CONNECT WITH US  

ಪುರುಷರು ಒಂಟಿಯಾಗಿರಲು ನೀಡಿದ ಕಾರಣಗಳೇನು?

ನೀನು ಯಾಕೆ ಒಂಟಿಯಾಗಿ ಇದ್ದೀಯ? ಇನ್ನೂ ಏಕೆ ಮದುವೆಯಾಗಿಲ್ಲ. ಹೀಗೊಂದು ಸಾಮಾನ್ಯ ಪ್ರಶ್ನೆ ಒಂಟಿಯಾಗಿರುವ ಪುರುಷರಿಗೆ ಎದುರಾಗುತ್ತದೆ. ಆದರೆ, ಪುರುಷರು ತಾವು ಒಂಟಿಯಾಗಿರುವುದಕ್ಕೆ ಕಾರಣಗಳೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ. ರೆಡಿಟ್‌ ವೆಬ್‌ ಸೈಟ್‌ ಇಂಥದ್ದೊಂದು ಪ್ರಶ್ನೆಯನ್ನು ಪುರುಷರ ಮುಂದೆ ಇಟ್ಟಿತ್ತು.ಇದಕ್ಕೆ 17,000 ಮಂದಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, ಒಂಟಿಯಾಗಿ ಬಾಳುತ್ತಿರುವುದಕ್ಕೆ ಕಾರಣಗಳನ್ನು ವಿವರಿಸಿದ್ದಾರೆ. ಆಳಸಿತನ,ದಪ್ಪವಾಗಿರುವುದು, ತನ್ನನ್ನು ತಾನು ದ್ವೇಷಿಸುವುದು, ನಾಚಿಕೆ ಸ್ವಭಾವ ತಮ್ಮ ಒಂಟಿ ತನಕ್ಕೆ ಪ್ರಮುಖ ಕಾರಣ ಎಂದು ಪುರುಷರು ಹೇಳಿಕೊಂಡಿದ್ದಾರೆ. ಉತ್ತರ ನೀಡಿದ ವ್ಯಕ್ತಿಯಲ್ಲಿ ಒಬ್ಬ ಸ್ವಾರ್ಥವೂ ಕೂಡ ಒಂಟಿ ತನಕ್ಕೆ ಕಾರಣ ಇರಬಹುದು. ಒಂಟಿಯಾಗಿದ್ದರೆ, ಮನಸ್ಸಿಗೆ ತೋಚಿದ್ದನ್ನು ಮಾಡಲು ಸ್ವಾತಂತ್ರ್ಯವಿದೆ. ಹೀಗಾಗಿ ನಾನು ಒಂಟಿಯಾಗಿರಲು ಬಯಸುತ್ತೇನೆ ಎಂದು ಹೇಳಿದ್ದಾನೆ. ಇನ್ನೊಬ್ಬ ಒಂಟಿಯಾಗಿರುವುದು ನನ್ನ ಆಯ್ಕೆ ಎಂದು ಹೇಳಿದ್ದಾನೆ. ನಾವು ಒಂಟಿತನವನ್ನು ಕಳೆದುಕೊಳ್ಳಲು ಅಥವಾ ಸಂಗಾತಿಯನ್ನು ಹುಡುಕಲು ಯಾವುದೇ ಪ್ರಯತ್ನವನ್ನೇ ಮಾಡಿಲ್ಲ ಎಂದು ಇನ್ನು ಕೆಲವು ಮಂದಿ ಉತ್ತರಿಸಿದ್ದಾರೆ. ಹೆಚ್ಚಿನ ಮಂದಿ ಒಂಟಿಯಾಗಿರುವುದರಿಂದ ಸ್ವಾತಂತ್ರ್ಯವಿರುತ್ತದೆ ಎಂದು ಹೇಳಿದ್ದಾರೆ. ನಮಗೆ ಬೇರೆಯವರ ಬಗ್ಗೆ ಆಸಕ್ತಿ ಇಲ್ಲ ಎಂದು ಕೆಲವರು ಒಪ್ಪಿಕೊಂಡಿದ್ದಾರೆ.

ಫ‌ಲಿತಗಳು...

ಒಂಟಿಯಾಗಿರುವುದರಲ್ಲಿ ಸ್ವಾತಂತ್ರ್ಯವಿದೆ. ತೋಚಿದ್ದನ್ನು ಮಾಡಬಹುದು.

ಸಂಗಾತಿಯನ್ನು ಹುಡುಕುವ ಪ್ರಯತ್ನವನ್ನೇ ಮಾಡಿಲ್ಲ, ಇನ್ನೊಬ್ಬರಲ್ಲಿ ಆಸಕ್ತಿ ಕಡಿಮೆ ಇತ್ಯಾದಿ.

 ದಪ್ಪವಾಗಿರುವುದು, ತನ್ನನ್ನು ತಾನು ದ್ವೇಷಿಸುವುದು, ನಾಚಿಕೆ ಸ್ವಭಾವ ತಮ್ಮ ಒಂಟಿ ತನಕ್ಕೆ ಪ್ರಮುಖ ಕಾರಣವಂತೆ

Trending videos

Back to Top