CONNECT WITH US  

ಶಿವಮೊಗ್ಗ: ರೌಡಿ ಶೀಟರ್‌ ಮಾರ್ಕೆಟ್‌ ಗಿರಿ ಬರ್ಬರ ಹತ್ಯೆ

ಶಿವಮೊಗ್ಗ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ತಂಡವೊಂದು ರೌಡಿ ಶೀಟರ್‌ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಗರದ ದುರ್ಗಿಗುಡಿ ಬಳಿ ನಡೆದಿದೆ. ಮಾರ್ಕೆಟ್‌ ಗಿರಿ (45) ಕೊಲೆಯಾದವ.

 ನಗರದ ದುರ್ಗಿಗುಡಿ ರಸ್ತೆಯ ಸೂರ್ಯ ಕಂಫರ್ಟ್‌ ಹೊಟೇಲ್‌ ಬಳಿ ಗಿರಿ ರಾತ್ರಿ ಕಾರಿನಲ್ಲಿ ಹೋಗುತ್ತಿದ್ದಾಗ ಐದಾರು ಜನರಿದ್ದ ತಂಡವೊಂದು ಕಾರನ್ನು ಅಡ್ಡಗಟ್ಟಿ ಗಾಜು ಪುಡಿ ಮಾಡಿದೆ. ರಸ್ತೆಗೆ ಕೆಡವಿ ಮಚ್ಚು- ಲಾಂಗುಗಳಿಂದ ತೀವ್ರ ಹಲ್ಲೆ ನಡೆಸಿ ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ತಿಂಗಳ ಕಾಲ ಜೈಲಿನಲ್ಲಿದ್ದ ಮಾರ್ಕೆಟ್‌ ಗಿರಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ. 


Trending videos

Back to Top