CONNECT WITH US  

ನೋಟು ರದ್ದು ಮಾಡಿದ್ದು ಮದುವೆಗೆ ಅಡ್ಡಿಯಾಗಿಲ್ಲ!

ಕೇಂದ್ರ ಸರ್ಕಾರ ಹಳೆಯ 500 ರೂ. ಮತ್ತು 1000 ರೂ. ನೋಟು ರದ್ದು ಮಾಡಿದ್ದರಿಂದ ಮದುವೆ ಸಮಾರಂಭಗಳಿಗೆ ಅಡ್ಡಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈಗಾಗಲೇ ನಿಗದಿಯಾಗಿರುವ ಮದುವೆಗಳ ಮೇಲೆ ನೋಟು ನಿಷೇಧದಿಂದ ತೊಂದರೆಯಾಗಿಲ್ಲ ಎಂಬ ಸಂಗತಿ ಇತ್ತೀಚಿನ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ.

ವಿವಾಹ ವೆಬ್‌ಸೈಟ್‌ ಶಾದಿಡಾಟ್‌ಕಾಮ್‌, ಮದುವೆಯಾಗದ 25ರಿಂದ 32 ವರ್ಷ ವಯಸ್ಸಿನ 13,200 ಜನರಿಂದ ಅಭಿಪ್ರಾಯ ಸಂಗ್ರಹಿದೆ. ನೋಟು ರದ್ದು ಮಾಡಿದ ನಿರ್ಧಾರ ಮದುವೆ ಕಾರ್ಯಗಳಿಗೆ ತೊಂದರೆ ಆಗಲಿದೆಯೇ ಎಂಬ ಪ್ರಶ್ನೆಯನ್ನು ಅವರಿಗೆ ಕೇಳಲಾಗಿತ್ತು. ಈ ವೇಳೆ, ಶೇ.41ಕ್ಕಿಂತಲೂ ಹೆಚ್ಚು ಪುರುಷರು ಮತ್ತು ಶೇ.39ರಷ್ಟು ಮಹಿಳೆಯರು ನೋಟು ರದ್ದು ಮಾಡಿದ್ದು ಮದುವೆ ಸಮಾರಂಭಗಳಿಗೆ ತೊಂದರೆ ಆಗಲಾರದು ಎಂದು ಹೇಳಿದ್ದಾರೆ. ಶೇ.20ರಷ್ಟು ಪುರುಷರು ಮತ್ತು ಶೇ.24ರಷ್ಟು ಮಹಿಳೆಯರು ಇದರಿಂದ ಮದುವೆಗಳಿಗೆ ತೊಂದರೆ ಆಗಲಿದೆ ಎಂದು ಹೇಳಿದ್ದಾರೆ. ಶೇ. 37ರಷ್ಟು ಮಂದಿ ಮುಂಗಡವಾಗಿ ಹಣ ಪಾವತಿಸಿದ್ದೇವೆ ಎಂದು ಹೇಳಿದರೆ, ಶೇ. 35ರಷ್ಟು ಮಂದಿ ಸರಳ ವಿವಾಹಕ್ಕೆ ಉದ್ದೇಶಿಸಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಶೇ. 17ರಷ್ಟು ಪುರುಷರು ಮತ್ತು ಶೇ. 7.6ರಷ್ಟು ಮಹಿಳೆಯರು ತಮ್ಮ ಮದುವೆಯನ್ನು ಹಣದ ಕೊರತೆಯನ್ನು ರದ್ದು ಮಾಡಿದ್ದೇವೆ ಎಂದು ಹೇಳಿದ್ದಾರೆ.

ಫ‌ಲಿತಗಳು...
 ಶೇ.41 ಪುರುಷರು ಮತ್ತು ಶೇ.39ರಷ್ಟು ಮಹಿಳೆಯರು ನೋಟು ರದ್ದು ಮಾಡಿದ್ದು ಮದುವೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಶೇ. 37ರಷ್ಟು ಮಂದಿ ಮುಂಗಡ ಹಣ ಪಾವತಿಸಿದರೆ, ಶೇ. 35ರಷ್ಟು ಮಂದಿ ಸರಳ ವಿವಾಹಕ್ಕೆ ಉದ್ದೇಶಿಸಿದ್ದಾರಂತೆ.

ಇನ್ನು ಶೇ. 17ರಷ್ಟು ಪುರುಷರು ಮತ್ತು ಶೇ.7.6ರಷ್ಟು ಮಹಿಳೆ ಯರು ಹಣದ ಕೊರತೆ ಯಿಂದ ಮದುವೆ ರದ್ದು

Trending videos

Back to Top