CONNECT WITH US  

ರಾಯರ-ಆರಾಧನಾ-ಮಹೋತ್ಸವ

ಭದ್ರಾವತಿ: ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಮತ್ತು ಶ್ರೀವಾದಿರಾಜ ಸ್ವಾಮಿಗಳ ಮಠದಲ್ಲಿ 3 ದಿನಗಳ ಕಾಲ
ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಹೂವಿನ ಅಲಂಕಾರ, ಪ್ರತಿನಿತ್ಯ ವಿವಿಧ ಬಡಾವಣೆಗಳಿಗೆ ರಾಯರ ಪಲ್ಲಕ್ಕಿಯ ಮೂಲಕ ಪಾದಪೂಜೆಯನ್ನು ಭಕ್ತಾದಿಗಳ ಮನೆಯಲ್ಲಿ ನಡೆಸಲಾಯಿತು. 

ಬುಧವಾರ ಮಠದಲ್ಲಿ ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ನಂತರ ವಿವಿಧ ರೀತಿಯ ಹಣ್ಣುಗಳಿಂದ
ಅಲಂಕಾರ ಮಾಡಲಾಗಿತ್ತು. ನಂತರ ರಾಯರ ರಜತ ಬೃಂದಾವನವನ್ನು ಪ್ರಾಣದೇವರ ಸಹಿತವಾಗಿ ರಥದಲ್ಲಿರಿಸಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದವರೆಗೆ ರಥೋತ್ಸವ ನಡೆಸಲಾಯಿತು. ಭಕ್ತಾದಿಗಳು ದಾಸರ ಪದಗಳನ್ನು ಹಾಡುತ್ತಾ ರಥವನ್ನು ಎಳೆದರು.

ರಾತ್ರಿ ತೊಟ್ಟಿಲು ಪೂಜೆ ನೆರವೇರಿತು. ಆರಾಧನೆಗೆ ಬಂದ ಭಕ್ತಾದಿಗಳಿಗೆ ಅನ್ನದಾನ ಪ್ರಸಾದ ವಿತರಿಸಲಾಯಿತು. ಮಠದ ಮುಖ್ಯಸ್ಥರಾದ ತಂತ್ರಿಗಳು, ರಮಾಕಾಂತ, ಗೋಪಾಲಾಚಾರ್‌, ಮಾಧವ ರಾವ್‌, ಚಿಟ್ಟೂರು ರಾಘವೇಂದ್ರಾಚಾರ್‌ ಮತ್ತಿತರರು ಇದ್ದರು.


Trending videos

Back to Top