CONNECT WITH US  

ಮದ್ವೆ ಆಗಬೇಕೆಂದೇನಿಲ್ಲ, ಒಟ್ಟಿಗೇ ಇದ್ರೂ ಅಷ್ಟೇ ಹ್ಯಾಪಿಯಾಗಿರ್ತಾರೆ!

ಗಂಡು-ಹೆಣ್ಣು ಅಂತ ಹುಟ್ಟಿದ ಮೇಲೆ ಮದುವೆ ಆಗಲೇಬೇಕು. ಇಲ್ಲಾ ಅಂದ್ರೆ ಸರಿ ಇರಲ್ಲ. ಸಮಾಜ ನೋಡುವ ದೃಷ್ಟಿಯೇ ಬದಲಾಗುತ್ತೆ.. ಹೀಗೆಲ್ಲ ಅಂತಾರೆ. ಗಂಡು ಹೆಣ್ಣಿಗೆ ಮದುವೆ ಆದ್ರೆ ಜೀವನದಲ್ಲಿ ಖುಷಿಯೂ ಹೆಚ್ಚು ಎಂಬುದು ಹಿಂದಿನ ಸಮೀಕ್ಷೆಗಳು ಹೇಳಿವೆ. ಆದರೆ ಇದೀಗ ಗಂಡು-ಹೆಣ್ಣು ಮದುವೆ ಆಗಲೇ ಬೇಕು ಎಂದೇನಿಲ್ಲ. ಒಟ್ಟಿಗೇ "ಲಿವಿಂಗ್‌ ಟುಗೆದರ್‌' ರೀತಿ ಇದ್ದರೂ ಸಾಕು, ಮದುವೆ ಆದಷ್ಟೇ ಖುಷಿಯಾಗಿರ್ತಾರೆ ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ. ಓಹಿಯೋ ವಿಶ್ವವಿದ್ಯಾಲಯ ಈ ಸಮೀಕ್ಷೆ ನಡೆಸಿದ್ದು, ಹಲವು ಸಂಗತಿಗಳನ್ನು ಬಿಚ್ಚಿಟ್ಟಿದೆ. ಅದರಂತೆ ಒಬ್ಬಂಟಿ ಮಹಿಳೆಗೆ ಇದ್ದ ಭಾವನಾತ್ಮಕ ಯಾತನೆ, ಮದ್ವೆ ಆಗಿ ರೊಮ್ಯಾಂಟಿಕ್‌ ಸಂಗಾತಿ ಸಿಕ್ಕಾಗ ಕಡಿಮೆಯಾಗಿದೆ. ಅಷ್ಟೇ ಪ್ರಮಾಣದಲ್ಲಿ ಲಿವಿಂಗ್‌ ಟುಗೆದರ್‌ನಲ್ಲಿದ್ದಾಗಲೂ ಕಡಿಮೆಯಾಗಿದೆ.

ಪುರುಷರಲ್ಲೂ ಮದ್ವೆ ಆದಷ್ಟೇ ಸಂತೋಷ, ಓರ್ವ ಹೆಣ್ಣಿನೊಂದಿಗೆ ಒಟ್ಟಿಗೆ ಇದ್ದಾಗಲೂ ಕಂಡು ಬಂದಿದೆ. 2000 ರಿಂದ 2010 ರ ಅವಧಿಯಲ್ಲಿ 8700 ಮಂದಿಯನ್ನು ಗುರಿಯಾಗಿಸಿ ಈ ಸಮೀಕ್ಷೆ ನಡೆಸಲಾಗಿದೆ. ಒಂಟಿತದನದಲ್ಲಿದ್ದ ಮಾನಸಿಕ ಉದ್ವೇಗ ಖನ್ನತೆ ಇತ್ಯಾದಿ ಮದುವೆ ಆದಾಗ ಗಂಡು-ಹೆಣ್ಣಿನಲ್ಲಿ ಕಡಿಮೆಯಾಗಿದೆ. ಅದೇ ಅವರು ಸಂಬಂಧ ಹೊಂದಿದ್ದಾಗಲೂ ಕಂಡುಬಂದಿದೆ ಎಂದು ಸಮೀಕ್ಷೆ ಹೇಳಿದೆ.

ಫ‌ಲಿತಗಳು...

ಮದ್ವೆ ಆದಷ್ಟೇ ಹ್ಯಾಪಿಯಾಗಿ ಗಂಡು-ಹೆಣ್ಣು ಲಿವಿಂಗ್‌ ಟುಗೆದರ್‌ನಲ್ಲೂ ಇರ್ತಾರೆ.

ಒಂಟಿಯಾಗಿದ್ದಾಗ ಇರುವ ಮಾನಸಿಕ ಅಶಾಂತಿ ಮದುವೆ ಬಳಿಕ ಮಾಯ; ಅಷ್ಟೇ ಪರಿಣಾಮ ಗಂಡು-ಹೆಣ್ಣು ಒಟ್ಟಿಗೆ ಇದ್ದಾಗಲೂ ಆಗುತ್ತೆ

10 ವರ್ಷ 8700 ಮಂದಿಯನ್ನು ಉದ್ದೇಶಿಸಿ ನಡೆಸಿದ ಸಮೀಕ್ಷೆಯಲ್ಲಿ ಅಚ್ಚರಿಯ ಸಂಗತಿ ಬಹಿರಂಗ 

Trending videos

Back to Top