CONNECT WITH US  

ಹಾಸ್ಯ ಮನೋಭಾವ ಇರುವ ದಂಪತಿಯಲ್ಲಿ ಸಂಬಂಧ ಗಟ್ಟಿ!

ಗಂಡನ ಜೋಕು, ಹೆಂಡತಿಯ ಹ.ಹ..ಹ.. ನಗು.. ಕೆಲವೊಮ್ಮೆ ಹೆಂಡತಿಯದ್ದೂ ಜೋಕು! ಹೀಗಿದ್ದರೆ ಸಂಬಂಧ ತೀರ ಗಟ್ಟಿ! ಹಾಸ್ಯ ಮನೋಭಾವನೆ ಇರುವ ದಂಪತಿಯಲ್ಲಿ ಸಂಬಂಧವೂ ಹಸನಾಗಿರುತ್ತದೆ ಜೊತೆಗೆ ಅವರ ನಡುವಿನ ಬಾಂಧವ್ಯವೂ ಗಟ್ಟಿಯಾಗಿರುತ್ತದೆ ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ.

ಅಮೆರಿಕದ ಕನಾಸ್‌ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಗೊತ್ತಾಗಿದೆ. ಸುಮಾರು 15 ಸಾವಿರ ಮಂದಿಯನ್ನು ಸಂದರ್ಶಿಸಿ 30 ವರ್ಷಗಳ ಕಾಲ ನಡೆಸಲಾದ ಅಧ್ಯಯನದಲ್ಲಿ ಈ ವಿಚಾರ ಹೊರಬಿದ್ದಿದೆ. ಹಾಸ್ಯ ಮನೋಭಾವ ಹೆಚ್ಚಿದ್ದಷ್ಟೂ ಸಂಬಂಧ ಉತ್ತಮಗೊಳ್ಳಲು ಕಾರಣವಾಗುತ್ತದೆ ಎಂದೂ ಅದು ಹೇಳಿದೆ. ಜೊತೆಗೆ ಸಮೀಕ್ಷೆ ವೇಳೆ ಸಂಗಾತಿಗೆ ಹಾಸ್ಯ ಮನೋಭಾವ ಇರಬೇಕೆಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ.

ಹಾಸ್ಯ ಮನೋಭಾವನೆ ಇರುವ ಸಂಗಾತಿ ಬಳಿ ಎಲ್ಲವನ್ನೂ ಹೇಳಿಕೊಳ್ಳಲೂ ಸುಲಭ , ಜೊತೆಗೆ ರೊಮ್ಯಾಂಟಿಕ್‌ ಸಂಗತಿಗಳು ಹೆಚ್ಚು ಎಂದು ಹಲವು ಹೇಳಿದ್ದಾರೆ. ಇಬ್ಬರೂ ಉತ್ತಮ ಹಾಸ್ಯ ಮನೋಭಾವ ಹೊಂದಿದ್ದಲ್ಲಿ ದಿನ ಚೇತೋಹಾರಿಯಾಗಿರುತ್ತದೆ. ಇಬ್ಬರ ಅಭಿಪ್ರಾಯಗಳಿಗೂ ಬೆಲೆ ಇರುತ್ತದೆ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆಗೊಳಪಟ್ಟವರಲ್ಲಿ ಹಲವರು ಸಂಗಾತಿ ಹಾಸ್ಯ ಮನೋಭಾವದಿಂದಾಗಿ ನಮ್ಮಲ್ಲಿ ವೈಮನಸ್ಸು ಬಂದಿಲ್ಲ ಎಂದು ಹೇಳಿದ್ದಾರೆ. 

ಫ‌ಲಿತಗಳು...

ನಗು ದಾಂಪತ್ಯ ಗಟ್ಟಿಗೊಳಿಸಲು ಸಹಕಾರಿ

 ಸಂಗಾತಿಯ ಹಾಸ್ಯ ಮನೋಭಾವನೆಯಿಂದ ವೈಮನಸ್ಸು ದೂರ ದೂರ

 ಹಾಸ್ಯ ಮನೋಭಾವ ಇರುವವರ ಬಳಿ ಎಲ್ಲವನ್ನೂ ಹೇಳಿಕೊಳ್ಳಲು ಸುಲಭ,ರೊಮ್ಯಾಂಟಿಕ್‌ ಸಂಬಂಧಕ್ಕೂ ಇದು ರಹದಾರಿ!

Trending videos

Back to Top