CONNECT WITH US  

ಮದ್ವೆಗೆ ಮುನ್ನ ಎರಡು ಸಂಬಂಧಇಟ್ಕೊಂಡ್ರೆ ಒಳ್ಳೇದಂತೆ!

ನೀವು ಮದ್ವೆಗೆ ಮುನ್ನ ದೈಹಿಕ ಸಂಬಂಧ ಇಟ್ಕೊಳ್ಳೋದು ಅಂದ್ರೆ.. ಛೀ..ಏನ್ರೀ ಮಾತಾಡ್ತೀರಾ.. ಅಂತ ಶುರುವಾಗಿ ಕೊನೆಗೆ ಮಂಗಳಾರತಿಯಲ್ಲಿ ಮುಗೀಬಹುದು. ಆದ್ರೆ ಸಮೀಕ್ಷೆಯೊಂದರ ಪ್ರಕಾರ ಮದ್ವೆಗೆ ಮುನ್ನ ಎರಡು ಸಂಬಂಧ ಇಟ್ಕೊಂಡ್ರೆ ಒಳ್ಳೇದಂತೆ! ವಿಶೇಷವಾಗಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ವಿದೇಶಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದ್ದು ಮದ್ವೆಗೆ ಮುನ್ನ ಎರಡು ಸಂಬಂಧ ಇಟ್ಟುಕೊಂಡವರ ವೈವಾಹಿಕ ಜೀವನ ಚೆನ್ನಾಗಿರುತ್ತೆ ಎಂದು ಹೇಳಲಾಗಿದೆ. ವಿಚ್ಛೇದನದ ಪ್ರಮಾಣ ತೀರ ಕಡಿಮೆ ಎಂದು ತಿಳಿದುಬಂದಿದೆ. ಅಮೆರಿಕದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಪ್ರಕಾರ, ಇತ್ತೀಚಿನ ಕಾಲದಲ್ಲಿ ಮಹಿಳೆಯರು ವಿವಾಹಪೂರ್ವ ಲೈಂಗಿಕ ಸಂಬಂಧ ಹೊಂದಿರುವುದು ಕಾಮನ್‌ ಆಗಿದೆ. ಹಿಂದೆಲ್ಲ ಒಬ್ಬನೊಂದಿಗೆ ಮಾತ್ರ ಲೈಂಗಿಕ ಸಂಬಂಧ ಹೊಂದಿರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಹೆಚ್ಚು ಸೆಕ್ಸ್‌ ಬಯಸುವುದರಿಂದ ಹೆಚ್ಚು ಸಂಬಂಧ ಇಟ್ಟುಕೊಳಳುತ್ತಿದ್ದಾರೆ. ಒಬ್ಬನೇ ಸಂಗಾತಿ ಇದ್ದ ಪಕ್ಷದಲ್ಲಿ ಸೆಕ್ಸ್‌ ನಿಂದ ಸಮಾಧಾನವಾಗದೇ ವಿಚ್ಛೇದನಕ್ಕೆ ಮುಖಮಾಡಿದ್ದಿದೆ. ವಿವಾಹ ಪೂರ್ವ ಸಂಬಂಧಗಳಿಂದ ಇಂತಹದ್ದು ಕಡಿಮೆಯಾಗಿದೆ ಎಂದು ಹೇಳಲಾಗಿದೆ.

ಫ‌ಲಿತಗಳು...
*ವಿವಾಹ ಪೂರ್ವ ಎರಡು ಲೈಂಗಿಕ ಸಂಬಂಧ ಇಟ್ಕೊಂಡ್ರೆ ವಿಚ್ಛೇದನ ಪ್ರಮಾಣ ಕಡಿಮೆ

*ಸೆಕ್ಸ್‌ ಆಕಾಂಕ್ಷೆ ಈಡೇರಿಕೆ, ಅನುಭವದಿಂದ ಮತ್ತೆ ವಿಚ್ಛೇದನ ಕೊಡಲ್ಲ!

*ವಿದೇಶಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಈ ವಿಚಾರ ಬಹಿರಂಗ

*ಹೆಚ್ಚು ಸೆಕ್ಸ್‌ ಬಯಸುವುದರಿಂದ ಹೆಚ್ಚಿನ ಸಂಬಂಧ ಇಟ್ಟುಕೊಳ್ಳುವ ವಿದೇಶಿ ಮಹಿಳೆಯರು!

Trending videos

Back to Top