ಹೆಗ್ಗೊಡಿನಲ್ಲಿ ಸ್ವತ್ಛತಾ ಆಂದೋಲನಕ್ಕೆ ಕೈಜೋಡಿಸಿದ ನಾಗರಿಕರುಫೀ

Team Udayavani, Aug 13, 2018, 5:28 PM IST

shiv-1.jpg

ಸಾಗರ: ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದ ನೀನಾಸಂ, ಚರಕ ಸಂಘಟನೆ, ಕಿನ್ನರ ಮೇಳ ಮೊದಲಾದ ಹತ್ತು ಹಲವು ಹಿರಿಮೆಗಳನ್ನು ತನ್ನದಾಗಿಸಿಕೊಂಡಿರುವ ತಾಲೂಕಿನ ಹೆಗ್ಗೊಡಿನ ಪ್ರಜ್ಞಾವಂತ ಜನ ಕಳೆದ ಕೆಲವು ದಿನಗಳಿಂದ
ತೀವ್ರ ಅಸಹನೆಗೆ ತುತ್ತಾಗಿದ್ದರು. ತಮ್ಮ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಕಸ, ಕೊಳಚೆ, ಕೊಚ್ಚೆಗಳಿಂದ ತಮ್ಮಲ್ಲಿಗೆ ಭೇಟಿ ನೀಡುವ ಜನರೆದುರು ತಮ್ಮ ಊರಿನ ಗೌರವ ನಷ್ಟವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅವರೇ ನಾವು ನಮ್ಮೂರು ಎಂಬ ಸಂಘಟನೆಯಡಿ ಸ್ವತ್ಛತೆಯ ಆಂದೋಲನವನ್ನು ಆರಂಭಿಸಿ ಗಮನ ಸೆಳೆದಿದ್ದಾರೆ.

ಅಂತಾರಾಷ್ಟ್ರೀಯವಾಗಿ ಹೆಸರುಗಳಿಸಿರುವ ಹೆಗ್ಗೊàಡನ್ನು ಕಣ್ತುಂಬಿಕೊಳ್ಳಲು ಅಪರಿಚಿತರು ಯಾರಾದರೂ ಬಂದರೆ ಬಹುಶಃ ಇಲ್ಲಿನ ವಾತಾವರಣವನ್ನು ನೋಡಿ ನಾವು ಕೇಳಿದ ಹೆಗ್ಗೊàಡು ಇದೇ ಇರಬಹುದೇ ಎಂದು ಒಂದು ಕ್ಷಣ ದಿಗಿಲುಗೊಳ್ಳಬಹುದು. ಗಬ್ಬುನಾರುತ್ತಿರುವ ಹೆಗ್ಗೊಡು ಬಸ್‌ ನಿಲ್ದಾಣ, ಸ್ವತ್ಛತೆಯನ್ನೇ ಕಾಣದ ಚರಂಡಿಗಳು, ರಸ್ತೆಯ ಇಕ್ಕೆಲಗಳಲ್ಲೂ ಬೆಳೆದು ನಿಂತ ಲಂಡನ್‌ ಗಿಡಗಳು, ಕಂಡಕಂಡಲ್ಲಿ ಅಗೆದುಗಿದು ಬಿಸಾಡಿದ ಪ್ಲಾಸ್ಟಿಕ್‌ ಪೊಟ್ಟಣಗಳು, ಹೆಂಡದ ಬಾಟಲಿಗಳು, ಹೊಂಡ ಗುಂಡಿಗಳಿಂದ ತುಂಬಿಕೊಂಡಿರುವ ಹೆಗ್ಗೊಡಿನ ಮುಖ್ಯ ರಸ್ತೆ ಚಿತ್ರಣಗಳನ್ನು ಹೆಗ್ಗೊಡು ಗ್ರಾಪಂ ಸುತ್ತಮುತ್ತಲೇ ಕಾಣಬಹುದು ಎಂದು ಕರಪತ್ರದ ಮೂಲಕ ಜನರನ್ನು ಜಾಗೃತಗೊಳಿಸುವ ಪ್ರಯತ್ನ ನಡೆಯಿತು.

ನೀನಾಸಂ, ಶಾಲೆ, ಕಾಲೇಜು, ಬ್ಯಾಂಕ್‌, ಪೋಸ್ಟ್‌ ಆಫೀಸ್‌, ಹಾಲು ಒಕ್ಕೂಟ, ಅಂಗಡಿ ಮುಂಗಟ್ಟುಗಳಿಂದ ನಗರದ ಸಾಮ್ಯತೆಯನ್ನೂ ಹೊಂದಿರುವ ಹೆಗ್ಗೊಡಿನಲ್ಲಿ ಸದಾ ಜನರು ಮೂಲಭೂತ ಅವಶ್ಯಕತೆಗಾಗಿ ಓಡಾಡುವ ಕೇಂದ್ರ ಭಾಗವೇ ಗಬ್ಬೆದ್ದು ನಾರುತ್ತಿದೆ. ಹಲವಾರು ಸಂಘ-ಸಂಸ್ಥೆಗಳು ಈ ಭಾಗದಲ್ಲಿದ್ದು ನಮ್ಮ ಹೆಗ್ಗೊಡನ್ನು ಸ್ವತ್ಛ ಸುಂದರವಾಗಿ ಕಾಪಾಡಿಕೊಳ್ಳಲು ಮನಸು ಮಾಡದಿರುವುದು ವಿಷಾದನೀಯ. ಎಲ್ಲ ಕೆಲಸಗಳನ್ನು ಸರ್ಕಾರವೇ ಮಾಡಬೇಕು ಎಂದು ನಿರೀಕ್ಷಿಸದೇ ನಾವು ಸತಜೆಗಳಾಗಿ ನಮ್ಮ ಪಾಲಿನ ಕರ್ತವ್ಯಗಳನ್ನು ನಿಭಾಯಿಸುವುದು ದೇಶಕ್ಕೆ ಸಲ್ಲಿಸುವ ಸೇವೆ ಎಂದು ಪ್ರತಿಪಾದಿಸಿ ಒಂದು ಸಂಘಟನೆಯನ್ನು ಹುಟ್ಟುಹಾಕುವ ಕೆಲಸ ಆಗಸ್ಟ್‌ ಮೊದಲ ವಾರದಲ್ಲಿ ನಡೆದಿತ್ತು. ಆ ದಿನ ಆ ಭಾಗದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಜಾಥಾ ನಡೆಸಿದ್ದರು.

ಚಿದಂಬರರಾವ್‌ ಜಂಬೆ ಗೌರವಾಧ್ಯತೆಯಲ್ಲಿ ಆರಂಭವಾಗಿರುವ ಸಂಘಟನೆ ತೀವ್ರ ಕಾರ್ಯಾಚರಣೆಗಿಳಿದಿದೆ. ನಾವು-ನಮ್ಮೂರು ಸಮಿತಿಯ ಆಶ್ರಯದಲ್ಲಿ ಈ ಶನಿವಾರ ಗ್ರಾಮದ ಸ್ವತ್ಛತೆ ಕಾರ್ಯಕ್ರಮ ವಿಶಿಷ್ಟ ರೀತಿಯಲ್ಲಿ ನಡೆಯಿತು. ರಾಗಿ ಹಕ್ಲು, ವಿವೇಕಾನಂದ ವೃತ್ತ, ಹೊನ್ನೇಸರ ಬೈಪಾಸ್‌ ರಸ್ತೆ, ಪಿಎಲ್‌ಡಿ ಬ್ಯಾಂಕ್‌ ಆವರಣ ವ್ಯಾಪ್ತಿಯಲ್ಲಿ ಸ್ವತ್ಛತೆ ಕಾರ್ಯ ನಡೆಸಲಾಯಿತು.
 
ಸುಮಾರು 250 ಜನರು ವಿವಿಧ ತಂಡಗಳಲ್ಲಿ ಕಾರ್ಯ ನಡೆಸಿದರು. ಕಾರ್ಯಕ್ರಮದ ಮುಂದಿನ ಭಾಗವಾಗಿ ಹೆಗ್ಗೊàಡು ಕೇಂದ್ರದ ನಾಲ್ಕು ದಿಕ್ಕುಗಳ ರಸ್ತೆಗಳ ಆಜುಬಾಜಲ್ಲಿ ಸಾಲು ಗಿಡಗಳನ್ನು ನೆಡಲು ಯೋಜಿಸಲಾಗಿದೆ. ಈಗ ಸುರಿಯುತ್ತಿರುವ ಮಳೆ ಕಡಿಮೆ ಆದ ನಂತರ ಜಾನುವಾರುಗಳಿಂದ ರಕ್ಷಣೆ ವ್ಯವಸ್ಥೆ ಮಾಡಿಯೇ ಗಿಡಗಳನ್ನು ನೆಡುತ್ತೇವೆ. ಈ ಆಂದೋಲನ ಮುಕ್ತಾಯವಾಗುವುದಿಲ್ಲ. ಇದರ ಜೊತೆಗೆ ಪಶ್ಚಿಮ ಘಟ್ಟಗಳತ್ತ ದಿಟ್ಟ ಹೆಜ್ಜೆ, ದ್ಯಾವಾಸ ಪುನರುಜ್ಜೀವನ ಮಾದರಿಯ ಸಂಘಟನೆಗಳ ಮೂಲಕವೂ ಪರಿಸರದ ಸಂರಕ್ಷಣೆಯ ಹೊಣೆಯನ್ನು ಸರ್ಕಾರಿ ವ್ಯವಸ್ಥೆಯ
ಮೊರೆ ಹೋಗದೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಸಂಘಟನೆಯೊಳಗಿರುವ ನೀನಾಸಂನ ಶ್ರೀಪಾದ್‌ ಭಾಗವತ್‌ ತಿಳಿಸಿದರು.

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಿದಂಬರ ರಾವ್‌ ಜಂಬೆ, ತಾಪಂ ಸದಸ್ಯ ರಘುಪತಿ ಭಟ್‌, ಪ್ರಭಾಕರ ಸಾಂಶಿ, ವಿಸಂ ಸಂಸ್ಥೆಯ ಸತ್ಯನಾರಾಯಣ ಭಾಗಿ, ಕೇಶವ ಸಂಪೆಕೈ, ಗಣಪತಿ, ವಿದ್ಯಾಧರ, ಏಸುಪ್ರಕಾಶ್‌, ಪ್ರಸನ್ನ, ರಾಜಶೇಖರ, ಕೃಷ್ಣಮೂರ್ತಿ, ನಾಗರಾಜ, ಸತೀಶ, ಶ್ರೀಪಾದ ಭಾಗವತ್‌ ಮುಂತಾದ ಹಲವು ಪ್ರಮುಖರು ಈ ಆಂದೋಲನದಲ್ಲಿ ಪಾಲ್ಗೊಂಡಿದ್ದರು. 

ಟಾಪ್ ನ್ಯೂಸ್

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.