CONNECT WITH US  

ಲಾಸ್ಟ್‌ ಟೈಂ ಸೆಕ್ಸ್‌ ಮಾಡಿದ್ದು ಯಾವಾಗ? ಮರ್ತೋಗಿದೆ!

ಸಂಗಾತಿ ಮಧ್ಯೆ ಸೆಕ್ಸ್‌ ಅನ್ನೋದು ಇದ್ದಿದ್ದೇ.. ಆದರೆ ಕೊನೆಯ ಬಾರಿ ನೀವು ಸೆಕ್ಸ್‌ನಲ್ಲಿ ಭಾಗಿಯಾಗಿದ್ದು ಯಾವಾಗ? ಅಂತ ಕೇಳಿದ್ರೆ ಪ್ರತಿ ಮೂವರಲ್ಲೊಬ್ಬರು ಅಯ್ಯಯ್ಯೋ.. ಯಾವಾಗ ಗೊತ್ತಿಲ್ಲಪ್ಪಾ...ಮರ್ತೋಗಿದೇರೀ.. ಅಂತ ರಾಗ ಎಳೆದಿದ್ದಾರೆ!

ಇಂತಹ ಅಚ್ಚರಿಯ ಉತ್ತರ ಸಮೀಕ್ಷೆಯೊಂದರಲ್ಲಿ ಸಿಕ್ಕಿದೆ. ದಿ ಫ್ಯಾಂಟಸಿ ಬಾಕ್ಸ್‌ ಡೇಟಿಂಗ್‌ ವೆಬ್‌ಸೈಟ್‌ ಬ್ರಿಟನ್‌ನಲ್ಲಿ ಈ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಗೊಳಗಾದ ಹಲವರು ಸೆಕ್ಸ್‌ ಕಡಿಮೆಯಾಗಿದೆ ಅಂತ ಹೇಳಿಕೊಂಡಿದ್ದಾರೆ. ಇದಕ್ಕೆ ನಮ್ಮ ಕುಟುಂಬದ ಹೊರೆಯೇ ಕಾರಣ ಅಂತಾನೂ ದೂರಿದ್ದಾರೆ!

25ರಿಂದ 44 ವರ್ಷದವರನ್ನು ಸಮೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ ಶೇ.38ರಷ್ಟು ಮಂದಿ ಕುಟುಂಬದ ಜವಾಬ್ದಾರಿಯಿಂದ ಸೆಕ್ಸ್‌ಗೆ ಟೈಂ ಆಗ್ತಿಲ್ಲ ಅಂದಿದ್ದಾರೆ. ಇನ್ನು ಶೇ.61ರಷ್ಟು ಮಂದಿ ನಮ್ಮ ಹಿಂದಿನ ಸಂಗಾತಿಯೊಂದಿಗೆ ಸೆಕ್ಸ್‌ ಚೆನ್ನಾಗಿತ್ತು ಅಂತ ಹೇಳಿದ್ದಾರೆ. ಇನ್ನು ಸಮೀಕ್ಷೆಗೊಳಪಟ್ಟ 18 ರಿಂದ 25 ವಯಸ್ಸಿವರಲ್ಲಿ ಶೇ.19ರಷ್ಟು ಮಂದಿ ನಮಗೆ ಕೆಲಸವೇ ಮುಖ್ಯ ಸೆಕ್ಸ್‌ ನಂತರ ಎಂದಿದ್ದಾರೆ. ಹೆಚ್ಚಿನವರ  ಅಭಿಪ್ರಾಯ ಕೆಲಸ ಹೆಚ್ಚಿದೆ ಎಂದೇ ಆಗಿದೆ ಎಂದು ಸಮೀಕ್ಷೆ ಹೇಳಿದೆ.

ಫ‌ಲಿತಗಳು...
ಸೆಕ್ಸ್‌ ಕಡಿಮೆಯಾಗಲು ಕುಟುಂಬದ ಹೊರೆ ಕಾರಣ

ಯುವ ಜೋಡಿಗಳಿಗೆ ಕೆಲಸ ಮುಖ್ಯವಾಗಿ, ಸೆಕ್ಸ್‌ ದೂರಾಗಿದೆಯಂತೆ!

ಶೇ.61ರಷ್ಟು ಮಂದಿಗೆ ಹಿಂದಿನ ಸಂಗಾತಿಯಿಂದ ಉತ್ತಮ ಸೆಕ್ಸ್‌ ಅನುಭವವಂತೆ!

ಶೇ.19ರಷ್ಟು ಮಂದಿಗೆ ಕೆಲಸವೇ ಮುಖ್ಯ, ಸೆಕ್ಸ್‌ ಎಲ್ಲ ಆಮೇಲೆ!


Trending videos

Back to Top