CONNECT WITH US  

ವಚನಗಳ ತತ್ವ ಅಳವಡಿಸಿಕೊಳ್ಳಿ

ಸೊರಬ: ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ವಚನ ಸಾಹಿತ್ಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುನಾಥ್‌ ಹೇಳಿದರು.

ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಶರಣ ಸಾಹಿತ್ಯ ಪರಿಷತ್‌ ತಾಲೂಕು ಘಟಕ ವತಿಯಿಂದ ಅ.ಭಾ. ಶ.ಸಾ.ಪ. ನ ಸಂಸ್ಥಾಪನ ದಿನ ಹಾಗೂ ಸಂಸ್ಥಾಪಕ ಡಾ| ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ವಚನದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಸಮತೋಲನತ್ವ ಕದಡುತ್ತಿದ್ದು ವಚನ ಸಾಹಿತ್ಯ ಚಿಂತನೆಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುವ ಅಗತ್ಯವಿದೆ. ಬಸವಣ್ಣ ಯಾವುದೇ ಜಾತಿ- ಧರ್ಮಕ್ಕೆ ಅಂಟಿಕೊಳ್ಳದೆ ಎಲ್ಲಾ ಜಾತಿ-ಧರ್ಮದವರನ್ನು ಒಗ್ಗೂಡಿಸಿಕೊಂಡು ಸಮಾಜ ಸುಧಾರಣೆಗೆ, ಸಮಾನತೆಗೆ ಮುನ್ನುಡಿ ಬರೆದಿದ್ದಾರೆ. ಕಾಯಕವೇ ಕೈಲಾಸ ನುಡಿಯನ್ನು ಇಂದಿನ ಸಮಾಜ ಅಳವಡಿಸಿಕೊಂಡಲ್ಲಿ ಪ್ರಗತಿ ಕಾಣಲು ಸಾಧ್ಯ ಎಂದರು.

ಭರತ್‌ ಕಾರೇಕೊಪ್ಪ ಅವರು ವಚನ ಸಾಹಿತ್ಯದಲ್ಲಿ ಪ್ರತಿಪಾದಿತವಾಗಿರುವ ವಿಶ್ವ ಮೌಲ್ಯಗಳು ವಿಷಯದ ಬಗ್ಗೆ
ಉಪನ್ಯಾಸ ನೀಡಿ, ಭಾರತೀಯ ಸಂಸ್ಕೃತಿಯ ಪ್ರಮುಖ ಅಂಗ ವಚನ ಸಾಹಿತ್ಯ. ಈ ನೆಲದಲ್ಲಿ ಮೊದಲು ಸಮಾನತೆಯನ್ನು ಪ್ರತಿಪಾದಿಸಿದವರು ವಚನಕಾರರು. ಮನೋಬಲವನ್ನು ಗಟ್ಟಿಗೊಳಿಸಿಕೊಳ್ಳುವ ಜತೆಗೆ ಶಿಕ್ಷಣ ಪಡೆದಲ್ಲಿ ಸಮಾಜವನ್ನು ಸದೃಢವಾಗಿ ಕಟ್ಟಬಹುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಲೇಶ್‌ ನವುಲೆ ಅವರು ಡಾ| ವಿ.ಎಸ್‌. ಮಾಳಿ ಅವರ "ವಚನ ಸಂಪತ್ತನ್ನು ಉಳಿಸಿ ಕೊಟ್ಟವರು' ಎಂಬ ಮುದ್ರಿತ ಭಾಷಣವನ್ನು ವಾಚನ ಮಾಡಿದರು. 

ಬಸವ ಬಳಗದ ಅಧ್ಯಕ್ಷ ಮಹಾಂತೇಶ ಕಳ್ಳಿಕೊನೆ ಅವರು ವಚನ ವಾಚನ ಮತ್ತು ವಿಶ್ಲೇಷಣೆ ಮಾಡಿದರು. ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಎಸ್‌. ಕೃಷ್ಣಾನಂದ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಕೆ.ಇ. ಸುನಂದ ನಿರೂಪಿಸಿದರು.

ನಿಲಯ ಪಾಲಕ ಉಮೇಶ್‌, ವಕೀಲ ಎಂ.ಆರ್‌.ಪಾಟೀಲ್‌, ರೇಣುಕಮ್ಮ ಗೌಳಿ, ಪಾರ್ವತಮ್ಮ, ಚಂದ್ರಪ್ಪ ಅತ್ತಿಕಟ್ಟೆ, ಶಿವಕುಮಾರ್‌, ಶಿವಪ್ಪ, ಪುಟ್ಟಸ್ವಾಮಿ ಗೌಡ, ವಿನಾಯಕ ಅಂಕೋಟಿಕರ್‌ ಇತರರಿದ್ದರು. ವಚನಗಾಯನದಲ್ಲಿ.

Trending videos

Back to Top