CONNECT WITH US  

ಅರ್ಧದಷ್ಟು ಮಂದಿಗೆ ಬೆಳಗ್ಗಿನ ತಿಂಡಿ ತಿನ್ನೋಕೆ ಟೈಮಿಲ್ಲ!

ಇದು ಬ್ರಿಟನ್ನಿಗರ ವಿಷ್ಯ. ಭಾರತೀಯರದ್ದು ಏನು ಅಂತ ಗೊತ್ತಾಗಿಲ್ಲ. ಬ್ರಿಟನ್‌ನಲ್ಲಿ ಅರ್ಧದಷ್ಟು ಮಂದಿಗೆ ಬೆಳಗಿನ ತಿಂಡಿ ತಿನ್ನೋಕೆ ಟೈಮಿಲ್ಲ ಅಂತ ಹೇಳಿದ್ದಾರೆ. ಬ್ರಿಟನ್‌ನ ಎಲ್ಲಾ ಭಾಗಗಳಲ್ಲೂ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಅದರಂತೆ ಸ್ಕಾಟ್ಲೆಂಡ್‌ ಮತ್ತು ಪೂರ್ವ ಬ್ರಿಟನ್‌ಗಳಲ್ಲಿ ಶೇ.70ರಷ್ಟು ಮಂದಿ ಬೆಳಗ್ಗೆ ತಿಂಡಿ ತಿನ್ನುತ್ತಾರೆ. ಆದರೆ ಈಶಾನ್ಯ ಇಂಗ್ಲೆಂಡ್‌ ಮತ್ತು ಉತ್ತರ ಐರೆಲಂಡ್‌ಗಳಲ್ಲಿ ಬೆಳಗ್ಗಿನ ತಿಂಡಿಯೇ ತಿನ್ನಲ್ಲ. ಅಲ್ಲಿ ಬೆಳಗ್ಗಿನ ತಿಂಡಿ ಅಂದ್ರೆ ಏನು ಅಂತ ಕೇಳ್ಳೋ ಹಾಗಿದೆಯಂತೆ. ಇನ್ನು ಮಧ್ಯಾಹ್ನದ ಊಟದ ವಿಷ್ಯದಲ್ಲೂ ಹೀಗೇ ಇದ್ಯಂತೆ!

ಸಮೀಕ್ಷೆಗಾಗಿ ಬ್ರಿಟನ್‌ನ ಎಲ್ಲಾ ಭಾಗಗಳನ್ನೂ ಸೇರಿ 5 ಸಾವಿರ ಮಂದಿಯನ್ನು ಸಂದರ್ಶಿಸಲಾಗಿದೆ. ಬಿಬಿಸಿ ಫ‌ುಡ್‌ ಮ್ಯಾಗಜೀನ್‌ ಈ ಸಮೀಕ್ಷೆ ನಡೆಸಿದ್ದು ಅದರಲ್ಲಿ ಶೇ.42ರಷ್ಟು ಮಂದಿ ನಿತ್ಯವೂ ನಮಗೆ ಬೆಳಗ್ಗಿನ ಉಪಾಹಾರ ಅಂದ್ರೆ ಏನೂ ಇಲ್ಲ ಎಂಬಂತಾಗಿದೆ ಎಂದು ಹೇಳಿದ್ದಾರೆ.

ಜೊತೆಗೆ ಸಮೀಕ್ಷೆಯಲ್ಲಿ ಬೆಳಗ್ಗೆ ಜನರು ಓಟ್ಸ್‌ ಮತ್ತು ಜೋಳವನ್ನು ಹೆಚ್ಚಾಗಿ ತಿನ್ನುವುದು ಕಂಡು ಬಂದಿದೆ. ಅದು ಹೊರತಾಗಿ ಬ್ರೆಡ್‌, ಮೊಟ್ಟೆ ಇತ್ಯಾದಿಗಳನ್ನು ತಿನ್ನುತ್ತಾರಂತೆ. ಬೆಳಗ್ಗಿನ ಆಹಾರ ಸೇವಿಸದೇ ಇರುವುದು ಆರೋಗ್ಯದ ವಿಚಾರದಲ್ಲಿ ಏನೇನೂ ಒಳ್ಳೇದಲ್ಲ ಅಂತ ಅಲ್ಲಿನ ಪರಿಣತರು, ವೈದ್ಯರು ಜನರನ್ನು ಎಚ್ಚರಿಸಿದ್ದಾರಂತೆ. 

ಫ‌ಲಿತಗಳು...

 ಈಶಾನ್ಯ ಇಂಗ್ಲೆಂಡ್‌, ಉತ್ತರ ಐರೆಲಂಡ್‌ಗಳಲ್ಲಿ ಜನರಿಗೆ ಬೆಳಗ್ಗಿನ ತಿಂಡಿ ತಿನ್ನೋ ಅಭ್ಯಾಸವಿಲ್ಲ!, ಮಧ್ಯಾಹ್ನದ ಊಟ ಮಾಡುವ ಅಭ್ಯಾಸವೂ ಕಡಿಮೆಯಂತೆ!

ಬ್ರಿಟನ್‌ನಾದ್ಯಂತ ಶೇ.42ರಷ್ಟು ಮಂದಿ ಬೆಳಗ್ಗಿನ ತಿಂಡಿ ತಿನ್ನದೇ ಇರುವುದು ಕಾಮನ್‌!

ಬೆಳಗ್ಗಿನ ಆಹಾರ ಸೇವಿಸದೇ ಇರೋದು ತುಂಬ ಕೆಟ್ಟ ಅಭ್ಯಾಸ: ವೈದ್ಯರ ಎಚ್ಚರಿಕೆ

Trending videos

Back to Top