CONNECT WITH US  

ತಾಯ್ತನ ನಿಧಾನ ಆದ್ರೆ ಮಹಿಳೆಯರಆರೋಗ್ಯಕ್ಕೆ ಒಳ್ಳೇದು?

ತಾಯ್ತನ ನಿಧಾನ ಆದ್ರೆ ಮಹಿಳೆಯರ ಆರೋಗ್ಯಕ್ಕೆ ಸಮಸ್ಯೆ. ಜೊತೆಗೆ ತಾಯಿ ಆಗುವ ಸಾಧ್ಯತೆಯೂ ಕಡಿಮೆ ಇರುವುದರಿಂದ ಯುವ ವಯಸ್ಸಿನಲ್ಲೇ ತಾಯಿಯಾಗೋದು ಬೆಸ್ಟ್‌ ಅಂತ ವೈದ್ಯರು, ಪರಿಣತರು ಹೇಳ್ತಾರೆ. ಆದರೆ ಸಮೀಕ್ಷೆಯೊಂದರ ಪ್ರಕಾರ 25 ವರ್ಷದ ನಂತರವೇ ಮಹಿಳೆಯರು ತಾಯಿಯಾದ್ರೆ 40 ವರ್ಷದ ನಂತರದ
ಆರೋಗ್ಯ ಚೆನ್ನಾಗಿರುತ್ತೆ ಎಂದು ಹೇಳಲಾಗಿದೆ. ಸ್ವಲ್ಪ ನಿಧಾನವಾಗಿ ತಾಯಿಯಾದವರು ಮಧ್ಯವಯಸ್ಸಿನಲ್ಲಿ ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ. ಆದ್ದರಿಂದ 25-35 ವಯಸ್ಸಿನಲ್ಲಿ ಮಹಿಳೆಯರು ತಾಯಿಯಾಗೋದು ಬೆಸ್ಟ್‌ ಅಂತ ಹೇಳಲಾಗಿದೆ. ಜೊತೆಗೆ 15-24 ವರ್ಷದ ಅವಧಿಯಲ್ಲಿ ತಾಯಿಯಾದವರಲ್ಲಿ ಆರೋಗ್ಯ ಸಮಸ್ಯೆ ಇರುವುದು ಕಂಡು ಬಂದಿದೆಯಂತೆ. ಅಮೆರಿಕದ ಓಹಿಯೋ ವಿಶ್ವವಿದ್ಯಾಲಯದ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದಾರೆ. ಸಮೀಕ್ಷೆಗಾಗಿ 3348 ಮಂದಿ 15 ರಿಂದ 35 ವಯಸ್ಸಿನವರನ್ನು 30 ವರ್ಷದಷ್ಟು ಸುದೀರ್ಘ‌ ಅವಧಿಯಲ್ಲಿ ಸಂದರ್ಶಿಸಲಾಗಿದೆ. ಈ ವೇಳೆ 25-35 ವಯಸ್ಸಿನಲ್ಲಿ ತಾಯಿಯಾದವರು ತಾವು ಉತ್ತಮ ಆರೋಗ್ಯ ಹೊಂದಿರುವುದಾಗಿ ಹೇಳಿದ್ದಾರೆ. ಸಣ್ಣ ವಯಸ್ಸಿನಲ್ಲಿ ತಾಯಿಯಾದವರಿಗೆ ಆರೋಗ್ಯ ಕಾಪಿಟ್ಟುಕೊಳ್ಳುವುದು ಮತ್ತು ಮಗುವಿನ ಪಾಲನೆಯೂ
ಕಷ್ಟಕರವಾಗಿರುತ್ತದೆ ಎಂಬುದೂ ಸಮೀಕ್ಷೆಯಲ್ಲಿ ಗೊತ್ತಾಗಿದೆ. 

ಫ‌ಲಿತಗಳು...
*25-35 ವಯಸ್ಸು ತಾಯ್ತನಕ್ಕೆ ಅತ್ಯುತ್ತಮ ಅವಧಿ

*15-24 ವಯಸ್ಸಿನಲ್ಲಿ ತಾಯಂದಿರಾದವರಿಗೆ ಮಧ್ಯವಯಸ್ಸಿನಲ್ಲಿ ಆರೋಗ್ಯದ ಸಮಸ್ಯೆಗಳು ಹೆಚ್ಚು.

*ಮೂವತ್ತು ವರ್ಷ ತಾಯ್ತನ ಕುರಿತು ನಡೆಸಿದ ಸಮೀಕ್ಷೆ

Trending videos

Back to Top