ಆಯಿಲ್ ತುಂಬಿದ ಲಾರಿ ಪಲ್ಟಿ
Team Udayavani, Dec 14, 2018, 4:58 PM IST
ತೀರ್ಥಹಳ್ಳಿ: ತಾಲೂಕಿನ ಕನ್ನಂಗಿ ಸಮೀಪದ ಅತ್ತಿಗದ್ದೆಯ ತಿರುವಿನಲ್ಲಿ ಆಯಿಲ್ ತುಂಬಿದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ. ಲಾರಿ ಡ್ರೈವರ್ ಹಾಗೂ ಕ್ಲೀನರ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕನ್ನಂಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಶಿವಮೊಗ್ಗ ಕಡೆಯಿಂದ ಕನ್ನಂಗಿ ಮಾರ್ಗವಾಗಿ ಮಂಗಳೂರಿಗೆ ಹೋಗುತ್ತಿದ್ದ ಲಾರಿ ಅತ್ತಿಗದ್ದೆ ಸಮೀಪ ರಸ್ತೆ ಹೊಂಡದಿಂದ ಬಚಾವಾಗುವಾಗ ಡ್ರೈವರ್ನ ನಿಯಂತ್ರಣ ತಪ್ಪಿ ಕೆಳಕ್ಕೆ ಉರುಳಿದೆ. ಆದರೆ ಪಲ್ಟಿಯಾದ ಲಾರಿಯಿಂದ ಆಯಿಲ್ ಹೊರ ಚೆಲ್ಲದಂತೆ ತಕ್ಷಣ ಲಾರಿಯನ್ನು ಮೇಲೆತ್ತಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ
ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್ ಸಂಸ್ಕೃತಿ ಬಂದಿದೆ: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು
Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ