರೆ ಕಾರಣಗಳಿವೆಯಂತೆ. ಒಳ್ಳೆಯ ಪುಸ್ತಕ ಓದುವುದು, ಬೀಚ್‌ನಲ್ಲಿ ಓಡಾಡುವುದು, ಸ್ವತ್ಛವಾಗಿರುವ ಹಾಸಿಗೆಯಲ್ಲಿ ಮಲಗುವುದರಲ್ಲಿ ಕೂಡಾ ಸಂತೋಷ ಸಿಗುತ್ತದೆ ಎಂದು ಒಂದಷ್ಟು ಮಂದಿ ಹೇಳಿದ್ದಾರೆ. ಇಂಗ್ಲೆಂಡ್‌ನ‌ಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ಹೆಚ್ಚಿನವರು ತಬ್ಬಿಕೊಳ್ಳುವುದಕ್ಕೇ ಓಟು ಹಾಕಿದ್ದಾರಂತೆ. 

ಫ‌ಲಿತಗಳು...
ತಬ್ಬಿಕೊಳ್ಳೋದು ಅಂದ್ರೆ ಎಲ್ಲದಕ್ಕಿಂತ ಹೆಚ್ಚು ಖುಷಿ

ಶೇ.70ರಷ್ಟು ಮಂದಿಗೆ ತಬ್ಬಿಕೊಂಡಾಗ ವಿಶ್ವಾಸ, ಆತ್ಮೀಯತೆ,ಸ್ನೇಹಪರತೆಯ ಅನುಭವ

 ಬೇರೆಲ್ಲ ಸಂತೋಷದ ಕೆಲಸಕ್ಕಿಂತ ತಬ್ಬಿಕೊಂಡಾಗಲೇ ಆದ ಆನಂದದ ಪ್ರಮಾಣ
ಹೆಚ್ಚು!

ತಬ್ಬಿಕೊಳ್ಳೋದೇ ಖುಷಿ ಅಂತ ಓಟು ಹಾಕಿದ ಬ್ರಿಟಿಷರು!

Trending videos

Back to Top