CONNECT WITH US  

ಕನಿಷ್ಠ 40ರಲ್ಲಾದ್ರೂ ವ್ಯಾಯಾಮ ಶುರು ಮಾಡಿದ್ರೆ ದೀರ್ಘಾಯುಷ್ಯ! 

ದಿನಾ ವ್ಯಾಯಾಮ ಮಾಡಿದ್ರೆ ದೇಹಕ್ಕೆ ಒಳ್ಳೇದು ಅನ್ನೋದು ಗೊತ್ತಿದೆ. ಕನಿಷ್ಠ ಪಕ್ಷ 40 ವಯಸ್ಸಲ್ಲಾದ್ರೂ ವ್ಯಾಯಾಮ ಶುರು ಮಾಡೋದ್ರಿಂದ ದೀರ್ಘಾಯುಷ್ಯಕ್ಕೆ ಒಳ್ಳೇದು ಅಂತ ಸಮೀಕ್ಷೆಯೊಂದು ಹೇಳಿದೆ. ಅದರಲ್ಲೂ ವಯಸ್ಸಾದವರಂತೆ ಕಾಣುವುದನ್ನು ತಡೆಯಲು ವ್ಯಾಯಾಮ ಅಗತ್ಯವಾಗಿದೆ ಎಂದು ಸಮೀಕ್ಷೆ ಹೇಳಿದೆ. ಮಧ್ಯವಯಸ್ಸಿನಲ್ಲಿ ವ್ಯಾಯಾಮ ಮಾಡುವುದರಿಂದ ದೇಹದ ಜೀವಕೋಶಗಳು ಹೆಚ್ಚು ಗೆಲುವಾಗಿರುತ್ತವೆ. ಅವುಗಳು ಬೇಗ ಕುಂದುವುದನ್ನು ತಡೆಯುತ್ತದೆ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆ ಪ್ರಕಾರ ವ್ಯಾಯಾಮದಿಂದಾಗಿ ಜೀವಕೋಶಗಳಲ್ಲಿನ ಟೆಲೆಮೋರ್‌ ಮೂಲವಸ್ತು ಉದ್ದವಿದ್ದರೆ ವಯಸ್ಸು ದೀರ್ಘ‌ವಾಗಲು ಕಾರಣವಾಗುತ್ತದೆ. ಸಣ್ಣ ಟೆಲೆಮೋರ್‌ಗಳು ಬೇಗನೆ ವಯಸ್ಸಾದಂತೆ ಕಾಣುವುದಕ್ಕೆ ಕಾರಣವಾಗುತ್ತದೆ. ಮಧ್ಯವಯಸ್ಸಿನಲ್ಲಿ ವ್ಯಾಯಾಮದಿಂದಾಗಿ ಟೆಲೆಮೋರ್‌ಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಆದ್ದರಿಂದ ಬೇಗನೆ ವಯಸ್ಸಾದಂತೆ ಕಾಣುವುದನು ಮತ್ತು ದೀರ್ಘಾಯುಷ್ಯಕ್ಕೆ ವ್ಯಾಯಾಮ ರೂಢಿಸಿಕೊಳ್ಳುವುದು ಒಳ್ಳೆಯದು ಎಂದು ಸಂಶೋಧಕರು ಹೇಳಿದ್ದಾರೆ. ಅಮೆರಿಕದಲ್ಲಿ ಈ ಸಂಶೋಧನೆ ನಡೆಸಲಾಗಿದ್ದು, ಚಟುವಟಿಕೆ ಯುಕ್ತ ಜೀವನವನ್ನು ಮಧ್ಯವಯಸ್ಸಿನವರು ನಡೆಸಬೇಕೆಂದು ಹೇಳಲಾಗಿದೆ.

ಫ‌ಲಿತಗಳು...
*ಜೀವಕೋಶಗಳಲ್ಲಿನ ಟೆಲೆಮೋರ್‌ ಉದ್ದವಾಗಲು ವ್ಯಾಯಾಮ ನೆರವು

*ಟೆಲೆಮೋರ್‌ ಉದ್ದವಿದ್ದರೆ, ಬೇಗನೆ ವಯಸ್ಸಾದಂತೆ ಕಾಣುವುದಿಲ್ಲ, ದೀರ್ಘಾಯುಷ್ಯ!

*ವ್ಯಾಯಾಮದಿಂದಾಗಿ ಟೆಲೆಮೋರ್‌ಗಳ ಮೇಲೆ ನೇರ ಪರಿಣಾಮ

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top