CONNECT WITH US  

ಡೇಟಿಂಗ್‌ ವೇಳೆಯೂ ಮೊಬೈಲ್‌ನದ್ದೇ ಧ್ಯಾನ!

ವ್ಯಾಲಂಟೈನ್‌ ಡೇ ಹತ್ರ ಬರ್ತಿದೆ. ಪ್ರೇಮಿಗಳು ಡೇಟಿಂಗ್‌, ತಿರುಗಾಟಕ್ಕೆ ಸಿದ್ಧವಾಗಿದ್ದಾರೆ. ಏತನ್ಮಧ್ಯೆ ಡೇಟಿಂಗ್‌ನಲ್ಲಿ ಈ ಮೊದಲು ಏನ್ಮಾಡಿದ್ದೀರಿ ಹೇಗಿತ್ತು ಎಂದು ಕೇಳಲಾದ ಸಮೀಕ್ಷೆಯೊಂದರಲ್ಲಿ ಅಚ್ಚರಿಯ ಉತ್ತರ ಬಂದಿದೆ. ಸಮೀಕ್ಷೆಯೊಂದರ ಪ್ರಕಾರ ಡೇಟಿಂಗ್‌ ಅಂತ ಹೋದ ಜೋಡಿ ಪರಸ್ಪರ ರೊಮ್ಯಾಂಟಿಕ್‌ ಮೂಡ್‌, ಮಾತುಕತೆ ಇತ್ಯಾದಿಗಳನ್ನು ಮಾಡುವ ಬದಲು ಮೊಬೈಲ್‌ನಲ್ಲೇ ಹೆಚ್ಚು ಹೊತ್ತು ಕಳೆದಿದ್ದೇವೆ ಎಂದು ಹೇಳಿದ್ದಾರೆ. 

ಸ್ಮಾರ್ಟ್‌ ಫೋನ್‌ನಿಂದ ನಮ್ಮ ಡೇಟಿಂಗ್‌ ಸ್ವಲ್ಪ ನೀರಸವಾಗಿದೆ ಅಂತನೂ ಹಲವರು ಹೇಳಿದ್ದಾರಂತೆ. ಶೇ.60ರಷ್ಟು ಮಂದಿ ಡೇಟಿಂಗ್‌ ವೇಳೆ ಸ್ಮಾರ್ಟ್‌ ಫೋನ್‌ ಹೆಚ್ಚು ನೋಡಿದ್ದೇವೆ ಎಂದು ಹೇಳಿದ್ದಾರೆ. ಇಂಟೆಲ್‌ ಸೆಕ್ಯುರಿಟಿ ಕಂಪನಿ ನಡೆಸಿದ ಸಮೀಕ್ಷೆಯಲ್ಲಿ ಹಲವರು ನಮ್ಮ ಸಂಬಂಧದ ಮಧ್ಯೆ ಸ್ಮಾರ್ಟ್‌ ಫೋನ್‌ ಬಂದಿದೆ ಎಂದು ಹೇಳಿದ್ದಾರೆ. ಅಲ್ಲದೇ ಸ್ಮಾರ್ಟ್‌ ಫೋನಿಂದಾಗಿ ಹಲವರಿಗೆ ಸಂಗಾತಿ ಗಿಫ್ಟ್ ಕೊಟ್ಟಿದ್ದು, ಗ್ಲಾಮರ್‌ ಆಗಿದ್ದಿದ್ದು ಇತ್ಯಾದಿಗಳನ್ನು ಸರಿಯಾಗಿ ಎಂಜಾಯ್‌ ಮಾಡೋಕೇ ಆಗಿಲ್ಲವಂತೆ. ರೆಸ್ಟೋರೆಂಟ್‌ನಲ್ಲಿ ಏನು ತಿಂದಿದ್ದು? ಹೇಗಿತ್ತು ಎನ್ನುವುದನ್ನು   ಅನುಭವಿಸುವುದಕ್ಕೂ ಸಾಧುವಾಗಿಲ್ಲವಂತೆ. ಶೇ.57ರಷ್ಟು ಮಂದಿ ಸಂಗಾತಿ ಫೋನ್‌ನಲ್ಲೇ ಇದ್ದಿದ್ದರಿಂದ ನಮ್ಮ ಮೊದಲ ಡೇಟಿಂಗ್‌ ಅಷ್ಟೇನೂ ಚೆನ್ನಾಗಿರ್ಲಿಲ್ಲ ಅಂತ ಕಡ್ಡಿ ಮುರಿದಂತೆ ಹೇಳಿದ್ದಾರೆ! ಇನ್ನು ಕೆಲವರು ಫೋನಿಂದಾಗಿ ಜಗಳ ಆಗಿದೆ ಎಂದೂ ಹೇಳಿದ್ದಾರೆ. 

ಫ‌ಲಿತಗಳು...
ಸ್ಮಾರ್ಟ್‌ಫೋನ್‌ ಚಟದಿಂದಾಗಿ ಡೇಟಿಂಗ್‌ ಬೋರೋ ಬೋರು!

ಶೇ.57ರಷ್ಟು ಮಂದಿಗೆ ಸಂಗಾತಿ ಫೋನ್‌ ಚಟದಿಂದಾಗಿ ಭಾರೀ ಬೇಜಾರು

ಸ್ಮಾರ್ಟ್‌ಫೋನ್‌ನಲ್ಲಿ ಮುಳುಗಿದ ಪರಿಣಾಮ ಡೇಟಿಂಗ್‌ ವೇಳೆ ಹೋದ ರೆಸ್ಟೋರೆಂಟ್‌, ತಿಂದಿದ್ದೇನು? ಇತ್ಯಾದಿಗಳೂ ನೆನಪಿಲ್ಲ!

Trending videos

Back to Top