CONNECT WITH US  

ವಯಸ್ಸಾದವರಿಗೆ ದಿನಕ್ಕೆ 15 ನಿಮಿಷ ವ್ಯಾಯಾಮ ಸಾಕು

ವಯಸ್ಸಾದಂತೆ ನಾನಾ ರೀತಿಯ ಕಾಯಿಲೆಗಳು ಒಕ್ಕರಿಸಿಕೊಳ್ಳುತ್ತವೆ. ಹೀಗಾಗಿ ದಿನನಿತ್ಯ ವ್ಯಾಯಾಮ ಮಾಡುವುದು ಅನಿವಾರ್ಯ. ಆದರೆ, ಕೆಲವರಿಗೆ ದಿನದಲ್ಲಿ ಎರಡು ಗಂಟೆಯೂ ವ್ಯಾಯಾಮ ಮಾಡಲು ಆಗುವುದಿಲ್ಲ. ಹೀಗಾಗಿ ಅವರು ಆಲಸಿಗಳಾಗುತ್ತಿದ್ದಾರೆ. ಆದರೆ, ಇತ್ತೀಚಿನ ಸಂಶೋಧನೆಯೊಂದು ವಯಸ್ಸಾದವರು ದಿನದಲ್ಲಿ ಗಂಟೆಗಟ್ಟೆಲೆ ವ್ಯಾಯಾಮ ಮಾಡಬೇಕಾಗಿಲ್ಲ. ಕೇವಲ 15 ನಿಮಿಷ ಸರಿಯಾಗಿ ವ್ಯಾಯಾಮ ಮಾಡಿದರೆ ಸಾಕು. ಆರೋಗ್ಯವಾಗಿರಬಹುದು ಎಂದು ಹೇಳಿದೆ.

ಫ್ರೆಂಚ್‌ ಸಂಶೋಧಕರು 60 ವರ್ಷ ಮೇಲ್ಪಟ್ಟ 1,011 ಜನರನ್ನು ಅಧ್ಯಯನ ನಡೆಸಿದ್ದು, ಶೇ. 60ರಷ್ಟು ಮಂದಿ ನಿಗದಿತವಾಗಿ ವ್ಯಾಯಾಮ ಮಾಡುತ್ತಿಲ್ಲ ಎಂಬ ಅಂಶ ತಿಳಿದು ಬಂದಿದೆ. ಆಲಸಿಗಳಾದಷ್ಟು ಜೀವಿತಾವಧಿ ಕಡಿಮೆಯಾಗುತ್ತದೆ. ಹೀಗಾಗಿ ದಿನದಲ್ಲಿ 15 ನಿಮಿಷವಾದರೂ ವ್ಯಾಯಾಮ ಮಾಡಿದರೆ ರೋಗಕ್ಕೆ ತುತ್ತಾಗುವ ಅಥವಾ ಬೇಗ ಸಾವು ಬರುವ ಸಾಧ್ಯತೆ ಶೇ.22ರಷ್ಟು ಕಡಿಮೆಯಾಗುತ್ತದೆ. ಸಣ್ಣ ಪ್ರಮಾಣದ ವ್ಯಾಯಾಮ ಕೂಡ ವಯಸ್ಕರ ಜೀವಿತಾವಧಿಯನ್ನು ಹೆಚ್ಚಿಸಲು ನೆರವು ನೀಡುತ್ತಿದೆ. ಆದರೆ, ಸಾಧ್ಯವಾದರೆ ಹೆಚ್ಚು ವ್ಯಾಯಾಮ ಮಾಡಿದಷ್ಟು ಆರೋಗ್ಯ ಸುಧಾರಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಆರೋಗ್ಯವಾಗಿರಬೇಕಾದರೆ ವಾರದಲ್ಲಿ 150 ನಿಮಿಷಯವಾದರೂ ದೈಹಿಕ ಚಟುವಟಿಯಲ್ಲಿ ತೊಡಗಬೇಕು ಎಂದು ಈ ಮುನ್ನ ಶಿಫಾರಸು ಮಾಡಲಾಗಿತ್ತು. 

ಫ‌ಲಿತಗಳು...

ಶೇ.60ರಷ್ಟು ಜನರು ಪ್ರತಿನಿತ್ಯ ವ್ಯಾಯಾಮ ಮಾಡದೇ ಆಲಸಿಗಳಾಗುತ್ತಿದ್ದಾರೆ.

ಗಂಟೆಗಟ್ಟಲೆ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ ಚಿಕ್ಕಪುಟ್ಟ ವ್ಯಾಯಾಮವೇ ಸಾಕು

15 ನಿಮಿಷ ವ್ಯಾಯಾಮದಿಂದ ದೇಹವನ್ನು ಅನರೋಗ್ಯದಿಂದ ಕಾಪಾಡಿಕೊಳ್ಳಬಹುದು.


Trending videos

Back to Top