CONNECT WITH US  

ಕೆಲ್ಸಕ್ಕೆ ಹೋಗೋದಕ್ಕಿಂತ ಮಕ್ಕಳನ್ನು ನೋಡಿಕೊಳ್ಳೋದೇ ಒಳ್ಳೇದು!

ಅಯ್ಯೋ ಮಕ್ಕಳನ್ನು ನೋಡಿಕೊಳ್ಳೋದ್ರಲ್ಲಿ ಸುಸ್ತೋ ಸುಸ್ತು. ಸಾಕು ಸಾಕಾಗಿ ಹೋಯ್ತು! ಹಾಗಂತ ತಾಯಂದಿರು ಹೇಳಿದ್ರೂ, ಕಚೇರಿ ಕೆಲ್ಸಕ್ಕೆ ಹೋಲಿಸಿದ್ರೆ. ಮಕ್ಕಳನ್ನು ನೋಡಿಕೊಳ್ಳೋದ್ರಲ್ಲೇ ಹೆಚ್ಚು ಖುಷಿ ಇದೆ ಅಂತಾ ಸಮೀಕ್ಷೆಯೊಂದು ಹೇಳಿದೆ.

ಹೊಸ ಸಮೀಕ್ಷೆಯೊಂದರಲ್ಲಿ 2700 ಮಂದಿಯನ್ನು ಸಂದರ್ಶಿಸಲಾಗಿದ್ದು, ತಾಯಂದಿರ ಮನಸ್ಥಿತಿ ಅರಿವ ಯತ್ನವನ್ನು ಮಾಡಿದೆ. ಸಮೀಕ್ಷೆ ಪ್ರಕಾರ ಮೂವರಲ್ಲಿ ಒಬ್ಬ ಮಹಿಳೆ ಮಕ್ಕಳನ್ನು ನೋಡಿಕೊಳ್ಳೋದೆ ಚೆನ್ನಾಗಿರುತ್ತೆ ಅಂತ ಹೇಳಿದ್ದಾಳೆ.

ಅಲ್ಲದೇ ಸಮೀಕ್ಷೆಗೊಳಪಟ್ಟ 30 ವರ್ಷ ಒಳಗಿನ ಮಹಿಳೆಯರು ಮಕ್ಕಳು ಇರುವಾಗ ಕೆಲಸಕ್ಕೆ ಹೋಗೋದು ಬೇಜವಬ್ದಾರಿತನದ್ದು ಎಂದು ಹೇಳಿದ್ದಾರೆ. ಇನ್ನು ಮಕ್ಕಳನ್ನು ನೋಡಿಕೊಳ್ಳುವಲ್ಲಿ, ತಂದೆಯಾದವರು ಹೆಚ್ಚು ನೆರವು ನೀಡಿದ್ದಲ್ಲಿ ನಮ್ಮ ಖುಷಿ ಇನ್ನೂ ಹೆಚ್ಚಾಗುತ್ತೆ ಅಂತಾನೂ ಹೇಳಿದ್ದಾರಂತೆ. ಸಮೀಕ್ಷೆಗಾಗಿ 2700 ಮಂದಿ ತಾಯಂದಿರನ್ನು ಸಂದರ್ಶಿಸಿದ್ದು ಈ ವಿಚಾರ ಹೊರಬಿದ್ದಿದೆ.ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ  ಏಕತಾನತೆ ಆವರಿಸುವುದಿಲ್ಲ. ಅವರ ಆಟ-ಪಾಠ, ನಗುವಿನೊಂದಿಗೆ ಜೀವನ ಸುಂದರವಾಗಿ ಕಳೆಯುತ್ತದೆ. ಇದು ಕಚೇರಿ ಕೆಲಸದಲ್ಲಿ ಸಿಗುವುದಿಲ್ಲ. ಟೆನ್ಶನ್‌ ಹೆಚ್ಚಿರುತ್ತದೆ ಎಂದು ಹೇಳಿದ್ದಾರೆ. 

ಫ‌ಲಿತಗಳು...

ಮಕ್ಕಳ ಲಾಲನೆ, ಪೋಷಣೆಯಲ್ಲೇ ಖುಷಿ ಹೆಚ್ಚು

ಕಚೇರಿ ಕೆಲಸದಲ್ಲಿ ಟೆನ್ಶನ್‌ ಹೆಚ್ಚು: ತಾಯಂದಿರ ಅಭಿಪ್ರಾಯ

ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಏಕತಾನತೆ ಆವರಿಸಲ್ಲ

ಮಕ್ಕಳ ಲಾಲನೆ-ಪಾಲನೆಯಲ್ಲಿ ಗಂಡನ ನೆರವಿದ್ದರೆ, ಹೆಚ್ಚಿನ ಸಂತೋಷ

Trending videos

Back to Top