ಕಣ್ಮನ ಸೆಳೆಯುತ್ತಿರುವ ದಸರಾ ಬೊಂಬೆ ಪ್ರದರ್ಶನ

Team Udayavani, Oct 15, 2018, 3:51 PM IST

shiv-2.jpg

ಭದ್ರಾವತಿ: ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷವಾಗಿ ಶಕ್ತಿದೇವತೆಯ ದೇವಾಲಯಗಳಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಪ್ರತಿನಿತ್ಯ ದೇವಿಗೆ ವಿವಿಧ ಅಲಂಕಾರ ಮಾಡಲಾಗುತ್ತಿದೆ. ಸಂಜೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ಅಲಂಕಾರವನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಅದೇ ರೀತಿ ಹಲವು ಮನೆಗಳಲ್ಲಿ ಸಂಪ್ರದಾಯ ಪೂರ್ವಕವಾಗಿ ದಸರಾ ಗೊಂಬೆಗಳನ್ನು ಇಟ್ಟು ಪೂಜಿಸುತ್ತಿರುವುದನ್ನೂ ಇಲ್ಲಿ ಕಾಣಬಹುದಾಗಿದೆ. ಆ ರೀತಿಯಲ್ಲಿಟ್ಟಿರುವ ಗೊಂಬೆ ಪ್ರದರ್ಶನಗಳಲ್ಲಿ ಹಳೇನಗರದ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿರುವ ಅರ್ಚಕ ರಂಗನಾಥ ಶರ್ಮ ಅವರ ಮನೆಯಲ್ಲಿ ಕೂಡಿಸಿರುವ ವೈವಿಧ್ಯಮಯ ದಸರಾ ಗೊಂಬೆಗಳ ಪ್ರದರ್ಶನ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ.

ದಶಾವತಾರ ಮತ್ತು ಕೈಲಾಸ ದರ್ಶನ: ಪಟ್ಟದ ಗೊಂಬೆಗಳನ್ನು ಎಲ್ಲಕ್ಕಿಂತ ಮೇಲೆ ಪ್ರಥಮವಾಗಿಟ್ಟು ನಂತರ ವಿಷ್ಣುವಿನ ಹತ್ತುಅವತಾರಗಳನ್ನು ನೆನಪಿಸುವ ದಶಾವತಾರದ ಗೊಂಬೆಗಳನ್ನು ಒಂದೆಡೆ ಜೋಡಿಸಿದ್ದರೆ ಮತ್ತೂಂದೆಡೆ ಗಣಪತಿ, ಶಿವ, ಪಾರ್ವತಿ, ನಂದಿ ಮುಂತಾದ ಶಿವನ ಕೈಲಾಸದಲ್ಲಿನ ದೇವತೆಗಳ ಗೊಂಬೆಗಳು, ಷಣ್ಮುಖ ಜನನದ ಗೊಂಬೆಗಳನ್ನು ಸಹ ಜೋಡಿಸಿಡಲಾಗಿದೆ. ಅದೇ ರೀತಿ ವಸುದೇವ ದೇವಕಿಯರಿಗೆ ಸೆರೆಮನೆಯಲ್ಲಿ ಜನಿಸುವ ಶ್ರೀಕೃಷ್ಣನ ಜನನದ ಘಟನೆಗಳನ್ನು ನೆನೆಪಿಸುವ ಗೊಂಬೆಗಳು, ರಾಮಾವತಾರದಲ್ಲಿನ ರಾಮಾಯಣ- ಮಹಾಭಾರತದ ಘಟನಾ ವಳಿಗಳನ್ನು ನೆನಪಿಸುವ ಬೊಂಬೆಗಳು, ನರಸಿಂಹಾವತಾರದ ಗೊಂಬೆಗಳು, ಅಷ್ಟಲಕ್ಷ್ಮೀಯರ ಗೊಂಬೆಗಳನ್ನು ಕ್ರಮಬದ್ಧವಾಗಿ ಜೋಡಿಸಿಡಲಾಗಿದೆ.

ತಿರುಪತಿ ಬ್ರಹ್ಮರಥೋತ್ಸವ: ತಿರುಪತಿಯಲ್ಲಿ 10 ದಿನಗಳ ಕಾಲ ನಡೆಯುವ ಶ್ರೀನಿವಾಸ- ಪದ್ಮಾವತಿಯರ ಬ್ರಹ್ಮ ರಥೋತ್ಸವವನ್ನು ನೆನೆಪಿಸುವ ಗೊಂಬೆಗಳನ್ನು ಜೋಡಿಸಿಟ್ಟಿರುವುದು ಒಂದು ವಿಶೇಷ.
 
ಮೈಸೂರು ದಸರಾ ಕಲಾಕೃತಿ: ಮೈಸೂರಿನ ಅರಮನೆ, ವಿಜಯದಶಮಿಯ ಮೆರವಣಿಗೆಯ ಮಾರ್ಗ, ದೊಡ್ಡಗಡಿಯಾರದ ವೃತ್ತ, ಜಾನಪದ ಕುಣಿತದ ಗೊಂಬೆಗಳು, ಆನೆ- ಅಂಬಾರಿ ಸೇರಿದಂತೆ ಮೈಸೂರಿನ ದಸರಾ ಮೆರವಣಿಗೆಯನ್ನು ನೆನೆಪಿಸುವ ಯಥಾವತ್ತಾದ ಮೂರ್ತಿಗಳನ್ನು ಜೋಡಿಸಿಡಲಾಗಿದೆ. ಅದೇರೀತಿ ಜೋಗ್‌ಫಾಲ್ಸ್‌ ಸೇರಿದಂತೆ ವಿವಿಧ ತರಾವರಿ ಗೊಂಬೆಗಳನ್ನು ಹಾಗೂ ವಿವಿಧ ರೀತಿಯ ಫಲಪುಷ್ಪಗಳ  ಮಾದರಿಗಳನ್ನು ಇಡಲಾಗಿದೆ.

ಮಹಿಷಾಸುರ ಸಂಹಾರ: ಮಹಿಷಾಸುರನನ್ನು ಸಂಹಾರ ಮಾಡುತ್ತಿರುವ ಮಹಿಷಾಸುರ ಮರ್ಧಿನಿ ಹಾಗೂ ಕಾಡು ಮನುಷ್ಯರ ಪರಿಸರವನ್ನು ಬಿಂಬಿಸುವ ಗೊಂಬೆಗಳನ್ನೂ ಇಲ್ಲಿ ಕಾಣಬಹುದಾಗಿದೆ.

ಗ್ರಾಮೀಣ ದೃಶ್ಯ: ಕಮ್ಮಾರಿಕೆ, ಕುಲುಮೆ, ಕುಂಬಾರಿಕೆ, ರೈತಾಪಿ ಕೆಲಸ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ವಿವಿಧ ವೃತ್ತಿಗಳನ್ನು ಸಾರುವ ಗೊಂಬೆಗಳನ್ನು ಸಹ ಕಾಣಬಹುದಾಗಿದೆ. ವಿಧಾನಸೌಧ: ಸರ್ಕಾರಿ ಕೆಲಸ ದೇವರ ಕೆಲಸ ಎಂದು ಸಾರುವ ವಿಧಾನಸೌಧದ ಮಾದರಿಯನ್ನು
ಸಹ ಇಲ್ಲಿ ಕಾಣಬಹುದಾಗಿರುತ್ತದೆ.

ಚರ್ಚ್‌ ಮತ್ತು ಮಸೀದಿ: ಇದೆಲ್ಲದರ ಜೊತೆಗೆ ಕ್ರಿಸ್ಮಸ್‌ ಹಬ್ಬದ ಕ್ರಿಸ್ಮಸ್‌ ಟ್ರೀ, ಸಾಂತಾಕ್ಲಾಸ್‌ ಬೊಂಬೆ ಸೇರಿದಂತೆ ಕ್ರಿಸ್ಮಸ್‌ ಹಬ್ಬವನ್ನು ನೆನಪಿಸುವ ಬೊಂಬೆಗಳನ್ನೂ, ಮುಸ್ಲಿಂ ಜನಾಂಗದ ಮಸೀದಿ ಸೇರಿದಂತೆ ವಿವಿಧ ಧರ್ಮಗಳ ಗೊಂಬೆಗಳನ್ನು ಇಡುವ ಮೂಲಕ ಕವಿ ಕುವೆಂಪು ವಿರಚಿತ ನಾಡಗೀತೆಯಲ್ಲಿ ಬರುವ ಸರ್ವ ಜನಾಂಗದ ಶಾತಿಯ ತೋಟ ರಸಿಕರ ಕಣ್ಗಳ ಸೆಳೆಯುವ ನೋಟ, ಹಿಂದೂ- ಕ್ರೈಸ್ತ- ಮುಸಲ್ಮಾನ ಪಾರಸಿಕ ಜೈನರುದ್ಯಾನ ಎಂಬ ನಾಡಗೀತೆಯ ಸಾಲನ್ನು ಕಣ್ಮುಂದೆ ತಂದು ನಿಲ್ಲಿಸುವ ರೀತಿಯಲ್ಲಿ ದಸರಾ ಬೊಂಬೆಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿರುವುದು ವಿಶೇಷ.

ಕ್ರಿಕೆಟ್‌ ಮತ್ತು ಬ್ಯಾಡ್ಮಿಂಟನ್‌: ಕ್ರೀಡೆಗಳಾದ ಕ್ರಿಕೆಟ್‌ ಮತ್ತು ಬ್ಯಾಡ್ಮಿಂಟನ್‌ ಆಡುತ್ತಿರುವ ದೃಶ್ಯಾವಳಿಯ ಬೊಂಬೆಗಳನ್ನೂ ಸಹ ಇಲ್ಲಿ ಪ್ರದರ್ಶಿಸಲಾಗಿದೆ. ಇದೆಲ್ಲದರ ಜೊತೆಗೆ ಧಾರ್ಮಿಕ ಗ್ರಂಥಗಳಾದ ರಾಮಾಯಣ, ಮಹಾಭಾರತ, ವಿವಿಧ ಆಯುಧಗಳನ್ನೂ ಸಹ ಆಯುಧ ಪೂಜೆ ಮತ್ತು ಶಾರದಾ ಪೂಜೆಯಂದು ಇರಿಸುವ ಮೂಲಕ ಕನ್ನಡನಾಡ ಪರಂಪರಾಗತ ದಸರಾ ಬೊಂಬೆ ಪೂಜೆ ಪ್ರದರ್ಶನವನ್ನು ಇಲ್ಲಿ ನಡೆಸಿಕೊಂಡು ಬರುತ್ತಿರುವುದು ಹೆಚ್ಚಿನ ಜನರ ಶ್ಲಾಘನೆಗೆ ಪಾತ್ರವಾಗಿದೆ.

ಈ ಗೊಂಬೆಗಳ ಸಂಗ್ರಹ ಮತ್ತು ಅದನ್ನು ಆಸಕ್ತಿಯಿಂದ ಜೋಡಿಸುವ ಕಾರ್ಯವನ್ನು ಕುಟುಂಬದ ಎಲ್ಲರ ಸಹಕಾರದೊಂದಿಗೆ ಸಹಾಯಕ ಅರ್ಚಕ ಶ್ರೀನಿವಾಸ್‌ ಅವರ ಪತ್ನಿ ಮೈಥಿಲಿ ಮಾಡುತ್ತಾ ಬರುತ್ತಿದ್ದಾರೆ. ದಸರಾ ಹಬ್ಬದ ಹತ್ತು ದಿನಗಳು ಮುಗಿದ ಮೇಲೂಸಹ ಈ ಗೊಂಬೆ ಪ್ರದರ್ಶನವನ್ನು 4-5 ದಿನಗಳ ಕಾಲ ಜನರ ವೀಕ್ಷಣೆಗಾಗಿ ಅವಕಾಶ ನೀಡುವ ಪದ್ಧತಿಯನ್ನು ಇಲ್ಲಿ ಮಾಡಿಕೊಂಡು ಬರಲಾಗಿದೆ. ಸುಮಾರು 3 ಸಾವಿರಕ್ಕೂ ಅಧಿಕ ಬೊಂಬೆಗಳನ್ನು ಇಲ್ಲಿ ಕಾಣಬಹುದಾಗಿದೆ.

„ಕೆ.ಎಸ್‌. ಸು ಧೀಂದ್ರ ಭದ್ರಾವತಿ

ಟಾಪ್ ನ್ಯೂಸ್

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

1-asasas

Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.