ಸಾಗರವಾಗಲಿ ಸುಂದರ..!


Team Udayavani, Aug 24, 2018, 6:02 PM IST

shiv.jpg

ಸಾಗರ: ಪ್ರಗತಿಯ ದಾರಿಯೇ ವಿಚಿತ್ರ. ಯಾವುದೇ ನಗರ, ತಾಲೂಕು, ಜಿಲ್ಲೆ, ರಾಜ್ಯ ಸಮಸ್ಯೆಗಳಿಲ್ಲದೆ ಸಂತೃಪ್ತ ಎಂಬುದಿಲ್ಲ. ಮೂಲಭೂತ ಸಮಸ್ಯೆಗಳು ಬಗೆಹರಿದರೆ ಎರಡನೇ ಹಂತದ ಸಮಸ್ಯೆಗಳು ಮುಂಚೂಣಿಗೆ ಬರುತ್ತವೆ. ಇದಕ್ಕೆ ಸಾಗರ ನಗರವೂ
ಹೊರತಲ್ಲ. ನಗರಕ್ಕೆ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರು ಒದಗಿಸುವ ಯೋಜನೆ ಜಾರಿಗೆ ಬಂದುದರಿಂದ ನೀರಿನ ಕೊರತೆ ಎಂಬ ಮೂಲ ಸಮಸ್ಯೆಗೆ ಮಂಗಳ ಹಾಡಿದಂತಾಯಿತು. ಆದರೆ ಬಂದ ನೀರಿನ ಸಮರ್ಪಕ ವಿಲೇವಾರಿಗೆ ಪೈಪ್‌ ಲೈನ್‌ ಸಮಸ್ಯೆ, ನೀರು ಹಾದು ಬರುವ ದಾರಿಯ ಗ್ರಾಮಗಳಿಗೂ ನೀರು ಒದಗಿಸಲು ಕೈಗೊಂಡ ಯೋಜನೆಯ ವಿಳಂಬ, ಕೊನೆಗೆ ಶರಾವತಿಯಿಂದ
ಸಾಗರಕ್ಕೆ ನೀರು ದಬ್ಬುವ ಪಂಪ್‌ ಪದೇ ಪದೇ ಕೈಕೊಡುವುದು ಕೂಡ ಜನರಿಗೆ ಅಸಹನೀಯ ಎನ್ನಿಸಬಹುದು!

ಕೆರೆಗಳ ಮರುಜನ್ಮದತ್ತ: ಸಾಗರ ತಾಲೂಕಿನ ಮಟ್ಟಿಗೆ ಹೇಳುವುದಾದರೆ, ಸಮಸ್ಯೆಗಳ ಪರಿಹಾರಕ್ಕೆ ಸಂಕಷ್ಟ ಕಾಲದ ಯೋಜನೆ, ದೂರಗಾಮಿ ಪರಿಣಾಮದ ಕಲ್ಪನೆಗಳು ಡ್ರಾಯಿಂಗ್‌ ರೂಂನಿಂದ ಕಾರ್ಯಕ್ಷೇತ್ರಕ್ಕೆ ಬರಬೇಕಿದೆ. ಶಿವಮೊಗ್ಗ ಜಿಲ್ಲೆಯ
ಸೊರಬ, ಶಿಕಾರಿಪುರಗಳಂತೆ ಸಾಗರದಲ್ಲಿಯೂ ಅಧಿಕ ಪ್ರಮಾಣದಲ್ಲಿ ಕೆರೆಗಳಿವೆ. ಈ ಕೆರೆಗಳಲ್ಲಿ ನೀರು ನಿರಂತರವಾಗಿ ಕಾಣಲು ಕಾಯಕಲ್ಪದ ದಾಹವಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರ ಒಂದು ಯೋಜನೆಯನ್ನು ಪೂರೈಸುವುದಕ್ಕಿಂತ ಅದಕ್ಕೊಂದು ವಾರ್ಷಿಕ ಅನುದಾನ ನಿಗದಿಪಡಿಸಿ ಇದರಲ್ಲಿ ಆಗುವಷ್ಟು ಕೆಲಸ ಮಾಡಬಹುದು ಎನ್ನುತ್ತದೆ. ಕೆರೆಗಳ ವಿಚಾರದಲ್ಲಿ ಕೂಡ ಈ
ಕ್ರಮಕ್ಕೆ ಮುಂದಾಗಿರುವುದರಿಂದ ಸಮಸ್ಯೆ ಜೀವಂತವಾಗಿಯೇ ಇದೆ. ಈ ಆರ್ಥಿಕ ವರ್ಷದಲ್ಲಿ ಒಂದು ಕೆರೆಯನ್ನು ಕೈಗೆತ್ತಿಕೊಂಡರೆ ಅದನ್ನು ಸಂಪೂರ್ಣವಾಗಿ ಒತ್ತುವರಿ ತೆರವುಗೊಳಿಸಿ, ಹೂಳು ತೆಗೆದು, ದಂಡೆಗಳನ್ನು ಭದ್ರಗೊಳಿಸಿ, ಸಾಧ್ಯವಾದರೆ
ಪ್ರವಾಸೋದ್ಯಮಕ್ಕೆ ಅಣಿಗೊಳಿಸದಿದ್ದರೆ ಶ್ರಮ ವ್ಯರ್ಥ. ಸಾಗರದ ಪ್ರಸಿದ್ಧ ಗಣಪತಿ ಕೆರೆಯಿಂದ ಆರಂಭಿಸಿ ತಾಲೂಕಿನ ಅತಿ ವಿಶಾಲ ಕೆಳದಿ ಕೆರೆ ಸೇರಿಸಿ ಪ್ರತಿ ಗ್ರಾಮದಲ್ಲಿಯೂ ಇರುವ ಕನಿಷ್ಟ ಒಂದು ಕೆರೆಯನ್ನು ಪುನರುಜ್ಜೀವನಗೊಳಿಸುವ ಕಾಮಗಾರಿಗಳನ್ನು ಹಂತ
ಹಂತವಾಗಿ ನಡೆಸಲೇಬೇಕಾದ ಅಗತ್ಯವಿದೆ. ಬೇಸಿಗೆ ನೀರಿಗಾಗಿ ಟ್ಯಾಂಕರ್‌ ಹೊಡೆಯುವುದು ತಾತ್ಕಾಲಿಕ ಪರಿಹಾರವಾದರೆ ಬೋರ್‌ವೆಲ್‌ ಕೊರೆಯುವುದು ಭವಿಷ್ಯದ ಕೊಡಗು ಅಪಾಯವನ್ನು ಆಹ್ವಾನಿಸಿದಂತೆ!

ಇಂಟರ್‌ಲಾಕ್‌ ಸೂತ್ರ!: ನಗರಗಳ ಟ್ರಾμಕ್‌ನ್ನು ರಸ್ತೆ ಅಗಲೀಕರಣದಿಂದ ಮಾತ್ರ ನಿರ್ವಹಿಸಬಹುದು ಎಂಬ ತಪ್ಪು ಕಲ್ಪನೆಯಿದೆ. ಸಾಗರ ನಗರದ ವಿಚಾರಕ್ಕೇ ಬಂದರೆ ಶಿಸ್ತಿನ ವಾಹನ ನಿಲುಗಡೆ ಸಮಸ್ಯೆಗೆ ಒಂದು ಮಟ್ಟಿನ ಪರಿಹಾರ ಒದಗಿಸಬಲ್ಲದು. ಈಗಲೂ
ನಗರಾಡಳಿತ ರಸ್ತೆ ಪಕ್ಕದ ಚರಂಡಿಗಳ ಮೇಲೆ ಸ್ಲಾÂಬ್‌ ಗಳನ್ನು ಅಳವಡಿಸಿ ಪಾರ್ಕಿಂಗ್‌ ವಾಹನಗಳು ಅದರ ಮೇಲೆ ಸುಸೂತ್ರವಾಗಿ ನಿಲ್ಲಿಸುವಂತೆ ಮಾಡಿದರೆ ಸಮಸ್ಯೆಯ ಅರ್ಧ ಭಾಗ ಸುಧಾರಿಸುತ್ತದೆ. 

ಬೇಕಾಬಿಟ್ಟಿ ಹಾಕಲಾಗಿರುವ ವಿದ್ಯುತ್‌ ಹಾಗೂ ಫೋನ್‌ ಕಂಬಗಳನ್ನು ಸರಿಪಡಿಸಿದರೆ ವಾಹನ ನಿಲುಗಡೆ ಸುಧಾರಿಸುತ್ತದೆ. ಬೀದಿ ಬದಿಯ ವ್ಯಾಪಾರವನ್ನು ಖಡಕ್ಕಾಗಿ ರಸ್ತೆ, ಫುಟ್‌ಪಾತ್‌ಗಳಿಂದ ನಿಷೇಧಿ ಸಬೇಕು. ಮಾನವೀಯ ದೃಷ್ಟಿ ಪ್ರಶ್ನೆಗೆ, ಅವರಿಗೆ ಪರ್ಯಾಯ
ಸ್ಥಳ ಸೂಚಿಸಬೇಕು. ಆರಂಭದಲ್ಲಿ ಪರ್ಯಾಯ ಸ್ಥಳದಲ್ಲಿ ವ್ಯಾಪಾರ ಆಗದಿರಬಹುದು. ನಂತರ ಜನ ಖರೀದಿಗೆ ಬಂದೇ ಬರುತ್ತಾರೆ. ನಗರದೊಳಗಿನ ಕಿರಿದಾದ ಸಂಪರ್ಕ ರಸ್ತೆಗಳಿಗೆ ಡಾಂಬರೀಕರಣ ಅಥವಾ ಕಾಂಕ್ರೀಟ್‌ ಹಾಕುವುದಕ್ಕಿಂತ ಇಂಟರ್‌
ಲಾಕ್‌ ಬ್ರಿಕ್ಸ್‌ಗಳನ್ನು ಅಳವಡಿಸಿದ ರಸ್ತೆ ನಿರ್ಮಾಣಕ್ಕೆ ಮುಂದಾದರೆ ಬಹುವಾರ್ಷಿಕವಾಗಿ ಸಮಸ್ಯೆ ಎದುರಾಗುವುದಿಲ್ಲ. ಸುಮಾರು ಆರು ವರ್ಷಗಳ ಹಿಂದೆ ಕೋರ್ಟ್‌ ರಸ್ತೆಯಿಂದ ಚಾಮರಾಜಪೇಟೆಗೆ ತಲುಪುವ ಚಾಂದಿನಿ ಆಸ್ಪತ್ರೆ ಎದುರು ಹಾಕಿದ
ಇಂಟರ್‌ಲಾಕ್‌ ರಸ್ತೆ ಇವತ್ತಿಗೂ ಸುರಕ್ಷಿತವಾಗಿದೆ. 

ಕಾಂಕ್ರೀಟ್‌ ಬಡ್ಡಿಯಲ್ಲಿ ಡಾಂಬರು!: ಕಾಂಕ್ರೀಟ್‌ ರಸ್ತೆಗಳು ಮಲೆನಾಡಿಗಲ್ಲ. ತೀರಾ ಕುಸಿಯುವ ಸ್ಥಿತಿಯ ರಸ್ತೆಗೆ ಮಾತ್ರ ಇದು ಸರಿ. ತೀವ್ರ ಮಳೆಯಿಂದ ಇವು ಪಾಚಿಗಟ್ಟಿ ಅಪಾಯಕ್ಕೆ ತೆರೆದುಕೊಳ್ಳುತ್ತಿವೆ. ವರದಪುರದ ಶ್ರೀಧರಾಶ್ರಮಕ್ಕೆ ಹಾಕಿರುವ
ಕಾಂಕ್ರೀಟ್‌ ರಸ್ತೆ ಜಾರದಿರಲು 15 ದಿನಗಳಿಗೊಮ್ಮೆ ಶ್ರೀಧರಾಶ್ರಮದಿಂದ ಸುಣ್ಣ ಹಾಕಿ ಪಾಚಿಯನ್ನು ತೆಗೆಯುವ ಕೆಲಸ ಮಾಡಲಾಗುತ್ತದೆ. ಇಷ್ಟಕ್ಕೂ ಇವು ವಿಪರೀತ ದುಬಾರಿ. ವರದಪುರದ ರಸ್ತೆಗೆ ಒಂದು ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೊದಲಿದ್ದ
ಡಾಂಬರು ರಸ್ತೆಯನ್ನು ಕಿತ್ತು ತೆಗೆಯಲಾಗಿದೆ. 

ಕಾಮಗಾರಿ ಸಂಪನ್ನಗೊಳಿಸಲು ಇನ್ನೂ 50 ಲಕ್ಷ ರೂ. ಬೇಕಾಗಿದೆ. ಒಂದೊಮ್ಮೆ ಒಂದೂವರೆ ಕೋಟಿಯನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಿ ಅದರ ಬಡ್ಡಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಸರಿಸುಮಾರು 40 ಲಕ್ಷ ಖರ್ಚು ಮಾಡಿ ಹೊಸದಾಗಿ ಡಾಂಬರೀಕರಣ
ಮಾಡಬಹುದಿತ್ತು. ಆಗ ಮೂಲಧನ ಕೂಡ ಕೈಯಲ್ಲಿ ಉಳಿಯುತ್ತಿತ್ತು!

ಇವಿಷ್ಟಲ್ಲದೆ ಸಾಗರ ನಗರ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮೂಲಸೌಲಭ್ಯ ಸೇರಿದಂತೆ ಅನೇ ಸಮಸ್ಯೆಗಳು ಇದ್ದು ಇವನ್ನೆಲ್ಲ ಶಾಶ್ವತವಾಗಿ ಪರಿಹರಿಸುವತ್ತ ಚಿಂತನೆ ಹಾಗೂ ದೂರಗಾಮಿ ಯೋಜನೆಯ ಅಗತ್ಯವಿದೆ.

ಮಾ.ವೆಂ.ಸ. ಪ್ರಸಾದ್‌ 

ಟಾಪ್ ನ್ಯೂಸ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

1-asasas

Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.