CONNECT WITH US  

ಪ್ರೇಯಸಿಯ ಮನಗೆಲ್ಲಲು ಗಂಡಸರು ಹೆಚ್ಚು ಪಿಜ್ಜಾ ತಿಂತಾರೆ!

ಪಿಜ್ಜಾ ಅಥವಾ ಊಟ ಮಾಡೋದಕ್ಕೂ, ಪ್ರೇಯಸಿಯ ಮನಗೆಲ್ಲೋದಕ್ಕೆ ಏನು ಸಂಬಂಧ ಅಂತ ಕೇಳಬೇಡಿ. ಆದ್ರೆ ಲವ್‌ ಶುರುವಾಗುವ ಹೊತ್ತಲ್ಲಿ ಅಥವಾ ಡೇಟಿಂಗ್‌ ವೇಳೆ ಪುರುಷ-ಮಹಿಳೆ ಜೊತೆಯಾಗಿ ಊಟ ಮಾಡ್ತಿದ್ರೆ ಪುರುಷರೇ ತುಂಬಾ ಹೆಚ್ಚು ಊಟ ಮಾಡ್ತಾರೆ ಅಥವಾ ಪಿಜ್ಜಾ ತಿಂತಾರೆ ಅಂತ ಸಮೀಕ್ಷೆಯೊಂದು ಹೇಳಿದೆ. ಸಮೀಕ್ಷೆ ಪ್ರಕಾರ ನಿರ್ದಿಷ್ಟ ಮಹಿಳೆಯ ಎದುರು ಕೂತು ಪುರುಷ ಹೆಚ್ಚೆಚ್ಚು ಊಟ ಮಾಡ್ತಾನೆ ಅಂದ್ರೆ ಆಕೆಯನ್ನು ಆತ ತುಂಬಾ ಪ್ರೀತಿಸ್ತಿದ್ದಾನೆ ಅಂತ ಅರ್ಥವಂತೆ! ಇಂತಹದ್ದೊಂದು ವಿಚಿತ್ರ ಫ‌ಲಿತಾಂಶ ನೀಡಿದ ಸಮೀಕ್ಷೆಯನ್ನು ಮೆರಿಕ ಕಾರ್ನೆಲ್‌ ವಿಶ್ವವಿದ್ಯಾಲಯ ನಡೆಸಿದೆ. ಸಮೀಕ್ಷೆ ವೇಳೆ ಪ್ರೀತಿಸುವ ಹುಡುಗಿ ಎದುರು ಪುರುಷರು ಶೇ.93ರಷ್ಟು ಹೆಚ್ಚು ಪಿಜ್ಜಾ ಸ್ಲೆ„ಸ್‌ಗಳನ್ನು ಮತ್ತು ಶೇ.86ರಷ್ಟು ತರಕಾರಿ ಸಲಾಡ್‌ ಅನ್ನು ಹೆಚ್ಚು ಸೇವಿಸಿದ್ದಾರಂತೆ. ಪ್ರೇಯಸಿ ಅಥವಾ ಮಹಿಳೆಯನ್ನು ಇಂಪ್ರಸ್‌ ಮಾಡಲು ಪುರುಷರು ಹೀಗೆ ಮಾಡ್ತಾರಂತೆ! ಜೊತೆಗೆ ಪ್ರೇಯಸಿ ಅಥವಾ ಮಹಿಳೆ ಊಟದ ವೇಳೆ ಜೊತೆಗಿರುವಾಗ ಅವರಿಗೆ ಆಗುವ ಖುಷಿಯ ಪ್ರಮಾಣ ಹೆಚ್ಚಂತೆ. ಈ ಕಾರಣ ಸಹಜವಾಗಿ ಹೆಚ್ಚು ಊಟ/ಪಿಜ್ಜಾ ಸೇರುತ್ತದೆ ಎಂದು ಸಮೀಕ್ಷೆ ಹೇಳಿದೆ. 

ಫ‌ಲಿತಗಳು...
*ಊಟದ ವೇಳೆ ಪ್ರೇಯಸಿ / ಮಹಿಳೆ ಎದುರಿದ್ದರೆ ಪುರುಷರಿಗೆ ಹೆಚ್ಚು ಖುಷಿ

*ಪ್ರೇಯಸಿ ಎದುರಿದ್ದರೆ ಪುರುಷರಿಂದ ಶೇ.93ರಷ್ಟು ಹೆಚ್ಚು ಪಿಜ್ಜಾ ಸ್ಲೆ„ಸ್‌ಗಳನ್ನು ಮತ್ತು ಶೇ.86ರಷ್ಟು ತರಕಾರಿ ಸಲಾಡ್‌ ಸೇವನೆ

*ಪುರುಷ ಮಹಿಳೆ ಎದುರು ಹೆಚ್ಚು ಊಟ ಮಾಡ್ತಾನೆ ಅಂದ್ರೆ ಆಕೆಯನ್ನು ಪ್ರೀತಿಸ್ತಿದ್ದಾನೆ ಅಂತ ಅರ್ಥ!

Trending videos

Back to Top