CONNECT WITH US  

ನಿದ್ದೆ ಬರ್ತಿಲ್ವಾ..? ಅಸ್ತಮಾ ಕಾಡೀತು ಹುಷಾರು!

ಹಾಸಿಗೇಲಿ ಕಾಲು ಚಾಚಿ ಗಡದ್ದಾಗಿ ನಿದ್ದೆ ಹೊಡೀಬೇಕು ಎಂದೇನೋ ಪ್ಲಾನ್‌ ಮಾಡಿರುತ್ತೀರಿ.. ಆದರೇನು ನಿದ್ದೆನೇ ಬರುತ್ತಿಲ್ಲ..? ತೀವ್ರ ಒತ್ತಡ, ನಾನಾ ಕಾರಣಗಳಿಂದ ನಿದ್ದೆ ಹಲವರಿಗೆ ಮರೀಚಿಕೆಯೇ ಆಗಿದೆ. ಹೀಗೆ ನಿದ್ದೆ ಬರದೇ ಇರೋದು ಆರೋಗ್ಯಕ್ಕೆ ಹಾನಿಕರ, ಜೊತೆಗೆ ಅಸ್ತಮಾಕ್ಕೆ ಕಾರಣವಾಗಬಹುದು ಎಂದು ಸಮೀಕ್ಷೆಯೊಂದು ಹೇಳಿದೆ. ನಾರ್ವೇಜಿಯನ್‌ ಯುನಿವರ್ಸಿಟಿ ಆಫ್ ಸಯನ್ಸ್‌ ಈ ಸಮೀಕ್ಷೆಯನ್ನು ನಡೆಸಿದ್ದು, ನಿರಂತರ ನಿದ್ದೆ ಬರದೇ ಇರುವ ಸಮಸ್ಯೆ ಅಸ್ತಮಾಕ್ಕೆ ಕಾರಣವಾಗುತ್ತದೆ ಎಂದಿದೆ. ಅಸ್ತಮಾ ರೋಗಿಗಳಲ್ಲಿ ನಿದ್ದೆ ಕಡಿಮೆ ಎಂದೂ ಅದು ಹೇಳಿದೆ. ಸಮೀಕ್ಷೆ ಪ್ರಕಾರ, ನಿದ್ರಾಹೀನತೆ, ಒತ್ತಡ, ಉದ್ವೇಗಗಳು ನಿಧಾನವಾಗಿ ಅಸ್ತಮಾಕ್ಕೆ ಕಾರಣವಾಗುತ್ತದೆ.

ಸಮೀಕ್ಷೆಗಾಗಿ 20ರಿಂದ 65 ವಯಸ್ಸಿನ 17,927 ಮಂದಿಯನ್ನು ಸಂದರ್ಶಿಸಲಾಗಿದ್ದು ಇವರಲ್ಲಿ ನಿದ್ರಾಹೀನತೆ ಇರುವವರು ಅಸ್ತಮಾಕ್ಕೆ ಹತ್ತಿರವಾಗಿರುವುದು ಗೋಚರವಾಗಿದೆ. ಇನ್ನು ನಿತ್ಯ ನಿದ್ರಾಹೀನತೆಯಿಂದ ಬಳಲುತ್ತಿರುವವರು ಶೇ.95ರಷ್ಟು ಅಸ್ತಮಾಕ್ಕೆ ಹತ್ತಿರವಾಗಿರುವುದು ಪತ್ತೆಯಾಗಿದೆ ಎಂದು ಸಮೀಕ್ಷೆ ಹೇಳಿದೆ. ಆದ್ದರಿಂದ ನಿದ್ರಾಹೀನತೆಗೆ ಕಾರಣವನ್ನು ಹುಡಕಿ ಅದನ್ನು ಮೊದಲು ಪರಿಹರಿಸಿಕೊಳ್ಳಬೇಕು ಎಂದು ತಜ್ಞರು ಕಿವಿಮಾತು ಹೇಳಿದ್ದಾರೆ. 

ಫ‌ಲಿತಗಳು...
ನಿದ್ರಾಹೀನತೆಯಿಂದ ಅಸ್ತಮಾಕ್ಕೆ ರಹದಾರಿ..

ನಿತ್ಯ ನಿದ್ರಾಹೀನತೆ ಕಾಡುವುದರಿಂದ ಶೇ.95ರಷ್ಟು ಅಸ್ತಮಾ ಕಾಯಿಲೆ ಬರೋ ಸಾಧ್ಯತೆ ಹೆಚ್ಚು!

 ಅಸ್ತಮಾ ರೋಗಿಗಳಲ್ಲಿ ನಿದ್ದೆ ಸಾಮಾನ್ಯ: ಸಮೀಕ್ಷೆ


Trending videos

Back to Top