CONNECT WITH US  

ಕೆಲಸದ ಹೊತ್ತು 1 ಗಂಟೆ ವಿರಾಮ,5 ನಿಮಿಷ ನಡಿಗೆಯಿಂದ ಉತ್ಸಾಹ!

ಕಚೇರಿಗೆ ಹೋದರೆ ಸಾಕು ಕೆಲವರದ್ದು ಕೆಲಸ, ಕೆಲಸ, ಕೆಲಸ. ತಲೆ ಎತ್ತಿ ನೋಡಲೂ ಪುರುಸೊತ್ತಿಲ್ಲ. ಆದರೆ ಕೆಲಸದ ವೇಳೆಯಲ್ಲಿ ಒಂದು ಗಂಟೆ ವಿರಾಮ ಮತ್ತು ಕನಿಷ್ಠ ಐದು ನಿಮಿಷವಾದರೂ ನಡಿಗೆಯಿಂದ ಕೆಲಸದಲ್ಲಿ ಉತ್ಸಾಹ ಹೆಚ್ಚುತ್ತದೆ ಎಂದು ಸಮೀಕ್ಷೆ ಹೇಳಿದೆ. ಗಂಟೆ ಗಟ್ಟಲೆ ಕುಳಿತೇ ಕೆಲಸ ಮಾಡುತ್ತಿದ್ದರೆ, ಅದು ಆರೋಗ್ಯಕ್ಕೆ ಒಳ್ಳೇದಲ್ಲ.. ಸ್ವಲ್ಪ ನಡೆದಾಡಿ, ವಿರಾಮವನ್ನೂ ತೆಗೆದುಕೊಳ್ಳಬೇಕು ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆ ಪ್ರಕಾರ, ಕೆಲಸದ ವೇಳೆ ವಿರಾಮ, ನಡಿಗೆ ಮಾಡಿದವರು, ಹೆಚ್ಚು ಚಟುವಟಿಕೆಯಿಂದ ಇರುವುದು ಗೊತ್ತಾಗಿದೆ. "ಇಂಟರ್‌ನ್ಯಾಷನ್‌ ಜರ್ನಲ್‌ ಆಫ್ ಬಿಹೇವಿಯರಲ್‌ ನ್ಯೂಟ್ರಿಷನ್‌ ಆ್ಯಂಡ್‌ ಫಿಸಿಕಲ್‌ ಆ್ಯಕ್ಟಿವಿಟಿ'ಯಲ್ಲಿ ಈ ಸಮೀಕ್ಷೆಯ ಅಂಶಗಳನ್ನು ಪ್ರಕಟಿಸಲಾಗಿದೆ.

ಸಮೀಕ್ಷೆ ವೇಳೆ ಒಂದು ಗುಂಪನ್ನು ಆರು ಗಂಟೆಗಳ ಕಾಲ ಕೇವಲ ಕೆಲಸ ಮಾಡಲು ಹೇಳಲಾಗಿತ್ತು. ಮತ್ತೂಂದು ಗುಂಪಿಗೆ ಅಲ್ಪ ವಿರಾಮವನ್ನೂ ನೀಡಿದ್ದು, ನಡೆದಾಡಲೂ ಹೇಳಲಾಗಿತ್ತು. ಹೀಗೆ ವಿರಾಮ ನೀಡಿದ ಗುಂಪಿನ ಸಿಬ್ಬಂದಿ ಹೆಚ್ಚು ಉತ್ಸಾಹದಿಂದ ಬೇಗನೆ ಕೆಲಸ ಮುಗಿಸಿರುವುದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಇವರೇ ಹೆಚ್ಚು ಚಟುವಟಿಕೆಯಿಂದ ಇದ್ದಿರುವುದೂ ಗೊತ್ತಾಗಿದೆ. 

ಫ‌ಲಿತಗಳು...

ಕೆಲಸದ ಮಧ್ಯೆ ವಿರಾಮ, ನಡಿಗೆಯಿಂದ ಆರೋಗ್ಯಕ್ಕೆ ಒಳ್ಳೇದು

ಕೆಲಸದ ವೇಳೆ ಅಲ್ಪ ವಿರಾಮ, ನಡಿಗೆ ಮಾಡಿದವರು ಹೆಚ್ಚು ಚಟುವಟಿಕೆಯಿಂದ ಕೆಲಸ ಮಾಡ್ತಾರೆ

ನಿರಂತರ ಕೆಲಸ ಮಾತ್ರ ಮಾಡಿದರೆ ಏನೂ ಪ್ರಯೋಜನವಿಲ್ಲ: ಸಮೀಕ್ಷೆ

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top