CONNECT WITH US  

ಶಿವಮೊಗ್ಗ : ಬೊಮ್ಮನಕಟ್ಟೆಯಲ್ಲಿ ರೌಡಿ ಶೀಟರ್‌ನ ಬರ್ಬರ ಹತ್ಯೆ 

ಶಿವಮೊಗ್ಗ: ಜಿಲ್ಲೆಯ ಬೊಮ್ಮನ ಕಟ್ಟೆಯಲ್ಲಿ  ರೌಡಿ ಶೀಟರ್‌ ಒಬ್ಬನನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. 

ಗಿರೀಶ್‌ (28) ಎಂಬಾತನನ್ನು ಮಾರಕಾಯುಧಗಳಿಂದ ಕೊಚ್ಚಿ ಕೊಲೆಗೈಯಲಾಗಿದ್ದು , ಪೂರ್ವ ದ್ವೇಷದಿಂದ ಕೊಲೆ ನಡೆದಿದೆ ಎನ್ನಲಾಗಿದೆ. 

ಈತನ ವಿರೋಧಿಯಾಗಿರುವ ರೌಡಿ ಶೀಟರ್‌ ಅವಿನಾಶ್‌ ಮತ್ತು ಬೆಂಬಲಿಗರು ಹತ್ಯೆ ನಡೆಸಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. 

ವಿನೋಭನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಕೊಂಡು ತನಿಖೆ ಮುಂದುವರಿಸಿದ್ದಾರೆ. 


Trending videos

Back to Top