CONNECT WITH US  

ದಢೂತಿ ಮಹಿಳೆಯರ ರಾಜಧಾನಿ ಹೈದರಾಬಾದ್‌!

ಬಿರಿಯಾನಿ, ಬಾಯಿ ನೀರೂರಿಸುವ ತಿಂಡಿ ತಿನಿಸುಗಳಿಗೆ ಹೈದರಾಬಾದ್‌ ಫೇಮಸ್‌. ಆದರೆ, ಇಲ್ಲಿನ ಮಹಿಳೆಯರಿಗೆ ಈ ಖಾದ್ಯಗಳೇ ಬೊಜ್ಜಿಗೆ ಕಾರಣವಾಗಿದೆ. ವ್ಯಾಯಾಮ ಇಲ್ಲದೇ ಹೈದರಾಬಾದ್‌ನ ಮಹಿಳೆಯರು ದೇಶದಲ್ಲೇ ಅತ್ಯಂತ ದಢೂತಿ ಕಾಯದವರೆನಿಸಿದ್ದಾರೆ. ಹೀಗಾಗಿ ಹೈದರಾಬಾದ್‌ ಮಹಿಳೆಯರ ಪಾಲಿಗೆ ಬೊಜ್ಜಿನ ರಾಜಧಾನಿ ಎನಿಸಿಕೊಂಡಿದೆ. ರಾಷ್ಟ್ರೀಯ ಆರೋಗ್ಯ ಸಮೀಕ್ಷೆ 766 ಮನೆ ಮಂದಿಯ 830 ಮಹಿಳೆಯರನ್ನು ಸಮೀಕ್ಷೆ ನಡೆಸಿದ ವೇಳೆ, ಈ ಸಂಗತಿ ಬೆಳಕಿಗೆ ಬಂದಿದೆ. ಹೈದರಾಬಾದ್‌ನಲ್ಲಿ 14-49 ವಯಸ್ಸಿನ ಶೇ. 47.9ರಷ್ಟು ಮಹಿಳೆಯರು ಬೊಜ್ಜಿನಿಂದ ಬಳಲುತ್ತಿದ್ದಾರೆ. ದೇಶದ 5 ನಗರಗಳಲ್ಲಿ ಕೋಲ್ಕತಾದಲ್ಲಿ ಶೇ. 40.7ರಷ್ಟು, ಮುಂಬೈನಲ್ಲಿ ಶೇ.34.6ರಷ್ಟು, ಚೆನ್ನೈನಲ್ಲಿ ಶೇ. 33.6ರಷ್ಟು ಮಹಿಳೆಯರು ಮತ್ತು ಬೆಂಗಳೂರಿನಲ್ಲಿ ಶೇ. 33.4ರಷ್ಟು
ದಢೂತಿ ಮಹಿಳೆಯರಿದ್ದಾರೆ. ಇವರ ಸಂಖ್ಯೆ ಪುರುಷರ ಪ್ರಮಾಣಕ್ಕೂ ಹೆಚ್ಚು. ಸಣ್ಣ ಮೆಟ್ಟಿಲು ಏರುವುದಕ್ಕೂ ಅವರಿಂದ ಆಗುವುದಿಲ್ಲವಂತೆ. ಅಧಿಕ ರಕ್ತದೊತ್ತಡ ಸಾಮಾನ್ಯವಾಗಿದೆ. ದಪ್ಪವಿದ್ದ ಕಾರಣ ಸಾರ್ವಜಿನಿಕ ಕಾರ್ಯಕ್ರಮಗಳಲ್ಲಿ
ಕಾಣಿಸಿಕೊಳ್ಳುವುದಕ್ಕೂ ನಾಚಿಕೆಯಂತೆ. ಬೊಜ್ಜಿನಿಂದಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಸಮೀಕ್ಷೆಯ ವೇಳೆ ವಹಿಳೆಯರು ಹೇಳಿಕೊಂಡಿದ್ದಾರೆ.

ಫ‌ಲಿತಗಳು...
ಹೈದರಾಬಾದ್‌ನಲ್ಲಿ 14-49 ವಯಸ್ಸಿನ ಶೇ. 47.9ರಷ್ಟು ಮಹಿಳೆಯರಿಗೆ ಬೊಜ್ಜಿನ ಸಮಸ್ಯೆ

* ಬೆಂಗಳೂರಿನಲ್ಲಿ ಶೇ. 33.4ರಷ್ಟು ದಢೂತಿ ಮಹಿಳೆಯರು.

* ದೇಶದ ಪ್ರಮುಖ 5 ನಗರಗಳಲ್ಲಿ ಪುರುಷರಿಗಿಂತ ಮಹಿಳೆಯರಿಗೇ ಬೊಜ್ಜು ಜಾಸ್ತಿ. 

*  ದಢೂತಿ ಮಹಿಳೆಯರಲ್ಲಿ ರಕ್ತದೊತ್ತಡ ಸಾಮಾನ್ಯ!

ಇಂದು ಹೆಚ್ಚು ಓದಿದ್ದು

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top